ಹಲೋ ಸ್ನೇಹಿತರೇ, ಎಂಟನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಅಪ್ ಡೇಟ್ ನೀಡಿದ್ದಾರೆ. ಇನ್ನು ಮುಂದೆ ಪ್ರತಿಯೊಬ್ಬರಿಗೂ ಕೂಡ ಹಣ ಜಮಾ ಆಗುವಂತೆ ಮಾಡಲಾಗುವುದು ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಯಾರನ್ನ ಸಂಪರ್ಕಿಸಬೇಕು ಎನ್ನುವುದರ ಬಗ್ಗೆ ಕೂಡ ಮಾಹಿತಿಯನ್ನು ಒದಗಿಸಿದ್ದಾರೆ.
Contents
ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣದ ಬಗ್ಗೆ ಹೊಸ ಅಪ್ಡೇಟ್!
ಎಲ್ಲರಿಗೂ ತಿಳಿದಿರುವಂತೆ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು, ಅದು ಅಲ್ಲದೆ ಗೃಹಲಕ್ಷ್ಮಿ ಯೋಜನೆಗೆ ಹೆಚ್ಚಿನ ಅನುದಾನವನ್ನು ಕೂಡ ಸರ್ಕಾರ ನೀಡಿದ್ದು ಪ್ರತಿ ತಿಂಗಳು ಫಲಾನುಭವಿ ಮಹಿಳೆಯರ ಖಾತೆಗೆ ಎರಡು ಸಾವಿರ ರೂಪಾಯಿಗಳನ್ನು ಕಳೆದ ಎಂಟು ತಿಂಗಳಿನಿಂದ ಜಮಾ ಮಾಡಿಕೊಂಡು ಬಂದಿದೆ. ಹೀಗಾಗಿ ಹದಿನಾಲ್ಕರಿಂದ 16 ಸಾವಿರ ರೂಪಾಯಿಗಳನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ.
ಇನ್ನು ಸಾಕಷ್ಟು ಜನರ ಖಾತೆಗೆ ಹಣ ಬಂದಿಲ್ಲ, ಅರ್ಜಿ ಸಲ್ಲಿಕೆ ಆಗಿದೆ ಆದರೂ ನಮ್ಮ ಖಾತೆಗೆ ಮಾತ್ರ ಇದುವರೆಗೆ ಹಣ ಬಿಡುಗಡೆ ಆಗಿಲ್ಲ ಎನ್ನುವ ಬೇಸರ ಇದೆ, ಇದಕ್ಕೆ ಮಾನ್ಯ ಸಚಿವೆ ಸ್ಪಷ್ಟನೆಯನ್ನ ನೀಡಿದ್ದು ಯಾವುದೇ ಬ್ಯಾಂಕ್ ಖಾತೆಯಿಂದ ನಿಮ್ಮ ಮೊಬೈಲ್ ಸಂಖ್ಯೆಗೆ ಮೆಸೇಜ್ ಬಾರದೆ ಇದ್ದರೆ ತಕ್ಷಣ ಬ್ಯಾಂಕ್ ಗೆ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಿಸಿ. ಇದರಿಂದಾಗಿ ಹಣವು ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ನಿಮ್ಮ ಖಾತೆಗೆ ಯಾಕೆ ಹಣ ಬರುತ್ತಿಲ್ಲ?
ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಅಂದರೆ ಆಧಾರ್ ಸೀಡಿಂಗ್ ಮಾಡಿಸುವುದು ಎನ್ನುವುದು ಬಹಳ ಮುಖ್ಯ. ಇದರ ಜೊತೆಗೆ ಈಕೆ ವೈ ಸಿ ಅಪ್ಡೇಟ್ ಕೂಡ ಆಗಬೇಕು. ಇದಕ್ಕಾಗಿ ನೀವು ಬ್ಯಾಂಕ್ ಶಾಖೆಗೆ ಹೋಗಿ ಸಿಬ್ಬಂದಿಗಳನ್ನ ಭೇಟಿ ಮಾಡಿ ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಗೃಹಲಕ್ಷ್ಮಿ ಹಣ 14,000 ಒಟ್ಟಿಗೆ ಸಿಗಲಿದೆ : ತಪ್ಪದೆ ಈ ಕೆಲಸ ಮಾಡಿ ಹಣ ಪಡೆದುಕೊಳ್ಳಿ
ಆಧಾರ್ ಕಾರ್ಡ್ ಅಪ್ಡೇಟ್ ಇಂದ ಹಿಡಿದು ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಆಗಿರುವವರಿಗೆ ಡಿಜಿಟಲ್ ಆಗಿ ಹಣ ವರ್ಗಾವಣೆಗೆ ಯಾವೆಲ್ಲ ದಾಖಲೆಗಳನ್ನು ನೀಡಬೇಕು ಅವುಗಳನ್ನು ನೀವು ನೀಡಿ ಬ್ಯಾಂಕ್ ಖಾತೆಯನ್ನು ಸರಿಪಡಿಸಿಕೊಂಡರೆ ಮಿಸ್ ಆಗದೆ ನಿಮ್ಮ ಖಾತೆಗೆ ಹಣ ಬಿಡುಗಡೆ ಆಗುತ್ತದೆ.
ಇನ್ನು ಸರ್ಕಾರ ಪೆಂಡಿಂಗ್ ಇರುವ ಹಣವನ್ನು ಕೂಡ ಬಿಡುಗಡೆ ಮಾಡುತ್ತಿದ್ದು ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಹೊಸದಾಗಿ ಖಾತೆ ತೆರೆದವರಿಗೆ ಪೆಂಡಿಂಗ್ ಹಣವು ಸಹ ಬಿಡುಗಡೆ ಆಗಿದೆ.
ಇನ್ನು ಮಹಿಳೆಯರಿಗೆ ವಿಶೇಷ ಸೂಚನೆಯನ್ನು ನೀಡಲಾಗಿದ್ದು ಆರು ಮತ್ತು ಏಳನೇ ಕಂತಿನ ಹಣ ಬಾರದೆ ಇರುವವರಿಗೆ 8ನೇ ಕಂತಿನ ಹಣದ ಜೊತೆಗೆ ಪೆಂಡಿಂಗ್ ಇರುವ ಹಣವನ್ನು ಬಿಡುಗಡೆ ಮಾಡಲಾಗುವುದು
ಅಂದರೆ ಒಟ್ಟಿಗೆ ಆರು ಸಾವಿರ ರೂಪಾಯಿಗಳನ್ನು ಎಂಟನೇ ಕಂತಿನ ಬಿಡುಗಡೆ ಸಮಯದಲ್ಲಿ ಪಡೆದುಕೊಳ್ಳಬಹುದು ಎಂದು ಸರ್ಕಾರ ಈ ಹಿಂದೆಯೇ ತಿಳಿಸಿತ್ತು. ಏಪ್ರಿಲ್ 20ನೇ ತಾರೀಖಿನ ಒಳಗೆ ಯಾವೆಲ್ಲ ಮಹಿಳೆಯರು ತಮ್ಮ ಖಾತೆಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿಪಡಿಸಿಕೊಳ್ಳುತ್ತಾರೋ ಅಂತವರಿಗೆ ಎಂಟನೇ ಕಂತಿನ ಹಣ ಜಮಾ ಆಗುತ್ತದೆ.
ಇನ್ನು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರನ್ನು ಸಂಪರ್ಕಿಸಿ ಹಣಬಾರದೆ ಇರುವ ಮಹಿಳೆಯರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ತಿಳಿಸಿದೆ.
ಇತರೆ ವಿಷಯಗಳು:
SSLC Result 2024 : ಒಂದೇ ಕ್ಲಿಕ್ ನಲ್ಲಿ ರಿಸಲ್ಟ್ ನೋಡಿ ! ಇಲ್ಲಿದೆ ಅಧಿಕೃತ ಮಾಹಿತಿ
ಮಹಿಳೆಯರಿಗೆ ಕೇಂದ್ರದ ಹೊಸ ಸ್ಕೀಮ್.! ನಿಮ್ಮದಾಗಲಿದೆ 30 ಸಾವಿರ ಬಡ್ಡಿ ರಹಿತ ಸಾಲ