ಹಲೋ ಸ್ನೇಹಿತರೇ, ಮಹಿಳೆಯರು ತಮ್ಮ ಸ್ವಂತ ದುಡಿಮೆಯನ್ನು ಮಾಡಿಕೊಂಡು ಅವರ ಜೀವನವನ್ನು ಅವರೇ ಸುಧಾರಿಸಬೇಕು ಅಂದರೆ ಆರ್ಥಿಕವಾಗಿ ಯಾರ ಮೇಲು ಅವಲಂಬಿತವಾಗಿರಬಾರದು ಎಂದು ಸರ್ಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಅವುಗಳಲ್ಲಿ ಉದ್ಯೋಗಿನಿ ಯೋಜನೆ ಕೂಡ ಒಂದು. ಸುಲಭ ಸಾಲ ಪಡೆದುಕೊಂಡು ತಮ್ಮ ಯಾವುದೇ ಸ್ವಂತ ಉದ್ಯಮವನ್ನು ಆರಂಭಿಸಬಹುದು. ಜೊತೆಗೆ ಕೈ ತುಂಬಾ ಆದಾಯ ಗಳಿಸಬಹುದು, ಈ ಮೂಲಕ ಮಹಿಳೆಯರಿಗೆ ಆರ್ಥಿಕ ನೆರವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಪ್ರಧಾನ್ ಮಂತ್ರಿ ಉದ್ಯೋಗಿನಿ ಯೋಜನೆ
ವಿಶೇಷವಾಗಿ, ಮಹಿಳೆಯರಿಗಾಗಿಯೇ ಆರಂಭಿಸಲಾದ ಯೋಜನೆ ಇದಾಗಿದ್ದು ಇದರ ಅಡಿಯಲ್ಲಿ ಮಹಿಳೆಯರು ಯಾವುದೇ ಗ್ಯಾರಂಟಿ ಇಲ್ಲದೆ ಬಡ್ಡಿ ರಹಿತ ಮೂರು ಲಕ್ಷ ರೂಪಾಯಿಗಳ ಸಾಲ ಪಡೆಯಬಹುದು. ಕರ್ನಾಟಕ ರಾಜ್ಯ ಒಂದರಲ್ಲಿಯೇ 48000ಕ್ಕೂ ಹೆಚ್ಚಿನ ಮಹಿಳೆಯರು ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಿದ್ದಾರೆ.
ಯಾರಿಗೆ ಸಿಗುತ್ತೆ ಉದ್ಯೋಗಿನಿ ಸಾಲ
18 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ತಮ್ಮ ಸ್ವಂತ ಉದ್ಯಮ ಆರಂಭಿಸಲು ಉದ್ಯೋಗಿನಿ ಯೋಜನೆಯಿಂದ ಸಾಲ ಪಡೆಯಬಹುದು. ಇನ್ನು ವಿಧವೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಸಾಲದ ಮೊತ್ತದ ಮಿತಿ ಇಲ್ಲ.
ರೈತರಿಗೆ ಸಿಹಿಸುದ್ದಿ: 17ನೇ ಕಂತಿನ ಹಣ ಜಮೆಗೆ ದಿನಾಂಕ ನಿಗದಿ!
ಅವರ ಪರಿಸ್ಥಿತಿಗೆ ಅನುಗುಣವಾಗಿ ಅವರಿಗೆ ಸಾಲದ ಹಣ ಮಂಜೂರಾಗುತ್ತದೆ. ಮತ್ತು ವಿಧವೆಯರಿಗೆ ಮೊದಲ ಆದ್ಯತೆಯಾಗಿದ್ದು, ಅವರು ಸ್ವಂತ ಉದ್ಯಮ ಆರಂಭಿಸುವುದಾದರೆ ಬಹಳ ಬೇಗ ಸಾಲ ಮಂಜೂರು ಮಾಡಿಕೊಡಲಾಗುವುದು.
ರೇಷನ್ ಕಾರ್ಡ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಅಡ್ರೆಸ್ ಪ್ರೂಫ್, ಪಾಸ್ಪೋರ್ಟ್, ಅಳತೆಯ ಫೋಟೋ ಬ್ಯಾಂಕ್ ಖಾತೆಯ ವಿವರ ಇಷ್ಟು ದಾಖಲೆಗಳು ನಿಮ್ಮ ಬಳಿ ಇದ್ದರೆ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯಲ್ಲಿ ವಿಧವೆಯರಿಗೆ ಮತ್ತು ಅಂಗವಿಕಲರಿಗೆ ಯಾವುದೇ ರೀತಿಯ ಬಡ್ಡಿ ಪಾವತಿ ಮಾಡದೆ ಮೂರು ಲಕ್ಷ ರೂಪಾಯಿಗಳ ಸಾಲ ಪಡೆಯಬಹುದು. ಹಾಗೂ ಇತರ ಮಹಿಳೆಯರಿಗೆ ಹತ್ತರಿಂದ ಹನ್ನೆರಡು ಪರ್ಸೆಂಟ್ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.
ಉದ್ಯೋಗಿನಿ ಸಾಲವನ್ನು ಪಡೆಯಲು ಯಾವುದೇ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ಕೊಟ್ಟು ಸಾಲ ಸೌಲಭ್ಯ ಪಡೆದುಕೊಳ್ಳಿ. ಇದು ವಿಶೇಷವಾಗಿ ಮಹಿಳೆಯರಿಗೆ ಮೀಸಲಾಗಿರುವ ಯೋಜನೆಯಾಗಿದ್ದು ಯಾವುದೇ ಮಹಿಳೆ ಸ್ವಂತ ಉದ್ಯಮ ಆರಂಭಿಸುವುದಾದರೆ ಆ ಉದ್ಯಮ ಮಹಿಳೆಯ ಹೆಸರಿನಲ್ಲಿಯೇ ಇರಬೇಕಾಗಿರುವುದು ಕಡ್ಡಾಯ.
ಇತರೆ ವಿಷಯಗಳು:
SSLC Result 2024 : ಈ ದಿನಾಂಕವೇ ಫಿಕ್ಸ್ ! ನಿಮ್ಮ ಫಲಿತಾಂಶ ನೋಡುವ ಲಿಂಕ್ ಇಲ್ಲಿದೆ
ಸಾರ್ವಜನಿಕ ಶೌಚಾಲಯಗಳ ದರ ಐದರಿಂದ ಹತ್ತು ರೂ. ಏರಿಕೆ!!