rtgh

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

pradhan-mantri-vishwakarma-yojana-complete-information

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ. ಈ ಲೇಖನದಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ ಲೇಖನವನ್ನು ಕೊನೆವರೆಗೂ ಓದಿದರೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ದೊರೆಯುವ ಸೌಲಭ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

pradhan-mantri-vishwakarma-yojana-complete-information
pradhan-mantri-vishwakarma-yojana-complete-information

Contents

ಕೇಂದ್ರ ಸರ್ಕಾರದ ಯೋಜನೆ :

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಈ ಯೋಜನೆಯ ಮೂಲಕ ಕುಶಲಕರ್ಮಿಗಳಿಗೆ ಸರ್ಕಾರದಿಂದ ಮೂರು ಲಕ್ಷ ಸಾಲವನ್ನು ನೀಡಲಾಗುತ್ತದೆ . ಈ ಯೋಜನೆಯಲ್ಲಿ 16 ಬಗೆಯ ಕುಶಲಕರ್ಮಿಗಳನ್ನು ಗುರುತಿಸುವ ಮೂಲಕ ಅವರಿಗೆ ಬೇಕಾಗುವ ತರಬೇತಿಯ ಜೊತೆಗೆ ವಿವಿಧ ಉಪಕರಣಗಳನ್ನು ಪಡೆಯಲು ಸರ್ಕಾರದಿಂದ 15000 ಹಣವನ್ನು ನೀಡಲಾಗುತ್ತದೆ.

ಯೋಜನೆ ಸಂಪೂರ್ಣ ಹೆಸರುಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ
ಯೋಜನೆಯ ಒಟ್ಟು ಬಜೆಟ್ 13,OOO ದಿಂದ 15000 ಕೋಟಿ
ಯೋಜನೆ ಪ್ರಾರಂಭಿಸಿದ ಸರ್ಕಾರ ಕೇಂದ್ರ ಸರ್ಕಾರ [ನರೇಂದ್ರ ಮೋದಿ ಸರ್ಕಾರ ]

ವಿಶ್ವಕರ್ಮ ಯೋಜನೆಯ ಉದ್ದೇಶ :

  1. ಯಾವುದೇ ಕೆಲಸ ಮಾಡುವಂತಹ ಕುಶಲಕರ್ಮಿಗಳು ಆರ್ಥಿಕವಾಗಿ ಸಹಾಯಧನವನ್ನು ನೀಡುವುದು ಪ್ರಮುಖ ಉದ್ದೇಶವಾಗಿದೆ.
  2. ಕುಶಲಕರ್ಮಿಗಳಿಗೆ ಬೇಕಾಗುವ ಅಗತ್ಯ ತರಬೇತಿಯ ಜೊತೆಗೆ ಹಣಕಾಸಿನ ನೆರವು ನೀಡುವುದು.
  3. ತಾವು ತಯಾರಿಸಿದ ಉಪಕರಣಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
  4. ಯಾವುದೇ ಗ್ಯಾರೆಂಟಿ ಇಲ್ಲದೆ ಕುಶಲಕರ್ಮಿಗಳಿಗೆ 3ಲಕ್ಷದವರೆಗೂ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುವುದು.
  5. ಅಗತ್ಯ ಉಪಕರಣಗಳನ್ನು ಖರೀದಿಸಲು ಕುಶಲಕರ್ಮಿಗಳಿಗೆ 15,000 ಹಣವನ್ನು ನೀಡಲಾಗುವುದು.

ಯೋಜನೆಯ ಅರ್ಹತಾ ಮಾನದಂಡಗಳು :

ನೀವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕಾಗುತ್ತದೆ.

  • ಮೊದಲನೇ ಅರ್ಹತೆ ನೀವು ಈ ಯೋಜನೆಯಲ್ಲಿ 18 ರೀತಿಯ ಕರಕುಶಲಕರ್ಮಿಗಳಿಗೆ ಮಾತ್ರ ಅವಕಾಶವಿದ್ದು ಇದರಲ್ಲಿ ಒಂದು ಉದ್ಯೋಗದಲ್ಲಿ ನೀವು ತೊಡಗಿಕೊಂಡಿರಬೇಕು.
  • ನಿಮಗೆ 18 ವರ್ಷಕ್ಕಿಂತ ಮೇಲ್ಪಟ್ಟವರು ಆಗಿರಬೇಕು ಹಾಗೂ ನಿಮ್ಮ ಕುಟುಂಬದಲ್ಲಿ ಯಾರೂ ಸಹ ಸರ್ಕಾರಿ ಉದ್ಯೋಗದಲ್ಲಿ ಉದ್ಯೋಗವನ್ನು ಮಾಡುತ್ತಿರಬಾರದು.
  • ನಿಮ್ಮ ಕುಟುಂಬದಲ್ಲಿ ಈ ಯೋಜನೆಯ ಪ್ರಯೋಜನ ಕೇವಲ ಒಬ್ಬರಿಗೆ ಮಾತ್ರ ದೊರೆಯುತ್ತದೆ.

ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವ ಮಾಹಿತಿ :

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯೋಮೆಟ್ರಿಕ್ ಆಧಾರಿತವಾಗಿರುವುದರಿಂದ ನೀವು ನಿಮ್ಮ ಹತ್ತಿರದ ಗ್ರಾಮವನಿಗೆ ಭೇಟಿ ನೀಡಿ.
  • ನಿಮ್ಮ ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕ ನಿಮ್ಮ ಪಾನ್ ಕಾರ್ಡ್ ಅನ್ನು ಅರ್ಜಿಯೊಂದಿಗೆ ಲಗತಿಸಬೇಕು.
  • ನಂತರ ನಿಮಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಒಂದು ಪ್ರತಿಯನ್ನು ನೀಡುತ್ತಾರೆ. ಇದನ್ನು ನೀವು ಜೋಪಾನವಾಗಿ ಇಟ್ಟುಕೊಂಡಿರಬೇಕು.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :

  • ನಿಮ್ಮ ಆಧಾರ ಕಾರ್ಡ್ ಪ್ರತಿ
  • ಬ್ಯಾಂಕ್ ಪಾಸ್ ಪುಸ್ತಕ
  • ನಿಮ್ಮ ಪಾನ್ ಕಾರ್ಡ್ ಪ್ರತಿ
  • ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನೋಂದಣಿ ಆದ ಮೊಬೈಲ್ ಸಂಖ್ಯೆ

ಅರ್ಜಿ ಸಲ್ಲಿಸಿದ ನಂತರ ನಿಮಗೆ ಐದು ದಿನಗಳವರೆಗೆ ತರಬೇತಿಯನ್ನು ನೀಡಲಾಗುವುದು .ನಿಮಗೆ ಊಟ ವಸತಿಯೊಂದಿಗೆ ಪ್ರತಿದಿನ 500 ರೂಪಾಯಿಗಳಂತೆ ಹಣವನ್ನು ತರಬೇತಿ ಸಮಯದಲ್ಲಿ ನೀಡಲಾಗುವುದು ಹಾಗೂ ತರಬೇತಿಯ ನಂತರ ನಿಮಗೆ ಸಿಗುವ ಪ್ರಮುಖ ಲಾಭವೆಂದರೆ 15000 ಉಪಕರಣಗಳ ಖರೀದಿಗೆಂದು ಹಣವನ್ನು ಸಹ ನೀಡಲಾಗುತ್ತದೆ.

ವಿಶ್ವಕರ್ಮ ಯೋಜನೆ ಸಾಲ ಪಡೆಯುವುದು ಹೇಗೆ:

ವಿಶ್ವಕರ್ಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ನಂತರ ನಿಮಗೆ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿ ನೀಡಿದ ನಂತರ ನಿಮಗೆ ಮೊದಲ ಬಾರಿಗೆ ಒಂದು ಲಕ್ಷ ಹಣವನ್ನು ನೀಡಲಾಗುತ್ತದೆ. ಅದನ್ನು ನೀವು 18 ತಿಂಗಳ ಒಳಗಾಗಿ ಮರುಪಾವತಿಸಬೇಕು. ನಂತರ ಸಿಗಲಿದೆ 3 ಲಕ್ಷ ರೂಪಾಯಿಗಳು ಇದರಿಂದ ನೀವು ನಿಮ್ಮ ಕರಕುಶಲ ವಸ್ತುಗಳ ತಯಾರಿ ಮಾಡಿಕೊಳ್ಳಲು ನೆರವಾಗುತ್ತದೆ .ನಂತರ ಈ ಹಣವನ್ನು 30 ತಿಂಗಳ ಒಳಗಾಗಿ ನೀವು ಹಣವನ್ನು ಪಾವತಿಸಬೇಕು.

ಈ ಮೇಲ್ಕಂಡ ಮಾಹಿತಿ ಭಾರತ ದೇಶದ ಪ್ರತಿಯೊಬ್ಬ ಕರಕುಶಲ ತಯಾರಿ ಮಾಡುವ ವ್ಯಕ್ತಿಗಳಿಗೆ ಹೆಚ್ಚು ಅನುಕೂಲವಾಗಲಿದ್ದು. ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ .

Spread the love

Leave a Reply

Your email address will not be published. Required fields are marked *