RBI hikes UCBs Gold Loan Limit : ಚಿನ್ನ ಎನ್ನುವುದು ಕೇವಲ ಅಲಂಕಾರಿಕ ವಸ್ತು ಮಾತ್ರ ಅಲ್ಲದೇ ಕಷ್ಟಕಾಲದಲ್ಲಿ ಸಹಾಯ ಮಾಡುವತಂಹ ಆಪತ್ಭಾಂಧವ ಸಹ ಆಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಕಷ್ಟು ಜನರು ತಮ್ಮ ಕಷ್ಟಕಾಲದಲ್ಲಿ ತಾವು ಖರೀದಿಸಿರುವಂತಹ ಚಿನ್ನವನ್ನು ಅಡವಿಟ್ಟು ಬ್ಯಾಂಕುಗಳಿಂದ ಹಾಗೂ ಕೆಲವೊಂದು ಫೈನಾನ್ಸಿಯಲ್ ಸಂಸ್ಥೆಗಳಿಂದ ತಮಗೆ ಬೇಕಾಗಿರುವಂತಹ ಪರ್ಸನಲ್ ಲೋನ್ (Personal loan) / ಬೇರೆ ಬೇರೆ ಲೋನ್ ಗಳನ್ನು ಪಡೆದುಕೊಳ್ಳುತ್ತಾರೆ. ಈ ರೀತಿ ಲೋನ್ ಪಡೆದುಕೊಳ್ಳುವವರಿಗೆ ಈಗ ಕೇಂದ್ರ ಸರ್ಕಾರವು ಒಂದು ಗುಡ್ ನ್ಯೂಸ್ ಹೇಳಿದೆ.
ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಚಿನ್ನದ ಮೇಲೆ ಲೋನ್ ಪಡೆದುಕೊಳ್ಳುವವರಿಗೆ
ತಮ್ಮ ಕಷ್ಟಕಾಲದಲ್ಲಿ ಚಿನ್ನವನ್ನು ಬ್ಯಾಂಕ್ ಕಿನಲ್ಲಿ ಅಡವಿಟ್ಟು ಲೋನ್ ಪಡೆದುಕೊಳ್ಳುವಂತಹ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳಿಗೆ ಈ ನಿಯಮ ಜಾರಿಯಾಗಿದೆ ಅದಕ್ಕಿಂತಲೂ ಪ್ರಮುಖ ಎನ್ನುವಂತೆ ಇಲ್ಲಿಯವರೆಗೆ ಕೇವಲ ಚಿನ್ನದ ಮೇಲೆ 2 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಪಡೆದುಕೊಳ್ಳಬಹುವುದು ಆದರೆ ಅದರ ಮಿತಿಯನ್ನು ಈಗ 2 ಲಕ್ಷ ರೂಪಾಯಿಗಳಿಂದ 4 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಕಷ್ಟಕಾಲದಲ್ಲಿ ಚಿನ್ನವನ್ನು ಅಡವಿಟ್ಟು ತಮ್ಮ ಕಷ್ಟಗಳನ್ನು ತೀರಿಸಿಕೊಳ್ಳುವುದಕ್ಕಾಗಿ ಗ್ರಾಹಕರಿಗೆ ಇದೊಂದು ಗುಡ್ ನ್ಯೂಸ್ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಇದನ್ನು ಓದಿ : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಹೊಂದಿದ್ದೀರಾ? ಹಾಗಿದ್ರೆ ಇದನ್ನು ಓದಿ
ಬ್ಯಾಂಕುಗಳಲ್ಲಿ ಲೋನ್ ಮರು ಪಾವತಿ (Loan Repayment) ಯೋಜನೆ ಅಡಿಯಲ್ಲಿ ತಾನು ಪಡೆದಿರುವಂತಹ ಚಿನ್ನದ ಮೇಲಿನ ಸಾಲಕ್ಕೆ ಅಸಲನ್ನು ಕಟ್ಟುವವರೆಗೂ ಕೇವಲ ಬಡ್ಡಿಯನ್ನು ಕಟ್ಟಿದರೆ ಸಾಕು ಎನ್ನುವುದಾಗಿ ತೀರ್ಮಾನಿಸಲಾಗಿದೆ.
ಇನ್ನು ಮುಂದೆ EMI ಕಟ್ಟಬೇಕಾದ ಅಗತ್ಯವಿರುವುದಿಲ್ಲ ಕೇವಲ ಬಡ್ಡಿ ರೂಪದಲ್ಲಿ ಸಾಲವನ್ನು ಮರುಪಾವತಿ ಮಾಡಿದ್ರಾಯ್ತು. ಸಾಲವನ್ನು ಮರುಪಾವತಿ ಮಾಡುವಂತಹ ಸಮಯಕ್ಕೆ ಲೆಕ್ಕಾಚಾರ ಮಾಡಿ ಎಷ್ಟು ಹಣವನ್ನು ಪ್ರತಿ ತಿಂಗಳು ನೀವು ಕಟ್ಟಬೇಕು ಅನ್ನೋದನ್ನ ಲೆಕ್ಕಾಚಾರ ಹಾಕಲಾಗುತ್ತದೆ.
ತುರ್ತು ಪರಿಸ್ಥಿತಿಯಲ್ಲಿ ಚಿನ್ನವನ್ನು ಅಡವಿಟ್ಟು ಲೋನ್ ಪಡೆದುಕೊಂಡಿರುವವರಿಗೆ (Emergency Loan) ನಿಮ್ಮ ಚಿನ್ನಕ್ಕೆ ಎಷ್ಟು ಹಣವನ್ನು ಲೋನ್ ಆಗಿ ಪಡೆದುಕೊಂಡಿರುತ್ತೀರೋ ಅದಕ್ಕೆ ಬಡ್ಡಿ ಸೇರಿಸಿ ಅವರು ತಿಳಿಸಿರುವ ರೀತಿಯಲ್ಲಿ ನಿಯಮಿತವಾಗಿ ಹಣವನ್ನು ಪಾವತಿಸಿದರೆ ಸಾಕು.
ಇನ್ನು ಮುಂದೆ ಗೋಲ್ಡ್ ಲೋನ್ (Gold Loan) ಪಡೆದುಕೊಂಡಿರುವವರು ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಚಿನ್ನದ ಮೇಲೆ ಬ್ಯಾಂಕುಗಳು ಸಾಲ ನೀಡುವಂತಹ ಹೊಸ ನಿಯಮವನ್ನು ಜಾರಿಗೆ ತಂದಿರುವುದ್ದರಿಂದ ಇದು ಗ್ರಾಹಕ ಸ್ನೇಹಿ ಆಗಿದೆ. ನಿಜಕ್ಕೂ ಇದು ಗ್ರಾಹಕರಿಗೆ ಚಿನ್ನದ ಮೇಲೆ ಲೋನ್ ಪಡೆದುಕೊಳ್ಳುವುದಕ್ಕೆ ಇನ್ನಷ್ಟು ಪ್ರೇರೇಪಿಸುವಂತಿದೆ ಎಂದು ಹೇಳಬಹುದಾಗಿದೆ.