rtgh

ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ? ಇಲ್ಲಿದೆ ಸಂಪೂರ್ಣ ಮಾಹಿತಿ

How Govt Employees Apply for Old Pension Scheme

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಸರ್ಕಾರಿ ನೌಕರರು ಈ ವಿಧಾನದ ಮೂಲಕ ಸುಲಭವಾಗಿ ಹಳೆಯ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

How Govt Employees Apply for Old Pension Scheme
How Govt Employees Apply for Old Pension Scheme

ಸದ್ಯದೀಗ ರಾಜ್ಯ ಸರ್ಕಾರದಿಂದ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಬಗ್ಗೆ ಹೊಸ ಅಪ್ಡೇಟ್ ಹೊರಬಿದ್ದಿದ್ದು ರಾಜ್ಯ ಸರ್ಕಾರಿ ನೌಕರರಿಗೆ ಈ ಮೂಲಕ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ ಎಂದು ಹೇಳಬಹುದು. 01.04.2006 ಈ ದಿನಾಂಕಕ್ಕಿಂತ ಮೊದಲು ನೇಮಕಗೊಂಡ ಮತ್ತು ಅದಾದ ನಂತರ ಮಂಜೂರಾದ ನೌಕರರನ್ನು ರಾಜ್ಯ ಸರ್ಕಾರ ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ ತರಲು ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

ಹಳೆಯ ಪಿಂಚಣಿ ಯೋಜನೆ :

ರಾಜ್ಯ ಸರ್ಕಾರ ಹಳೇ ಪಿಂಚಣಿ ಯೋಜನೆಯ ಬಗ್ಗೆ ರಾಜ್ಯದಲ್ಲಿ ಮಹತ್ವದ ಆದೇಶವನ್ನು ಹೊರಡಿಸಿದ್ದು, 01.04.2006 ಈ ದಿನಾಂಕ ಕ್ಕಿಂತ ಮೊದಲು ನೇಮಕಗೊಂಡ ಮತ್ತು ನಂತರ ಮಂಜೂರಾದ ಸರ್ಕಾರಿ ನೌಕರರನ್ನು ರಾಜ್ಯ ಸರ್ಕಾರ ಹಳೆಯ ಡಿಸೈನ್ ಪಿಂಚಣಿ ಯೋಜನೆಯ ಅಡಿಯಲ್ಲಿ ತರಲು ಮಹತ್ವದ ಆದೇಶವನ್ನು ಹೊರಡಿಸಿದೆ.

01-04-2006 ಇನ್ನು ಈ ದಿನಾಂಕದ ಪೂರ್ವದಲ್ಲಿನ ನೇಮಕಾತಿ ಆದಿಶೂಷಣೆಗಳ ಪ್ರಕಾರ ಆ ದಿನಾಂಕದಂದು ಆಯ್ಕೆ ಹೊಂದಿ ಮತ್ತು ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ರಾಜ್ಯ ಸರ್ಕಾರ ಹಳೆಯ ಡಿಸೈನ್ ಪಿಂಚಣಿ ಯೋಜನೆಗೆ ಒಳಪಡಿಸಲು ನಿರ್ಧರಿಸಿದೆ.

ಅಲ್ಲದೆ ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರಿ ನೌಕರರಿಂದ ಅಭಿಮತವನ್ನು ಪಡೆದುಕೊಂಡು ಕ್ರಮ ಕೈಗೊಳ್ಳುವ ಸಂಬಂಧ ಕೆಲವು ಶರತ್ತುಗಳನ್ನು ಸರ್ಕಾರ ಉಲ್ಲೇಖಿಸಿದೆ ಎಂದು ಹೇಳಬಹುದು.

ಇದನ್ನು ಓದಿ : ದ್ವಿತೀಯ PUC ಫಲಿತಾಂಶ ಪ್ರಕಟವಾಗಿದೆ : ಮೊಬೈಲ್ ನಲ್ಲಿ ರಿಸಲ್ಟ್ ನೋಡುವ ಲಿಂಕ್ ಇಲ್ಲಿದೆ

ಹಳೆಯ ಪಿಂಚಣಿ ಯೋಜನೆಯ ಶರತ್ತುಗಳು :

