rtgh

ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆ ಆಗಿದೆ ಚೆಕ್ ಮಾಡಿ : ಹೆಚ್ಚಿನ ಮಾಹಿತಿ ತಿಳಿಯಿರಿ

check-from-whom-your-land-has-been-transferred

ನಮಸ್ಕಾರ ಸ್ನೇಹಿತರೆ ಯಾವ ರೈತರಿಂದ ರೈತರ ಜಮೀನುಗಳು ಯಾವ ರೈತರ ಹೆಸರಿಗೆ ವರ್ಗಾವಣೆಯಾಗಿದೆ ಎಂಬುದನ್ನು ಇದೀಗ ಮೊಬೈಲ್ನಲ್ಲಿಯೇ ಸುಲಭವಾಗಿ ಚೆಕ್ ಮಾಡಬಹುದಾಗಿದೆ.

check-from-whom-your-land-has-been-transferred
check-from-whom-your-land-has-been-transferred

ಸಾಗುವಳಿ ಮಾಡುತ್ತಿರುವ ಜಮೀನು ಹಾಗೂ ನಿಮ್ಮ ಅಕ್ಕ ಪಕ್ಕದ ಜಮೀನು, ಈ ಹಿಂದೆ ಯಾರ ಹೆಸರಿನಲ್ಲಿ ಇತ್ತು ಹಾಗೂ ಈಗ ಯಾರ ಹೆಸರಿಗೆ ಜಮೀನು ವರ್ಗಾವಣೆಯಾಗಿದೆ ಯಾವಾಗ ಹೆಸರಿಗೆ ವರ್ಗಾವಣೆ ಆಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮ್ಮ ಜಮೀನಿಗೆ ಮುಟೇಶನ್ ಆಗಿದೆಯಾ ಇಲ್ಲವೇ ಎಂಬುದರ ಬಗ್ಗೆ ಮೊಬೈಲ್ ಮೂಲಕವೇ ಚೆಕ್ ಮಾಡಲು ಅವಕಾಶ ನೀಡಲಾಗಿದ್ದು ಮೊಬೈಲ್ ಮೂಲಕ ಹೇಗೆ ಚೆಕ್ ಮಾಡಬೇಕು ಎಂಬುದನ್ನು ನೀವು ಇವತ್ತಿನ ಲೇಖನದಲ್ಲಿ ಸುಲಭವಾಗಿ ತಿಳಿಯಬಹುದು.

ಮೊಬೈಲ್ ಮೂಲಕವೇ ಜಮೀನ್ ಮುಟೇಶನ್ ಚಕ್ ಮಾಡುವ ವಿಧಾನ :

ಈ ಹಿಂದೆ ರೈತರು ತಮ್ಮ ಜಮೀನಿನ ಹಳೆಯ ದಾಖಲೆಗಳನ್ನು ಪಡೆದುಕೊಳ್ಳಲು ಕಚೇರಿಗಳಿಗೆ ಅಲೆದಾಡಬೇಕಾಗಿತ್ತು. ಜಮೀನಿಗೆ ಸಂಬಂಧಿಸಿದ ಹಳೆಯ ದಾಖಲೆಗಳನ್ನು ತಹಶೀಲ್ದಾರ್ ಅಥವಾ ಆ ಕಂದಾಯ ಕಚೇರಿಗೆ ತೆರಳಿ ಪಡೆಯುತ್ತಿದ್ದರು ಆದರೆ ಇದೀಗ ಕೇವಲ ಒಂದೇ ನಿಮಿಷದಲ್ಲಿ ತಮ್ಮ ಮೊಬೈಲ್ ಮೂಲಕವೇ ರೈತರು ಚೆಕ್ ಮಾಡಬಹುದಾಗಿದೆ.

ಮೊಬೈಲ್ ಮೂಲಕವೇ ಯಾರ ಹೆಸರಿನಿಂದ ಜಮೀನು ಯಾರ ಹೆಸರಿಗೆ ವರ್ಗಾವಣೆಯಾಗಿದೆ ಈ ಹಿಂದೆ ಯಾರ ಹೆಸರಿನಲ್ಲಿ ಜಮೀನು ಇತ್ತು ಹಾಗು ಹೆಸರಿಗೆ ಯಾವಾಗ ವರ್ಗಾವಣೆಯಾಗಿದೆ ಎಂದು ನೋಡುವುದಾದರೆ,

  1. ಜಮೀನಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕಾದರೆ ರೈತರು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  2. https://landrecords.karnataka.gov.in/Service11/MR_MutationExtract.aspx
  3. ಈ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿದ ನಂತರ ಅದರಲ್ಲಿ ಭೂಮಿ ಆನ್ಲೈನ್ ನೋಟೇಶನ್ ಎಕ್ಸ್ಟ್ರಾ ಪೇಜ್ ಎಂದು ತೆಗೆದುಕೊಳ್ಳುತ್ತದೆ.
  4. ಅದರಲ್ಲಿ ಯಾವ ಜಿಲ್ಲೆಗೆ ರೈತರು ಸಂಬಂಧಿಸಿದ್ದಾರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
  5. ಜಿಲ್ಲೆನ ಆಯ್ಕೆ ಮಾಡಿಕೊಂಡ ನಂತರ ತಾಲೂಕು ಹಾಗೂ ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
  6. ಅದಾದ ನಂತರ ರೈತರು ಯಾವ ಊರಿನವರಾಗಿರುತ್ತಾರೆ ಆ ಊರು ಅಥವಾ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು.
  7. ಅದಾದ ನಂತರ ಸರ್ವೆ ನಂಬರ್ ಜಮೀನಿನ ಇತಿಹಾಸವನ್ನು ಚೆಕ್ ಮಾಡಲು ಸರ್ವೇ ನಂಬರ್ ಅನ್ನು ನಮೂದಿಸಬೇಕು.
  8. ಸರ್ವೆ ನಂಬರನ್ನು ನಮೂದಿಸಿದ ನಂತರ ಫೆಚ್ ಡೀಟೇಲ್ಸ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
  9. ಸರ್ವೆ ನಂಬರ್ ಅಕ್ಕ ಪಕ್ಕದಲ್ಲಿ ಇರುವಂತಹ ಹಿಸ್ಸಾ ನಂಬರ್ಗಳ ಪಟ್ಟಿಯನ್ನು ನೋಡಬಹುದಾಗಿದೆ ಅದರಲ್ಲಿ ನಿಮ್ಮ ಸರ್ವೇ ನಂಬರ್ ಅಕ್ಕ ಪಕ್ಕದಲ್ಲಿರುವ ಹಿಸ ನಂಬರ್ ಯಾವ ವರ್ಷ ಬದಲಾವಣೆಯಾಗಿದೆ ಎಂಬುದರ ಬಗ್ಗೆಯೂ ಕೂಡ ನೋಡಬಹುದು.
  10. ಅದಾದ ನಂತರ ನಿಮ್ಮ ಮುಟೇಶನ್ ನಂಬರ್ ಅನ್ನು ಸಹ ರೈತರು ಸುಲಭವಾಗಿ ನೋಡಬಹುದು.
  11. ಮೋಟೇಶನ್ ನಂಬರ್ ಅಲ್ಲದೆ ಜಮೀನು ಒಬ್ಬರಿಂದ ಇನ್ನೊಬ್ಬರಿಗೆ ಹೇಗೆ ಬದಲಾವಣೆಯಾಗಿದೆ ಹಾಗೂ ಯಾವಾಗ ತಹಸೀಲ್ದಾರರು ಅಪ್ರೋವ್ ಮಾಡಿದ್ದಾರೆ ಎಂಬ ಮಾಹಿತಿಯು ಕೂಡ ಸಿಗುತ್ತದೆ.
  12. ಇದು ಅತಿ ಮುಖ್ಯವಾದ ಮಾಹಿತಿಯಾಗಿದ್ದು ಸರ್ವೆ ನಂಬರ್ ಹಾಗೂ ಇಸಾ ನಂಬರ್ ಹಿಂದಿರುವ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು.
  13. ಅದಾದ ನಂತರ ಅದರಲ್ಲಿ ಕಾಣುವಂತಹ ಪ್ರಿವ್ಯೂ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
  14. ಈಗ ನಿಮಗೆ ಮತ್ತೊಂದು ಪೇಸ್ಟ್ ತೆಗೆದುಕೊಳ್ಳುತ್ತದೆ ಅದರಲ್ಲಿ ಸರ್ವೆ ನಂಬರ್ ಸ್ವಾಧೀನದಾರರ ಹೆಸರು ಜಮೀನು ಖಾದ ನಂಬರ್ ಹಾಗೂ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಹೀಗೆ ಜಮೀನಿನ ದಾಖಲೆಗಳನ್ನು ತಮ್ಮ ರೈತರು ಆಗಾಗ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬೇಕು. ಏಕೆಂದರೆ ರೈತರು ಜಮೀನಿನಲ್ಲಿ ಆಗುವಂತಹ ಬದಲಾವಣೆಯನ್ನು ಚೆಕ್ ಮಾಡಿಕೊಳ್ಳಿ .

ಅಲ್ಲದೇ ಕೆಲವು ಕಡೆ ರೈತರಿಗೆ ಗೊತ್ತಿಲ್ಲದೆ ಜಮೀನು ಬೇರೆಯವರ ಹೆಸರಿಗೆ ವರ್ಗಾವಣೆಯಾಗುವ ಹಾಗೂ ಹೆಚ್ಚು ಎಕರೆಯನ್ನು ನಮೂದಿಸಿಕೊಂಡಿರುತ್ತಾರೆ. ಹಾಗಾಗಿ ರೈತರು ಆನ್ಲೈನ್ ನಲ್ಲಿ ಸುಲಭವಾಗಿ ಆಗಾಗ ತಮ್ಮ ಜಮೀನಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಚೆಕ್ ಮಾಡಿಕೊಳ್ಳಬೇಕು.

ಒಟ್ಟಾರೆ ರೈತರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಹಾಗೂ ಯಾವಾಗ ರೈತರಿಗೆ ಜಮೀನುಗಳು ವರ್ಗಾವಣೆಯಾಗಿದೆ ಹಾಗೂ ಯಾರ ಹೆಸರಿಗೆ ವರ್ಗಾವಣೆ ಆಗಿದೆ ಎಂಬುದನ್ನು ಸುಲಭವಾಗಿ ಮೊಬೈಲ್ ನಲ್ಲಿ ಸೆಟ್ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಲಾಗಿದ್ದು.

ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಕೂಡ ತಮ್ಮ ಜಮೀನಿನ ಬಗ್ಗೆ ಆಗಾಗ ತಿಳಿದುಕೊಳ್ಳಲು ಹೇಳಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *