rtgh

ಗೃಹಲಕ್ಷ್ಮಿಯರ ಖಾತೆಗೆ ಈ ತಿಂಗಳು ಜಮೆಯಾಗಿದೆ 4,000 ರೂ.! ನಿಮಗೆ ಬಂದಿಲ್ವಾ ಹಾಗಿದ್ರೆ ಈ ಕೆಲಸ ಮಾಡಿ

gruhalakshmi scheme karnataka

ಹಲೋ ಗೆಳೆಯರೇ, ಗೃಹಲಕ್ಷ್ಮಿ ಯೋಜನೆ ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ನೀಡುತ್ತಿರುವ ಸಹಾಯಧನ ಯೋಜನೆಯಾಗಿದೆ. ಲಕ್ಷಾಂತರ ಮಹಿಳೆಯರು ಈ ಸಹಾಯಧನದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇದು ಚುನಾವಣಾ ಸಮಯವಾದ್ದರಿಂದ ಈ ಯೋಜನೆಯಡಿಯಲ್ಲಿ 4000 ರೂ. ಗಳನ್ನು ನೀಡಲಾಗಿದೆ. ಯಾರಿಗೆಲ್ಲಾ ಬಂದಿಲ್ಲ ಬರದಿರುವವರು ಏನು ಮಾಡಬೇಕು ಎಂಬು ಲೇಖನದಲ್ಲಿ ತಿಳಿಯಿರಿ.

gruhalakshmi scheme karnataka

ಪ್ರತೀ ತಿಂಗಳು ಮನೆಯ ಹಿರಿಯ ಮಹಿಳೆಯ ಖಾತೆಗೆ 2,000 ರೂ. ಹಣ ಬರುತ್ತಿದ್ದು ಈಗ ಚುನಾವಣೆಯ ಹೊಸ್ತಿಲಲ್ಲಿ 4,000 ರೂ. ಬಂದಿದೆ.

4,000 ಹಣ ಜಮಾ ಆಗಿದ್ದು ಏಕೆ?

ಗೃಹಲಕ್ಷ್ಮಿ ಯೋಜನೆಯು ಆರಂಭವಾದಾಗಿನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು ಮೊದಲು ಮತ್ತು 2ನೇ ವಾರದಲ್ಲಿ ಯೋಜನೆಯ ಅರ್ಧದಷ್ಟು ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿದ್ದು. ಅದರಂತೆಯೇ ಈಗ ಏಪ್ರಿಲ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಮೊದಲ ವಾರದಲ್ಲಿ ಜಮೆಯಾಗಿದೆ.

ಅದರ ಜೊತೆಗೆ ಏಪ್ರಿಲ್ 20 ರ ನಂತರ ಮತ್ತೊಮ್ಮೆ 2,000 ರೂ. ಕೆಲವು ಮಹಿಳೆಯರ ಖಾತೆಗೆ ಜಮಾಯಾಗಿದೆ. ಅಲ್ಲಿಗೆ ಒಂದೇ ತಿಂಗಳಲ್ಲಿ 4,000 ಹಣ ಒಬ್ಬ ಫಲಾನುಭವಿಯ ಖಾತೆಗೆ ಜಮೆಯಾಗಿದೆ. ಏಪ್ರಿಲ್ 26 ಮತ್ತು ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯ ಸಲುವಾಗಿ ಮುಂದಿನ ತಿಂಗಳ ಗೃಹಲಕ್ಷ್ಮಿ ಖಾತೆಯ ಹಣ ಯಾವಾಗ ಜಮಾ ಆಗುವುದು ಎಂಬ ಮಾಹಿತಿಯನ್ನು ಸಚಿವರು ನೀಡಿಲ್ಲಾ. ಆದರೆ ಈಗ ಯಾವುದೇ ಮಾಹಿತಿ ಇಲ್ಲದೆ ಹಣ ಜಮಾಯಾಗಿದ್ದು ಎಲೆಕ್ಷನ್ ಗಿಮಿಕ್ ಎಂಬ ಮಾತು ಕೇಳಿ ಬಂದಿದೆ. ಆದರೆ ಇಲಾಖೆಯು ಈ ಆರೋಪವನ್ನು ತಳ್ಳಿಹಾಕಿದೆ.

5 ದಿನ ಮೊದಲು ಖಾತೆಗೆ ಹಣ ಜಮೆಯಾಗಿದೆ:- ಮೇ 1 ನೇ ತಾರೀಖಿಗೆ ಇನ್ನು 5 ದಿನ ಬಾಕಿಯಿದೆ. ಆದರೆ ಸಮಯಕ್ಕೂ ಮೊದಲೇ ಹಣ ಜಮಾ ಆಗಿದೆ. ಮಹಿಳೆಯರಿಗೆ ಏಪ್ರಿಲ್ ತಿಂಗಳು ಡಬಲ್ ಖುಷಿ ಸಿಕ್ಕಿದೆ. 

ಗೃಹಲಕ್ಷ್ಮಿ ಖಾತೆಯ ಹಣ ಇನ್ನು ಬಾರದೆ ಇದ್ದರೆ ಹೀಗೆ ಮಾಡಿ:-

ಆಧಾರ್ ಸಿಡಿಂಗ್:- ಗೃಹಲಕ್ಷ್ಮಿ ಖಾತೆಗೆ ಅರ್ಜಿ ಸಲ್ಲಿಸಿದ ಸಾಕಷ್ಟು ಮಹಿಳೆಯರಿಗೆ ಇನ್ನು ಕೂಡ ಒಂದು ಕಂತಿನ ಹಣವೂ ಬಂದಿಲ್ಲಾ. ಅಂತಹ ಮಹಿಳೆಯರು ಬ್ಯಾಂಕ್ ಗೆ ತೆರಳಿ ಆಧಾರ್ ಸೀಡಿಂಗ್ ಮಾಡಿಸಬೇಕು. ಬ್ಯಾಂಕ್ ಗೆ ತೆರಳಿ ಆಧಾರ್ ಸೀಡಿಂಗ್ ಮಾಡಿಸಿದ ಮೇಲೆ ನಿಮಗೆ ಗೃಹಲಕ್ಷ್ಮಿ ಹಣವೂ ಜಮೆಯಾಗುತ್ತದೆ.

ಇ ಕೆ ವೈ ಸಿ:- ನಿಮ್ಮ ಬ್ಯಾಂಕ್ ಅಕೌಂಟ್ ಗೆ Ekyc ಮಾಡಿಸದೆ ಇದ್ದರೂ ಸಹ ಯೋಜನೆಯ ಹಣ ಬರುವುದಿಲ್ಲ. ಅದಕ್ಕಾಗಿ ಈಗಲೇ ನೀವು ಬ್ಯಾಂಕ್ ಗೆ ಹೋಗಿ ಅಗತ್ಯ ದಾಖಲೆಗಳನ್ನು ನೀಡಿ Ekyc ಮಾಡಿಸಿಕೊಳ್ಳಿ.

ಮೇಲಿನ 2 ಹಂತಗಳನ್ನು ಅನುಸರಿಸಿ ನಂತರ ನಿಮ್ಮ ನ್ಯಾಯಬೆಲೆ ಅಂಗಡಿಗೆ Ekyc ಅಪ್ಡೇಟ್ ಮಾಡಿಸಬೇಕು ನಂತರ Ekyc ದೃಢೀಕರಣವನ್ನು ಆಶಾ ಕಾರ್ಯಕರ್ತೆಯರ ಬಳಿ ನೀಡಿದರೆ ನಿಮಗೆ ಸಹಾಯಧನ ಸಿಗುತ್ತದೆ. ಆಶಾ ಕಾರ್ಯಕರ್ತರಿಗೆ ಸಹಾಯ ಧನ ನೀಡುವಂತೆ ಇಲಾಖೆಯು ಅಧಿಸೂಚನೆ ಹೊರಡಿಸಿದೆ.

ಇತರೆ ವಿಷಯಗಳು

ಕೃಷಿ ಭೂಮಿ ಹೊಂದಿರುವವರೇ ಹುಷಾರ್.!!‌ ಸರ್ಕಾರದಿಂದ ಬಂತು ಖಡಕ್‌ ವಾರ್ನಿಂಗ್

ಉಚಿತ ಚಿಕಿತ್ಸೆ ಪಡಿಬೇಕಾ ಈ ಕಾರ್ಡ್‌ ಮಾಡಿಸಿಕೊಳ್ಳಿ.! ಯಾವುದೇ ಆಸ್ಪತ್ರೆಗೆ ಹೋದ್ರು ಈ ಸೌಲಭ್ಯ ಲಭ್ಯ

Spread the love

Leave a Reply

Your email address will not be published. Required fields are marked *