ರಾಜ್ಯ ಸರ್ಕಾರ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಕೆಲವೊಂದು ಶರತ್ತುಗಳಿಗೆ ಒಳಗಾಗಿರಬೇಕೆಂದು ತಿಳಿಸಿದೆ ಎಂದು ಆ ಷರತ್ತುಗಳು ಯಾವವು ನೋಡುವುದಾದರೆ,

  1. 01.04.2006 ಈ ದಿನಾಂಕ ಕ್ಕಿಂತ ಮೊದಲು ನೇಮಕಾತಿ ಆದಿಶೂಷಣೆಗಳ ಮೂಲಕ ಆಯ್ಕೆಯಾದ ಮತ್ತು ಆ ದಿನಾಂಕದಂದು ಅಥವಾ ದಾದ ನಂತರ ರಾಜ್ಯ ಸರ್ಕಾರದ ಸೇವೆಗೆ ಸೇರ್ಪಡೆಗೊಂಡಂತಹ ನೌಕರರು ರಾಜ್ಯ ಸರ್ಕಾರದ ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ ಒಳಗೊಳ್ಳಲು ಬಯಸುವವರು ನೇರವಾಗಿ ತಮ್ಮ ಆಸಕ್ತಿಯನ್ನು ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
  2. 30.06.2024 ಈ ದಿನಾಂಕದೊಳಗೆ ನಿಗದಿತ ನಮೂನೆಯನ್ನು ಸರ್ಕಾರಿ ನೌಕರರು ಸಲ್ಲಿಸಬೇಕಾಗುತ್ತದೆ.
  3. ಒಮ್ಮೆ ಮಾತ್ರ ಈ ಆಯ್ಕೆಯನ್ನು ಚಲಾಯಿಸಲು ಅನುಮತಿ ನೀಡಲಾಗಿದೆ.
  4. ಒಂದು ಬಾರಿ ಆಯ್ಕೆಯನ್ನು ಮಾಡಿದ ನಂತರ ಅದನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.
  5. ಮೇಲಿನ ಒಂದರ ಪ್ರಕಾರ ಆಯ್ಕೆಯಾಗಿ ಅರ್ಹರಾಗಿರುವ ಸರ್ಕಾರಿ ನೌಕರರು ತಮ್ಮ ಆಯ್ಕೆಯನ್ನು ನಿಗದಿತ ದಿನಾಂಕದೊಳಗೆ ಚಲಾಯಿಸದೆ ಇದ್ದರೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಸರ್ಕಾರಿ ನೌಕರರು ಮುಂದುವರೆಯುತ್ತಾರೆ.
  6. 01.04.2006 ಈ ದಿನಾಂಕದ ಮೊದಲು ರಾಜ್ಯ ಸಿವಿಲ್ ಸೇವೆಯಲ್ಲಿನ ಖಾಲಿ ಹುದ್ದೆಗಳಿಗೆ ಹೊರಡಿಸಲಾದ ನೇಮಕಾತಿ ಅಧಿಸೂಚನೆಯ ಪ್ರಕಾರ ಕರ್ತವ್ಯಕ್ಕೆ ಆಯ್ಕೆಯಾಗಿ ವರದಿ ಮಾಡಿಕೊಂಡು ತದನಂತರ ಸಮುಚಿತ ಮಾರ್ಗದಲ್ಲಿ ಸರ್ಕಾರದ ಅನ್ಯ ಇಲಾಖೆಯಲ್ಲಿನ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ನೇಮಕಾತಿ ಹೊಂದಿದ ಅರ್ಹ ಸೌಕಾರಿ ನೌಕರರು ಹಿಂದಿನ ಹಳೆಯ ಪಿಂಚಣಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಬಯಸಿದರೆ 30 .06 .2024 ಈ ದಿನಾಂಕದ ಒಳಗಾಗಿ ಮನವಿಯನ್ನು ಹಿಂದಿನ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ.

ಹಳೆ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :

ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಒಂದು ನಿಗದಿತ ಪತ್ರದ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಇವರಿಗೆ,
(ಅಧಿಕಾರಿಗಳ ಅಥವಾ ಉದ್ಯೋಗಿಗಳ ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರ ಇಲಾಖೆ),
ಮಾನ್ಯರೆ,
ವಿಷಯ : 01.04.2006 ಈ ಈ ದಿನಾಂಕ ಕ್ಕಿಂತ ಮೊದಲು ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾದ ದಿನಾಂಕದಂದು ಅಥವಾ ಅದರ ನಂತರ ರಾಜ್ಯದ ಸರ್ಕಾರಿ ಸೇವೆಗೆ ಸೇರಿದಂತಹ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸುವ ಬಗ್ಗೆ.
ಉಲ್ಲೇಖ : ಸರ್ಕಾರಿ ಆದೇಶ ಸಂಖ್ಯೆ : AE-PEN 99/2023 ದಿನಾಂಕ :24.01.2024

_ಇಲಾಖೆಯಲ್ಲಿಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಅಥವಾ ಶ್ರೀಮತಿ ಆದ ನಾನುಪ್ರಥಮವಾಗಿಇಲಾಖೆಯಲ್ಲಿಹುದ್ದೆಗೆ ದಿನಾಂಕರಂದು ಸರ್ಕಾರಿ ಸೇವೆಯಲ್ಲಿ ವರದಿ ಮಾಡಿದ್ದೇನೆ ನೇಮಕಾತಿ ಅಧಿಸೂಚನೆಯನ್ನು ಈ ಹುದ್ದೆಗೆ_ರಂದು ಹೊರಡಿಸಲಾಗುವುದು ಉಲ್ಲೇಖಿತ ಆದೇಶದ ಅನ್ವಯ ಹಿಂದಿನ ಡಿಫೈನ್ ಪಿಂಚಣಿ ವ್ಯಾಪ್ತಿ ಒಳಪಡಲು ನಾನು ಅರ್ಹರು ಇರುವುದರಿಂದ ನನ್ನ ಅಭಿಮತವನ್ನು ಹಳೆಯ ಪಿಂಚಣಿ ಯೋಜನೆ, ಒಳಪಡಿಸಲು ಈ ಮೂಲಕ ತಿಳಿಸುತ್ತಾ ಈ ಕೆಳಕಂಡ ಮಾಹಿತಿ ಅಥವಾ ದಾಖಲೆಗಳನ್ನು ಈ ಪತ್ರದ ಮೂಲಕ ಸಲ್ಲಿಸುತ್ತಿದ್ದೇನೆ.

ಹೀಗೆ ಈ ರೀತಿಯಾಗಿ ಪತ್ರವನ್ನು ಬರೆಯುವುದರ ಮೂಲಕ ಹಳೆ ಪಿಂಚಣಿ ಯೋಜನೆಗೆ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಬಹುದು.

ಅಗತ್ಯ ದಾಖಲೆಗಳು :

ಹಳೆಯ ಪಿಂಚಣಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಸರ್ಕಾರಿ ನೌಕರರು ಕೆಲವೊಂದು ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಅವುಗಳೆಂದರೆ,

  1. ಕೆಜಿಐಡಿ ಸಂಖ್ಯೆ.
  2. ಎನ್‌ಪಿಎಸ್ ಪ್ರಾನ್ ಸಂಖ್ಯೆ.
  3. ಪ್ರಸ್ತುತ ವೇತನ ಚೀಟಿ.
  4. ದಿನಾಂಕ.
  5. ಸಹಿ ಮತ್ತು ಹೆಸರು.

ಹೀಗೆ ಈ ದಾಖಲೆಗಳನ್ನು ನೀಡುವುದರ ಮೂಲಕ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಹಳೆಯ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿ ಹಳೆಯ ಪಿಂಚಣಿ ಯೋಜನೆ ಮೂಲಕ ಸರ್ಕಾರಿ ವೇತನವನ್ನು ಇನ್ನು ಮುಂದೆ ಪಡೆಯಬಹುದಾಗಿದೆ.

ಒಟ್ಟಾರೆ ರಾಜ್ಯ ಸರ್ಕಾರವು ಇದೀಗ ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿ ದಂತೆ ಸರ್ಕಾರಿ ನೌಕರರಿಗೆ ಒಂದು ಮಹತ್ವದ ಆದೇಶವನ್ನು ಹೊರಡಿಸಿದ್ದು ತಕ್ಷಣವೇ ಹಳೆಯ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ ಹಾಗಾಗಿ ಈ ವಿಧಾನದ ಮೂಲಕ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿ ಹಳೆಯ ಪಿಂಚಣಿ ಯೋಜನೆಯ ಮೂಲಕ ಸೌಲಭ್ಯವನ್ನು ಪಡೆಯಬಹುದೆಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *