rtgh

ರಾಶಿ ಅಡಿಕೆ ಬೆಲೆಯಲ್ಲಿ ಸತತ ಕುಸಿತ : ಇಂದಿನ ಕನಿಷ್ಠ ಹಾಗೂ ಗರಿಷ್ಠ ಬೆಲೆ ಎಷ್ಟಿದೆ ?

consecutive-fall-in-the-price-of-groundnut

ನಮಸ್ಕಾರ ಸ್ನೇಹಿತರೆ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ ಸತತ ಕುಸಿತ ಕಂಡಿದ್ದು ಮಾರ್ಚ್ 15ರಿಂದ ಆರಂಭವಾದ ಅಡಿಕೆ ಬೆಲೆ ಕುಸಿತ ಇದೀಗ ಏಪ್ರಿಲ್ ನಲ್ಲಿಯೂ ಕೂಡ ಇಳಿಕೆಯಲ್ಲಿದೆ. ಗರಿಷ್ಠ 57000 ಕಳೆದ ವರ್ಷ ಜುಲೈ ತಿಂಗಳಲ್ಲಿ ತಲುಪಿತ್ತು ಹೀಗಾಗಿ ಸ್ವಲ್ಪ ದಿನ ಇಟ್ಟು ಅಡಿಕೆಯನ್ನು ಮಾರಾಟ ಮಾಡುವವರಿಗೆ ಮುಂದೆ ಒಳ್ಳೆಯ ಬೆಲೆ ಸಿಗುವ ಸಾಧ್ಯತೆ ಇದೆ.

consecutive-fall-in-the-price-of-groundnut
consecutive-fall-in-the-price-of-groundnut

ಇದೀಗ ಅಡಿಕೆ ಬೆಲೆಯಲ್ಲಿ ಎಷ್ಟು ಇಳಿದ ಕಂಡಿದೆ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಬೆಲೆ ಇದೆ ಹಾಗು ಯಾವ ತಿಂಗಳಲ್ಲಿ ಎಷ್ಟು ಬೆಲೆ ಇತ್ತು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದು.

ಅಡಿಕೆ ಬೆಲೆಯಲ್ಲಿ ಇಳಿಕೆ :

ಅಡಿಕೆ ಬೆಲೆಯಲ್ಲಿ ಕುಸಿತ ಪ್ರಾರಂಭವಾಗಿದ್ದು ಇದೀಗ ಏಪ್ರಿಲ್ ನಲ್ಲಿಯೂಕೂಡ ಮುಂದುವರೆದಿದೆ. ಗರಿಷ್ಠ ಇವತ್ತೇಳು ಸಾವಿರ ರೂಪಾಯಿ ಕಳೆದ ವರ್ಷ ಅಂದರೆ 2023 ಜುಲೈ ತಿಂಗಳಲ್ಲಿ ತಲುಪಿತ್ತು. ಹೀಗಾಗಿ ಅಡಿಕೆಯನ್ನು ಸ್ವಲ್ಪ ದಿನ ಇಟ್ಟು ಮಾರಾಟ ಮಾಡುವವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಸಿಗುವ ಸಾಧ್ಯತೆ ಇದೆ ಎಂದು ಹೇಳಬಹುದು.

ರಾಶಿ ಅಡಿಕೆ ಗರಿಷ್ಠ ಬೆಲೆ ಏಪ್ರಿಲ್ ಮೂರರಂದು ಕ್ವಿಂಟಲ್ ಗೆ 48529 ರೂಪಾಯಿಗಳಿದ್ದು ಕನಿಷ್ಠ ಬೆಲೆ 46620ಗಳಾಗಿದೆ. 49,500 ಕಳೆದ 10 ದಿನಗಳ ಹಿಂದೆ ಅಡಿಕೆಯ ಬೆಲೆ ಇತ್ತು. ಅಂತರ್ಜಲ ಮಟ್ಟ ತೀವ್ರ ಕುಸಿದಿದ್ದು ಏಪ್ರಿಲ್ ಮೇ ತಿಂಗಳಲ್ಲಿ ಹೇಗಾದರೂ ಮಾಡಿ ಅಡಿಕೆ ತೋಟ ಬದುಕಿಸಿಕೊಂಡರೆ ಸಾಕು ಎಂದು ಸಾಕಷ್ಟು ರೈತರು ಪರದಾಡುತ್ತಿದ್ದಾರೆ.

ಅಡಿಕೆ ಕಾಯಿ ಕಟ್ಟುವ ಕಾರ್ಯಾಡಿಕೆ ತೋಟದಲ್ಲಿ ಪ್ರಾರಂಭವಾಗಿದೆ ಆದರೆ ಬಿಸಿ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗಿದ್ದು ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚಾಗಿದೆ ಎಂದು ಹೇಳಬಹುದು ಅಲ್ಲದೆ ತಾಪಮಾನಕ್ಕೆ ಅಡಿಕೆ ಹರಳು ಉದುರುತ್ತಿವೆ. ತೀವ್ರಕು ಸಿದ್ಧ ಅಂತರ್ಜಲ ಮಟ್ಟ ಕಂಡಿದ್ದು ಬೋರ್ವೆಲ್ ಗಳು ಬತ್ತಿ ಹೋಗಿವೆ ಇನ್ನೂ ಕೆಲವು ಕಡೆ ಟ್ಯಾಂಕರ್ ಗಳ ಮೊರೆಯನ್ನು ರೈತರು ಹೋಗಿದ್ದಾರೆ.

