ಹಲೋ ಸ್ನೇಹಿತರೇ, ನಾವಂತೂ ದುಬಾರಿ ದುನಿಯಾದಲ್ಲೇ ಬದುಕುತ್ತಿದ್ದೇವೆ. ದಿನದಿನಕ್ಕೂ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇರುತ್ತದೆ. ನಾವು ದುಡಿಯುವ ಹಣಕ್ಕಿಂತ ಮೂರು ಪಟ್ಟು ಹೆಚ್ಚು ಖರ್ಚಿರುತ್ತದೆ. ದಿನ ಜೀವನ ನಡೆಸಿಕೊಂಡು ಹೋಗುವುದೇ ಕಷ್ಟ, ಅಂತದ್ರಲ್ಲಿ ಮನೆ ಕಟ್ಟುವ ಕನಸು ನನಸಾಗಿಸಿಕೊಳ್ಳಲು ಸಾಧ್ಯವೇ ಅನ್ನೋದೇ ಹಲವರ ಚಿಂತೆ.
ಸ್ವಂತ ಜಮೀನು ಅಥವಾ ಸೈಟ್ ಇದ್ರೆ ಹೇಗಾದ್ರು ಮನೆ ಕಟ್ಬಹುದು. ಆದರೆ ಇದಕ್ಕೆ ಸರ್ಕಾರದ ಪರವಾನಿಗೆ ಬೇಕು. ಒಂದು ಮನೆ ನಿರ್ಮಾಣಕ್ಕೆ ಬೇರೆ ಬೇರೆ ಪರ್ಮಿಶನ್ ಪಡೆದುಕೊಳ್ಳುವ ಅಗತ್ಯ ಇದೆ. ಇದೀಗ ಸರ್ಕಾರ ಈ ನಿಯಮಗಳಲ್ಲಿ ಭಾರಿ ಬದಲಾವಣೆ ತಂದಿದ್ದು, ಇದರಿಂದ ಸಾಕಷ್ಟು ಜನರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗಲಿದೆ.
ನಿಮ್ಮ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಇನ್ಮುಂದೆ ಬೇಡ ಸರ್ಕಾರದ ಪರ್ಮಿಷನ್!
ಈ ಹಿಂದೆ ಸ್ವಂತ ಕೃಷಿ ಭೂಮಿಯಲ್ಲಿಯೂ ಕೂಡ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸರ್ಕಾರದ ಪರವಾನಿಗೆ ಅಗತ್ಯ ಇರಲಿಲ್ಲ ಆದರೆ ಕೃಷಿ ಭೂಮಿ ನಶಿಸುತ್ತಾ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ವಿಶೇಷವಾದ ಪರ್ಮಿಷನ್ ತೆಗೆದುಕೊಳ್ಳಬೇಕು ಎಂದು ನಿಯಮವನ್ನು ಹೊರಡಿಸಿತ್ತು.
ಆದರೆ ಈ ನಿಯಮದಲ್ಲಿ ಈಗ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಯಾವುದೇ ವಾಣಿಜ್ಯ ಸೈಟ್ ನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸರ್ಕಾರದ ಪರ್ಮಿಷನ್ ಪಡೆದುಕೊಳ್ಳುವ ಅಗತ್ಯ ಇಲ್ಲ, ಆದರೆ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಅಥವಾ ವಾಣಿಜ್ಯ ಚಟುವಟಿಕೆ ಆರಂಭಿಸುವುದಾದರೆ ಅದಕ್ಕೆ ಸರ್ಕಾರದ ಪರ್ಮಿಷನ್ ಬೇಕು.
ವಿದ್ಯಾರ್ಥಿಗಳಿಗೆ ವರ್ಷಕ್ಕೆ 1 ಲಕ್ಷ ಉಚಿತ.! ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು 1 ವಾರ ಮಾತ್ರ ಬಾಕಿ
ಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿಯನ್ನು ಬದಲಾಯಿಸಿ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುವವರ ಸಂಖ್ಯೆ ಜಾಸ್ತಿ ಆತ್ತಲೇ ಇದೆ. ಹೀಗಾಗಿ ಫಲವತ್ತಾದ ಭೂಮಿ ನಾಶವಾಗುತ್ತಿದೆ. ಇನ್ನು ಮುಂದೆ ಕೃಷಿಕರು ಈ ರೀತಿಯಾಗಿ ತಮ್ಮ ಕೃಷಿ ಭೂಮಿಯನ್ನು ಬೇರೆ ಕಾರಣಕ್ಕೆ ಬಳಸಿಕೊಂಡ್ರೆ ಕೃಷಿ ಚಟುವಟಿಕೆ ನಡೆಯಲು ಸಾಧ್ಯವೇ ಇಲ್ಲ. ಈಗ ಹಿನ್ನೆಲೆಯಲ್ಲಿ ಸರ್ಕಾರ ಈ ಕಟ್ಟುನಿಟ್ಟಿನ ನಿರ್ಧಾರವನ್ನು ಕೈಗೊಂಡಿದೆ.
ಇನ್ನೂ ಒಂದು ವೇಳೆ ಕೃಷಿ ಭೂಮಿಯನ್ನು ಹೊಂದಿರುವ ರೈತರು ಉಳಿದುಕೊಳ್ಳಲು ಮನೆ ಇಲ್ಲದೆ ಇದ್ದರೆ ಆಗ ಕೃಷಿ ಭೂಮಿಯ ಸ್ವಲ್ಪ ಭಾಗದಲ್ಲಿ ಮಾತ್ರ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ಹೀಗೆ ಮಾಡುವುದಕ್ಕೂ ಕೂಡ ಕೃಷಿ ಲ್ಯಾಂಡ್ ಅನ್ನು ನಾನ್ ಅಗ್ರಿಕಲ್ಚರ್ ಲ್ಯಾಂಡ್ ಎಂದು ಬದಲಾಯಿಸಿಕೊಳ್ಳಬೇಕು. ಈ ರೀತಿಯಾಗಿ ಬದಲಾಯಿಸಿಕೊಂಡು ಪರ್ಮಿಷನ್ ತೆಗೆದುಕೊಂಡ ನಂತರ ಮನೆಯ ನಿರ್ಮಾಣ ಮಾಡಿಕೊಳ್ಳಬಹುದು.
ಪುರಸಭೆ ಅಥವಾ ಗ್ರಾಮ ಪಂಚಾಯತ್ನಿಂದ ಎನ್ ಓ ಸಿ (NOC) ಪಡೆದ ನಂತರವಷ್ಟೇ ಅಗ್ರಿಕಲ್ಚರ್ ಲ್ಯಾಂಡ್ ನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯ. ಹೀಗಾಗಿ ನಿಮ್ಮದೇ ಸ್ವಂತ ಜಮೀನು ಎಂದಾದರೂ ಅದು ಕೃಷಿ ಚಟುವಟಿಕೆಗೆ ಯೋಗ್ಯವಾದ ಜಮೀನಾಗಿದ್ದರೆ ಅದರಲ್ಲಿ ಯಾವುದೇ ಕಮರ್ಷಿಯಲ್ ಚಟುವಟಿಕೆ ಮಾಡುವಂತಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.
ಇತರೆ ವಿಷಯಗಳು:
ಹೊಸ ಬಿಪಿಎಲ್ ಕಾರ್ಡ್ ಪಡೆಯುವ ಸುಲಭ ಮಾರ್ಗ.! ಇಲ್ಲಿಂದಲೇ ಫಾರ್ಮ್ ಭರ್ತಿ ಮಾಡಲು ಲಿಂಕ್
PM ಕಿಸಾನ್ 17 ನೇ ಕಂತಿಗೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್! ಇಲ್ಲಿದೆ ಸಂಪೂರ್ಣ ಮಾಹಿತಿ