ನಮಸ್ಕಾರ ಸ್ನೇಹಿತರೇ ಕೇಂದ್ರ ಸರ್ಕಾರದಿಂದ ಬಾಡಿಗೆ ಮನೆಯಲ್ಲಿ ಇರುವವರಿಗೆ ಗುಡ್ ನ್ಯೂಸ್ ನೀಡಲಾಗುತ್ತಿದೆ. ಯಾವುದೇ ಕನಸು ಕಂಡರೂ ಕೂಡ ಇಂದು ಅದು ದುಬಾರಿಯಾಗುತ್ತದೆ ಅದನ್ನ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಉದಾಹರಣೆಗೆ ನಾವು ಒಂದು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವ ಕನಸನ್ನು ಹೊಂದಿದ್ದರೆ ಈಗಿರುವಂತಹ ದುನಿಯಾದಲ್ಲಿ ಒಂದು ಸ್ವಂತ ಮನೆಯನ್ನು ನಿರ್ಮಿಸಲು ಎಲ್ಲ ವಸ್ತುಗಳು ಕೂಡ ತುಂಬಾನೇ ದುಬಾರಿಯಾಗಿವೆ.
ಹಾಗಾಗಿ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ ಎಷ್ಟೋ ಜನ ಎಷ್ಟು ವರ್ಷ ಈ ಬಾಡಿಗೆ ಮನೆಯಲ್ಲಿ ಜೀವನ ಮಾಡಬೇಕೆಂದು ಅಂದುಕೊಂಡಿರುತ್ತಾರೆ ಅಂತವರಿಗಾಗಿ ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುಡ್ ನ್ಯೂಸ್ ಅನ್ನು ನೀಡಿದ್ದಾರೆ.
Contents
ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಬಹುದು :
ಪ್ರಧಾನ ಮಂತ್ರಿ ಆವಾಸ್ ಯೋಜನೆ ಈಗಾಗಲೇ ಹೆಚ್ಚು ಪ್ರಚಲಿತದಲ್ಲಿರುವ ಹಾಗೂ ಸಾಕಷ್ಟು ಸ್ವಂತ ಮನೆ ನಿರ್ಮಾಣ ಮಾಡಿ ಕೊಟ್ಟಿರುವಂತಹ ಈ ಯೋಜನೆಯ ಬಗ್ಗೆ ತಿಳಿದಿರಬಹುದು ಅದರಂತೆ ಇಲ್ಲಿಯವರೆಗೆ ಕೋಟ್ಯಾಂತರ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟು ಲಕ್ಷಾಂತರ ಮನೆಗಳನ್ನು ಈ ಯೋಜನೆಯ ಅಡಿಯಲ್ಲಿ ನಿರ್ಮಾಣ ಮಾಡಿಕೊಟ್ಟಿದೆ.
ಒಂದು ಕೋಟಿ ಮನೆ ನಿರ್ಮಾಣ ಮಾಡುವ ಕನಸನ್ನು ಕೇಂದ್ರ ಸರ್ಕಾರ 2025ರ ಹೊತ್ತಿಗೆ ಹೊಂದಿದೆ. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರು ಇದೀಗ ಸ್ವಂತ ಮನೆ ನಿರ್ಮಾಣ ಮಾಡಿಕೊಡುವ ಸಲುವಾಗಿ ಸಾಕಷ್ಟು ಹಣವನ್ನು ಕೇಂದ್ರ ಸರ್ಕಾರ ಈ ಯೋಜನೆಗೆ ಮೀಸಲಿಟ್ಟಿದೆ.
ಇದನ್ನು ಓದಿ : ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಹೊಸ ಯೋಜನೆ.! ಕೇಂದ್ರ ಸರ್ಕಾರದ ಈ ಸ್ಕೀಮ್ ಪ್ರಯೋಜನ 4 ತಿಂಗಳು ಮಾತ್ರ
ಯೋಜನೆಗೆ ಯಾರೆಲ್ಲಾ ಅರ್ಹರು :
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಾಗಲು ಕೆಲವೊಂದು ಅರ್ಹತೆಗಳನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ.
- ಬಡವರ್ಗದ ಕುಟುಂಬಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
- 6 ಲಕ್ಷಕ್ಕಿಂತ ಕಡಿಮೆ ಕುಟುಂಬದ ವಾರ್ಷಿಕ ಆದಾಯ ಇರಬೇಕು.
- 30 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವಂತಹ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ.
- ಹೆಚ್ಚು ಸಬ್ಸಿಡಿಯನ್ನು ಬಡತನ ರೇಖೆಗಿಂತ ಕೆಳಗಿರುವವರು ಪಡೆಯಬಹುದು.
- 6 ಲಕ್ಷ ರೂಪಾಯಿಗಳನ್ನು ಬಡವರು ಮನೆ ನಿರ್ಮಾಣ ಮಾಡಿಕೊಳ್ಳಲು ಸಾಲವಾಗಿ ಈ ಯೋಜನೆಯ ಅಡಿಯಲ್ಲಿ ಪಡೆಯಬಹುದು ಹಾಗೂ ಸರ್ಕಾರವೇ 2.67 ಲಕ್ಷ ರೂಪಾಯಿಗಳನ್ನು ಇದರಲ್ಲಿ ಪಾವತಿ ಮಾಡುತ್ತದೆ.
- ಅರವತ್ತು ಚದರ ಮೀಟರ್ ವಿಸ್ತೀರ್ಣದ ಮನೆ ನಿರ್ಮಾಣ ಮಾಡಿಕೊಳ್ಳಲು 6ರಿಂದ 12 ಲಕ್ಷ ವಾರ್ಷಿಕ ವರಮಾನ ಹೊಂದಿರುವವರಿಗೆ ಅವಕಾಶ ಕಲ್ಪಿಸಲಾಗಿದೆ.
- 9 ಲಕ್ಷ ರೂಪಾಯಿ ಸಾಲ ಹಾಗೂ 2.35 ಲಕ್ಷ ರೂಪಾಯಿಗಳ ಸಬ್ಸಿಡಿಯ ಹಣವನ್ನು ಸರ್ಕಾರದಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತದೆ.
- 120 ಚದರ ಅಡಿ ವಿಸ್ತೀರ್ಣದ ಮನೆಯನ್ನು 12 ರಿಂದ 18 ಲಕ್ಷ ವಾರ್ಷಿಕ ವರಮಾನ ಹೊಂದಿರುವವರು ಮಾಡಿಕೊಳ್ಳಬಹುದು.
- ಇವರಿಗೆ ಗರಿಷ್ಠ 12 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಹಾಗೂ 2.30 ಲಕ್ಷಗಳ ಸಬ್ಸಿಡಿಯ ಹಣವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಕೇಂದ್ರ ಸರ್ಕಾರ ಜಮಾ ಮಾಡುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ತಿಳಿಸಿರುವಂತಹ ಅಗತ್ಯ ಮಾಹಿತಿಗಳನ್ನ ಸರಿಯಾಗಿ ತಿಳಿದುಕೊಂಡು ಆನಂತರ ಅರ್ಜಿ ಸಲ್ಲಿಸಿ, ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
ಒಟ್ಟಾರೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಜನರಿಗೆ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತಿದೆ.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಈ ಯೋಜನೆಗೆ ಅರ್ಹರಾಗಿದ್ದರೆ ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲಿ ಧನ್ಯವಾದಗಳು.