ಹಲೋ ಸ್ನೇಹಿತರೇ, ನೀವು ಸ್ವಂತ ಉದ್ಯಮ ಮಾಡಬೇಕಾ? ಹಾಗಾದ್ರೆ ಬಂಡವಾಳದ ಬಗ್ಗೆ ಯೋಚನೆಯನ್ನು ಮಾಡಬೇಡಿ, ಅತಿ ಕಡಿಮೆ ಬಂಡವಾಳವನ್ನು ಹೂಡಿಕೆ ಮಾಡಿ ಹೆಚ್ಚು ಲಾಭವನ್ನು ಗಳಿಸುವಂತಹ ಒಂದು ಅತ್ಯುತ್ತಮ ಉದ್ಯಮದ ಬಗ್ಗೆ ನಾವು ನಿಮಗೆ ಈ ಲೇಖನದ ಮೂಲಕ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ.
ಕೇವಲ 15 ಸಾವಿರ ಬಂಡವಾಳ ಇದ್ರೆ ಪ್ರತಿ ತಿಂಗಳು 50,000 ವರೆಗೂ ದುಡಿಯಬಹುದು. ನಿಮ್ಮ ಸ್ಮಾರ್ಟ್ ವರ್ಕ್ ಇಲ್ಲಿ ನಿಮಗೆ ಹೆಚ್ಚು ಆದಾಯ ತಂದುಕೊಡುತ್ತದೆ ಎನ್ನಬಹುದು.
ಯಾರೂ ಕತ್ತಲಲ್ಲಿ ಇರಲು ಇಷ್ಟಪಡುವುದಿಲ್ಲ. ಹಾಗಾಗಿ ಪ್ರತಿಯೊಂದು ಮನೆ, ಕಛೇರಿ ಅಥವಾ ಯಾವುದೇ ಕಟ್ಟಡ ಇರಲಿ ವಿದ್ಯುತ್ ಬಳಕೆ ಮಾಡಲಾಗುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ಇಡಿ ಬಲ್ಬ್ ಬಳಕೆ ಹೆಚ್ಚಾಗಿದ್ದು ಇದು ವಿದ್ಯುತ್ ಉಳಿತಾಯ ಮಾಡುತ್ತದೆ ಎನ್ನುವ ಕಾರಣಕ್ಕೆ ಪ್ರತಿಯೊಂದು ಮನೆಯ ಅಥವಾ ಕಚೇರಿಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ.
ಎಲ್ಇಡಿಗಳಲ್ಲಿ ಸಾಕಷ್ಟು ವೆರೈಟಿಗಳು ಮಾರುಕಟ್ಟೆಯಲ್ಲಿ ಲಭ್ಯ ಇದೆ. ಇದೀಗ ಇದನ್ನ ನೀವು ಬಂಡವಾಳವಾಗಿಸಿಕೊಂಡು ನಿಮ್ಮದೇ ಉದ್ಯಮ ಆರಂಭಿಸಬಹುದು.
ಎಲ್ಇಡಿ ಬಲ್ಬ್ ತಯಾರಿಕೆಗೆ ಬೇಕಾಗುವ ವಸ್ತುಗಳು
- LED ಬಲ್ಬ್ ಟೆಸ್ಟಿಂಗ್ ಮಿಷನ್
- ಹೀಟಿಂಗ್ ಮಿಷನ್
- ಪಂಚಿಂಗ್ ಮಿಷನ್
ಶೋಲ್ಡರ್ ಗನ್, ಆಟೋಮೆಟಿಕ್ ಡ್ರೈವರ್ ಇತ್ಯಾದಿ ಪರಿಕರಗಳು. Indiamart.com ಈ ವೆಬ್ಸೈಟ್ನಲ್ಲಿ ನೀವು ಎಲ್ಲಾ ಮಷೀನ್ ಗಳನ್ನು ಖರೀದಿ ಮಾಡಬಹುದು.
ಡೇಟ್ ಫಿಕ್ಸ್ SSLC ಫಲಿತಾಂಶ ಪ್ರಕಟನೆಗೆ…! ರಿಸಲ್ಟ್ ಚೆಕ್ ಮಾಡಿ ಇಲ್ಲಿದೆ ಲಿಂಕ್ ! SSLC Result 2024
ಈ ಎಲ್ಲಾ ಪರ್ಮಿಷನ್ ಗಳು ಬೇಕು
ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಉದ್ಯಮದ ಅಡಿಯಲ್ಲಿ ಬರುವುದರಿಂದ ಮನೆಯಲ್ಲಿಯೇ ನೀವು ತಯಾರಿಸುವುದಕ್ಕೂ ಕೆಲವು ಪ್ರಮುಖ ಸರ್ಕಾರದ ಪರ್ಮಿಷನ್ ಬೇಕಾಗುತ್ತದೆ.
ಫ್ಯಾಕ್ಟರಿ ಲೈಸೆನ್ಸ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು. ಬ್ಯಾಂಕ್ ನಲ್ಲಿ ಲೋನ್ ಪಡೆದುಕೊಳ್ಳಲು ಲೇಬರ್ ಸರ್ಟಿಫಿಕೇಟ್ ಒದಗಿಸಬೇಕು. ನಿಮ್ಮ ಬ್ರಾಂಡ್ ಗಾಗಿ ಹೆಸರು ರಿಜಿಸ್ಟ್ರೇಷನ್ ಅನ್ನು ಆಗಬೇಕು ಜೊತೆಗೆ ಪೇಟೆಂಟ್ ಕೂಡ ಇಲ್ಲದೆ ಇರುವ ರೀತಿಯಲ್ಲಿ ಲೋಗೋ ರಿಜಿಸ್ಟ್ರೇಷನ್ ಕೂಡ ಮಾಡಿಸಬೇಕು. ಜೊತೆಗೆ GST ರಿಜಿಸ್ಟ್ರೇಷನ್ ಟ್ರೇಡ್ ಲೈಸೆನ್ಸ್ ಹೊಂದಿರಬೇಕು.
100 ರಿಂದ 200 ಅಡಿ ಜಾಗ ಬೇಕಾಗುತ್ತದೆ ಸ್ವಂತ ಜಾಗ ಆಗಿದ್ದರೆ ಹೆಚ್ಚಿನ ಲಾಭ ಪಡೆಯಬಹುದು, ಬಾಡಿಗೆ ಜಾಗ ಆಗಿದ್ದರೆ ಅಗ್ರಿಮೆಂಟ್ ಕೂಡ ಸಲ್ಲಿಸಬೇಕಾಗುತ್ತದೆ.
LEDಗೆ ಬೇಕಾಗಿರುವ ಎಲ್ಲಾ ಪರಿಕರಗಳನ್ನು ನೀವು ಖರೀದಿ ಮಾಡಿದರೆ ಸುಮಾರು 15 ರಿಂದ 20 ಸಾವಿರ ರೂಪಾಯಿಗಳು ಆಗುತ್ತವೆ. ಮತ್ತು ನೀವು ತಯಾರಿಸಿದ ಬಲ್ಬ್ ಗಳನ್ನು ನಿಮ್ಮದೇ ಆದ ರೀತಿಯಲ್ಲಿ ಮಾರ್ಕೆಟಿಂಗ್ ಮಾಡುವ ಮೂಲಕ ಉತ್ತಮ ಲಾಭವನ್ನು ಪಡೆಯಬಹುದು, ಕನಿಷ್ಠ ಅಂದ್ರು ತಿಂಗಳಿಗೆ 50 ಸಾವಿರ ರೂಪಾಯಿಗಳ ದುಡಿಮೆ ಇದರಿಂದ ಸಿಗುತ್ತದೆ.
ಇತರೆ ವಿಷಯಗಳು:
ಕರ್ನಾಟಕದಲ್ಲಿ ಏಪ್ರಿಲ್ 24 ರಿಂದ ಚುನಾವಣಾ ಪ್ರಚಾರ ನಿಷೇಧ!
Toll : ಇಂತಹ ಸಮಯದಲ್ಲಿ ಟೋಲ್ ಕಟ್ಟಬೇಡಿ! ಹೊಸ ರೂಲ್ಸ್ ಇಂದಿನಿಂದ ಜಾರಿ