ನಮ್ಮ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಇದೆ. ಭಾರತ ದೇಶವು ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವಂತಹ ಚೀನಾ ದೇಶವನ್ನು ಹಿಂದೆ ಹಾಕಿ 140 ಕೋಟಿಗೂ ಅಧಿಕ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ.
ಈ ಜನಸಂಖ್ಯೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕು ಎಂದರೆ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಕೂಡ ಚೆನ್ನಾಗಿರಬೇಕು. ಇದೇ ನಿಟ್ಟಿನಲ್ಲಿ ಭಾರತ ಸರ್ಕಾರ ಹೆಚ್ಚು ಹೆಚ್ಚು ವಾಹನಗಳನ್ನು ಟ್ರಾನ್ಸ್ಪೋರ್ಟ್ ವ್ಯವಸ್ಥೆಯನ್ನು ನೋಡಿಕೊಂಡು ಬಿಡುಗಡೆ ಮಾಡುತ್ತಿದೆ.
ಇದೇ ದಿಕ್ಕಿನಲ್ಲಿ ಇನ್ನೊಂದು ಕಡೆಯಲ್ಲಿ ಭಾರತ ಸರ್ಕಾರ ಆ ವಾಹನಗಳು ಓಡಾಡುವುದಕ್ಕೆ ಸೂಕ್ತವಾದದಂತಹ ರಸ್ತೆಗಳನ್ನು ಸಹ ನಿರ್ಮಾಣ ಮಾಡುವುದಕ್ಕೆ ಹಣವನ್ನು ಖರ್ಚು ಮಾಡ್ತಾ ಇದೆ.
ಈ ರಸ್ತೆಗಳು ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನಗಳ ಜೊತೆಗೆ ಉತ್ತಮ ಗುಣಮಟ್ಟದ ರಸ್ತೆಗಳಾಗಿರುತ್ತವೆ. ಹೀಗಾಗಿ ಈ ರೋಡುಗಳಲ್ಲಿ ಹೋಗುವುದಕ್ಕೆ ವಾಹನಗಳು ಟೋಲ್ ಪ್ಲಾಜಾಗಳಲ್ಲಿ (Toll plaza )ಶುಲ್ಕವನ್ನು ಕಟ್ಟಬೇಕಾಗಿರುತ್ತದೆ ಎಂದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.
ಶುಲ್ಕವನ್ನ ಕಟ್ಟುವ ವಿಚಾರಕ್ಕೆ ಬಂದರೆ ನೀವು ನೋಡಿರುವ ಹಾಗೆ ಹೆದ್ದಾರಿಗಳಲ್ಲಿ ಈ ರೀತಿಯ ಶುಲ್ಕವನ್ನು ಒಟ್ಟಗೂಡಿಸುವುದಕ್ಕಾಗಿ ಟೋಲ್ ಪ್ಲಾಜಾಗಳನ್ನು ನಿರ್ಮಾಣ ಮಾಡಲಾಗಿದೆ.
ಸರ್ಕಾರ ಉತ್ತಮವಾದ ರಸ್ತೆಗಳನ್ನು ನೀಡಿದ ಮೇಲೆ ಈ ಟೋಲ್ ಪ್ಲಾಜಾಗಳ (Toll plaza ) ಮೂಲಕ ಹಣವನ್ನು ಒಟ್ಟುಗೂಡಿಸುವುದರಲ್ಲಿ ಯಾವುದೇ ತಪ್ಪಿಲ್ಲ ಬಿಡಿ.
ಅದರೆ ಟೋಲ್ ಪ್ಲಾಜಾಗಳಲ್ಲಿ ಈ ರೀತಿ ಮಾಡಿದರೆ ನೀವು ಹಣ ಕೊಡದೆ ಇದ್ರೂ ಕೂಡ ಯಾವುದೇ ಸಮಸ್ಯೆ ಆಗೋದಿಲ್ಲ ಈ ವಿಚಾರ ಸಾಕಷ್ಟು ಜನರಿಗೆ ತಿಳಿಯದೆ ಇರಬಹುವುದು.ಹಾಗಾಗಿ ಇವತ್ತಿನ ಈ ಲೇಖನದಲ್ಲಿ ಅದರ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.
ಇದನ್ನು ಓದಿ : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಹೊಂದಿದ್ದೀರಾ? ಹಾಗಿದ್ರೆ ಇದನ್ನು ಓದಿ
ಟೋಲ್ ಪ್ಲಾಜಾಗಳಲ್ಲಿ ಈ ರೀತಿ ಮಾಡಿದ್ರೆ ಹಣ ನೀಡಬೇಕಾಗಿಲ್ಲ :
ಟೋಲ್ ಪ್ಲಾಜಾಗಳ ಶುಲ್ಕವನ್ನು ಅತ್ಯುತ್ತಮ ಕ್ವಾಲಿಟಿಯ ರೋಡುಗಳನ್ನು ನಿರ್ಮಾಣ ಮಾಡಿ ನಂತರ ವಸೂಲಿ ಮಾಡಲಾಗುತ್ತದೆ. ಸಾರಿಗೆ ಇಲಾಖೆ ನಡೆಯುವುದೇ ಈ ರೀತಿಯಲ್ಲಿ.
ಹೀಗಾಗಿ ಟೋಲ್ ಪ್ಲಾಜಾಗಳಲ್ಲಿ ಶುಲ್ಕವನ್ನು ಕಟ್ಟೋದಕ್ಕೆ ತುಂಬಾ ಸಮಯ ಕಾಯಬಾರದು ಎನ್ನುವ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ FaSTag ಅನ್ನು ತಮ್ಮ ವಾಹನದ ಮೇಲೆ ಅಂಟಿಸಿಕೊಂಡು ಬಿಡುತ್ತಾರೆ.
ಈ ಮೂಲಕ ಟೋಲ್ ಪ್ಲಾಜಾಗಳಲ್ಲಿ ಅಲ್ಲಿನ ಸಿಬ್ಬಂದಿಯ ಸ್ಕ್ಯಾನರ್ಗಳು ಸ್ಕ್ಯಾನ್ ಮಾಡಿಕೊಳುತ್ತವೆ ಹಾಗೂ ನಿಮ್ಮ ಫಾಸ್ಟ್ ಟ್ಯಾಗ್ ಖಾತೆಯಲ್ಲಿರುವಂತಹ ಹಣ ನಿರ್ದಿಷ್ಟವಾಗಿ ಕಡಿತಗೊಳ್ಳುತ್ತದೆ.
ಆದರೆ ಇಲ್ಲಿ ಒಂದು ಪರಿಸ್ಥಿತಿ ನಿರ್ಮಾಣವಾದಾಗ ನೀವು ಹಣವನ್ನು ಕಟ್ಟಬೇಕಾದ ಅಗತ್ಯ ಇರುವುದಿಲ್ಲ.
ಅದೇನೆಂದರೆ ಒಂದು ವೇಳೆ ನೀವು ಟೋಲ್ ಪ್ಲಾಜಾಗಳಿಗೆ ಹೋಗೋದಕ್ಕಿಂತ ಸ್ವಲ್ಪ ಮುಂಚೆ ಅವರ ಸ್ಕ್ಯಾನರ್ ಹಾಳಾಗಿದ್ದು ಅದು ನಿಮ್ಮ Fast Tag ಕೋಡ್ ಅನ್ನು ರೀಡ್ ಮಾಡೋದಕ್ಕೆ ಸಾಧ್ಯವಾಗಿಲ್ಲ ಅಂದ್ರೆ ಆ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಗಳು ಹಣ ಕೇಳಬಹುದು.
ಆಗ ನೀವು ಹಣವನ್ನು ನಿಡಬೇಕಾದ ಅಗತ್ಯ ಇರುವುದಿಲ್ಲ ಯಾಕೆಂದರೆ ತಪ್ಪು ಅವರಿಂದ ಆಗಿರೋದು. ಹೀಗಾಗಿ ಯಾವುದೇ ಹಣ ನೀಡದೆ ನೀವು ಅಲ್ಲಿಂದ ಹೋಗಬಹುದಾಗಿದೆ.
ಹಾಗಿದ್ದರೂ ಕೂಡ ಅವರು ನಿಮ್ಮ ಬಳಿ ಹಣವನ್ನು ನೋಡಲೇಬೇಕು ಅನ್ನೋದಾಗಿ ಕೇಳಿದರೆ ಅವರ ವಿರುದ್ಧ ನೀವು 1033 ಗೆ ಕರೆ ಮಾಡುವ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ. ಹಾಗಾಗಿ ನೀವು ಕೂಡ ನಿಮ್ಮ ಸ್ನೇಹಿತರ ಜೊತೆಗೆ ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳಬಹುದಾಗಿದೆ.