ಹಲೋ ಸ್ನೇಹಿತರೇ, ಸಾಮಾನ್ಯವಾಗಿ ದೊಡ್ಡ ಉದ್ಯಮಗಳನ್ನ ಮಾಡುವುದಿದ್ದರೆ ಫ್ಯಾಕ್ಟರಿ ಅಥವಾ ಕಂಪನಿ ಆರಂಭಿಸುವುದಿದ್ದರೆ ಮಾತ್ರ ಸರ್ಕಾರದಿಂದ ಅಥವಾ ಬ್ಯಾಂಕ್ನಿಂದ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆಯಬಹುದು ಎಂದು ಹಲವರು ಭಾವಿಸುತ್ತಾರೆ.
ಆದರೆ ನಿಮಗೆ ಗೊತ್ತಾ ನಿರುದ್ಯೋಗಿಗಳು ಕೃಷಿ ಚಟುವಟಿಕೆಯಲ್ಲಿ ಅಥವಾ ಕೃಷಿಯ ಉಪಕಸುಬಿನಲ್ಲಿ ತೊಡಗಿಕೊಂಡರೆ ಅವರು ಕೂಡ 50 ಲಕ್ಷ ರೂಪಾಯಿಗಳ ವರೆಗೂ ಸರ್ಕಾರದಿಂದ ಸಾಲ ಪಡೆಯಬಹುದು.
ಹೌದು, ನೀವು ಹೈನುಗಾರಿಕೆ ಮೀನುಗಾರಿಕೆ, ಮೇಕೆ ಸಾಕಾಣಿಕೆ, ಕೋಳಿ ಫಾರ್ಮಿಂಗ್ ಹೀಗೆ ಬೇರೆ ಬೇರೆ ರೀತಿಯ ಕೃಷಿ ಉಪಕಸುಬು ಆರಂಭಿಸುವುದಾದರೆ ಸರ್ಕಾರ ಅತಿ ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಅಡಮಾನವನ್ನು ಇಟ್ಟುಕೊಳ್ಳದೆ ಸಾಲ ಸೌಲಭ್ಯ ಒದಗಿಸುತ್ತದೆ. ಇನ್ನು ಮೇಕೆ ಸಾಕಾಣಿಕೆ ಮಾಡುವುದಾದರೆ 50 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ.
Contents
ಮೇಕೆ ಸಾಕಾಣಿಕೆಗೆ 50 ಲಕ್ಷ ಸಹಾಯಧನ
ಭಾರತ ಕೃಷಿ ಪ್ರಧಾನ ದೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದಿಗೂ ಕೋಟ್ಯಾಂತರ ರೈತರು ತಮ್ಮ ಜೀವನವನ್ನು ಕೃಷಿ ಚಟುವಟಿಕೆ ಮಾಡಿಕೊಂಡೆ ಸಾಗಿಸುತ್ತಿದ್ದಾರೆ. ಕೃಷಿ ಉದ್ಯಮವನ್ನು ಆರಂಭಿಸಿದ್ರೆ ಅದರಿಂದ ಹೆಚ್ಚು ಲಾಭವನ್ನು ಸಹ ಪಡೆಯಬಹುದು.
ಇನ್ನು ಗದ್ದೆಗಳಲ್ಲಿ ಫಸಲು ಬೆಳೆಯುವುದರ ಜೊತೆಗೆ ಸಾಕಷ್ಟು ರೈತರು ಪಶು ಸಂಗೋಪನೆಯಂತಹ ಉಪಕಸುಬುಗಳನ್ನು ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಸರ್ಕಾರ ಹೆಚ್ಚಿನ ಮೊತ್ತದ ಹಣವನ್ನು ಸಾಲವಾಗಿ ನೀಡುತ್ತದೆ. ನೀವು ಮೇಕೆ ಸಾಕಾಣಿಕೆಗೆ 50 ಲಕ್ಷ ರೂಪಾಯಿಗಳ ಸಾಲ ಪಡೆದುಕೊಂಡರೆ 50% ವರೆಗೂ ಸಬ್ಸಿಡಿ ಪಡೆದುಕೊಳ್ಳಲು ಸಾಧ್ಯವಿದೆ.
ಮಹಿಳೆಯರಿಗೆ ಮತ್ತೆ 800 ಹಣ ಗೃಹಲಕ್ಷ್ಮಿ ಅಲ್ಲದೆ ಇನ್ನೊಂದು ಯೋಜನೆ
ಸಬ್ಸಿಡಿ ಸಾಲ ಪಡೆಯಲು ಬೇಕಾಗಿರುವ ದಾಖಲೆಗಳು
- ಅರ್ಜಿ ಸಲ್ಲಿಸುವ ರೈತರ ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಸ್ವಂತ ಜಮೀನು ಹೊಂದಿದ್ದರೆ ಪಹಣಿ ಪತ್ರ
- ಈ ರೀತಿ ಮೊದಲಾದ ದಾಖಲೆಗಳನ್ನು ನೀಡಿ ನೀವು ಸಾಲ ಸೌಲಭ್ಯ ಪಡೆಯಬಹುದು.
ಸಾಲ ಸೌಲಭ್ಯವನ್ನು ಎಲ್ಲಿ ಪಡೆಯಬಹುದು?
ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯ ಪಡೆಯಲು ಹತ್ತಿರದ ಪಶು ವೈದ್ಯಕೀಯ ಕೇಂದ್ರಕ್ಕೆ ಹೋಗಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಅಗತ್ಯ ಇರುವ ದಾಖಲೆಗಳನ್ನು ನೀಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ದೇಶದ ಎಲ್ಲಾ ಪ್ರಮುಖ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು. ಇನ್ನು ಪಶು ವೈದ್ಯಕೀಯ ಕೇಂದ್ರದಲ್ಲಿ ಅರ್ಜಿ ನಮೂನೆ ತೆಗೆದುಕೊಂಡು ಅದನ್ನು ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿ. ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ ಕೇವಲ ವಾರದಿಂದ 15 ದಿನಗಳ ಒಳಗೆ ಸಾಲ ಮಂಜೂರು ಮಾಡಲಾಗುತ್ತದೆ ಹಾಗೂ ಮಂಜೂರಾದ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಇತರೆ ವಿಷಯಗಳು:
SSLC ಫಲಿತಾಂಶ ಕೆಲವೇ ಗಂಟೆಗಳಲ್ಲಿ ಪ್ರಕಟ : ಇಲ್ಲಿದೆ ಅಧಿಕೃತ ಜಾಲತಾಣ
7ನೇ ವೇತನ ಆಯೋಗ ಶಿಫಾರಸ್ಸು ಅನ್ವಯ ಸಂಬಳ ಭತ್ಯೆ ಭಾರಿ ಏರಿಕೆ ವರದಿ ನೋಡಿ