ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರದಿಂದ ನೀಡಲಾಗುವ ಉದ್ಯಮಶೀಲತಾ ತರಬೇತಿ ನೀವು ಪಡೆದುಕೊಳ್ಳಬೇಕಾ ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಅರ್ಜಿ ಆಹ್ವಾನ ಮಾಡಿದ್ದು ಆನ್ಲೈನ್ ಮುಖಾಂತರ ನೀವು ಸಹ ಅರ್ಜಿ ಸಲ್ಲಿಸಬಹುದು .ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
Contents
ಕೆಲವೊಂದು ಸಲಹೆಗಳು ಗಮನಿಸಿ :
- ಈ ತರಬೇತಿಗೆ ಯಾರು ಅರ್ಜಿ ಸಲ್ಲಿಸಬಹುದು.?
- ಯಾವ ಯಾವ ದಾಖಲೆಗಳು ಅರ್ಜಿ ಸಲ್ಲಿಸಲು ಬೇಕಾಗಿದೆ.?
- ಅರ್ಹತೆ ಏನು ಹೊಂದಿರಬೇಕು.?
- ಎಲ್ಲಿ ಅರ್ಜಿ ಸಲ್ಲಿಸಬೇಕು.?
- ಈ ಮೇಲಿನ ಎಲ್ಲಾ ನಿಮ್ಮ ಪ್ರಶ್ನೆಗಳಿಗೂ ಸಹ ಈ ಲೇಖನದಲ್ಲಿ ಉತ್ತರ ಸಿಗಲಿದೆ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ
ಯೋಜನೆಯ ಬಗ್ಗೆ ಮಾಹಿತಿ
ಯೋಜನೆಯ ಹೆಸರು | ಉದ್ಯಮಶೀಲತಾ ತರಬೇತಿ ಯೋಜನೆ. |
ವಯೋಮಿತಿಯ ಬಗ್ಗೆ ಮಾಹಿತಿ | ಕನಿಷ್ಠ 21 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 45 ವರ್ಷ. |
ತರಬೇತಿ ನೀಡುವ ಸ್ಥಳ | ಬೆಂಗಳೂರು. |
ಆಯ್ಕೆ ವಿಧಾನ | ಪರೀಕ್ಷೆ . |
ಯೋಜನೆಗೆ ಸಾಮಾನ್ಯ ಅರ್ಹತೆಗಳನ್ನು ಗಮನಿಸಿ :
- ಕರ್ನಾಟಕ ರಾಜ್ಯದ ನಿವಾಸಿಯಾಗಿ ಇರಬೇಕಾಗುತ್ತದೆ .
- ಅರ್ಜಿ ಸಲ್ಲಿಸುವರು ಪರಿಶಿಷ್ಟ ಜಾತಿಯವರಾಗಿರಬೇಕು.
- ಸಣ್ಣ ಉದ್ಯಮಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು.
- ತರಬೇತಿಯ ಅವಧಿ 5 ರಿಂದ 6 ತಿಂಗಳು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
- ಎಂಟು ದಿನಗಳ ಕಾಲ ಬೆಂಗಳೂರಿನ ಕ್ಯಾಂಪಸ್ಸಿನಲ್ಲಿ ತರಬೇತಿ ನೀಡಲಾಗುತ್ತದೆ.
- ನಿಮಗೆ ಶೇಕಡ ನೂರರಷ್ಟು ಹಾಜರಾತಿ ಕಡ್ಡಾಯವಾಗಿ ಬೇಕಾಗುತ್ತದೆ.
- ವಿದ್ಯಾರ್ಹತೆ ಪದವಿಯನ್ನು ಪೂರ್ಣಗೊಳಿಸಿರಬೇಕು ಹಾಗೂ ಇದರೊಂದಿಗೆ ಆಂಗ್ಲ ಭಾಷೆಯನ್ನು ತಿಳಿದಿರಬೇಕು.
- ನಿಮಗೆ ಊಟ ಹಾಗೂ ವಸತಿ ಸೌಲಭ್ಯವನ್ನು ಉಚಿತವಾಗಿ ಬೆಂಗಳೂರಿನಲ್ಲಿ ನೀಡಲಾಗುತ್ತದೆ.
- ನಿಮಗೆ ಪ್ರಮಾಣ ಪತ್ರವನ್ನು ನೀಡಲಾಗುವುದು ವಿಶೇಷ ಸೂಚನೆ 100ರಷ್ಟು ಹಾಜರಾತಿ ಹೊಂದಿರುವವರಿಗೆ.
- ಪರಿಶಿಷ್ಟ ಜಾತಿಯ ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದು ಮಹಿಳಾ ಪದವೀಧರರಾಗಿದ್ದರೆ ಯೋಜನೆಯ. ಅನುಕೂಲವಾಗುವಂತೆ ಸರ್ಕಾರದಿಂದ ಅಂದರೆ ಸಮಾಜ ಕಲ್ಯಾಣ ವತಿಯಿಂದ ಶೇಕಡ 50ರಷ್ಟು ಪರಿಶಿಷ್ಟ ಜಾತಿ ಮಹಿಳೆಯರಿಗೆ ಉದ್ಯಮಶೀಲತಾ ತರಬೇತಿಗಾಗಿ ಅರ್ಜಿಯನ್ನು ಅಧಿಕೃತ ವೆಬ್ ಸೈಟಿನಲ್ಲಿ ಸಲ್ಲಿಸಲು ಅವಕಾಶ ಮಾಡಲಾಗಿದೆ.
ಪ್ರಮುಖ ದಿನಾಂಕಗಳನ್ನು ಗಮನಿಸಿ :
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ | 17/01/2024 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 30/01/2024 |
ಅರ್ಜಿ ಸಲ್ಲಿಸುವುದರ ಆಯ್ಕೆ ವಿಧಾನ :
- ಅರ್ಜಿದಾರರ ಅರ್ಹತಾ ಪರೀಕ್ಷೆಯ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.
- ಐಐಎಂ ಬೆಂಗಳೂರು ಸಂಸ್ಥೆ ವತಿಯಿಂದ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುವುದು .
- ಮೆರಿಟ್ ಲಿಸ್ಟ್ ಅನ್ನು ತರಬೇತಿಯ ಆಯ್ಕೆಗೆ ನೀಡಲಾಗುವುದು.
- ಲಿಸ್ಟ್ ಆಧಾರದ ಮೇಲೆ 1.5 ಅಭ್ಯರ್ಥಿಗಳಿಗೆ ಅರ್ಹತಾ ಪರೀಕ್ಷೆಯ ಆಧಾರದಲ್ಲಿ ಪರೀಕ್ಷೆ ನಡೆಸಲಾಗುವುದು.
ಯೋಜನೆಯ ಪ್ರಮುಖ ಉದ್ದೇಶ :
ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಯು ಅರ್ಹತೆ ಆಧಾರದಲ್ಲಿ ಆಯ್ಕೆಯಾದ ನಂತರ ಅವರಿಗೆ ಸಂಪೂರ್ಣ ಉದ್ಯಮಶೀಲತಾ ತರಬೇತಿಯನ್ನು ನೀಡಲಾಗುವುದು .ತರಬೇತಿ ಸಂಪೂರ್ಣಗೊಂಡ ನಂತರ ನಿಮಗೆ ಪ್ರಮಾಣ ಪತ್ರದ ಜೊತೆಗೆ ಅನೇಕ ರೀತಿಯ ಸಾಲ ಸೌಲಭ್ಯದ ಮಾಹಿತಿಯನ್ನು ತಿಳಿಸಿ ಕೊಡುತ್ತಿರುವುದರಿಂದ ನಿಮ್ಮ ಉದ್ಯಮವನ್ನು ಸ್ಥಾಪಿಸಲು ನೆರವಾಗಲಾಗುವುದು.
ಈ ಮೇಲ್ಕಂಡ ಮಾಹಿತಿಯು ಯಾರು ಉದ್ಯಮ ಸ್ಥಾಪಿಸಬೇಕೆಂದು ಅಂದುಕೊಂಡಿದ್ದಾರೋ ಅಂತವರಿಗೆ ತರಬೇತಿಯ ಅವಶ್ಯಕತೆ ಇದ್ದು. ಈ ಮಾಹಿತಿಯನ್ನು ಅವರಿಗೆ ತಲುಪಿಸಿ ಧನ್ಯವಾದಗಳು.