rtgh

ಏಪ್ರಿಲ್‌ 30 ರಿಂದ ರಾಜ್ಯದಲ್ಲಿ ಮತ್ತೆ ಮಳೆ ಆರಂಭ.! ಈ ಜಿಲ್ಲೆಗಳಿಗೆ ಮಳೆ ಜೊತೆ ಬಿಸಿಗಾಳಿಯ ಎಚ್ಚರಿಗೆ

karnataka weather forcaste

ಹಲೋ ಗೆಳೆಯರೇ, ಏಪ್ರಿಲ್‌ ಅಂತ್ಯ ಬಂದರೂ ರಾಜ್ಯದಲ್ಲಿ ನಿರೀಕ್ಷಿತ ಮಳೆ ಸುರಿಯಲಿಲ್ಲ. ಕೆಲ ದಿನಗಳ ಹಿಂದೆ ಕರ್ನಾಟಕದ ಕೆಲವೆಡೆ ಮಳೆ ಬಂದಿರುವುದು ಆಮೇಲೆ ಮಳೆ ನಾಪತ್ತೆ. ಮುಂದಿನ ತಿಂಗಳು ಪ್ರಾರಂಭದಿಂದಲೇ ರಾಜ್ಯದಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ. ಎಂದು IMD ತಿಳಿಸಿದೆ. ಏಪ್ರಿಲ್‌ 30 ರಿಂದ 4 ದಿನ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ. ಅದಲ್ಲದೇ ಮುಂದಿನ 5 ದಿನಗಳ ಕಾಲ ಉಷ್ಣ ಅಲೆಯ ಮುನ್ಸೂಚನೆಯನ್ನು ಕೂಡ IMD ತಿಳಿಸಿದೆ.

karnataka weather forcaste

ಬೆಂಗಳೂರು : ಕರ್ನಾಟಕದಲ್ಲಿ ಬಿಸಿಲಿನ ಧಗೆ ಹೆಚ್ಚಾಗಿದ್ದು, ಕೆಲವು ದಿನಗಳ ಹಿಂದೆ ರಾಜ್ಯದ ಹಲವೆಡೆ ಮಳೆಯಾಗಿದ್ದು. ಆಮೇಲೆ ಮಳೆ ಕಣ್ಮರೆಯಾಗಿದ್ದಾನೆ. ಮಳೆಯಿಲ್ಲದೇ ತಾಪಮಾನ ಏರಿಕೆಯಾಗಿದ್ದು ಜನರು ಸಂಕಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಮತ್ತೆ ಏಪ್ರಿಲ್‌ 30ರಿಂದ ರಾಜ್ಯದ ಹಲವೆಡೆ ಮಳೆ ಸುರಿಯುವ ಮುನ್ಸೂಚನೆ ಹವಾಮಾನ ಇಲಾಖೆ ತಿಳಿಸಿದೆ.

ಏಪ್ರಿಲ್‌ 30 ರಿಂದ ಮೇ 3 ರವರೆಗೂ ರಾಜ್ಯದ ಹಲವೆಡೆ ಮಳೆ ಬರಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಏಪ್ರಿಲ್‌ 30ರಂದು ಬೀದರ್‌, ಯಾದಗಿರಿ, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು & ಚಿತ್ರದುರ್ಗದ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುತ್ತದೆ.

ಮೇ 1ರಂದು ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ & ತುಮಕೂರು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಮೇ 2ರಂದು ಬೀದರ್‌, ಕಲಬುರಗಿ, ಯಾದಗಿರಿ, ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಮತ್ತಯ ರಾಮನಗರ ಜಿಲ್ಲೆಯ ಒಂದೆರಡು ಕಡೆ ಮಳೆಯ ನಿರೀಕ್ಷೆಯಿದೆ.

ಮೇ 3ರಂದು ಕೊಡಗು, ಮೈಸೂರು, ಚಾಮರಾಜನಗರ & ರಾಮನಗರ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಮತ್ತು ಮಂಡ್ಯ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಲಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ಹಲವು ಜಿಲ್ಲೆಗಳಿಗೆ ಉಷ್ಣ ಅಲೆಯ ಎಚ್ಚರಿಕೆ!

ರಾಜ್ಯದಲ್ಲಿ ಉಷ್ಣ ಅಲೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಏಪ್ರಿಲ್‌ 30 ರವರೆಗೆ ರಾಯಚೂರು, ಯಾದಗಿರಿ, ಕಲಬುರಗಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ಬೀದರ್‌, ವಿಜಯನಗರ, ಗದಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮೈಸೂರು, ಹಾವೇರಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಿನ ಬಿಸಿಲು ಇರುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆಯನ್ನು ನೀಡಿದೆ. ಅದಲ್ಲದೇ ಮುಂದಿನ 5 ದಿನಗಳಲ್ಲಿ ರಾಜ್ಯದ ಗರಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗುವ ನಿರೀಕ್ಷೆಗಳಿದೆ.

ಮೇ ಆರಂಭದಲ್ಲಿ ಬೆಂಗಳೂರಲ್ಲಿ ಮಳೆ?

IMD ಮುನ್ಸೂಚನೆ ಪ್ರಕಾರ ಮೇ ಆರಂಭದಲ್ಲಿ ಬೆಂಗಳೂರಿನ ಹಲವೆಡೆ ಮಳೆಯಾಗಲಿದೆ. ಯುರೋಪಿಯನ್‌ ಸೆಂಟರ್‌ ಫಾರ್‌ ಮೀಡಿಯಂ ರೇಂಜ್‌ ವೇದರ್‌ ಫಾರ್‌ಕ್ಯಾಸ್ಟ್‌ (ECMWF), ಅಕ್ಸೆಸ್‌, GFS & CFSನ ಹವಾಮಾನ ವರದಿಗಳು ಮೇ 1 ರಿಂದ ಬೆಂಗಳೂರು & ಸುತ್ತಮುತ್ತಲಿನ ಪ್ರದೇಶದ ವಾತಾವಾರಣದಲ್ಲಿ ಒಮ್ಮುಖ ಅಭಿವೃದ್ಧಿಯನ್ನು ಸೂಚಿಸುತ್ತವೆ. ECMWF ಪ್ರಕಾರ ಮೇ 3ರಂದು ಬೆಂಗಳೂರಿನಲ್ಲಿ ಮಳೆ ಸುರಿಯಲಿದೆ, GFS ಪ್ರಕಾರ ಮೇ 1 ರಿಂದ ಬೆಂಗಳೂರಿನಲ್ಲಿ ಮಳೆ ಶುರುವಾಗಿ ಮುಂದಿನ 6 ದಿನ ಮಳೆ ಬರಲಿದೆ ಎಂದು ಹೇಳಲಾಗಿದೆ. ಇನ್ನು, GFS ವರದಿ ಪ್ರಕಾರ ಮೇ 3 ರಂದು ರಾಜಧಾನಿಯಲ್ಲಿ ಮಳೆಯಾಗಲಿದೆ.

ಇತರೆ ವಿಷಯಗಳು

ಮನೆ ಕಟ್ಟುವವರಿಗೆ ಭರ್ಜರಿ ಕೊಡುಗೆ.!! ಈ ದಾಖಲೆ ಇದ್ದವರಿಗೆ ಸಿಗಲಿದೆ 30 ಲಕ್ಷ ರೂ

ಸಬ್ಸಿಡಿ ಭಾಗ್ಯ.!! ಸರ್ಕಾರದಿಂದ ಬಿಡುಗಡೆಯ್ತು ಹೊಸ ಲಿಸ್ಟ್;‌ ಇಂದೇ ಚೆಕ್‌ ಮಾಡಿ

Spread the love

Leave a Reply

Your email address will not be published. Required fields are marked *