ನಮಸ್ಕಾರ ಸ್ನೇಹಿತರೆ ರೈತರಿಗೆ ಯಾವುದೇ ಬ್ಯಾಂಕ್ ಅಥವಾ ಖಾಸಗಿ ಹಣಕಾಸಿನ ಸಂಸ್ಥೆಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರುವ ರೈತರು 3 ಲಕ್ಷ ಸಾಲವನ್ನು ಪಡೆಯಬಹುದಾಗಿದೆ.
ತಮ್ಮ ಕೃಷಿ ಚಟುವಟಿಕೆಗಳನ್ನು ರೈತರು ಸರಿಯಾಗಿ ನಿಭಾಯಿಸಲು ಅಂದರೆ ಉತ್ತಮ ಫಸಲು ಬರುವುದಕ್ಕಾಗಿ ತಮ್ಮ ತೋಟಗಳಿಗೆ ಗೊಬ್ಬರ ಹಾಕಲು ಅಥವಾ ಕೀಟನಾಶಕವನ್ನು ಬಳಸಲು ತವ ನೀರಾವರಿ ಮೊದಲಾದವುಗಳಿಗೆ ಟ್ರ್ಯಾಕ್ಟರ್ ಪಂಪ್ಸೆಟ್ ನಂತಹ ಉಪಕರಣ ಖರೀದಿ ಮಾಡಲು ದೊಡ್ಡ ಮಟ್ಟದಲ್ಲಿಯೇ ಹಣ ಬೇಕಾಗುತ್ತದೆ ಅದರಂತೆ ಇದೀಗ ಈ ಕಾರ್ಡನ್ನು ಹೊಂದುವುದರ ಮೂಲಕ ಸರ್ಕಾರದಿಂದ 3 ಲಕ್ಷ ರೂಪಾಯಿಗಳವರಿಗೆ ಸಾಲವನ್ನು ಪಡೆಯಬಹುದಾಗಿದೆ.
Contents
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 300000 ಸಾಲ ಸೌಲಭ್ಯ :
ರೈತರು ಎಷ್ಟೇ ಖರ್ಚು ಮಾಡಿದರು ಅಥವಾ ನಿರ್ವಹಣೆ ಮಾಡಿದರು ಕೂಡ ಅವರಿಗೆ ಉತ್ತಮವಾದಂತಹ ಫಸಲು ಬರಲು ಸಾಧ್ಯವಿಲ್ಲ ಅಂತಹ ಸಂದರ್ಭದಲ್ಲಿ ಮಾಡುವುದು ಸಹಜವಾಗಿದೆ ಇದಕ್ಕಾಗಿ ರೈತರಿಗೆ ಕಡಿಮೆ ಪಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಸರ್ಕಾರವು ಕೂಡ ಒದಗಿಸುತ್ತಿದೆ.
ರೈತರ ಅಭಿವೃದ್ಧಿಗೆ ಸಂಪೂರ್ಣವಾದ ಶ್ರಮವನ್ನು ಕೇಂದ್ರ ಸರ್ಕಾರ ವಹಿಸುತ್ತಿದ್ದು ಅತಿ ಕಡಿಮೆ ಬಡ್ಡಿ ದರದಲ್ಲಿ ಅಥವಾ ಬಡ್ಡಿ ರಹಿತ ಸಾಲ ಸೌಲಭ್ಯಗಳನ್ನು ಕೂಡ ಪಡೆಯಬಹುದಾಗಿದೆ. ರೈತರು ಈ ಒಂದು ಕಾರಣದ ಮೂಲಕ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಮೂರು ಲಕ್ಷಗಳವರೆಗೆ ಪಡೆಯಬಹುದಾಗಿತ್ತು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ರೈತರಿಗಾಗಿ ಪ್ರಾರಂಭಿಸಲಾಗಿದ್ದು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಈ ಯೋಜನೆಯ ಅಡಿಯಲ್ಲಿ ಹೊಂದಿರುವ ರೈತರು ಯಾವುದೇ ಬ್ಯಾಂಕ್ ಅಥವಾ ಖಾಸಗಿ ಹಣಕಾಸಿನ ಸಂಸ್ಥೆಗಳಲ್ಲಿ ಕಡಿಮೆ ಬಡ್ಡಿ ದರದ ಸಾಲವನ್ನು ಮೂರು ಲಕ್ಷದವರೆಗೆ ಪಡೆದುಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.
ಇದನ್ನು ಓದಿ : ನಿಮ್ಮ ನಗರದಲ್ಲೇ ಪಡೆಯಿರಿ ಸರ್ಕಾರಿ ಉದ್ಯೋಗ.! ಪಿಯುಸಿ ಪಾಸಾಗಿದ್ರೆ ಸಾಕು ಸಿಗುತ್ತೇ ₹42,000 ವೇತನದ ಹುದ್ದೆ
ಯಾರಿಲ್ಲ ಅರ್ಹರಾಗಿದ್ದಾರೆ :
ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪಡೆದುಕೊಳ್ಳಲು ಯಾವೆಲ್ಲ ರೈತರು ಅರ್ಹರು ಎಂಬುದರ ಬಗ್ಗೆ ಈ ಕೆಳಗಿನಂತೆ ನೋಡಬಹುದು.
- ಸ್ಥಿರ ಆದಾಯದ ಮೂಲ ಹೊಂದಿರುವಂತಹ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು
- ಕೃಷಿ ಭೂಮಿ ಹೊಂದಿರಬೇಕಾಗುತ್ತದೆ
- ಕನಿಷ್ಠ ಒಂದು ಎಕರೆ ಹಾಗೂ ಗರಿಷ್ಟ 10 ಹೆಕ್ಟೇರ್ ಜಮೀನನ್ನು ಕೃಷಿಕರು ಹೊಂದಿರಬೇಕು.
- ಈ ಯೋಜನೆಯಡಿಯಲ್ಲಿ 18 ರಿಂದ 70ನೇ ವರ್ಷದವರೆಗೂ ಕೂಡ ಸಾಲ ಸೌಲಭ್ಯ ಪಡೆಯಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲೆಗಳು :
ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ
- ರೈತರ ಜಮೀನಿನ ಪಹಣಿ ಪತ್ರ
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಡ್ರೈವಿಂಗ್ ಲೈಸೆನ್ಸ್
- ವೋಟರ್ ಐಡಿ
ಹೀಗೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದುವುದರ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ಅಂಶಗಳು :
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನಬಾರ್ಡ್ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ ಎರಡು ರೀತಿಯಲ್ಲಿ ಸಾಲ ಸೌಲಭ್ಯವನ್ನು ಈ ಯೋಜನೆಯಡಿಯಲ್ಲಿ ರೈತರು ಪಡೆಯಬಹುದಾಗಿದೆ. ಮೂರು ವರ್ಷದ ಅವಧಿಯ ಸಾಲ ಹಾಗೂ ಪಶುಸಂಗೋಪನೆ ಮೀನು ಸಾಕಾಣಿಕೆ ಬದಲಾದ ಉಪಕಸಪಗಳಿಗೆ ಕೃಷಿ ಚಟುವಟಿಕೆಗಳಿಗಾಗಿ ಮೂರರಿಂದ ಐದು ವರ್ಷದ ವರೆಗಿನ ಎರಡನೇ ಅವಧಿಯ ಸಾಲವನ್ನು ಈ ಯೋಜನೆಯಲ್ಲಿ ಪಡೆಯಬಹುದು.
ಕೇವಲ ನಾಲ್ಕು ಪರ್ಸೆಂಟ್ ಬಡ್ಡಿ ದರದಲ್ಲಿ ಈ ಯೋಜನೆಯ ಅಡಿಯಲ್ಲಿ ರೈತರು ಸಾಲ ಸೌಲಭ್ಯ ಪಡೆಯಬಹುದು ಆದರೆ ಬ್ಯಾಂಕಿನಿಂದ ಬ್ಯಾಂಕಿಗೆ ನೀಡುವಂತಹ ಸಾಲದ ಮೊತ್ತ ಮತ್ತು ಬಡ್ಡಿ ದರದಲ್ಲಿ ವ್ಯತ್ಯಾಸವಿರುತ್ತದೆ ಹಾಗಾಗಿ ಯಾವ ಪ್ರಮುಖ ಬ್ಯಾಂಕ್ ನಲ್ಲಿ ನೀವು ಎಷ್ಟು ಬಡ್ಡಿದರ ಇದೆ ಎಂಬುದನ್ನು ತೆಗೆದುಕೊಂಡು ಸಾಲವನ್ನು ಪಡೆಯಬಹುದು.
ಹೀಗೆ ಕೆಲವೊಂದು ಬ್ಯಾಂಕುಗಳಲ್ಲಿ ಬಡ್ಡಿದರವನ್ನು ನಿಗದಿಪಡಿಸಲಾಗಿದ್ದು ಅದರಲ್ಲಿ ಮುಖ್ಯವಾಗಿ 3 ಲಕ್ಷಗಳ ವರೆಗೆ 5 ವರ್ಷಗಳ ಅವಧಿಗೆ ಎರಡು ಪರ್ಸೆಂಟ್ ಬಡ್ಡಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ, 9% ನಿಂದ ಪ್ರಾರಂಭವಾಗಿ ನಾಲ್ಕರಿಂದ ಐದು ವರ್ಷದವರೆಗೆ 3,000 ಸಾಲವನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ, 8.55% ಬಡ್ಡಿ ದರದಲ್ಲಿ 2.5 ಲಕ್ಷಗಳ ಸಾಲವನ್ನು ಐದು ವರ್ಷಗಳ ಅವಧಿಗೆ ಆಕ್ಸಿಸ್ ಬ್ಯಾಂಕ್ ನಲ್ಲಿ ಪಡೆಯಬಹುದಾಗಿತ್ತು.
ಈ ಬಗ್ಗೆ ಎಲ್ಲ ರೈತರಿಗೂ ಶೇರ್ ಮಾಡುವ ಮೂಲಕ ಪಡೆದುಕೊಳ್ಳಲು ತಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಹಾಗೂ ಆನ್ಲೈನ್ ಮೂಲಕ ವೆಬ್ಸೈಟ್ನಲ್ಲಿ ಭೇಟಿ ನೀಡಿ ಕಿಸಾನ್ ಕ್ರೆಡಿಟ್ ಲೋನ್ ನ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು ಸಾಲವನ್ನು ಯಾವ ಬ್ಯಾಂಕಿನಲ್ಲಿ ಮಾಡಿದರೆ ಹೆಚ್ಚು ಪ್ರಯೋಜನ ಸಿಗಲಿದೆ ಎಂಬುದನ್ನು ತಿಳಿದುಕೊಂಡು ಆ ಬ್ಯಾಂಕಿನಲ್ಲಿ ಸಾಲ ಸೌಲಭ್ಯವನ್ನು ಪಡೆಯಲಿ ಧನ್ಯವಾದಗಳು.