rtgh

ಮಕ್ಕಳ ಸಹಾಯಧನ ಹೆಚ್ಚಳಕ್ಕೆ ನಿರ್ಧಾರ : ನಿಮ್ಮ ಮಕ್ಕಳಿಗೆ ಎಷ್ಟು ಹಣ ಸಿಗುತ್ತೆ ನೋಡಿ !

Decision to increase child allowance of construction workers

ನಮಸ್ಕಾರ ಸ್ನೇಹಿತರೆ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಈಗಾಗಲೇ ರಾಜ್ಯ ಸರ್ಕಾರವು ಸಹಾಯಧನವನ್ನು ನೀಡುತ್ತಿದೆ ಅದರಂತೆ ಸರ್ಕಾರವು ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಹೊತ್ತು ನೀಡುತ್ತಿದೆ ಎಂದು ಹೇಳಬಹುದು.

Decision to increase child allowance of construction workers
Decision to increase child allowance of construction workers

ಆದರೆ ಇದೀಗ ಮತ್ತೆ ಆ ಸಹಾಯಧನವನ್ನು ಪರಿಷ್ಕರಣೆ ಮಾಡಿ ಇನ್ನಷ್ಟು ಧನಸಹಾಯವನ್ನು ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಹಾಗಾದರೆ ರಾಜ್ಯ ಸರ್ಕಾರದ ಹೊಸ ಆದೇಶ ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.

ಸರ್ಕಾರದಿಂದ ಹೊಸ ಆದೇಶ :

ಕರ್ನಾಟಕ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉದ್ಯೋಗ ಕ್ರೀಮಾಕರಣ ಮತ್ತು ಸೇವಾ ಷರತ್ತುಗಳನ್ನು 1996ರಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆಯ 62ನೇ ಕಾಲನ್ನ ಅಡಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯ ಧನಗಳ ಮೊತ್ತವನ್ನು 2023 24 ರಿಂದ ಹೆಚ್ಚಿಸುವಂತೆ ಆದೇಶವೊಂದನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಇದನ್ನು ಓದಿ : ಎಲ್‌ಪಿಜಿ ಬಳಕೆದಾರರಿಗೆ ಸಿಹಿಸುದ್ದಿ: ಯುಗಾದಿಗೆ ಮನೆ ಮನೆಗೆ ಉಚಿತ ಎಲ್‌ಪಿಜಿ ಸಿಲಿಂಡರ್ ಲಭ್ಯ!

ಪರಿಷ್ಕೃತ ದರದ ಪಟ್ಟಿ :

ರಾಜ್ಯ ಸರ್ಕಾರ 202324 ರಿಂದ ಕಟ್ಟಡ ಕಾರ್ಮಿಕರ ಶೈಕ್ಷಣಿಕ ಸಹಾಯಧನವನ್ನು ಹೆಚ್ಚಳ ಮಾಡಿರುವುದರ ಬಗ್ಗೆ ಹೊಸ ಆದೇಶವನ್ನು ಹೊರಡಿಸಿದ್ದು ಯಾವ ಯಾವ ತರಗತಿಯ ಮಕ್ಕಳಿಗೆ ಎಷ್ಟು ಸಹಾಯಧನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂಬುದರ ವಿವರವನ್ನು ನೋಡುವುದಾದರೆ

  1. 1800 ರೂಪಾಯಿ ಒಂದನೇ ತರಗತಿಯಿಂದ 5ನೇ ತರಗತಿಯವರೆಗೆ ಓದುತ್ತಿರುವ ಮಕ್ಕಳಿಗೆ.
  2. 2400 ನೂರು ರೂಪಾಯಿ ಆರನೇ ತರಗತಿಯಿಂದ ಎಂಟನೇ ತರಗತಿಯ ಮಕ್ಕಳಿಗೆ
  3. 3000 9 ರಿಂದ 10ನೇ ತರಗತಿಯ ಮಕ್ಕಳಿಗೆ
  4. 4,600 ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಮಕ್ಕಳಿಗೆ
  5. 10,000 ಪದವಿ ಓದುತ್ತಿರುವ ಮಕ್ಕಳಿಗೆ
  6. 10,000 ಸ್ಥಾಪಕೋತರ ಪದವಿ ಶಿಕ್ಷಣ ಪಡೆಯುತ್ತಿರುವವರಿಗೆ
  7. 10,000 ಬಿಎಸ್ಸಿ ನರ್ಸಿಂಗ್ ಜಿ ಎನ್ ಎಂ ಹಾಗೂ ಪ್ಯಾರಾಮೆಡಿಕಲ್ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ
  8. 6000 ಬಿಎಡ್ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ
  9. 11000 ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೇ ಕೋರ್ಸ ಓದುತ್ತಿರುವ ವಿದ್ಯಾರ್ಥಿಗಳಿಗೆ
  10. 10,000 ಎಲ್ ಎಲ್ ಬಿ ಅಥವಾ ಎಲ್ ಎಲ್ ಎಮ್ ವಿದ್ಯಾರ್ಥಿಗಳಿಗೆ
  11. ಹತ್ತು ಸಾವಿರ ಐಟಿಐ ನಂತಹ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಕೋರ್ಸ್ ಗಳಿಗೆ
  12. 11000 ಪಿ ಎಚ್ ಡಿ ಓದುತ್ತಿರುವ ವಿದ್ಯಾರ್ಥಿಗಳಿಗೆ
  13. ಹನೊಂದು ಸಾವಿರ ಎಮ್ ಡಿ ಓದುತ್ತಿರುವ ವಿದ್ಯಾರ್ಥಿಗಳಿಗೆ

ಹೀಗೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ವಿದ್ಯಾರ್ಥಿವೇತನವನ್ನು ನೀಡಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಹೊಸ ಆದೇಶದಲ್ಲಿ ಹೊರಡಿಸಿರುವ ಈ ಪರಿಷ್ಕೃತ ಸಹಾಯಧನವನ್ನು 2023-24ನೇ ಸಾಲಿನಲ್ಲಿ ಓದುತ್ತಿರುವಂತಹ ಮಕ್ಕಳಿಗೆ ನೀಡಲು ನಿರ್ಧರಿಸಿದೆ.

  1. ರಾಜ್ಯ ಸರ್ಕಾರದ ಈ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹಿಂದಿನ ತರಗತಿಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು ಹಾಗೂ ಯಾವುದೇ ಕಾರಣಕ್ಕೂ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಬಾರದು.
  2. ಕಡ್ಡಾಯವಾಗಿ ವಿದ್ಯಾರ್ಥಿಗಳ ಪಾಲಕರು ನೊಂದಾಯಿತ ಕಟ್ಟಡ ಕಾರ್ಮಿಕರ ಸದಸ್ಯತ್ವವನ್ನು ಹೊಂದಿರಬೇಕು.

ಸಹಾಯಧನದಿಂದ ಆಗುವ ಲಾಭಗಳು :

ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುತ್ತಿರುವ ಈ ಸಹಾಯಧನದಿಂದ ಸಾಕಷ್ಟು ಲಾಭವನ್ನು ನೋಡಬಹುದು ಆಗಿದೆ ಅವುಗಳೆಂದರೆ,

  1. ಆರ್ಥಿಕ ನೆರವನ್ನು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶಿಕ್ಷಣವನ್ನು ಪಡೆಯಲು ರಾಜ್ಯ ಸರ್ಕಾರದಿಂದ ನೀಡಿದಂತಾಗುತ್ತದೆ.
  2. ವಿದ್ಯಾರ್ಥಿಗಳಿಗೆ ಕಾಲೇಜ ಫೀಸ್ ಮತ್ತು ಪುಸ್ತಕಗಳನ್ನು ಕೊಂಡುಕೊಳ್ಳಲು ಧನ ಸಹಾಯವಾಗುತ್ತದೆ.
  3. ಆರ್ಥಿಕವಾಗಿ ಹಿಂದುಳಿದ ಕಾರ್ಮಿಕ ವರ್ಗದವರು ಇದರಿಂದ ಆರ್ಥಿಕ ವರ್ಗದಿಂದ ಹೊರ ಬರುತ್ತಾರೆ.
  4. ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ಈ ಸಹಾಯಧನದಿಂದ ತಡೆಗಟ್ಟಲು ಸಾಧ್ಯವಾಗುತ್ತದೆ.
  5. ಕಾರ್ಮಿಕ ವರ್ಗದ ಮಕ್ಕಳಿಗೆ ಕಲಿಕೆಯಲ್ಲಿ ಇನ್ನಷ್ಟು ಆಸಕ್ತಿಯನ್ನು ಈ ಸಹಾಯಧನ ಹೆಚ್ಚಿಸುತ್ತದೆ.

ಮಾಹಿತಿಗಾಗಿ :

ರಾಜ್ಯ ಸರ್ಕಾರ ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳಿಗೆ ನೀಡುತ್ತಿರುವ ಈ ಸಹಾಯ ಧನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://klwbapps.karnataka.gov.in/student ಈ ವೆಬ್ ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿಯಬಹುದಾಗಿದೆ.

ಒಟ್ಟಾರೆ ರಾಜ್ಯ ಸರ್ಕಾರವು ಇದೀಗ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುತ್ತಿರುವ ಸಹಾಯಧನವನ್ನು ಹೆಚ್ಚಿಸಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ 2023-24ನೇ ಶೈಕ್ಷಣಿಕ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಈ ಪರಿಷ್ಕೃತ ಸಹಾಯಧನವು ಹೆಚ್ಚು ಅನುಕೂಲವಾಗಲಿದೆ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *