rtgh

ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ ಅವರು ಈ ದಾಖಲೆ ತೋರಿಸಿ ಎಲ್ಲಾ ಬರ ಪರಿಹಾರ ಹಣ ಪಡೆಯಬಹುದು

drought-relief-money-deposit-information

ನಮಸ್ಕಾರ ಸೇಹಿತರೇ ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ. ಸಾಕಷ್ಟು ರೈತರು ಕಳೆದ ಬಾರಿ ಮಳೆಯ ಭಾವದಿಂದ ಕಷ್ಟಪಡುವಂತೆ ಆಗಿದೆ ಸರಿಯಾಗಿ ಫಸಲನ್ನು ರೈತರು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಜಮೀನಿಗೆ ಉತ್ತಮ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ ಇಂದು ರೈತರು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ನೀರಿಗೆ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.

drought-relief-money-deposit-information
drought-relief-money-deposit-information

ರಾಜ್ಯ ಸರ್ಕಾರ ಈ ಹಿನ್ನೆಲೆಯಲ್ಲಿ ರೈತರಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದು ಸಾವಿರ ರೂಪಾಯಿಗಳ ಹಣವನ್ನು ಮೊದಲ ಹಂತದಲ್ಲಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ ಈ ಹಣವನ್ನು ಪಡೆಯಬೇಕಾದರೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹಾಗಾದರೆ ಯಾವು ದಾಖಲೆಗಳನ್ನು ಸರ್ಕಾರಕ್ಕೆ ನೀಡಬೇಕು ಎಂಬುದರ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಸರ್ಕಾರದಿಂದ ಬರ ಪರಿಹಾರಕ್ಕೆ ಕ್ರಮ :

ರಾಜ್ಯದಲ್ಲಿ ಒಟ್ಟು 253 ಪ್ರದೇಶಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದ್ದು ಇದುವರೆಗೂ ಕೂಡ ಕೇಂದ್ರ ಸರ್ಕಾರದಿಂದ ಅನುದಾನ ದೊರೆತಿಲ್ಲ ಎಂಬ ದೂರು ಇರುವುದರಿಂದ ತಾನೆ ಮುಂದಾಗಿ ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರ ನೀಡಲು ನಿಂತಿದೆ.

2023-24ನೇ ಸಾಲಿನಲ್ಲಿ ಬಿತ್ತನೆ ಮಾಡಿರುವಂತಹ ಸುಮಾರು ಒಂದು ಲಕ್ಷದ 9729 ರೈತರಿಗೆ ರಾಜ್ಯ ಸರ್ಕಾರ 37 ಕೋಟಿ 59 ಲಕ್ಷ ರೂಪಾಯಿಗಳ ಹಣವನ್ನು ಬರ ಪರಿಹಾರದ ಹಣವಾಗಿ ಬಿಡುಗಡೆ ಮಾಡಲಾಗಿದೆ. ಈ ಹಣದ ಮೂಲಕ ರೈತರ ಬ್ಯಾಂಕ್ ಖಾತೆಗೆ 2000 ಹಣವನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಿದೆ.

ಈ ದಾಖಲೆಗಳು ಬರ ಪರಿಹಾರ ಪಡೆದುಕೊಳ್ಳಲು ಕಡ್ಡಾಯ :

ಸರ್ಕಾರದ ಪ್ರಮುಖ ಯೋಜನೆಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕಾದರೆ ಎಫ್ ಐ ಡಿ ಅಂದರೆ ಫ್ರೂಟ್ಸ್ ಐಡಿ ಹೊಂದಿರುವುದು ಕಡ್ಡಾಯವಾಗಿದೆ. ಅದರಂತೆ ಇದೀಗ ಬರ ಪರಿಹಾರದ ನಿಧಿ ಪಡೆದುಕೊಳ್ಳಲು ಕೂಡ ಸರ್ಕಾರವು ಈ ದಾಖಲೆಯನ್ನು ಕಡ್ಡಾಯಗೊಳಿಸಿದ್ದು ಒಂದು ವೇಳೆ ರೈತರ ಬಳಿ ಏನಾದರೂ ಸಂಖ್ಯೆ ಇಲ್ಲದೆ ಇದ್ದರೆ ತಕ್ಷಣವೇ ಎಫ್ ಐ ಡಿ ಸಂಖ್ಯೆಯನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು.

ಇದನ್ನು ಓದಿ : ಬೆಳ್ಳಂಬೆಳಗ್ಗೆ ಸತತ ಏರಿಕೆಯಾಗಿದ್ದ ಚಿನ್ನದ ಬೆಲೆ ಕುಸಿತ : ಖರೀದಿಸಲು ಮುಗಿಬಿದಿದ್ದರೆ ಗ್ರಾಹಕರು ..!

FID ಮಾಡಿಸಲು ಬೇಕಾಗುವ ದಾಖಲೆಗಳು :

ರೈತರು ಸರ್ಕಾರದ ಯೋಜನೆಗಳ ಪ್ರಯೋಜನ ಹಾಗೂ ಇದೀಗ ಬರಹ ಪರಿಹಾರದ ಹಣ ಪಡೆದುಕೊಳ್ಳಲು ಕೂಡ ಎಫ್ಐಡಿ ಸಂಖ್ಯೆ ಹೊಂದಿರಬೇಕೆಂದು ರಾಜ್ಯ ಸರ್ಕಾರ ತಿಳಿಸಿದ್ದು ಇದೀಗ ರೈತರು ಮಾಡಿಸಲು ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು.

  1. ಆಧಾರ್ ಕಾರ್ಡ್.
  2. ಆದಾಯ ಪ್ರಮಾಣ ಪತ್ರ.
  3. ಪಡಿತರ ಚೀಟಿ.
  4. ವಿಳಾಸದ ಪುರಾವೆ.
  5. ಮೊಬೈಲ್ ನಂಬರ್.
    ಹೀಗೆ ಈ ದಾಖಲೆಗಳನ್ನು ಹೊಂದುವುದರ ಮೂಲಕ ಎಫ್ ಐ ಡಿ ಯನ್ನು ಸುಲಭವಾಗಿ ರೈತರು ಮಾಡಿಸಬಹುದಾಗಿದೆ.

FID ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು :

ರೈತರು ಎಫ್ ಐಡಿಯನ್ನು ಮಾಡಿಸಬೇಕಾದರೆ ಅರ್ಜಿಯನ್ನು ಕೆಲವೊಂದು ಕೇಂದ್ರಗಳಿಗೆ ಭೇಟಿ ನೀಡಿ ಸಲ್ಲಿಸಬೇಕು ಅವುಗಳೆಂದರೆ,

  1. ರೈತ ಸಂಪರ್ಕ ಕೇಂದ್ರ.
  2. ತೋಟಗಾರಿಕೆ ಇಲಾಖೆ.
  3. ರೇಷ್ಮೆ ಇಲಾಖೆ.
  4. ನಾಗರಿಕ ಸೇವಾ ಕೇಂದ್ರ.
    ಈ ಕೇಂದ್ರಗಳಿಗೆ ಭೇಟಿ ನೀಡಿ ಎಫ್ ಐ ಡಿ ಸಂಖ್ಯೆಯನ್ನು ಪಡೆದುಕೊಳ್ಳಲು ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಬರ ಪರಿಹಾರದ ಹಣ ಚೆಕ್ ಮಾಡುವ ವಿಧಾನ :

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವನ್ನು ರೈತರು ತೆಗೆದುಕೊಳ್ಳಬೇಕಾದರೆ ಎಫ್ ಐ ಡಿ ಇರುವಂತಹ ರೈತರು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://fruits.karnataka.gov.in/ಈ ವೆಬ್ ಸೈಟಿಗೆ ಭೇಟಿ ನೀಡುವುದರ ಮೂಲಕ ಜಮೀನಿನ ಎಲ್ಲಾ ವಿವರಗಳನ್ನು ಪಡೆಯಬಹುದಾಗಿದೆ.

ಅಲ್ಲದೆ ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಹಣವನ್ನು ಕೂಡ ತಕ್ಷಣವೇ ತಿಳಿದುಕೊಳ್ಳಬಹುದಾಗಿದೆ ಹಾಗಾಗಿ ಇದುವರೆಗೂ ಕೂಡ ಯಾವ ರೈತರು ಪಡೆದುಕೊಂಡಿಲ್ಲವೋ ತಕ್ಷಣವೇ ಈ ಎಫ್ ಐ ಡಿ ಸಂಖ್ಯೆಯನ್ನು ಹೊಂದುವುದರ ಮೂಲಕ ಬರ ಪರಿಹಾರದ ಹಣವನ್ನು ಪಡೆಯಬಹುದಾಗಿದೆ.

ಹೀಗೆ ಸರ್ಕಾರವು ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವನ್ನು ರೈತರು ಪಡೆದುಕೊಳ್ಳಬೇಕಾದರೆ ಎಫ್ ಐ ಡಿ ಸಂಖ್ಯೆ ಹೊಂದಿರಬೇಕೆಂದು ಸರ್ಕಾರ ಕಡ್ಡಾಯಗೊಳಿಸಿದೆ. ಹಾಗಾಗಿ ಎಫ್ ಐ ಡಿ ಹೊಂದಿರುವ ರೈತರಿಗೆ ಮಾತ್ರ ಸರ್ಕಾರ ಈ ಹಣವನ್ನು ವರ್ಗಾವಣೆ ಮಾಡುತ್ತಿದ್ದು ಪ್ರತಿಯೊಬ್ಬ ರೈತರು ಕೂಡ ಎಫ್ ಐ ಡಿ ಸಂಖ್ಯೆ ಹೊಂದಿರಬೇಕೆಂದು ತಿಳಿಸಿ.

FID ಸಂಖ್ಯೆಯನ್ನು ಹೊಂದಿದಾಗ ಮಾತ್ರ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ರೈತರು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ತಿಳಿಸಿ ಹಾಗಾಗಿ ಪ್ರತಿಯೊಬ್ಬರೂ ಕೂಡ ಎಫ್ ಐ ಡಿ ಸಂಖ್ಯೆಯನ್ನು ಮಾಡಿಸಿಕೊಳ್ಳಬೇಕು ಎಂದು ಹೇಳಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *