rtgh

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಬರಲಿದೆ : ಈ ಜಿಲ್ಲೆಗಳ ಪಟ್ಟಿ ನೋಡಿ !

first-rain-of-this-year-in-some-districts-of-karnataka

ನಮಸ್ಕಾರ ಸ್ನೇಹಿತರೆ ಕೆಲ ಜಿಲ್ಲೆಗಳಲ್ಲಿ ಬಿಸಿಲಿನಿಂದ ಬೇಸತ್ತಿದ್ದ ಜನರು ಇದೀಗ ವರುಣನ ಆಗಮನದಿಂದ ಸಂತೋಷವಾಗಿದ್ದಾರೆ. ಅದರಂತೆ ಭಾರತೀಯ ಹವಾಮಾನ ಇಲಾಖೆಯು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿದ್ದು ಮಂಗಳೂರು ಗದಗದಲ್ಲಿ ಮಳೆಯಾಗಿರುವುದರ ಬಗ್ಗೆ ಕೂಡ ತಿಳಿಸಿದೆ ಇಂದು ಸಹ ಕೆಲವು ಜಿಲ್ಲೆಗಳಲ್ಲಿಯೂ ಕೂಡ ಮಳೆಯಾಗಲಿದೆ ಎಂದು ತಿಳಿಸಿದೆ.

first-rain-of-this-year-in-some-districts-of-karnataka
first-rain-of-this-year-in-some-districts-of-karnataka

Contents

ಮೊದಲ ವರ್ಷದ ಮಳೆಯ ಸಿಂಚನ :

ನಿನ್ನೆ ವರ್ಷದ ಮೊದಲ ಮಳೆಯ ಸಿಂಚನ ಮಂಗಳೂರಿನಲ್ಲಿ ಆಗಿದ್ದು ಅಲ್ಲಿನ ನಗರವಾಸಿಗಳಿಗೆ ಮಳೆಯ ಸ್ಪರ್ಶ ತಂಪು ನೀಡಿದೆ ಎಂದು ಹೇಳಬಹುದು. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೇ ಮಂಗಳೂರಿನ ನಗರದಾದ್ಯಂತ ಮಳೆ ಸುರಿದಿದೆ.

ಮಾರ್ಚ್ 26ರವರೆಗೂ ಮಳೆ ಮುಂದುವರೆಯುವ ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದ್ದು ಕೇವಲ ಮಂಗಳೂರು ನಗರವಲ್ಲದೆ ಗ್ರಾಮೀಣ ಭಾಗದಲ್ಲಿಯೂ ಕೂಡ ಮಳೆಯಾಗಿರುವ ಬಗ್ಗೆ ವರದಿ ಮಾಡಲಾಗಿದೆ.

ಇದನ್ನು ಓದಿ : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ ಅವರು ಈ ದಾಖಲೆ ತೋರಿಸಿ ಎಲ್ಲಾ ಬರ ಪರಿಹಾರ ಹಣ ಪಡೆಯಬಹುದು

ರಾಜ್ಯದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ :

ಕೇವಲ ಮಂಗಳೂರಿನಲ್ಲಿ ಮಾತ್ರ ಮಳೆಯಾಗಿರದೇ ಗದಗ ಬೆಟಗೇರಿ ಸೇರಿದಂತೆ ನಗರದ ಹಲವಡೆ ಮಳೆಯಾಗಿದ್ದು ಗದಗ ಜಿಲ್ಲೆಯಲ್ಲಿ ಇಂದು ಸಹ ಮಳೆಾಗಬಹುದು ಎಂದು ಹವಾಮಾನ ಇಲಾಖೆಯು ಅಲ್ಲಿನ ಜನತೆಗೆ ಮುನ್ಸೂಚನೆ ನೀಡಿದೆ. ರಾಜ್ಯದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಅದರಂತೆ ಕೆಲ ಜಿಲ್ಲೆಗಳಲ್ಲಿಯೂ ಕೂಡ ಇದೀಗ ಮಳೆಯಾಗುತ್ತಿದೆ.

  1. ಬೆಂಗಳೂರು ನಗರ.
  2. ಕೋಲಾರ.
  3. ಚಾಮರಾಜನಗರ.
  4. ಚಿಕ್ಕಬಳ್ಳಾಪುರ.
  5. ಬೆಂಗಳೂರು ಗ್ರಾಮಾಂತರ.
  6. ಹಾಸನ.
  7. ತುಮಕೂರು.
    ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದ್ದು ಅದರ ಜೊತೆಗೆ ರಾಮನಗರ ಕೊಡಗು, ಮಂಡ್ಯ ಮೈಸೂರು ಸೇರಿದಂತೆ ಇನ್ನೂ ಹಲವು ಕಡೆ ವರುಣ ಆರ್ಭಟಿಸಲಿದ್ದಾನೆ ಎಂದು ಸೂಚನೆ ನೀಡಿದೆ.

ಒಟ್ಟಾರೆ ಮಂಗಳೂರಿನಲ್ಲಿ ನಿನ್ನೆ ವರ್ಷದ ಮೊದಲ ಮಳೆಯಾಗುವುದರ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದರಿಂದ ರಾಜ್ಯದ ರೈತರು ಕೂಡ ತಮ್ಮ ಕೃಷಿಗೆ ಅಗತ್ಯವಾದಂತಹ ಕೃಷಿ ಚಟುವಟಿಕೆಗಳನ್ನು ಸುಲಭವಾಗಿ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಬಹುದು.

ಹಾಗಾಗಿ ಇನ್ನು ಮುಂದೆ ಮಳೆಯ ಆರ್ಭಟ ಶುರುವಾಗುವುದರ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಇದರಿಂದ ರೈತರು ತಮ್ಮ ಕೃಷಿ ಚಟುವಟಿಕೆಗೆ ಎಲ್ಲ ರೀತಿಯ ಕೆಲಸಗಳನ್ನು ಮಾಡಿಕೊಳ್ಳಲು ಸುಲಭವಾಗುತ್ತದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *