ನಮಸ್ಕಾರ ಸ್ನೇಹಿತರೆ ಉನ್ನತ ವಿದ್ಯಾಭ್ಯಾಸ ವನ್ನು ಆರ್ಥಿಕವಾಗಿ ಹಿಂದುಳಿದ ಬಡ ರೈತರ ಮಕ್ಕಳು ಪಡೆದುಕೊಳ್ಳಲು ಸರ್ಕಾರ ನೀಡುತ್ತಿರುವ ಈ ವಿದ್ಯಾರ್ಥಿ ವೇತನದ ಸಹಾಯ ಮಾಡಲಿದೆ. ಸಾಕಷ್ಟು ಯೋಜನೆಗಳನ್ನು ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಪರಿಚಯಿಸಿದ್ದು ಇದೀಗ ರೈತರ ಮಕ್ಕಳಿಗಾಗಿ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನವನ್ನು ಕೂಡ ವಿತರಣೆ ಮಾಡಲು ನಿರ್ಹರಿಸಿದೆ.
ಉದರ ವಿದ್ಯಾಭ್ಯಾಸವನ್ನು ಆರ್ಥಿಕವಾಗಿ ಹಿಂದುಳಿದ ಬಡ ರೈತರ ಮಕ್ಕಳು ಪಡೆದುಕೊಳ್ಳಲು ಸರ್ಕಾರ ನೀಡುತ್ತಿರುವ ಈ ವಿದ್ಯಾರ್ಥಿ ವೇತನ ಹೆಚ್ಚು ಸಹಾಯ ಮಾಡಲಿದೆ ಹಾಗಾದರೆ ಈ ವಿದ್ಯಾರ್ಥಿ ವೇತನವನ್ನು ಹೇಗೆ ಪಡೆದುಕೊಳ್ಳಬೇಕು, ಈ ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲ ಅರ್ಹರು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
Contents
ವಿದ್ಯಾನಿಧಿ ವಿದ್ಯಾರ್ಥಿ ವೇತನ :
ರೈತರ ಮಕ್ಕಳಿಗಾಗಿ 2021 ರಲ್ಲಿ ವಿದ್ಯಾನಿಧಿ ಸ್ಕಾಲರ್ಶಿಪ್ ಅನ್ನು ರಾಜ್ಯ ಸರ್ಕಾರ ಪ್ರಾರಂಭಿಸಿತು. ರೈತರ ಮಕ್ಕಳು ಆರಂಭಿಕ ಶಿಕ್ಷಣದಿಂದ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವವರೆಗೆ ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ಬೇರೆ ಬೇರೆ ಅವಧಿಗೆ ಬೇರೆ ಬೇರೆ ಮತದ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ವಿದ್ಯಾರ್ಥಿ ವೇತನದ ಒಂದು ಪಡೆಯಬೇಕಾದರೆ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನು ಓದಿ : ಪಡಿತರ ಚೀಟಿ ನವೀಕರಣ: ಉಚಿತ ಗೋಧಿ, ಅಕ್ಕಿ ಮತ್ತು ಸಕ್ಕರೆಗಾಗಿ ತಕ್ಷಣ ಈ ಕೆಲಸ ಮಾಡಿ!!
ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಇರುವ ಅರ್ಹತೆಗಳು :
ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ವಿದ್ಯಾರ್ಥಿಗಳು ಕೆಲವು ಅರ್ಹತೆಗಳನ್ನು ಹೊಂದಿರಬೇಕು.
- ವಿದ್ಯಾ ನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು.
- ರೈತರ ಮಕ್ಕಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು.
- ಎಂಟು ಮತ್ತು 9ನೇ ತರಗತಿಯ ವಿದ್ಯಾರ್ಥಿನಿಯರು 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಉದ್ದದ ಶಿಕ್ಷಣವೆಂದು ಪಡೆದುಕೊಳ್ಳುವವರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
- ವಿದ್ಯಾರ್ಥಿ ವೇತನವನ್ನು ನಿರ್ದಿಷ್ಟ ಕೋರ್ಸ್ ಗಳಿಗೆ ಅನುಕೂಲವಾಗಿ ಪಡೆದುಕೊಳ್ಳಬೇಕಾಗುತ್ತದೆ.
ಪ್ರಮುಖ ದಾಖಲೆಗಳು :
ರಾಜ್ಯ ಸರ್ಕಾರ ರೈತರ ಮಕ್ಕಳಿಗೆ ನೀಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ದಾಖಲೆಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು.
- ಉನ್ನತ ಶಿಕ್ಷಣ ನೋಂದಣಿ ಪ್ರಮಾಣ ಪತ್ರ
- ರೈತರ ಕಾರ್ಡ್
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಆದಾಯ ಪ್ರಮಾಣ ಪತ್ರ
- ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್.
ಹೀಗೆ ಈ ಅಗತ್ಯ ದಾಖಲೆಗಳನ್ನು ಇದರ ಮೂಲಕ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
ರಾಜ್ಯ ಸರ್ಕಾರ ತಂದಿರುವ ರೈತನಿಧಿ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಾದರೆ https://ssp.postmatric.karnataka.gov.in/ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ.
ವಿದ್ಯಾರ್ಥಿ ವೇತನದ ಮೊತ್ತ :
- 2500 ಪಿಯುಸಿ ಮತ್ತು ಐಟಿಆರ್ ಕೋರ್ಸ್ ಗಳಿಗೆ ಜಾಯಿನ್ ಆದಂತಹ ಹುಡುಗರಿಗೆ
- 3000 ಹುಡುಗಿಯರಿಗೆ ನೀಡಲಾಗುತ್ತದೆ.
- 5,000 ಹುಡುಗರಿಗೆ ಮತ್ತು 5500 ಹುಡುಗಿಯರಿಗೆ ಬಿಎ ಬಿಎಸ್ಸಿ ಎಂಬಿಬಿಎಸ್ ಬಿಎ ಮೊದಲಾದ ವೃತ್ತಿಪರ ಕೋರ್ಸ್ ಮಾಡುತ್ತಿರುವವರಿಗೆ.
- 10,000 ಹುಡುಗರಿಗೆ ಹಾಗೂ ಹುಡುಗಿಯರಿಗೆ 11000 ವಿದ್ಯಾರ್ಥಿ ವೇತನವನ್ನು ಸ್ಥಾಪಕೋತರ ಪದವಿ ಓದುತ್ತಿರುವವರಿಗೆ ರಾಜ್ಯ ಸರ್ಕಾರ ನೀಡಲು ನಿರ್ಧರಿಸಿದೆ.
ಹೀಗೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ರೈತ ನಿಧಿ ವಿದ್ಯಾರ್ಥಿ ವೇತನದ ಮೂಲಕ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಅನ್ನು ಪಡೆದು ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದಾಗಿದೆ.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬ ರೈತ ಮಕ್ಕಳಿಗೂ ಶೇರ್ ಮಾಡುವ ಮೂಲಕ ಅವರಿಗೆ ರಾಜ್ಯ ಸರ್ಕಾರದ ಈ ವಿದ್ಯಾರ್ಥಿ ವೇತನವನ್ನು ಪಡೆದು ಸುಲಭವಾಗಿ ತಮ್ಮ ವಿದ್ಯಾಭ್ಯಾಸವನ್ನು ನೋಡಿಕೊಳ್ಳಬಹುದು ತಿಳಿಸಿ ಧನ್ಯವಾದಗಳು.