ನಮಸ್ಕಾರ ಸ್ನೇಹಿತರೆ ಮೊದಲ ಹಂತದ ಮತದಾನ ಏಪ್ರಿಲ್ 26 ಹಾಗೂ ಎರಡನೇ ಹಂತದ ಮತದಾನ ಮೇ 7 ರಂದು ಕರ್ನಾಟಕದಲ್ಲಿ ನಡೆಯುತ್ತದೆ. ಮತದಾನದ ದಿನದಂದು ರಾಜ್ಯದಲ್ಲಿ ಇರುವಂತಹ ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳು ಶಾಲಾ- ಕಾಲೇಜುಗಳು ವ್ಯವಹಾರಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಕೆಲಸ ಮಾಡುತ್ತಿರುವವರು ಹಾಗೂ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವವರಿಗೆ ವೇತನ ಸಹಿತ ರಜೆಯನ್ನು ಘೋಷಣೆ ಮಾಡಿ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದಾರೆ.
ಮತದಾನದ ದಿನ ರಜೆ :
ಕರ್ನಾಟಕದಲ್ಲಿ ಮೊದಲ ಹಂತ ಹಾಗೂ ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು ಆ ದಿನದಂದು ಎಲ್ಲಾ ಸರ್ಕಾರಿ ಕಚೇರಿಗಳಿಗೆ ಶಾಲಾ ಕಾಲೇಜುಗಳಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸೇರಿ 26.04.2024 ಮತ್ತು 07-05-2024 ಈ ದಿನಾಂಕದಂದು ನಡೆಯುವಂತಹ ಚುನಾವಣೆಗೆ ಸರ್ಕಾರ ಸಾರ್ವಜನಿಕ ರಜೆಯನ್ನು ಘೋಷಣೆ ಮಾಡಿದೆ. ಸಾರ್ವಜನಿಕ ರಜೆಯನ್ನು ಆಯ ಚುನಾವಣಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಘೋಷಣೆ ಮಾಡಲಾಗಿದೆ.
ಇದನ್ನು ಓದಿ : ಐಫೋನ್ ಅರ್ಧ ಬೆಲೆಗೆ ಖರೀದಿ ಮಾಡಿ : ಇಲ್ಲಿದೆ ಆಫರ್ ಲಿಂಕ್ ಹಾಗು ಪಟ್ಟಿ ನೋಡಿ !
ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ :
ಸರ್ಕಾರದಿಂದ ಮತದಾನದ ದಿನದಂದು ಘೋಷಣೆ ಮಾಡಿರುವ ಈ ಸಾರ್ವತ್ರಿಕ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ ಆದರೂ ಕೂಡ ತುರ್ತು ಸೇವೆಯ ಅಡಿಯಲ್ಲಿ ಕೆಲಸ ಮಾಡುವಂತಹ ನೌಕರಿಗೆ ಮತ ಚಲಾವಣೆ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕೆಂದು ಹೊರಡಿಸಿರುವ ಪ್ರಕಟಣೆಯ ಆದೇಶದಲ್ಲಿ ತಿಳಿಸಲಾಗಿದೆ.
ಮತ ಚಲಾಯಿಸಲು ಸದರಿ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇರುವಂತಹ ಮತದಾರರಿಗೆ ಅನುಕೂಲವಾಗುವಂತೆ ಚುನಾವಣಾ ಆಯೋಗವು ಆಯಾ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವಂತಹ ಸರ್ಕಾರಿ ಕಚೇರಿಗಳಿಗೆ ಶಾಲಾ ಕಾಲೇಜುಗಳಿಗೆ ಲೋಕಸಭಾ ಕ್ಷೇತ್ರಗಳ ಅರ್ಹ ಮತದಾರರಾಗಿರುವಂತಹ ಔದ್ಯೋಗಿಕ ಸಂಸ್ಥೆಗಳು ಎಲ್ಲ ವ್ಯವಹಾರಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಕೆಲಸ ನಿರ್ವಹಿಸುತ್ತಿರುವ ಅಂತಹ ನೌಕರರಿಗೆ ಮತದಾನಕ್ಕೆ ಅನುಕೂಲವಾಗುವಂತೆ ರಜೆ ನೀಡಲಾಗುತ್ತದೆ.
ಒಟ್ಟಾರೆ ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣದಿಂದಾಗಿ ರಾಜ್ಯಾದ್ಯಂತ ಮತದಾನದ ದಿನದಂದು ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲು ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದಾರೆ. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಮತದಾನದ ದಿನದಂದು ಮತದಾನ ಚಲಾಯಿಸಲು ಅನುಕೂಲ ವಾಗುವಂತೆ ರಾಜ್ಯದ್ಯಂತ ರಜೆ ನೀಡಲಾಗುತ್ತದೆ ಎಂದು ತಿಳಿಸಿ ಧನ್ಯವಾದಗಳು.