ಇದನ್ನು ಓದಿ : ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮತ್ತಷ್ಟು ಅಗ್ಗ! ಜನ ಸಾಮಾನ್ಯರಿಗೆ ದೊಡ್ಡ ರಿಲೀಫ್

ಯಾವ ತಿಂಗಳಲ್ಲಿ ಎಷ್ಟು ಬೆಲೆ ಇದೆ ?

ಅಡಿಕೆಯ ಬೆಲೆ ಯಾವ ತಿಂಗಳಲ್ಲಿ ಎಷ್ಟಿದೆ ಎಂದು ನೋಡುವುದಾದರೆ ,

  1. 2023ರ ಏಪ್ರಿಲ್ ತಿಂಗಳಲ್ಲಿ 48,000
  2. ಮೇ ತಿಂಗಳಲ್ಲಿ 49,000 ಗಡಿದಾಟಿತ್ತು.
  3. 50,000 ದ ಗಡಿ ಜೂನ್ ತಿಂಗಳಲ್ಲಿ ದಾಟಿದೆ.
  4. ಗರಿಷ್ಠ 57,000 ರೂಪಾಯಿಗಳಷ್ಟು ವರ್ಷದಲ್ಲಿಯೇ ಜುಲೈನಲ್ಲಿ ತಲುಪಿತ್ತು.
  5. ಸತತ ಇಳಿಕೆಯನ್ನು ಆಗಸ್ಟ್ ತಿಂಗಳಲ್ಲಿ ಕಂಡು 48,000ಗಳ ಬೆಲೆಯನ್ನು ನೋಡಬಹುದು.
  6. 46,000ಕ್ಕೆ ಸೆಪ್ಟೆಂಬರ್ ಮೊದಲ 5 ದಿನ ಅಡಿಕೆ ಬೆಲೆ ಕೋಸಿದು ರೈತರಲ್ಲಿ ಆತಂಕ ಉಂಟು ಮಾಡಿತ್ತು.
  7. ಆದರೆ 47,800 ಅಕ್ಟೋಬರ್ ನ ಕೊನೆಯ ವಾರ ಮತ್ತೆ ಏರಿಕೆ ಕಂಡಿತು.
  8. 47 ಸಾವಿರಕ್ಕೆ ನವೆಂಬರ್ ನಲ್ಲಿ ತಲುಪಿ ಅಡಿಕೆ ಬೆಲೆ ಸ್ಥಿರವಾಗಿತ್ತು.
  9. 48 ಸಾವಿರದ ಗಡಿಯನ್ನು ಡಿಸೆಂಬರ್ ತಿಂಗಳಲ್ಲಿ ದಾಟಿತ್ತು.
  10. ಜನವರಿ 15 2024 ರಂದು ಇದೀಗ ಗರಿಷ್ಠ ದರ ಅಡಿಕೆ ಎಂದು 50,500 ರೂಪಾಯಿಗಳ ಗಡಿ ತಲುತಿದೆ.
  11. ಅದರಂತೆ ಫೆಬ್ರವರಿ ತಿಂಗಳಿನಿಂದ ಅಡಿಕೆಯ ಬೆಲೆ ಸತತ ಕುಸಿತ ಕಂಡು ಹಿಡಿತ 48 ಸಾಕಾದಿಂದ 49 ಸಾವಿರದ ಗಡಿ ಸಮೀಪ ಬಂದಿದೆ.

ಚೆನ್ನಗಿರಿಯಲ್ಲಿ ಅಡಿಕೆಯ ಬೆಲೆ :

ಅಡಿಕೆಯ ನಾಡು ಎಂದು ಪ್ರಸಿದ್ಧಿಯಾದ ಹಾಗೂ ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚೆನ್ನಗಿರಿ ವಹಿವಾಟಿನಲ್ಲಿ ಪ್ರತಿ ಕ್ವಿಂಟಲ್ ಗೆ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 46200 ರೂಪಾಯಿಗಳು ಹಾಗೂ ಗರಿಷ್ಠ ಬೆಲೆ 48529 ರೂಪಾಯಿ. ಅದರ ಜೊತೆಗೆ ಸರಾಸರಿ ಬೆಲೆ ರೂ.47706 ರೂಪಾಯಿಗಳಿಗೆ ಅಡಿಕೆ ಮಾರಾಟವಾಗಿದೆ. ಇನ್ನು ಗರಿಷ್ಟ 33301 ರೂಪಾಯಿಗೆ ಬೆಟ್ಟೆ ಅಡಿಕೆ ಮಾರಾಟವಾಗಿದೆ.

ಒಟ್ಟಾರೆ ರಾಜ್ಯದಲ್ಲಿ ಅಡಿಕೆಯ ಬೆಲೆ ಎಷ್ಟು ಕುಸಿತ ಕಂಡಿದೆ ಹಾಗೂ ಯಾವ ತಿಂಗಳಲ್ಲಿ ಅಡಿಕೆಯ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಬಹುದಾಗಿದೆ ಅದರಂತೆ ಪ್ರಸ್ತುತ ಅಡಿಕೆ ಬೆಲೆ ಎಷ್ಟಿದೆ ಹಾಗೂ ಪ್ರಮುಖ ಮಾರುಕಟ್ಟೆಯಾದ ಚೆನ್ನಗಿರಿಯಲ್ಲಿಯೂ ಕೂಡ ಅಡಿಕೆಯ ಬೆಲೆ ಎಷ್ಟಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲಾ ರೈತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *