rtgh

ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಗ್‌ ಅಪ್ಡೇಟ್.!! 8ನೇ ಕಂತಿನ ಹಣ ಬಿಡುಗಡೆ

Big update on Gruha Lakshmi Yojana

ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ಯಾವಾಗ ಜಾರಿಗೆ ಬಂದಿದೆಯೋ ಅಲ್ಲಿಂದ ಇಲ್ಲಿಯವರೆಗೆ ಮಹಿಳೆಯರ ಖಾತೆಯಲ್ಲಿ ಒಂದಷ್ಟು ಹಣ ಸಂಗ್ರಹ ಆಗಿದ್ದಂತೂ ಸುಳ್ಳಲ್ಲ. ಯಾಕಂದ್ರೆ ಇಲ್ಲಿಯವರೆಗೆ ಏಳು ಕಂತಿನ ಹಣವನ್ನು ಬಿಡುಗಡೆ ಆಗಿದ್ದು ಮಹಿಳೆಯರ ಖಾತೆಯಲ್ಲಿ ಉಚಿತವಾಗಿ 14,000 ರೂಪಾಯಿಗಳು ಸಂಗ್ರಹ ಆಗಿದೆ.

Big update on Gruha Lakshmi Yojana

“ನಾವು ಮನೆಯಲ್ಲಿ ಕುಳಿತುಕೊಂಡರೆ ಇಷ್ಟು ಹಣವನ್ನು ಯಾರು ಕೊಡುತ್ತಿರಲಿಲ್ಲ. ಆದರೆ ಸರ್ಕಾರದಿಂದ ಈಗ ಉಚಿತವಾಗಿ 2000 ರೂಪಾಯಿ ಪ್ರತಿ ತಿಂಗಳು ಖಾತೆಗೆ ಬರುತ್ತಲೇ ಇದೆ” ಅಂತ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಇದರಿಂದ ಅವರ ಜೀವನಕ್ಕೆ ಒಂದು ಆಧಾರ ಸಿಕ್ಕಿ ದಂತೆ ಆಗಿದೆ ಎಂದು ಹೇಳಿಕೊಳ್ಳುತ್ತಾರೆ.

ಆದರೆ ಇನ್ನೊಂದು ಕಡೆ “ಅರ್ಜಿಯನ್ನು ಸಲ್ಲಿಸಿ ಯಾವ ಕಾಲ ಆಯ್ತು ಎಲ್ಲ ದಾಖಲೆಗಳು ಸರಿಯಾಗಿ ಇದೆ ಆದರೂ ನಮಗೆ ಮಾತ್ರ ಹಣ ಬಂದಿಲ್ಲ” ಅಂತ ಇನ್ನೊಂದಿಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ನೀವು ಬ್ಯಾಂಕ್ ನಲ್ಲಿ ಕೆಲವು ಪ್ರಮುಖ ಕೆಲಸಗಳನ್ನು ಮಾಡಿಕೊಂಡ್ರೆ ತಪ್ಪದೇ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಆಗುತ್ತದೆ ಎಂದು ಸರ್ಕಾರವು ಈಗಾಗಲೇ ಭರವಸೆವನ್ನು ನೀಡಿದೆ.

ಬ್ಯಾಂಕ್ ನಲ್ಲಿ ನೀವು ಮಾಡಲೇಬೇಕಾದ ಕೆಲಸಗಳು ಇವು!

  • ಈಕೆ ವೈ ಸಿ ಎನ್ನುವುದು ಕಡ್ಡಾಯವಾಗಿರುವುದರಿಂದ ನಿಮ್ಮ ಬ್ಯಾಂಕ್ ಖಾತೆಗೆ ಈ ಕೆ ವೈ ಸಿ ಅಪ್ಡೇಟ್ ಮಾಡಿಸಿ.
  • ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳುವುದು ಮುಖ್ಯ ಜೂನ್ 14, 2024ರ ವರೆಗೆ ಮಾತ್ರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ಅವಕಾಶ ಇದೆ. ಆಧಾರ್ ಕಾರ್ಡ್ ಅಪ್ಡೇಟ್ ಆಗದಿದ್ರೆ ನಿಮ್ಮ ಬ್ಯಾಂಕ್ ನ ಯಾವ ಕೆಲಸಗಳು ಕೂಡ ಸಂಪೂರ್ಣವಾಗಿ ಕೊಡುವುದಿಲ್ಲ.
  • ಈಕೆ ವೈ ಸಿ ಮಾಡಿಸಿಕೊಂಡಿದ್ದರು ಕೂಡ ಹಣ ಬಾರದೆ ಇರುವವರು ಬ್ಯಾಂಕ್ ಗೆ ಹೋಗಿ ಎನ್ ಪಿ ಸಿ ಐ ಮ್ಯಾಪಿಂಗ್ ಕೂಡ ಮಾಡಿಸಿಕೊಳ್ಳಬೇಕು.
  • ಇದರ ಜೊತೆಗೆ ರೇಷನ್ ಕಾರ್ಡ್ ಮತ್ತೆ ಆಧಾರ್ ಕಾರ್ಡ ಲಿಂಕ್ ಆಗುವುದು ಕೂಡ ಕಡ್ಡಾಯವಾಗಿದೆ.

ಅನ್ನದಾತರಿಗೆ ಸಂತಸದ ಸುದ್ದಿ.!! ಈ ಜಿಲ್ಲೆಯವರಿಗೆ ಉಚಿತ ಭೂಮಿ ಮತ್ತು ಹಕ್ಕು ಪತ್ರ ವಿತರಣೆ

ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಆಟೋಮೆಟಿಕ್ ಆಗಿ ಬರುವುದರಿಂದ ನಿಮ್ಮ ಡಿಜಿಟಲ್ ದಾಖಲೆಗಳು ಸರಿಯಾಗಿ ಇರುವುದು ಬಹಳ ಮುಖ್ಯ.

ಅತ್ತೆ ಮರಣ ಹೊಂದಿದ್ರೆ ಸೊಸೆ ಖಾತೆಗೆ ಹಣ ಬರುತ್ತೆ!

ಈಗಾಗಲೇ ಹಲವು ಕಡೆ ಈ ಸಮಸ್ಯೆಯನ್ನು ಕೂಡ ಜನರು ಎದುರಿಸಿದ್ದಾರೆ, ಗೃಹಲಕ್ಷ್ಮಿ ಯೋಜನೆ, ಆರಂಭವಾದಾಗ ಅರ್ಜಿ ಸಲ್ಲಿಸಿದ ಸಾಕಷ್ಟು ಹಿರಿಯ ಮಹಿಳೆಯರು ಮರಣ ಹೊಂದಿದ್ದಾರೆ, ಈ ಹಿನ್ನೆಲೆಯಲ್ಲಿ ಅವರ ಖಾತೆಗೆ ಜಮಾ ಆಗಬೇಕಾದ ಗೃಹಲಕ್ಷ್ಮಿ ಹಣ ಬೇರೆ ಯಾರಿಗೆ ಸಿಗಬೇಕು ಎನ್ನುವ ಗೊಂದಲ ಕುಟುಂಬದವರಲ್ಲಿ ಇತ್ತು.

ಇದಕ್ಕೆ ಸರ್ಕಾರವು ಪರಿಹಾರವನ್ನು ತಿಳಿಸಿದ್ದು ಅತ್ತೆ ಇಲ್ಲದೆ ಇದ್ದಲ್ಲಿ ಮನೆಯ ಹಿರಿಯ ಸೊಸೆಯದವರು ತಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು ಎಂದು ಸರ್ಕಾರವು ಮಾಹಿತಿ ನೀಡಿದೆ.

ಇನ್ನು ನಿಮ್ಮಲ್ಲಿ ಯಾವುದೇ ಗೊಂದಲಗಳಿದ್ದರೆ ಖಾತೆಗೆ ಹಣ ಬಾರದೆ ಇರುವುದಕ್ಕೆ ಕಾರಣ ತಿಳಿಯದೆ ಇದ್ದರೆ ಹತ್ತಿರದ ಸಿಡಿಪಿಓ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ಕೇಳಿ ಮಾಹಿತಿ ತಿಳಿದುಕೊಳ್ಳಿ ಹಾಗೂ ಅವರ ಮಾರ್ಗದರ್ಶನದಲ್ಲಿ ನೀವು ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಂಡರೆ ತಪ್ಪದೇ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ಎಂಟನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ಸಿದ್ಧತೆ

ಎಲ್ಲರಿಗೂ ತಿಳಿದಿರುವಂತೆ 7ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಿದೆ. ಇನ್ನು ಎಲ್ಲರ ಖಾತೆಗೆ ಹಣ ಬಾರದೆ ಇರಬಹುದು. ಆದರೆ ಮಾರ್ಚ್ 31ರ ಒಳಗೆ ಏಳನೇ ಕಂತಿನ ಹಣ ಫಲಾನುಭವಿಗಳ ಖಾತೆ ಸೇರುತ್ತದೆ. ಇನ್ನು 8ನೇ ಕಂತಿನ ಹಣವು ಕೂಡ ಸದ್ಯದಲ್ಲಿಯೇ ಬಿಡುಗಡೆ ಆಗಲಿದ್ದು ಏಪ್ರಿಲ್ ಮೊದಲ ವಾರದಲ್ಲಿ ನೀವು ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣವನ್ನು ನಿರೀಕ್ಷಿಸಬಹುದು.

RTE ಉಚಿತ ಶಿಕ್ಷಣಕ್ಕೆ ಅರ್ಜಿ ಆರಂಭ.! LKG ಮತ್ತು 1ನೇ ತರಗತಿಗೆ ಇಲ್ಲಿಂದಲೇ ಸೇರಿಸಿ

IAS ಪ್ರಶ್ನೆ : ಗಂಡ ಹೆಂಡತಿ ಇಬ್ಬರೂ ಕೂಡ ರಾತ್ರಿ ಇಷ್ಟಪಡುವಂತಹ ವಸ್ತು ಯಾವುದು ?

Spread the love

Leave a Reply

Your email address will not be published. Required fields are marked *