rtgh

ಅರಣ್ಯ ಭೂಮಿ ರೈತರಿಗೆ ಮಂಜೂರಾತಿ : ಹಕ್ಕುಪತ್ರ ಈ ಜಿಲ್ಲೆಯ ರೈತರಿಗೆ ವಿತರಣೆ ಆರಂಭ !

Forest land sanctioned to farmers

ನಮಸ್ಕಾರ ಸ್ನೇಹಿತರೆ ಸಾಕಷ್ಟು ರೀತಿಯ ಸಮಸ್ಯೆಗಳನ್ನು ಸರ್ಕಾರಿ ಅರಣ್ಯದ ಅಕ್ಕಪಕ್ಕದಲ್ಲಿ ಕೃಷಿ ಮಾಡುತ್ತಿರುವಂತಹ ಅರಣ್ಯ ಇಲಾಖೆಯಿಂದ ಎದುರಿಸುತ್ತಿರುವ ರೈತರಿಗೆ ಇದೀಗ ಕಂದಾಯ ಸಚಿವರು ಸಿಹಿ ಸುದ್ದಿ ನೀಡಿದ್ದಾರೆ.

Forest land sanctioned to farmers
Forest land sanctioned to farmers

ಈ ರೈತರ ಸಮಸ್ಯೆಗೆ ಅರಣ್ಯ ಮತ್ತು ಕಂದಾಯ ಜಂಟಿ ಸರ್ವೆ ನಡೆಸುವ ಮೂಲಕ ಅಂತ್ಯ ಹಾಕುವ ಭರವಸೆಯನ್ನು ರೈತರಿಗೆ ನೀಡಿದ್ದಾರೆ. ಈ ಸಂಬಂಧವಾಗಿ ಸರ್ಕಾರ ಅಧಿಕಾರಿ ಸೂಚನೆಯನ್ನು ಹೊರಡಿಸಿದ್ದು ಜಂಟಿ ಸರ್ವೆ ಕಾರ್ಯ ಕೂಡ ಈಗಾಗಲೇ ಪ್ರಾರಂಭವಾಗಿದೆ.

ರೈತರಿಗೆ ಅರಣ್ಯ ಭೂಮಿ ಡಿ ನೋಟಿಫಿಕೇಶನ್ ಗಿಫ್ಟ್ :

ರೈತರ ಭೂಮಿಯ ಬಗ್ಗೆ ಅರಣ್ಯ ಭೂಮಿ ಡಿ ನೋಟಿಫಿಕೇಶನ್ ಗಿಫ್ಟ್ ಜಂಟಿ ಸರ್ವೆಯಿಂದ ಖಚಿತ ಮಾಹಿತಿ ತಿಳಿಯಲಿದ್ದು ಕಂದಾಯ ಭೂಮಿಯನ್ನು ಅಕಸ್ಮಾತ ಅರಣ್ಯ ಇಲಾಖೆಯು ತಪ್ಪಾಗಿ ನೋಟಿಫೈ ಮಾಡು ಇರುವುದು ಜಂಟಿ ಸರ್ವೆ ಅಥವಾ ಡ್ರೋನ್ ಸರ್ವೆಯಿಂದ ಖಚಿತವಾದರೆ ಅರಣ್ಯ ಇಲಾಖೆಗೆ ಆ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಲು ಮನವಿ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ರೈತರಿಗೆ ಭರವಸೆ ನೀಡಿದ್ದಾರೆ.

