ನಮಸ್ಕಾರ ಸ್ನೇಹಿತರೆ ಇಂದು ಹೆಚ್ಚಿನ ಜನರು ಚಿನ್ನ ಹೂಡಿಕೆಯ ಬಗ್ಗೆ ಆಸಕ್ತಿ ವಹಿಸುತ್ತಾರೆ. ಸ್ವಲ್ಪವಾದರೂ ಇಂದು ಹಣ ಉಳಿತಾಯ ಮಾಡಬೇಕೆಂದು ಇದ್ದಾಗ ಸಾಕಷ್ಟು ಜನರು ಚಿನ್ನ ಕರೆದಿ ಮಾಡುವ ಮೂಲಕ ಉಳಿಕೆ ಮಾಡಲು ಬಯಸುತ್ತಾರೆ.
ಇನ್ನೇನು ಯುಗಾದಿಯ ಹಬ್ಬ ಕೂಡ ಪ್ರಾರಂಭವಾಗಲಿದ್ದು ಯುಗಾದಿ ಹಬ್ಬವನ್ನೇ ಹೊಸ ವರ್ಷ ಎಂದು ಹೇಳಬಹುದು ಹಾಗಾಗಿ ಚಿನ್ನದ ಬೆಲೆ ಹೆಚ್ಚಿದ್ದರೂ ಕೂಡ ಗ್ರಾಹಕರು ಚಿನ್ನ ಕಡಿಮೆ ಮಾಡಲು ಆಸಕ್ತಿ ವಹಿಸುತ್ತಾರೆ.
ದಿನದಿಂದ ದಿನಕ್ಕೆ ಇಂದು ಚಿನ್ನದ ಬೆಲೆಯು ಹೆಚ್ಚಳವಾಗಿದ್ದು ಚಿನ್ನ ಖರೀದಿ ಮಾಡುವಂತಹ ಗ್ರಾಹಕರಿಗೆ ನಿರಾಸೆ ಉಂಟು ಮಾಡಿತ್ತು ಆದರೆ ಇದೀಗ ನಿನ್ನೆ ಅಷ್ಟೇ ಚಿನ್ನ ಗರಿಷ್ಠ ಮಟ್ಟವನ್ನು ತಲುಪಿದ ನಂತರ ವಿವಿಧ ನಗರದಲ್ಲಿ ಹಾಗೂ ಹೈದರಾಬಾದ್ ನಲ್ಲಿಯೂ ಕೂಡ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು ಈ ವಿಚಾರ ಗ್ರಾಹಕರಿಗೆ ಖುಷಿ ನೀಡಿದೆ.
ಚಿನ್ನದ ಬೆಲೆಯಲ್ಲಿ ಇಳಿಕೆ :
ಭಾರತದಲ್ಲಿ ಇದೀಗ ಚಿನ್ನದ ಬೆಲೆ ಇಳಿಕೆಯಾಗಿದ್ದು 22 ಕ್ಯಾರೆಟ್ ನ 10 ಗ್ರಾಂ ನ ಚಿನ್ನದ ಬೆಲೆಯು ಇಂದು 63350 ಆಗಿದೆ. ಅದೇ ರೀತಿ 24 ಕ್ಯಾರೆಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಗೆ 69 110 ರೂಪಾಯಿಗಳಷ್ಟಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಮತ್ತು ಹೈದರಾಬಾದ್ ನಲ್ಲಿ ಚಿನ್ನದ ದರಗಳ ಏರಿಕೆಯಿಂದಾಗಿ ಚಿನ್ನದ ಬೆಲೆಯಲ್ಲಿ ಚೀನಾದ ಸೆಂಟ್ರಲ್ ಬ್ಯಾಂಕ್ ನಿಂದ ಬೇಡಿಕೆ ಹೆಚ್ಚಾದ ಕಾರಣವೂ ಕೂಡ ದುಪ್ಪಟ್ಟಾಗಿತ್ತು.
ಇದೀಗ ಹಿಂದಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಹೈದರಾಬಾದ್ ನಲ್ಲಿ 6987 ರೂಪಾಯಿಗೆ ಒಂದು ಗ್ರಾಂ ಚಿನ್ನದ ಬೆಲೆಯು ಆಗಿದ್ದು ಅದೇ ರೀತಿ ಎಂಟು ಗ್ರಾಂ ಗೆ 55,896 ರೂಪಾಯಿಗಳಷ್ಟು ಹಾಗೂ 10 ಗ್ರಾಂ ಗೆ 69,870ಗಳು ಹೈದರಾಬಾದ್ ನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು ನೋಡಬಹುದಾಗಿದೆ.
ಇದನ್ನು ಓದಿ : ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮತ್ತಷ್ಟು ಅಗ್ಗ! ಜನ ಸಾಮಾನ್ಯರಿಗೆ ದೊಡ್ಡ ರಿಲೀಫ್
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ :
ಕೇವಲ ಹೈದರಾಬಾದ್ ಮಾತ್ರವಲ್ಲದೆ ವಿವಿಧ ನಗರಗಳಲ್ಲಿಯೂ ಕೂಡ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ,
- ಚೆನ್ನೈನಲ್ಲಿ 22 ಕ್ಯಾರೆಟ್ ನ ಚಿನ್ನದ ಬೆಲೆ 64,550
- ಮುಂಬೈನಲ್ಲಿ 22 ಕ್ಯಾರೆಟ್ ನ ಚಿನ್ನದ ಬೆಲೆಯು 63,600.
- ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ನ ಚಿನ್ನದ ಬೆಲೆ 63600
- ಲಕ್ನೋದಲ್ಲಿ ಚಿನ್ನದ ಬೆಲೆ 63,750
- ಕೇರಳದಲ್ಲಿ 63,350
- ಅಹ್ಮದಾಬಾದ್ ನಲ್ಲಿ 63,400
ಹೀಗೆ ಚಿನ್ನದ ಬೆಲೆಯನ್ನು ವಿವಿಧ ಮಾರುಕಟ್ಟೆಯಲ್ಲಿ ನೋಡಬಹುದಾಗಿದ್ದು ಬೇಡಿಕೆ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಾದ ಪರಿಣಾಮವಾಗಿ ಇಂದು ಗ್ರಾಮ್ ಗೆ ಏರಿದ ಚಿನ್ನದ ಬೆಲೆ 35 ರೂಪಾಯಿಗಳಷ್ಟು ಕಡಿಮೆಯಾಗಿದೆ.
ಬೆಳ್ಳಿಯ ಬೆಲೆ :
ಕೇವಲ ಚಿನ್ನ ಮಾತ್ರವಲ್ಲದೆ ಇಂದು ಬೆಳ್ಳಿಯು ಕೂಡ ಅತಿ ಮುಖ್ಯವಾದ ವಸ್ತುವಾಗಿದ್ದು ಹೆಚ್ಚಾಗಿ ಬೆಳೆಯ ವಸ್ತುಗಳನ್ನು ಕೂಡ ಜನತೆ ಬಳಕೆ ಮಾಡುತ್ತಾರೆ.
ಬೆಳೆಯ ಬೆಲೆ ಒಂದು ಗ್ರಾಂ ಗೆ ಇಂದು 79 ರೂಪಾಯಿಗಳಷ್ಟಾಗಿದ್ದು 100 ಗ್ರಾಂ ಗೆ 7750 ಗಳು ನೋಡಬಹುದು. ಆದರೆ ಬೆಳ್ಳಿಯ ಬೆಲೆಯಲ್ಲಿ ಇಂದು ಏರಿಕೆಯಾಗಿದೆ.
ಒಟ್ಟಾರೆ ಚಿನ್ನ ಖರೀದಿ ಮಾಡುವವರಿಗೆ ಇಂದು ಉತ್ತಮ ಅವಕಾಶವೆಂದು ಹೇಳಬಹುದಾಗಿದ್ದು ಚಿನ್ನವನ್ನು ಖರೀದಿ ಮಾಡಲು ಇಳಿಕೆಯಾಗಿರುವ ಕಾರಣ ಇದು ಉತ್ತಮ ಸಮಯ ಎಂದು ಹೇಳಬಹುದು.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದರ ಮೂಲಕ ಅವರೇನಾದರೂ ಯುಗಾದಿ ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡಲು ಯೋಚಿಸುತ್ತಿದ್ದರೆ ಇದು ಉತ್ತಮ ಅವಕಾಶವೆಂದು ತಿಳಿಸಿ ಧನ್ಯವಾದಗಳು.