rtgh

ಗೃಹಜ್ಯೋತಿ ಇದ್ರೂ ಕರೆಂಟ್ ಬಿಲ್ ಬಂತಾ? ಕೂಡಲೇ ಈ ಕೆಲಸ ಮಾಡಿ

gruha jyothi scheme new update

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ನಂತರ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲವಾಗಿದೆ ಎನ್ನಬಹುದು.

gruha jyothi scheme new update

ಮುಖ್ಯವಾಗಿ ಗೃಹಜ್ಯೋತಿ ಯೋಜನೆಯನ್ನು ತೆಗೆದುಕೊಂಡರೆ ಇಂದು ಹೆಚ್ಚುತ್ತಿರುವ ವಿದ್ಯುತ್ ಯೂನಿಟ್ ದರದಲ್ಲಿ ಉಚಿತ ವಿದ್ಯುತ್ ವಿತರಣೆ ಮಾಡುತ್ತಿರುವುದು ನಿಜಕ್ಕೂ ದೊಡ್ಡ ವಿಷಯ, ಸಾಕಷ್ಟು ಕುಟುಂಬಗಳು ಇಂದು ಉಚಿತ ವಿದ್ಯುತ್ ಪಡೆದುಕೊಳ್ಳುತ್ತಿವೆ

ಅಂದರೆ 200 ಯೂನಿಟ್ ಒಳಗೆ ಯಾರು ವಿದ್ಯುತ್ ಬಳಕೆ ಮಾಡುತ್ತಾರೋ ಅಂತವರಿಗೆ ಒಂದು ರೂಪಾಯಿ ಬಿಲ್ ಪಾವತಿ ಮಾಡದೆ ಇರುವ ರೀತಿಯಲ್ಲಿ ಸರ್ಕಾರವು ಪ್ರಯೋಜನವನ್ನು ಒದಗಿಸುತ್ತಿದೆ. ಇದರಿಂದಾಗಿ ಅನೇಕ ಮನೆಯಲ್ಲಿ ವಿದ್ಯುತ್‌ ಬಿಲ್‌ನ ತೊಂದರೆ ಇಲ್ಲದೇ ಇರಬಹುದಾಗಿದೆ.

ಆದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಬೇಸಿಗೆಯ ಬಿಸಿಯ ತಾಪಮಾನ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ, ವಾತಾವರಣದಲ್ಲಿ ತಾಪಮಾನದ ಹೆಚ್ಚಳದಿಂದ ಮನೆಯಲ್ಲಿ ಕುಳಿತ ಪ್ರತಿಯೊಬ್ಬರು ಸಹ ಎಸಿ ಅಥವಾ ಫ್ಯಾನ್ ಹಾಗೂ ಕೂಲರ್ ಗಳು ಇಲ್ಲದೆ ಜೀವನ ನಡೆಸಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ.

ಕೇವಲ ನಗರ ಭಾಗದಲ್ಲಿ ಅಷ್ಟೆಲ್ಲದೆ ಗ್ರಾಮೀಣ ಭಾಗದಲ್ಲಿಯೂ ಕೂಡ ವಿದ್ಯುತ್ ಬಳಕೆಯು ಹೆಚ್ಚಾಗಿದೆ. ಇದೇ ರೀತಿ ವಿದ್ಯುತ್ ಅನ್ನು ಅಧಿಕವಾಗಿ ಬಳಕೆ ಮಾಡುತ್ತಿದ್ದರೆ ಮುಂಬರುವ ತಿಂಗಳುಗಳಿಂದ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ವಿದ್ಯುತ್ ಬಳಕೆ ಜಾಸ್ತಿ ಆಗುತ್ತಿದ್ದಂತೆ 200 ಯೂನಿಟ್ ಗಿಂತಲೂ ಹೆಚ್ಚಿಗೆ ವಿದ್ಯುತ್ ಬಳಕೆ ಆಗಬಹುದು ಇಂತಹ ಸಂದರ್ಭದಲ್ಲಿ ಉಚಿತ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ರೆ ಮುಂದಿನ ತಿಂಗಳು ಕೂಡ ನೀವು ಉಚಿತ ವಿದ್ಯುತ್ ಬಳಕೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದಾದ್ರೆ ಮೊದಲು ಈ ಕೆಲಸ ಮಾಡಿ.

ವಿದ್ಯುತ್ ಬಳಕೆ ನಿಯಂತ್ರಣ!

ಇದು ಬೇಸಿಗೆ ಆಗಿರುವುದರಿಂದ ಮನೆಯಲ್ಲಿ ಎಸಿ ಫ್ಯಾನ್ ಕೂಲರ್ ಮೊದಲದ ಎಲೆಕ್ಟ್ರಾನಿಕ್ ಡಿವೈಸ್ ಬಳಸುವುದು ಸಹಜ ಆದರೆ ಅನಗತ್ಯ ಸಮಯದಲ್ಲಿ ಯಾಕೆ ಬಳಕೆ ಮಾಡಬೇಕು ಎನ್ನುವುದನ್ನು ಮೊದಲು ಯೋಜನೆ ಮಾಡಿ ಆದಷ್ಟು ನೀವು ಈ ವಸ್ತುಗಳನ್ನು ಬಳಕೆ ಮಾಡದೇ ಇರುವಾಗ ಸ್ವಿಚ್ ಆಫ್ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಮಹಿಳೆಯರಿಗೆ ಸರ್ಕಾರದಿಂದಲೇ ಸಿಗುತ್ತೆ 5 ಲಕ್ಷ; ಹೆಣ್ಣು ಮಕ್ಕಳಿಗೆ ಭರ್ಜರಿ ಆಫರ್.!!

ಸ್ಟ್ಯಾಂಡ್ ಬೈ ಮೂಡ್ ನಲ್ಲಿ ವಿದ್ಯುತ್ ಬಳಕೆ ಆಗುತ್ತೆ

ಸಾಮಾನ್ಯವಾಗಿ ನಾವು ಟಿವಿ ನೋಡಿದ ನಂತರ ಅದರ ಡೈರೆಕ್ಟ್ ಸ್ವಿಚ್ ಆನ್ ಆಫ್ ಮಾಡುವ ಬದಲು ರಿಮೋಟ್ ನಲ್ಲಿ ಟಿವಿ ಆಫ್ ಮಾಡುತ್ತೇವೆ ಆಗ ಟಿವಿ ಸ್ಟ್ಯಾಂಡ್ ಬೈ ಮೂಡ್ ನಲ್ಲಿ ಇರುತ್ತದೆ. ಅದೇ ರೀತಿ ಯಾವುದಾದರೂ ಮೊಬೈಲ್ ಅಥವಾ ಲ್ಯಾಪ್ಟಾಪ್ ಚಾರ್ಜ್ ಮಾಡಿದ ನಂತರ ಚಾರ್ಜಿಂಗ್ ಸ್ವಿಚ್ ಆಫ್ ಮಾಡುವುದಿಲ್ಲ ಆಗಲು ಅದು ಸ್ಟ್ಯಾಂಡ್ ಬೈ ಮೂಡನಲ್ಲಿಯೇ ಇರುತ್ತದೆ. ಈ ಸ್ಟ್ಯಾಂಡ್ ಬೈ ಮೂಡ್ ನಲ್ಲಿಯೂ ಕೂಡ ವಿದ್ಯುತ್ ಬಳಕೆ ಆಗುತ್ತದೆ ಹಾಗಾಗಿ ನೀವು ಮಾಡುವಾಗ ನೇರವಾಗಿ ಟಿವಿ ಸ್ವಿಚ್ ಆಫ್ ಮಾಡಿದರೆ ವಿದ್ಯುತ್ ಬಿಲ್ ಉಳಿತಾಯ ಮಾಡಬಹುದು.

ಎಸಿ ಬಳಿಸುವಾಗ ಇದು ಗಮನದಲ್ಲಿ ಇರಲಿ

ಸಾಮಾನ್ಯವಾಗಿ ಕಚೇರಿ ಅಥವಾ ಮನೆಯಲ್ಲಿ ಎಸಿ ಬಳಸಿದರೆ ದಿನದ 24 ಗಂಟೆಯೂ ಕೂಡ ಎಸಿ ಸ್ವಿಚ್ ಆನ್ ಆಗಿರುತ್ತದೆ. ಮಧ್ಯದಲ್ಲಿ ಕೆಲವೊಮ್ಮೆ ಮಾಡಲಾಗುತ್ತದೆ ಇಂತಹ ಸಂದರ್ಭದಲ್ಲಿ ನೀವು ಸ್ವಲ್ಪ ಸ್ಮಾರ್ಟ್ ಆಗಿ ಥಿಂಕ್ ಮಾಡಿದರೆ ವಿದ್ಯುತ್ ಉಳಿತಾಯ ಮಾಡಬಹುದು ಹೇಗೆ ಅಂತೀರಾ? ಒಮ್ಮೆ ಸಂಪೂರ್ಣ ಕೂಲ್ ಆದ ನಂತರ ಎಸಿ ಆಫ್ ಮಾಡಿದರೆ ಸಾಕಷ್ಟು ಸಮಯ ರೂಮ್ ತಣ್ಣಗೆ ಇರುತ್ತದೆ. ಇದರಿಂದ ನೀವು ವಿದ್ಯುತ್ ಉಳಿತಾಯ ಮಾಡಬಹುದು.

5 ಸ್ಟಾರ್ ಎಸಿ ಬೆಳಗ್ಗೆ ಮಾಡಿ!

ಇತ್ತೀಚಿನ ದಿನಗಳಲ್ಲಿ ಹೊಸ ಎಸಿ ಡಿವೈಎಸ್ ನೀವು ಖರೀದಿ ಮಾಡಿದರೆ ಅದರಲ್ಲಿ 5 ಸ್ಟಾರ್ ಇದ್ದರೆ ಅದು ಹೆಚ್ಚು ವಿದ್ಯುತ್ ಉಳಿತಾಯ ಮಾಡುತ್ತದೆ ನೀವು ಮೊದಲು 40% ನಷ್ಟು ವಿದ್ಯುತ್ ಖರ್ಚು ಮಾಡುತ್ತಿದ್ದರೆ, ಈಗ ಅದರಲ್ಲಿ ಇನ್ನೂ ಹತ್ತು ಪರ್ಸೆಂಟ್ ಉಳಿತಾಯ ಮಾಡಬಹುದು. ಹಾಗಾಗಿಯೇ ಫೈವ್ ಸ್ಟಾರ್ ರೇಟಿಂಗ್ ಇರುವಂತಹ ನೋಡಿ ಖರೀದಿಯನ್ನು ಮಾಡಿ.

ಈ ರೀತಿಯಾಗಿ ಸಣ್ಣ ಪುಟ್ಟ ವಿಚಾರಗಳ ಬಗ್ಗೆಯೂ ಕೂಡ ನೀವು ಗಮನಹರಿಸಿ ಅನಗತ್ಯ ಸಮಯದಲ್ಲಿ ವಿದ್ಯುತ್ ಬಳಕೆ ಮಾಡುವುದನ್ನು ಕಡಿತಗೊಳಿಸಿದರೆ ಖಂಡಿತ ಉಚಿತ ವಿದ್ಯುತ್ ಪ್ರಯೋಜನ ಪಡೆದುಕೊಳ್ಳಬಹುದು

ಇತರೆ ವಿಷಯಗಳು:

1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಪಿಯುಸಿ ಪಾಸ್‌ ಆದ್ರೆ ಸಾಕು

ಇಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ : ನಿಮ್ಮ ಊರಿನ ಹೆಸರು ಇದೆಯಾ ನೋಡಿ


Spread the love

Leave a Reply

Your email address will not be published. Required fields are marked *