rtgh

ಸಾಲ ಮಾಡಿರುವವರಿಗೆ ಬಿಗ್ ರಿಲೀಫ್ : RBI ಹೊಸ ನಿಯಮ ನಿಮಗೆ ತಿಳಿದಿದೆಯಾ

Big relief for borrowers

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಆರ್‌ಬಿಐ ಹೊಸ ನಿಯಮಗಳನ್ನು ಜಾರಿ ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಬ್ಯಾಂಕುಗಳಲ್ಲಿ ನೀವೇನಾದರೂ ಸಾಲವನ್ನು ಪಡೆದಿದ್ದರೆ ಸಕಾಲಕ್ಕೆ ಅದನ್ನು ಮರುಪಾವತಿ ಮಾಡದೇ ಇದ್ದರೆ ಪದೇ ಪದೇ ನಿಮಗೆ ಬ್ಯಾಂಕ್ ಸಿಬ್ಬಂದಿಗಳು ಕರೆ ಮಾಡಿ ಅಥವಾ ಪದೇ ಪದೇ ನೋಟಿಸ್ ಕಳುಹಿಸಿ ಸಾಲ ವಸೂಲಾತಿ ಮಾಡಿಸಿಕೊಳ್ಳುವುದು ಸಹಜವಾಗಿದೆ.

Big relief for borrowers
Big relief for borrowers

ಸಾಕಷ್ಟು ಸಮಯದಲ್ಲಿ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಳ್ಳುವ ಅನಿವಾರ್ಯತೆ ನಮಗೆ ಎದುರಾಗುತ್ತದೆ ಆದರೆ ನಾವು ಸಮಯಕ್ಕೆ ಸರಿಯಾಗಿ ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡುವುದು ಅಷ್ಟೇ ಮುಖ್ಯವಾಗಿರುತ್ತದೆ ಒಂದು ವೇಳೆ ನೀವೇನಾದರೂ ಸಾಲ ಮರುಪಾವತಿ ಮಾಡದೆ ಇದ್ದಂತಹ ಸಂದರ್ಭದಲ್ಲಿ ನಿಮ್ಮನ್ನು ಬ್ಯಾಂಕಿನವರು ಪ್ರಶ್ನೆ ಮಾಡಬಹುದು ಹಾಗೂ ನಿಮಗೆ ಇದರಿಂದ ಸಾಕಷ್ಟು ಸಮಸ್ಯೆಗಳು ಕೂಡ ಉಂಟಾಗುತ್ತವೆ.

ಬ್ಯಾಂಕ್ ಸಾಲ ಮರುಪಾವತಿ ಮಾಡುವುದು ಕಡ್ಡಾಯವಾಗಿದೆ ಆದರೆ ಕೆಲವೊಂದಿಷ್ಟು ನಿಯಮಗಳನ್ನು ಇದಕ್ಕೆ ಸಂಬಂಧಪಟ್ಟ ಹಾಗೆ ಬದಲಾವಣೆ ಮಾಡಿರುವ ಆರ್ಬಿಐ ನಿಂದ ಜನರಿಗೆ ಸ್ವಲ್ಪ ರಿಲೀಫ್ ನೀಡಿದೆ ಎಂದು ಹೇಳಬಹುದು.

ಅಧ್ಯಯನ ಹೊಸ ನಿಯಮಗಳು :

ಸಕಾಲಕ್ಕೆ ಬ್ಯಾಂಕುಗಳಲ್ಲಿ ಸಾಲ ಮಾಡಿ ಅದನ್ನು ಮರುಪಾವತಿ ಮಾಡದೇ ಇದ್ದರೆ, ನಿಮಗೆ ಬ್ಯಾಂಕ್ ಸಿಬ್ಬಂದಿಗಳು ಕರೆ ಮಾಡಿ ಅಥವಾ ನೋಟಿಸ್ ಕಳುಹಿಸಿ ಸಾಲ ವಸೂಲಾತಿ ಮಾಡಿಸಿಕೊಳ್ಳುತ್ತವೆ ಆದರೆ ಬ್ಯಾಂಕುಗಳು ಇತ್ತೀಚಿನ ದಿನಗಳಲ್ಲಿ ನೇಮಿಸಿಕೊಳ್ಳುವ ರಿಕವರಿ ಏಜೆಂಟ್ ಗಳಿಂದ ಸಾಕಷ್ಟು ತೊಂದರೆಗಳು ಗ್ರಾಹಕರಿಗೆ ಆಗುತ್ತಿದೆ.ಎನ್ನುವುದು ಕೇಂದ್ರ ಬ್ಯಾಂಕ್ ಗಮನಿಸಿದೆ.

ರಿಕವರಿ ಏಜೆಂಟ್ ಗಳು ಹೊತ್ತಲ್ಲದ ಹೊತ್ತಲ್ಲಿ ಗ್ರಾಹಕರಿಗೆ ಕಾಲ್ ಮಾಡುವುದು ಅಥವಾ ಮನೆ ಬಳಿ ಬರುವುದು ಸ್ನೇಹಿತರು ಹಾಗು ಸಂಬಂಧಿಕರ ಜೊತೆಗೆ ಸಾಲದ ಬಗ್ಗೆ ಮಾಹಿತಿ ನೀಡುವುದು ಹೀಗೆ ಸಾಕಷ್ಟು ತಪ್ಪು ಮಾರ್ಗಗಳನ್ನು ಅವರು ಅನುಸರಿಸಿ ಸಾಲ ಮರುಪಾವತಿ ಮಾಡದೇ ಇರುವವರ ಬಳಿ ಸಾಲ ಮರುಪಾವತಿ ಮಾಡಲು ಪ್ರಯತ್ನಿಸುತ್ತಿದ್ದರು ಆದರೆ ಇದೀಗ rbi ಇದಕ್ಕೆಲ್ಲ ಕಡಿಮೆ ಹಾಕಿದ್ದು ಹೊಸ ಗೈಡ್ ಲೈನನ್ನು ಹಣ ವಸೂಲಾತಿ ವಿಚಾರದಲ್ಲಿ ನೀಡಿದೆ.

  1. ಸಂಜೆ 7:00 ನಂತರ ಹಾಗೂ ಬೆಳಗ್ಗೆ 8:00 ಒಳಗೆ ಬ್ಯಾಂಕ್ ಸಿಬ್ಬಂದಿಗಳಾಗಿರಲಿ ಅಥವಾ ರಿಕವರಿ ಏಜೆಂಟ್ ಗಳಾಗಲಿ ಗ್ರಾಹಕರಿಗೆ ಕರೆ ಮಾಡಿ ತೊಂದರೆ ಮಾಡುವಂತಿಲ್ಲ.
  2. ಮನೆ ಬಾಗಿಲಿಗೆ ಸಂಜೆ 6 ಗಂಟೆಯ ನಂತರ ಹೋಗಿ ಸಾಲ ವಸೂಲಾತಿ ಮಾಡುವಂತಿಲ್ಲ.
  3. ಮಹಿಳೆಯರ ಮೇಲೆ ಯಾವುದೇ ರೀತಿಯಾದೌರ್ಜನ್ಯ ನಡೆಸುವುದು ಜಬರ್ದಸ್ತಾಗಿ ವಾರ್ನಿಂಗ್ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
  4. ಮೊದಲು ನೋಟಿಫಿಕೇಶನ್ ಅನ್ನು ಬ್ಯಾಂಕ್ ಸಾಲ ಮರುಪಾವತಿ ಮಾಡಿಸಿಕೊಳ್ಳುವುದಕ್ಕೆ ಕಳುಹಿಸಬೇಕು ಅದಕ್ಕೆ ಉತ್ತರ ಬಾರದೆ ಇದ್ದರೆ ಮತ್ತೊಮ್ಮೆ ನೋಟಿಫಿಕೇಶನ್ ಕಳಿಸಬೇಕು ಆಗಲು ಯಾವುದೇ ರೀತಿಯ ಉತ್ತರ ಗ್ರಾಹಕರಿಂದ ಬರದೇ ಇದ್ದರೆ ಆಗ ಅವರಿಂದ ಹಣ ವಸೂಲಾತಿಗಾಗಿ ಕರೆ ಮಾಡಬಹುದಾಗಿದೆ.
    ಹೀಗೆ ಆರ್ಬಿಐ ಬ್ಯಾಂಕ್ ವಸೂಲಾತಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿ ಮಾಡಿದ್ದು ಈ ಬಗ್ಗೆ ಎಲ್ಲ ಗ್ರಾಹಕರು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಸಿಬಿಲ್ ಸ್ಕೋರ್ ಗೆ ಸಂಬಂಧಿಸಿದಂತೆ ಹೊಸ ನಿಯಮ :

ಯಾವುದೇ ರೀತಿಯ ಸಾಲ ಸೌಲಭ್ಯವನ್ನು ನೀವು ಬ್ಯಾಂಕುಗಳಲ್ಲಿ ಪಡೆದುಕೊಳ್ಳುತ್ತಿದ್ದರು ಅದಕ್ಕೆ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯವಾಗಿ ಇರುತ್ತದೆ ಎಂದು ಹೇಳಬಹುದು ಒಂದು ವೇಳೆ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಮಾತ್ರ ಬ್ಯಾಂಕಿನಿಂದ ಸುಲಭವಾಗಿ ಸಾಲವನ್ನು ಪಡೆಯಬಹುದಾಗಿದೆ.

ಇದೀಗ ಆರ್ ಬಿ ಐ ಗ್ರಾಹಕರಿಗೆ ಸಿಬಿಲ್ ಸ್ಕೋರ್ ವಿಚಾರದಲ್ಲಿಯೂ ಕೂಡ ರಿಲೀಫ್ ನೀಡಿದ್ದು ಯಾವುದೇ ರೀತಿಯ ಸಿಬಿಲ್ ಸ್ಕೋರ್ ಪ್ರಕಟಿಸುವ ಕಂಪನಿ ಅಥವಾ ಬ್ಯಾಂಕ್ ಆರು ತಿಂಗಳ ಸಿಬಿಲ್ ಸ್ಕೋರ್ ಪರಿಶೀಲನೆ ಮಾಡಬೇಕೆಂದು ತಿಳಿಸಿದೆ.

ಗ್ರಾಹಕರ ಸಿವಿಲ್ ಸ್ಕೊರಲ್ಲೂ ಏಕಾಏಕಿ ಕಡಿಮೆ ಮಾಡುವಂತಿಲ್ಲ ಹಾಗೂ ಸಾಲ ಮರುಪಾವತಿ ಮಾಡಲು ಒಂದೆರಡು ಬಾರಿ ತಡವಾದರೆ ಅದಕ್ಕಾಗಿ ಸಿಬಿಲ್ ಸ್ಕೋರ್ ಪಾಯಿಂಟ್ಗಳನ್ನು ಕಡಿಮೆ ಮಾಡುವಂತಿಲ್ಲ ಎಂದು ಕೇಂದ್ರ ಬ್ಯಾಂಕ್ ಇತರ ಬ್ಯಾಂಕುಗಳಿಗೆ ಹೊಸ ನಿಯಮ ಜಾರಿ ಮಾಡಿದೆ.

ಒಟ್ಟಾರೆ ಗ್ರಾಹಕರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಕೇಂದ್ರ ಬ್ಯಾಂಕ್ ಸಾಲ ಮರುಪಾವತಿ ಮಾಡುವ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ತಿಳಿಸಿದ್ದು ಈ ಬಗ್ಗೆ ಎಲ್ಲರೂ ಕೂಡ ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ ಈ ನಿಯಮಗಳು ತಿಳಿದುಕೊಳ್ಳುವುದು ಅಗತ್ಯವೆಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *