ನಮಸ್ಕಾರ ಸ್ನೇಹಿತರೆ ಭಾರತ ದೇಶದಲ್ಲಿ ಅನೇಕ ಜನರಿಗೆ ಉಪಯೋಗವಾಗಲಿ ಎಂದು ಕೇಂದ್ರ ಸರ್ಕಾರ ಅನೇಕ ಯೋಜನೆಯನ್ನು ಜಾರಿಗೆ ತರುತ್ತದೆ. ಅದರಲ್ಲಿ ಪ್ರಮುಖವಾಗಿ ಯಶಸ್ವಿನಿ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಲು ಎಲ್ಲಾ ಜನರಿಗೂ ಅವಕಾಶ ನೀಡಲಾಗಿದೆ.
ಈ ಕಾರ್ಡನ್ನು ಹೇಗೆ ಪಡೆದುಕೊಳ್ಳುವುದು..? ಅರ್ಹತೆ ಏನು..? ಅರ್ಜಿ ಎಲ್ಲಿ ಸಲ್ಲಿಸಬೇಕು..? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು.. ? ಹೊಸದಾಗಿ ಕಾರ್ಡ್ ಪಡೆಯುವುದು ಹೇಗೆ..? ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಲೇಖನವನ್ನು ಕೊನೆವರೆಗೂ ತಪ್ಪದೆ ಓದಿ.
ಯೋಜನೆಯ ಸಂಪೂರ್ಣ ಮಾಹಿತಿ :
ಭಾರತ ಸರ್ಕಾರವು ಈ ಹಿಂದೆ ಯಶಸ್ವಿನಿ ಯೋಜನೆಯನ್ನು 2003ರಲ್ಲಿ ಪ್ರಾರಂಭ ಮಾಡಿದೆ. ಈ ಯೋಜನೆ 2018ರ ವರೆಗೂ ಜಾರಿಯಲ್ಲಿತ್ತು. ನಂತರ ಈ ಯೋಜನೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆಯಾಗಿದ್ದು ಹಾಗೂ ಪ್ರಮುಖವಾಗಿ ತಿಳಿಯ ವಿಷಯ ಏನೆಂದರೆ ಈ ಯೋಜನೆ ಒಂದು ತಿಂಗಳ ಕಾಲ ಸ್ಥಗಿತಗೊಂಡಿತು ಹಾಗೂ ಕರ್ನಾಟಕ ಯೋಜನೆಗೆ ಮೂಲಕ ವಿಲೀನಗೊಂಡಿತು.
ಬಜೆಟ್ ನಲ್ಲಿ ಮತ್ತೆ ಜಾರಿ :
ರಾಜ್ಯದಲ್ಲಿ ಅನೇಕ ಜನರ ನಿರಂತರ ಬೇಡಿಕೆಯಿಂದ 2022 -23ನೇ ಸಾಲಿನ ಬಜೆಟ್ಟಿನಲ್ಲಿ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಹಾಗಾಗಿ ಈ ಯೋಜನೆಗೆ 300 ಕೋಟಿಗಳನ್ನು ಮೀಸಲಿಡಲಾಗಿದೆ ಎಂದು ಘೋಷಿಸಲಾಗಿದೆ.
ನಗದು ರಹಿತ ಚಿಕಿತ್ಸೆ ಸಿಗುತ್ತೆ :
ಯಶಸ್ವಿನಿ ಯೋಜನೆಯ ಮೂಲಕ ಎಲ್ಲಾ ಜನರಿಗೂ ಸಹಕಾರ ಸಂಘಗಳ ಸದಸ್ಯರಿಗೂ ಸೇರಿ ಅನುಕೂಲವಾಗಲಿದೆ. ಈ ಜಾರಿಕೊಂಡಿರುವ ಯೋಜನೆ ಒಂದು ಕುಟುಂಬದ ಫಲಾನುಭವಿಗಳಿಗೆ ಚಿಕಿತ್ಸಾ ವೆಚ್ಚದಲ್ಲಿ ಗರಿಷ್ಠವಾಗಿ 5 ಲಕ್ಷಕ್ಕೆ ನಿಗದಿಪಡಿಸಲಾಗಿರುತ್ತದೆ .ಈ ಯಶಸ್ವಿನಿ ಯೋಜನೆ ನೆಟ್ವರ್ಕ್ ನಗದುರಹಿತ ಚಿಕಿತ್ಸೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಯಶಸ್ವಿನಿ ಕಾರ್ಡ್ ಪಡೆಯುವುದು ಹೇಗೆ..?
ಈ ಯೋಜನೆಯ ಗಾರ್ಡನ್ನು ನೀವು ಪಡೆಯಬೇಕಾದರೆ ನಿಮ್ಮ ದಾಖಲೆಗಳನ್ನು ನಿಮ್ಮ ಹತ್ತಿರ ಇರುವಂತಹ ಸಹಕಾರಿ ಸಂಘ ಶಾಖೆಗೆ ಭೇಟಿ ನೀಡಿ. ಅಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಅವರು ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತಾರೆ.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು :
- ಪ್ರತಿ ಸದಸ್ಯರ ಆಧಾರ್ ಕಾರ್ಡ್ ಪ್ರತಿ.
- ನಿಮ್ಮ ರೇಷನ್ ಕಾರ್ಡ್ ಚೀಟಿ.
- ಇತ್ತೀಚೆಗೆನಾ ನಿಮ್ಮ ಭಾವಚಿತ್ರ.
- ಜಾತಿಯ ಪ್ರಮಾಣ ಪತ್ರದ ಆರ್ ಟಿ ನಂಬರ್ ಸಲ್ಲಿಸಬೇಕು.
ಕಾರ್ಡ್ ಮಾಡಿಸಲು ಬೇಕಾಗುವ ಹಣ :
ಸಾಮಾನ್ಯ ವರ್ಗದ ನಗರವಾಸಿ ಜನರಿಗೆ | Rs .1000 |
ಸಾಮಾನ್ಯ ವರ್ಗದ ಗ್ರಾಮಾಂತರ ಜನರಿಗೆ | Rs .500 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರಿಗೆ | ಶುಲ್ಕ ಇರುವುದಿಲ್ಲ |
ಈ ಯೋಜನೆಯ ಪ್ರಮುಖ ಸೌಲಭ್ಯಗಳು :
ಈ ಯೋಜನೆಯಲ್ಲಿ ಸಹಕಾರಿ ಸಂಘಗಳ ಸದಸ್ಯರ ಅನುಕೂಲಕ್ಕೆ ಜಾರಿಯಾಗಿರುವುದರಿಂದ ವಿಶೇಷವಾಗಿ ಯೋಜನಾ ಫಲಾನುಭವಿಗೆ ಒಂದು ವರ್ಷಕ್ಕೆ ಚಿಕಿತ್ಸಾ ವೆಚ್ಚ ಗರಿಷ್ಠ 5 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಯಾವುದೇ ಆಸ್ಪತ್ರೆಯಾದರು ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ.
ಇದನ್ನು ಓದಿ : ಉಚಿತ ಹೊಲಿಗೆ ಯಂತ್ರ ಮತ್ತು ವಿವಿಧ ಉಪಕರಣ ಪಡೆಯಲು ಅರ್ಜಿ ಆಹ್ವಾನ
ಯಾವ ಯಾವ ಕಾಯಿಲೆ ಗುಣಪಡಿಸಿಕೊಳ್ಳಬಹುದು :
- ಹೃದಯ ಸಂಬಂಧಿ ರೋಗಗಳು.
- ಕಿವಿಗೆ ಸಂಬಂಧಿಸಿದ ಚಿಕಿತ್ಸೆ.
- ಮೂಗು ಹಾಗೂ ಗಂಟಲು ವ್ಯಾದಿಗಳ ಚಿಕಿತ್ಸೆ.
- ದೇಹದ ನರಗಳಿಗೆ ಸಂಬಂಧಿಸಿದ ಚಿಕಿತ್ಸೆ.
- ಈ ಮೇಲ್ಕಂಡ ಚಿಕಿತ್ಸೆಯನ್ನು ಪಡೆಯಬಹುದು ಇನ್ನೂ ಕೆಲವೊಂದು ಚಿಕಿತ್ಸೆಯ ಸೌಲಭ್ಯ ನಿಮಗೆ ಯಶಸ್ವಿನಿ ಕಾಡಿನ ಮೂಲಕ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು.
ಪ್ರಮುಖವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡಿನಲ್ಲಿ 1,560 ಕಾಯಿಲೆಗಳನ್ನು ಯಶಸ್ವಿನಿ ಯೋಜನೆಯ ಮೂಲಕ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ.
ಹೆಚ್ಚುವರಿ ಸೌಲಭ್ಯದ ಮಾಹಿತಿ :
ಯಶಸ್ವಿನಿ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ನೆಟ್ವರ್ಕ್ ಆಸ್ಪತ್ರೆಯಲ್ಲಿ ಔಷಧಿ ವೆಚ್ಚ ಚಿಕಿತ್ಸಾ ವೆಚ್ಚ ಆಪರೇಷನ್ ಥಿಯೇಟರ್ ಬಾಡಿಗೆ ಕನ್ಸುಲೆಂಟ್ ಫೀಸ್ ಬೆಡ್ ಚಾರ್ಜ್ ನರ್ಸ್ ಫೀಸ್ ಇತ್ಯಾದಿ ಪ್ರಮುಖ ಹೆಚ್ಚುವರಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ಯಶಸ್ವಿನಿ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ ಸಹ 15 ದಿನಗಳ ನಂತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕಾರ್ಡ್ ಪಡೆದುಕೊಂಡ ನಂತರ ಅರ್ಹರಾಗಿರುತ್ತಾರೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡಿರಿ ಕೂಡಲೇ ಈ ಕಾರ್ಡನ್ನು ಪ್ರತಿಯೊಬ್ಬರು ಪಡೆದುಕೊಳ್ಳಿ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಮಾಹಿತಿಯನ್ನು ಅಗತ್ಯವಿರುವ ಜನರಿಗೆ ತಲುಪಿಸಿ ಹಾಗೂ ತಿಳಿಸಿ.