rtgh

ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ : ನಿಮ್ಮ ಖಾತೆಗೆ ಈ ಕಾರಣಕ್ಕಾಗಿ ಹಣ ಬರದೆ ಇರಬಹುದು

Gruhalkshmi 8th installment money release

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಅಪ್ಡೇಟ್ ಅನ್ನು ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹೊಸ ಅಪ್ಡೇಟ್ ನೀಡಿದ್ದು ಇದೀಗ ಎಂಟನೇ ಕoತಿ ನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು ನಿಮ್ಮ ಬ್ಯಾಂಕ್ ಖಾತೆಗೆ ಈ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇರಬಹುದು.

Gruhalkshmi 8th installment money release
Gruhalkshmi 8th installment money release

ಇಲ್ಲಿಯವರೆಗೆ ಏಳು ಕಾಂತಿನ ಹಣವನ್ನು ಪ್ರತಿ ತಿಂಗಳು 2000 ಗಳಂತೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಅದರಂತೆ ಮಹಿಳೆಯರ ಬ್ಯಾಂಕ್ ಖಾತೆಗೆ 14,000 ತಲುಪಿದೆ ಎಂದು ಹೇಳಬಹುದು. ರಾಜ್ಯ ಸರ್ಕಾರ ಮನೆಯಲ್ಲಿ ಕುಳಿತು ಅಡುಗೆ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಿಂದ ನಿಜಕ್ಕೂ ಬಹಳ ಸಹಕಾರಿಯಾಗಿದೆ ಎಂದು ಹೇಳಬಹುದು.

ಅದರಂತೆ ಮನೆಯಲ್ಲಿ ಇರುವಂತಹ ಮಹಿಳೆಯರಿಗೆ ಸಾಮಾನ್ಯವಾಗಿ ಖರ್ಚಿಗೆ ಹಣ ಬೇಕು ಎಂದರೆ ಅವರು ಅದನ್ನು ಪಡೆದುಕೊಳ್ಳುವುದು ಕಷ್ಟವಾಗಿರುತ್ತದೆ ಅದರಲ್ಲಿಯೂ ಬಡವರ ಮನೆಯಲ್ಲಿ ಇದ್ದು ಅಸಾಧ್ಯವಾದ ಮಾತು. ಅದಕ್ಕಾಗಿಯೇ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಮಹಾಲಕ್ಷ್ಮಿ ಯೋಜನೆಯ ಮೂಲಕ ಮನೆ ಖರ್ಚಿಗಾಗಿ ಪ್ರತಿ ತಿಂಗಳು 2000ಗಳನ್ನು ಸರ್ಕಾರ ಉಚಿತವಾಗಿ ನೀಡುತ್ತಿದ್ದು ಸರ್ಕಾರಕ್ಕೆ ಸಾಕಷ್ಟು ಮಹಿಳೆಯರು ಇದರಿಂದ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಹೇಳಬಹುದು.

ಸುಮಾರು 20 ಲಕ್ಷದಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ 8ನೇ ಕಂತಿನ ಹಣ ಬಿಡುಗಡೆ :

ಏಳು ಕಂತಿನ ಹಣವನ್ನು ಪ್ರತಿ ತಿಂಗಳು 2000ಗಳಂತೆ ಇಲ್ಲಿಯವರೆಗೆ ಬಿಡುಗಡೆ ಮಾಡಲಾಗಿದೆ ಅದರಂತೆ ಮಹಿಳೆಯರ ಬ್ಯಾಂಕ್ ಖಾತೆಗೆ 14 ಸಾವಿರ ರೂಪಾಯಿಗಳು ತಲುಪಿದೆ ಇದೀಗ ಗೃಹಲಕ್ಷ್ಮಿ ಯೋಜನೆ ಎಂಟನೇ ಕಂತಿನ ಹಣವನ್ನು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಸುಮಾರು 20 ಲಕ್ಷದಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಈಗಾಗಲೇ ಹಣ ತಲುಪಿದೆ.

ಏಪ್ರಿಲ್ ಮೊದಲ ವಾರದಲ್ಲಿ ಹಂತ ಹಂತವಾಗಿ ಎಂಟನೇ ಕಂತಿನ ಹಣ ಎಲ್ಲಾ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

ಇದನ್ನು ಓದಿ : ಬೆಳ್ಳಂಬೆಳಗ್ಗೆ ಗೃಹಲಕ್ಷ್ಮಿ 2 ಸಾವಿರ ಹಣ ಪಡೆಯುತ್ತಿರುವವರಿಗೆ ಹೊಸ ನಿಯಮ ಜಾರಿ

ಈ ಕೆಲಸ ಹಣಬೇಕೆಂದರೆ ಕಡ್ಡಾಯ :

ಡಿವಿಟಿ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮಾಡಲಾಗುತ್ತಿದ್ದು ಆಟೋಮೆಟಿಕ್ ಆಗಿರುವ ಪ್ರಕ್ರಿಯೆ ಇದಾಗಿದೆ ಹಾಗಾಗಿ ನಿಮ್ಮ ದಾಖಲೆಗಳು ಸರಿಯಾಗಿ ಆರಂಭದಲ್ಲಿಯೇ ಕೊಟ್ಟಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಮಿಸ್ ಆಗದೆಯೇ ಹಣ ವರ್ಗಾವಣೆಯಾಗುತ್ತದೆ.

ಹಾಗಾಗಿ ಈ ಕೆಳಗಿನ ಕೆಲಸಗಳು ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಆಗಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳುವುದು ಒಳ್ಳೆಯದು ಒಂದು ವೇಳೆ ಆಗದಿದ್ದರೆ ತಕ್ಷಣವೇ ಈ ಕೆಲಸ ಮಾಡಿಸಿಕೊಳ್ಳಿ.

  1. ತಕ್ಷಣವೇ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಅಪ್ಡೇಟ್ ಆಗಿದೆಯಾ ಇಲ್ಲವೇ ಎಂಬುದನ್ನು ಮೊದಲು ತಿಳಿದುಕೊಳ್ಳಿ.
  2. ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿದ್ದು ಒಂದು ವೇಳೆ ಅದು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಇದ್ದರೆ ತಕ್ಷಣವೇ ಲಿಂಕ್ ಮಾಡಿಸಬೇಕು. ನಿಮ್ಮ ಆಧಾರ್ ಕಾರ್ಡ್ ಏನಾದರೂ ಹಳೆಯ ವರ್ಷದಾಗಿದ್ದರೆ ತಕ್ಷಣವೇ ಅದನ್ನು ಅಪ್ಡೇಟ್ ಮಾಡಬೇಕು ಇಲ್ಲದಿದ್ದರೆ ಬ್ಯಾಂಕ್ ಖಾತೆಗೆ ಹಣ ಚೆನ್ನಾಗಿ ಆಗುವುದಿಲ್ಲ. ಆಧಾರ್ ಅಪ್ಡೇಟ್ ಮಾಡಲು ಸರ್ಕಾರ ಜೂನ್ 14 2024 ವರೆಗೆ ಅವಕಾಶ ಕಲ್ಪಿಸಿದೆ.
  3. ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಮಾಡಿದ ನಂತರ ಣ ಬರದೆ ಇದ್ದರೆ ತಕ್ಷಣವೇ ನೀವು ಬ್ಯಾಂಕಿಗೆ ಭೇಟಿ ನೀಡಿ ಎನ್‌ಪಿಸಿಐ ಮ್ಯಾಪಿಂಗ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಮಾಡಿಸಿಕೊಳ್ಳಿ.

ಸೊಸೆಗೆ ಹಣ ಜಮಾ ಆಗುತ್ತದೆ :

ಗೃಹ ಲಕ್ಷ್ಮಿ ಯೋಜನೆಯ ಪ್ರಮುಖ ನಿಯಮೈ ಇದಾಗಿದ್ದು ಮನೆಯ ಹಿರಿಯ ಮಹಿಳಾ ಸದಸ್ಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಹಾಗೂ ಅಪ್ಲಿಕೇಶನ್ ಅನ್ನು ಅವರ ಹೆಸರಿನಲ್ಲಿ ಹಾಕಬೇಕಾಗಿತ್ತು ಕೆಲವೊಂದು ಕಡೆ ಅರ್ಜಿ ಸಲ್ಲಿಸಿದ ನಂತರ ಹಿರಿಯ ಮಹಿಳೆಯರು ಮರಣ ಹೊಂದಿರುತ್ತಾರೆ.

ಹಾಗಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಆದರೆ ಅವರ ಮನೆಯವರು ಇದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಇದನ್ನು ಗಮನಿಸಿರುವಂತಹ ಸರ್ಕಾರ ಹಿರಿಯ ಮಹಿಳೆ ಸದಸ್ಯ ಮನೆಯಲ್ಲಿ ಮರಣ ಹೊಂದಿದರೆ ಎರಡನೇ ಮಹಿಳಾ ಸದಸ್ಯ ಈ ಯೋಜನೆಯ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಸರ್ಕಾರದ ಡೇಟಾ ಬೇಸ್ ನಲ್ಲಿ ಇದಕ್ಕೆ ಹೊಸ ಖಾತೆಯನ್ನು ಕೂಡ ಅಪ್ಡೇಟ್ ಮಾಡಿಸಬೇಕು.

ಮೊಬೈಲ್ ಮೂಲಕವೇ ಸ್ಟೇಟಸ್ ಚೆಕ್ ಮಾಡಬಹುದು :

ನೀವೇನಾದರೂ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಮಾಡಬೇಕಾದರೆ ಮೊಬೈಲ್ ಅಪ್ಲಿಕೇಶನ್ ಅನ್ನು ಇದೀಗ ಕರ್ನಾಟಕ ಸರ್ಕಾರ ಡಿ ಬಿ ಟಿ ಕರ್ನಾಟಕ ಎನ್ನುವ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು ಈ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.

ಅದಾದ ನಂತರ ನಿಮ್ಮ ಆಧಾರ್ ನಂಬರನ್ನು ನಮೂದಿಸಬೇಕು ಅದಾದ ನಂತರ ಪಾಸ್ವರ್ಡ್ ಅನ್ನು ಸೆಟ್ ಮಾಡಿ ನಿಮ್ಮ ಪೇಮೆಂಟ್ ಸ್ಟೇಟಸ್ ಅನ್ನು ಈ ಅಪ್ಲಿಕೇಶನ್ ನಲ್ಲಿ ಸುಲಭವಾಗಿ ತಿಳಿದುಕೊಳ್ಳಬಹುದು.

ಒಟ್ಟಾರೆ ಗೃಹಲಕ್ಷ್ಮಿ ಪೂಜೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಇದೀಗ ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡುತ್ತಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದರೆ ತಕ್ಷಣವೇ ಮೇಲೆ ತಿಳಿಸಿದಂತಹ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *