rtgh

ಅನ್ನದಾತರಿಗೆ ಸಂತಸದ ಸುದ್ದಿ.!! ಈ ಜಿಲ್ಲೆಯವರಿಗೆ ಉಚಿತ ಭೂಮಿ ಮತ್ತು ಹಕ್ಕು ಪತ್ರ ವಿತರಣೆ

Distribution of free land and hakku patra

ಹಲೋ ಸ್ನೇಹಿತರೇ, ಅರಣ್ಯ ಭೂಮಿಯ ಸುತ್ತಮುತ್ತ ಕೃಷಿ ಮಾಡಿಕೊಂಡು ಇರುವ ರೈತರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕಡೆಗೂ ಬಹಳ ವರ್ಷಗಳ ನಂತರ ರೈತರು ಸ್ವಂತ ಜಮೀನು ಪಡೆದುಕೊಳ್ಳಲು ಸರ್ಕಾರ ಸಹಕರಿಸುತ್ತಿದೆ.

Distribution of free land and hakku patra

ಅರಣ್ಯ ಭೂಮಿಯ ಸುತ್ತಮುತ್ತ ಕೃಷಿ ಮಾಡುತ್ತಿರುವ ರೈತರು ಅರಣ್ಯ ಇಲಾಖೆಯಿಂದ ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ. ಕಂದಾಯ ಭೂಮಿಯನ್ನು ಅರಣ್ಯ ಭೂಮಿ ಎಂದು ಘೋಷಿಸಿರುವುದೇ ಇದಕ್ಕೆ ಮುಖ್ಯ ಕಾರಣ. ಹಾಗಾಗಿ ಅರಣ್ಯ ಭೂಮಿಯ ಸುತ್ತಮುತ್ತಲಿನ ತಮ್ಮ ಜಮೀನನ್ನು ಹೊಂದಿದ್ದರು ಕೂಡ ರೈತರು ಸ್ವಂತದಾಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಇದು ಇಂದು ಮೊನ್ನೆಯ ಸಮಸ್ಯೆಯೇ ಅಲ್ಲ, ದಶಕಗಳಿಂದಲೂ ಕೂಡ ಈ ಸಮಸ್ಯೆಯನ್ನು ರೈತರುಗಳು ಎದುರಿಸುತ್ತಲೇ ಬಂದಿದ್ದಾರೆ. ಇದೀಗ 2023-24ರಲ್ಲಿನ ರಾಜ್ಯ ಬಜೆಟ್ ನಲ್ಲಿ ರೈತ ಪರವಾಗಿ ಬಜೆಟ್ ಮಂಡಿಸಲಾಗಿದ್ದು, ಅರಣ್ಯ ಇಲಾಖೆಯಿಂದ ರೈತರಿಗೆ ತೊಂದರೆ ಆಗದೆ ಇರುವ ರೀತಿಯಲ್ಲಿ ಉಪಕ್ರಮ ಕೈಗೊಂಡಿರುವ ಬಗ್ಗೆ ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ.

ಜಂಟಿ ಸರ್ವೆ ಕಾರ್ಯಕ್ಕೆ ಸರ್ಕಾರ ಅಸ್ತು

ರೈತರು ಎದುರಿಸುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಲು ಸರ್ವೇ ಕೆಲಸ ನಡೆಯಬೇಕು ಎಂದು ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿತ್ತು. ಕೊನೆಗೂ ಫೆಬ್ರವರಿ 17 2024ರಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ ಎಂದು ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಹಾಗಾಗಿ ಶೀಘ್ರದಲ್ಲಿಯೇ ಅರಣ್ಯ ಭೂಮಿ ಹಾಗೂ ರೈತರ ಕೃಷಿ ಭೂಮಿ ಸರ್ವೆ ಕಾರ್ಯವನ್ನು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಇಲ್ಲ : ಎಷ್ಟೇ ಕೋರ್ಟ್ ಅಲೆದಾಡಿದರು ಆಸ್ತಿ ಸಿಗೋದಿಲ್ಲ ನೋಡಿ

ಜಂಟಿ ಸರ್ವೆಯಿಂದ ಏನು ಪ್ರಯೋಜನ?

ಡ್ರೋನ್ ಮೂಲಕ ಸರ್ವೆ ನಡೆಸಲಾಗುತ್ತದೆ ಹಾಗೂ ಈ ರೀತಿ ಸರ್ವೇ ಮಾಡಿದಾಗ ಕಂದಾಯ ಭೂಮಿಯನ್ನು ಅರಣ್ಯ ಭೂಮಿ ಎಂದು ಒತ್ತಾಯಪೂರ್ವಕವಾಗಿ ಹೇಳುತ್ತಿದ್ದರೆ ತಕ್ಷಣ ಆ ಭೂಮಿಯನ್ನು ಕಂದಾಯ ಭೂಮಿ ಹಿಂದೆ ಘೋಷಿಸಿ ಡಿ ನೋಟಿಫಿಕೇಶನ್ ಮಾಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಡಿ ನೋಟಿಫಿಕೇಶನ್ ಮಾಡಿದ ನಂತರ ಕಂದಾಯ ಭೂಮಿಯ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರೆ ಬಗೆರ್ ಹುಕುಂ ಯೋಜನೆಯಡಿಯಲ್ಲಿ ಫಾರಂ ನಂಬರ್ 57 ಅಡಿ ಅರ್ಜಿ ಸಲ್ಲಿಸಿರುವವರೆಗೆ ಸಾಗುವಳಿ ಪತ್ರ ನೀಡಲಾಗುವುದು ಎಂದಿದ್ದಾರೆ ಸಚಿವರು.

ಇನ್ನು ಜಂಟಿ ಸರ್ವೆ ಕಾರ್ಯ ನಡೆದರೆ ರೈತರಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ರಸ್ತೆ ಮೊದಲಾದವುಗಳನ್ನು ಕೂಡ ಒದಗಿಸಿಕೊಡಲಾಗುವುದು. ಹಾಗಾಗಿ ಜಂಟಿ ಸರ್ವೆ ಮಾಡಿದಾಗ ಕಂದಾಯ ಭೂಮಿಯಲ್ಲಿ ರೈತರ ಸಾಗುವಳಿ ಕಂಡು ಬಂದರೆ ಅವರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಚಾಮರಾಜನಗರ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸದ್ಯ ಸರ್ವೆ ಕಾರ್ಯ ಆರಂಭಿಸಲಾಗುವುದು ಎಂದು ವರದಿ ಮಾಡಲಾಗಿದೆ.

RTE ಉಚಿತ ಶಿಕ್ಷಣಕ್ಕೆ ಅರ್ಜಿ ಆರಂಭ.! LKG ಮತ್ತು 1ನೇ ತರಗತಿಗೆ ಇಲ್ಲಿಂದಲೇ ಸೇರಿಸಿ

IAS ಪ್ರಶ್ನೆ : ಗಂಡ ಹೆಂಡತಿ ಇಬ್ಬರೂ ಕೂಡ ರಾತ್ರಿ ಇಷ್ಟಪಡುವಂತಹ ವಸ್ತು ಯಾವುದು ?

Spread the love

Leave a Reply

Your email address will not be published. Required fields are marked *