ಕಂದಾಯ ಸಚಿವರು ಈ ಬಗ್ಗೆ ಪತ್ರಿಕ ಹೇಳಿಕೆ ನೀಡಿದ್ದು ಜಂಟಿ ಸರ್ವೆ ಬಳಿಕ ಕಂದಾಯ ಭೂಮಿ ಮತ್ತು ಅರಣ್ಯ ಭೂಮಿ ಗಡಿಗಳನ್ನು ನಿಖರವಾಗಿ ಗುರುತಿಸಲಾಗುತ್ತದೆ ಅದಾದ ನಂತರ ಗಡಿ ಗುರುತಿಸಿದ ಮೇಲೆ ಜಮೀನಿನಲ್ಲಿ ಒಂದು ವೇಳೆ ಕೃಷಿ ಚಟುವಟಿಕೆ ನಡೆಯುತ್ತಿದ್ದರೆ ಅಂತಹ ಜಮೀನನ್ನು ಅರ್ಹ ರೈತರಿಗೆ ಸಾಗುವಳಿ ಚೀಟಿ ನೀಡಲಾಗುತ್ತದೆ ಎಂದು ತಿಳಿಸಿದರು ಫಾರಂ 57 ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರೆ ಅವರಿಗೆ ಭೂಮಿ ಮಂಜೂರನ್ನು ಬಗರ್ ಹುಕುಂ ಆಪ್ನ ಮೂಲಕ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಈ ಸಮಸ್ಯೆ ತುಂಬಾ ಹಳೆಯದಾಗಿದ್ದು ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ವಿಚಾರದ ಸಮಸ್ಯೆ ನಿಮ್ ಇವತ್ತು ನಿನ್ನೆಯದಲ್ಲ ದಶಕಗಳಿಂದಲೂ ಈ ಸಮಸ್ಯೆ ಜೀವಂತವಾಗಿದ್ದು ಅರಣ್ಯದಂಚಿನಲ್ಲಿ ಕೃಷಿ ಮಾಡುವ ರೈತರು ಅರಣ್ಯ ಭೂಮಿಯ ಗಡಿಯನ್ನು ಗುರುತಿಸದೇ ಇರುವುದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಈ ಭಾಗದಲ್ಲಿ ಆರ್‌ಟಿಸಿ ಓಡಿ ಬೌತಿ ಖಾತೆ ಸೇರಿದಂತೆ ಬೇಸಾಯ ಮಾಡುವ ರೈತರಿಗೆ ಕಂದಾಯ ಇಲಾಖೆಯ ಸಾಕಷ್ಟು ಸೇವೆಗಳನ್ನು ಒದಗಿಸುವುದು ಕಷ್ಟವಾಗಿದೆ. ಕುಡಿಯುವ ನೀರು ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕೂಡ ರೈತರಿಗೆ ಒದಗಿಸುವುದು ಸವಾಲಿನ ಕೆಲಸವಾಗಿದೆ.

ಇದನ್ನು ಓದಿ : ಗ್ಯಾರಂಟಿಗೆ ಬಂತು ಕೊನೆ ಗಾಲ.!! ಈ 3 ಯೋಜನೆಗಳು ಇನ್ನು ರದ್ದು..

ಅಧಿವೇಶನದಲ್ಲಿ ರೈತರಿಗೆ ಭರವಸೆ :

ಗಂಭೀರವಾಗಿ ರಾಜ್ಯ ಸರ್ಕಾರ ಅರಣ್ಯದಂಚಿನ ರೈತರ ಈ ಸಮಸ್ಯೆಯನ್ನು ಪರಿಗಣಿಸಿದ್ದು ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ಮಳೆಗಾಲದ ಅಧಿವೇಶನದಲ್ಲಿಯೇ ರೈತರಿಗೆ ಭರವಸೆ ನೀಡಿತ್ತು ಆ ಪ್ರಕಾರವಾಗಿ ಸರ್ಕಾರ ಕಳೆದ ಫೆಬ್ರವರಿ 16ರಂದು ಅಧಿಕೃತವಾಗಿ ಅಧಿಸೂಚನೆಯನ್ನು ಹೊರಡಿಸಿದ್ದು ಅರಣ್ಯ ಭೂಮಿಯ ಜಂಟಿ ಸರ್ವೆಗೆ ಅನೇಕ ವರ್ಷಗಳ ನಂತರ ನಾಂದಿ ಹಾಡಿದೆ.

ರಾಜ್ಯದ್ಯಂತ ಈ ಹಿನ್ನೆಲೆಯಲ್ಲಿ ಸರ್ವೆ ಕೆಲಸವು ಕೂಡ ಬರದಿಂದ ಸಾಗಿದ್ದು ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಅಧಿಸೂಚನೆಯಲ್ಲಿ ಸೂಚಿಸಿರುವಂತೆ ಜಂಟಿ ಸರ್ವೆ ಕಾರ್ಯದಲ್ಲಿ ತೊಡಗಿದ್ದಾರೆ. ಜಂಟಿ ಸರ್ವೆ ಮೂಲಕ ನಕ್ಷೆ ಇಲ್ಲದ ಜಮೀನುಗಳಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಯಲ್ಲಿ ರೈತರಿಗೆ ಸರ್ಕಾರ ಸಾಗುವಳಿ ಚೀಟಿ ನೀಡಲು ನಿಶ್ಚಯಿಸಿದೆ ಎಂಬ ಮಾಹಿತಿಯನ್ನು ಕಂದಾಯ ಸಚಿವರು ತಿಳಿಸಿದ್ದಾರೆ.

ಈ ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಪ್ರಾರಂಭ :

ಜಂಟಿ ಸರ್ವೆ ಕೆಲಸ ಕಳೆದ ಎರಡು ತಿಂಗಳಿನಿಂದ ಪ್ರಗತಿಯಲ್ಲಿದೆ ಎಂದು ಹೇಳಿದ್ದು ಸಚಿವರು ಈಗಾಗಲೇ ಈ ಜಿಲ್ಲೆಗಳಲ್ಲಿ ಸರ್ಕಾರಿ ಭೂಮಾಪಕರು ಹಾಗೂ ಪರವಾ ನದಿ ಹೊಂದಿರುವ ಭೂಮಾಪಕರ ಸಹಾಯದಿಂದ ರಾಜ್ಯ ಸರ್ಕಾರ ಸರ್ವೆ ಕೆಲಸವನ್ನು ಪ್ರಾರಂಭಿಸಿದೆ ಎಂದು ತಿಳಿಸಿದರು.

 1. ಚಿಕ್ಕಬಳ್ಳಾಪುರ
 2. ಕೊಡಗು
 3. ದಕ್ಷಿಣ ಕನ್ನಡ
 4. ಚಾಮರಾಜನಗರ
 5. ಚಿಕ್ಕಮಗಳೂರು
  ಈ ಜಿಲ್ಲೆಗಳಲ್ಲಿ ಭೂಮಾಪನ ಕಾರ್ಯ ಪ್ರಾರಂಭವಾಗಿದೆ ಎಂದು ತಿಳಿಸಿದರು.
 6. 28 ಲಕ್ಷದ 45,964 ಎಕರೆ ಚಾಮರಾಜನಗರ ಜಿಲ್ಲೆಯಲ್ಲಿ
 7. 47,80931 ಎಕರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ
 8. 21,983 ಎಕರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
 9. 130927 ಎಕರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ

ಹೀಗೆ ಅರಣ್ಯ ಹಾಗೂ ಕಂದಾಯ ಭೂಮಿ ಗುರುತಿಸುವ ಸಂಬಂಧ ಹೆಚ್ಚು ಸಮಸ್ಯೆಗಳಿದ್ದು ಬೇರೆ ಬೇರೆ ಜಿಲ್ಲೆಗಳಿಂದ ಆದ್ಯತೆಯ ಮೇಲೆ ತುರ್ತು ನಿಯೋಜನೆಗೊಳಿಸಿ ಬಹುಮಾಪಕರನ್ನು ಜಂಟಿ ಸರ್ವೆ ಕೆಲಸಕ್ಕೆ ವೇಗ ನೀಡಲಾಗಿದೆ.

ಕೊಟ್ಟರೆ ರಾಜ್ಯ ಸರ್ಕಾರ ಇದೀಗ ರೈತರಿಗೆ ಬಗರ್ ಹುಕುಂ ಕಾಯಿದೆಯ ಅಡಿಯಲ್ಲಿ ಹಕ್ಕು ಪತ್ರವನ್ನು ನೀಡಲು ನಿರ್ಧರಿಸಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ ಅವರಿಗೆ ಅವರ ಜಮೀನಿನ ಆಸ್ತಿ ಪತ್ರ ಸಿಗಲಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *