rtgh

ಇಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ : ನಿಮ್ಮ ಊರಿನ ಹೆಸರು ಇದೆಯಾ ನೋಡಿ

Rain in these districts of Karnataka today

ನಮಸ್ಕಾರ ಸ್ನೇಹಿತರೇ ಒಂದು ಕಡೆ ಜನ ಬೇಸಿಗೆಯ ಬಿಸಿಲಿಗೆ ಹೈರಾಯಿಡ್ ಆಗಿದ್ದರೆ ಮತ್ತೊಂದು ಕಡೆ ಬೇಸಿಗೆಯಲ್ಲಿಯೂ ಕೂಡ ಮಳೆಯ ದರ್ಶನವಾಗಿದೆ. ವರ್ಷದ ಮೊದಲ ಮಳೆ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಬಿದ್ದಿದ್ದು ಇದರಿಂದ ಜನರಲ್ಲಿ ಸಂತಸ ಮೂಡಿದೆ ಎಂದು ಹೇಳಬಹುದು.

Rain in these districts of Karnataka today
Rain in these districts of Karnataka today

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಮಳೆಯಾಗಿದ್ದು ಇದು ಜನರ ಸಂತಸಕ್ಕೆ ಕಾರಣವಾಗಿದೆ. ಸಾಕಷ್ಟು ಬಳಕೆದಾರರು ತಮ್ಮ ಎಕ ಖಾತೆಯಲ್ಲಿ ಭದ್ರಾವತಿ ನಗರದಲ್ಲಿ ಮಳೆಯಾಗುತ್ತಿರುವ ದೃಶ್ಯಗಳನ್ನು ಕೂಡ ಹಂಚಿಕೊಂಡಿದ್ದು ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.

ವಿವಿಧ ಜಿಲ್ಲೆಗಳಲ್ಲಿ ಬುಧವಾರ ಮಳೆ :

ಬುಧವಾರ ಭದ್ರಾವತಿ ಮಾತ್ರವಲ್ಲದೆ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿದೆ ಎಂದು ಹೇಳಬಹುದು. ಗುಡುಗು ಸಹಿತ ಮಳೆ, ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಆಗಿದೆ.

ಅದರಂತೆ ಅವತಿ ತಾಳಹಳ್ಳಿ ಆನೂರು ಪ್ರದೇಶಗಳಲ್ಲಿಯೂ ಕೂಡ ಲಘು ಮಳೆಯಾಗಿದ್ದು ಹತ್ತಿ ಗುಂಡಿ ಲಿಂಗದಹಳ್ಳಿ ಪ್ರದೇಶಗಳಲ್ಲಿಯೂ ಕೂಡ ಚದುರಿದಂತೆ ಸಾಧಾರಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಚಿಕ್ಕಮಗಳೂರು ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಗುರುವಾರವು ಕೂಡ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬಿರು ಬೇಸಿಗೆಯಿಂದ ಕಾಫಿ ಬೆಳೆಗಾರರು ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಂಗಾಲಾಗಿದ್ದು ಸದ್ಯ ಇದೀಗ ಮಳೆಯ ಆದರೆ ಸಾಕು ಎನ್ನುವ ಪರಿಸ್ಥಿತಿ ಉದ್ಭವವಾಗಿದೆ.

ಇದನ್ನು ಓದಿ : ಮ್ಯೂಚುಯಲ್ ಫಂಡ್ ಹಾಗೂ FD ಇದರಲ್ಲಿ ಯಾವುದು ಬೆಸ್ಟ್ ತಿಳಿದುಕೊಳ್ಳಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ :

ಕಳೆದ ಹತ್ತು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗಿದ್ದು ಅದಾದ ನಂತರ ಕಾಣೆಯಾಗಿದ್ದ ಮಳೆ ಇದೀಗ ಮತ್ತೆ ಬುಧವಾರ ದರ್ಶನ ನೀಡಿದೆ ಇನ್ನೂ ಹಲವು ದಿನ ಉತ್ತಮ ಮಳೆಯಾದರೆ ಸಾಕು ಎನ್ನುವ ಪರಿಸ್ಥಿತಿ ರೈತರದ್ದಾಗಿದೆ ಎಂದು ಹೇಳಬಹುದು.

ಸಂಪೂರ್ಣವಾಗಿ ಕಳೆದ ವರ್ಷ ಮಳೆ ಕೈಕೊಟ್ಟ ಕಾರಣದಿಂದ ಕಾಫಿ ಬೆಳೆ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಿದೆ ತೀವ್ರ ಆಹಾಕಾರ ಬೇಸಿಗೆಯಲ್ಲಿ ನೀರಿಗೆ ಶುರುವಾಗಿದ್ದು ಮಳೆ ಬಂದರೆ ಸಾಕು ಎನ್ನುವ ಪರಿಸ್ಥಿತಿ ಉಂಟಾಗಿದ್ದು ರೈತರು ದೇವರನ್ನು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಏಪ್ರಿಲ್ ನಲ್ಲಿ ಮಳೆಯಾಗಲಿ ಇದೆಯಾ ?

ಅಶ್ವಿನಿ ಮಳೆ ಏಪ್ರಿಲ್ 13 ರಿಂದ ಪ್ರಾರಂಭವಾಗಲಿದೆ ಅಶ್ವಿನಿ ಮಳೆ ಎಪ್ರಿಲ್ 27ರವರೆಗೆ ಇರಲಿದ್ದು ರಾಜ್ಯದ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮತ್ತು ಉತ್ತರಗಳ ನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದೆ. ಭರಣಿ ಮಳೆ ಏಪ್ರಿಲ್ 27ರಂದು ಶುರುವಾಗಲಿದ್ದು ಸಾಮಾನ್ಯ ಮಳೆಯಾಗಿ ಈ ಮಳೆ ಇರಲಿದೆ ಆದರೆ ಮಳೆ ಬಂದು ಭೂಮಿ ತಂಪಾಗುವವರೆಗೂ ಈ ಬಿಸಿಲಿನ ತಾಪಮಾನವನ್ನು ತಾಳುವುದೇ ಒಂದು ಸಾಹಸವಾಗಿದೆ ಎಂದು ಹೇಳಬಹುದು.

ರಾಜ್ಯದ ಉಳಿದ ಕಡೆಗಳಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವುದು ಕೂಡ ಜನರಲ್ಲಿ ಮಳೆಯಾಗುವ ಬಗ್ಗೆ ಆಶಾಭಾವನೆಯನ್ನು ಮೂಡಿಸಿದೆ ಎಂದು ಹೇಳಬಹುದಾಗಿದೆ.

ಒಟ್ಟಾರೆ ರಾಜ್ಯದಲ್ಲಿ ಮಳೆಯಾಗುವುದರ ಬಗ್ಗೆ ಮುನ್ಸೂಚನೆ ನೀಡಿದ್ದು ಮಲೆನಾಡಿಗೆ ಮೊದಲ ಮಳೆ ಆಗಿದೆ ಎಂದು ಹೇಳಬಹುದು ಹಾಗಾಗಿ ಈ ಬಗ್ಗೆ ಎಲ್ಲರಿಗೂ ಶೇರ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮಳೆಯಾಗುವುದರ ಬಗ್ಗೆ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಲಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *