ನಮಸ್ಕಾರ ಸ್ನೇಹಿತರೆ ಫೋನ್ ಪೇ ಹಾಗೂ ಗೂಗಲ್ ಪೇ ಬಳಸುವವರ ಸಂಖ್ಯೆ ಹೆಚ್ಚಾಗಿದೆ ಹಣವನ್ನು ಕಳಿಸುವ ಸಮಯದಲ್ಲಿ ಪಾವತಿ ತಪ್ಪಾಗಿದ್ದರೆ ಅಥವಾ ಹಣವನ್ನು ಬೇರೆ ವ್ಯಕ್ತಿಗೆ ಪಾವತಿ ಮಾಡಿದ್ದರೆ ಚಿಂತಿಸಬೇಡಿ .ನೀವು ಕಳಿಸಿದ ಹಣವನ್ನು ವಾಪಸ್ ಪಡೆಯಬಹುದು ನಿಮ್ಮ ಹಣವನ್ನು ಹೇಗೆ ವಾಪಸ್ ಪಡೆಯಬೇಕು ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಲಾಗುವುದು ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಓದಿ.
ಹಣ ಹಿಂಪಡೆಯುವ ಪಡೆಯುವ ಮಾಹಿತಿ :
ನೀವು ಹಣವನ್ನು ಬೇರೆ ವ್ಯಕ್ತಿಗೆ ಕಳುಹಿಸಿದ್ದರೆ ಹೇಗೆ ಪಡೆಯಬಹುದೆಂದರೆ ಭಾರತದಲ್ಲಿ ಈಗಾಗಲೇ ಆನ್ಲೈನ್ ಮುಖಾಂತರ ಪಾವತಿಗಳು ಹೆಚ್ಚಾಗುತ್ತಿವೆ .ಈ ಬೆಳವಣಿಗೆಯ ಹಿಂದೆ ಯುಪಿಐ ಪಾತ್ರ ತುಂಬಾ ಮುಖ್ಯವಾಗಿದೆ ಬಹುಪಾಲು ಆನ್ಲೈನ್ ಮುಖಾಂತರ ಹಣವನ್ನು ಸಂದಾಯ ಮಾಡುತ್ತಿದ್ದಾರೆ.
ಎಲ್ಲ ಜನರು ಯುಪಿಐ ನ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಬಳಕೆ ಮಾಡುತ್ತಿದ್ದರು ಅತಿ ವೇಗದಲ್ಲಿ ಬಳಕೆಯಾಗುತ್ತಿರುವ ಯುಪಿಐ ಮೂಲಕ ಹಣ ಸಂದಾಯ ಮಾಡುವಾಗ ಬೇರೆಯವರಿಗೆ ತಪ್ಪಾಗಿ ಹಣ ಕಳಿಸುತ್ತಿದ್ದಾರೆ ಈ ಸಣ್ಣ ತಪ್ಪಿನಿಂದ ನಿಮ್ಮ ಹಣ ಬೇರೆಯವರಿಗೆ ತಲುಪುತ್ತಿದೆ. ಇಂತಹ ಸಂದರ್ಭದಲ್ಲಿ ಹಣವನ್ನು ನಿಮಗೆ ವಾಪಸ್ ಪಡೆಯಲು ಅನುಸರಿಸಬೇಕಾದ ಮಾರ್ಗಗಳನ್ನು ನೋಡಿ.
ವಹಿವಾಟಿನ ಪ್ರಮುಖ ಮಾಹಿತಿ :
- ಹಂತ -1 ತಪ್ಪಾಗಿ ಹಣ ಸಂದಾಯ ಮಾಡುವವರು ಈ ಪ್ರಮುಖವಾದ ಮಾರ್ಗಗಳನ್ನು ಅನುಸರಿಸಬಹುದು
ಮೊದಲನೆಯದಾಗಿ ಹಣ ತಪ್ಪಾಗಿ ಸಂದಾಯವಾಗಿರುವ ವ್ಯಕ್ತಿಯನ್ನು ಸಂಪರ್ಕಿಸಬಹುದು. - ಹಂತ -2 ಗ್ರಾಹಕರ ಸಹಾಯವಾಣಿ ಕೇಂದ್ರಕ್ಕೆ ದೂರು ಸಲ್ಲಿಸಬಹುದು ಇದರಿಂದ ಅವರಿಂದ ಸಹಾಯವನ್ನು ಪಡೆಯಬಹುದು.
- ಹಂತ -3 ನೀವು ಖಾತೆ ಹೊಂದಿರುವ ಬ್ಯಾಂಕ್ ಶಾಖೆಗೆ ದೂರನ್ನು ಸಲ್ಲಿಸಬಹುದು ಇದರಿಂದ ಹೆಚ್ಚು ಅನುಕೂಲವಾಗಲಿದೆ.
- ಹಂತ-4 ಸಹಾಯವಾಣಿ ಸಂಖ್ಯೆಗೆ ಕರೆಮಾಡುವ ಮುಖಾಂತರ ನೀವು ದೂರನ್ನು ಸಲ್ಲಿಸಬಹುದು ಈ ದೂರಿನ ಆಧಾರದ ಮೇಲೆ ವಿವರವನ್ನು ತಿಳಿಸಲಾಗುವುದು.
ಹಣ ಕಳುಹಿಸಿದ ವ್ಯಕ್ತಿಯನ್ನು ಸಂಪರ್ಕಿಸಿ :
ನೀವು ಹಣವನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ತಪ್ಪಾಗಿ ಹಣ ಕಳುಹಿಸಿದರೆ ಮೊದಲು ಮಾಡಬೇಕಾದ ಕೆಲಸ ಆ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸಿ ಈ ಮಾರ್ಗದ ಮೂಲಕ ಮೊದಲು ನೀವು ಹಣವನ್ನು ವಾಪಸ್ ಪಡೆಯುವ ವಹಿವಾಟಿನ ಮೊದಲ ಹೆಜ್ಜೆ ನೀವು ಹಣ ಕಳಿಸಿದ ವ್ಯಕ್ತಿಯನ್ನು ವಹಿವಾಟಿನ ಹಿಸ್ಟರಿಯನ್ನು ತೆಗೆಯುವ ಮುಖಾಂತರ ಅವರನ್ನು ಸಂಪರ್ಕಿಸಬಹುದಾಗಿದೆ.
ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ :
ನಿಮ್ಮ ಹಣ ವಹಿವಾಟಿನಲ್ಲಿ ತೊಂದರೆಯಾದರೆ ನೀವು ಎರಡನೇ ಕೆಲಸವಾಗಿ ಕಸ್ಟಮರ್ ಕೇರನ್ನು ಬಳಸಿಕೊಳ್ಳಿ ಅವರಿಗೆ ವಹಿವಾಟಿನಲ್ಲಿ ಆಗಿರುವಂತಹ ತೊಂದರೆಗಳನ್ನು ತಿಳಿಸಿ ನಂತರ ನೀವು ಮಾಹಿತಿಯನ್ನು ವಿವರವಾಗಿ ಒದಗಿಸಿದ ಮೇಲೆ ದೂರುಗಳನ್ನು ದಾಖಲಿಸಿ. ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗ ಸೂಚಿಗಳ ಪ್ರಕಾರ ನಿರ್ಣಾಯಕವಾಗಿರಲಿದೆ. ನಿಮ್ಮ ಹಣವನ್ನು ಮೂರು ದಿನದ ಒಳಗಾಗಿ ನೀವು ದೂರು ಸಲ್ಲಿಸಿದ್ದರೆ ನಿಮ್ಮ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವಾಪಸ್ ನೀಡಲಾಗುವುದು.
ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ :
ನೀವು ಮೊದಲು ನಿಮ್ಮ ಬ್ಯಾಂಕ್ ಖಾತೆ ಹೊಂದಿರುವಂತಹ ಬ್ಯಾಂಕ್ ದೂರು ಸಲ್ಲಿಸಬೇಕಾಗುತ್ತದೆ. ನೀವು ತಪ್ಪಾಗಿ ನಡೆಸಿದ ವಹಿವಾಟಿನ ಬಗ್ಗೆ ಬ್ಯಾಂಕ್ ಸಿಬ್ಬಂದಿಗಳಿಗೆ ತಿಳಿಸಿ ಅವರಿಂದ ಅಗತ್ಯ ಮಾಹಿತಿಯನ್ನು ಪಡೆದುಕೊಂಡು ನೀವು ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳ ಪ್ರಕಾರ ದೂರನ್ನು ನೀಡಬಹುದು. ನೀವು ನೀಡಿದ ದೂರಿನ ಆಧಾರದ ಮೇಲೆ 48 ಗಂಟೆ ಒಳಗಾಗಿ ನಿಮ್ಮ ಹಣವನ್ನು ವಾಪಸ್ ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ .ನಿಮಗೆ ನಿಮ್ಮ ಬ್ಯಾಂಕ್ ಸಿಬ್ಬಂದಿ ಪ್ರತಿಕ್ರಿಯೆ ನೀಡದೆ ಇದ್ದರೆ ೀವು ಆರ್‌ಬಿಐ ವೆಬ್ಸೈಟ್ನಲ್ಲೂ ಸಹ ದೂರು ಸಲ್ಲಿಸಬಹುದು.
ಇದನ್ನು ಓದಿ : ಯಶಸ್ವಿನಿ ಕಾರ್ಡ್ ಪಡೆದುಕೊಳ್ಳಿ : ಎಲ್ಲ ಜನರಿಗೂ 5 ಲಕ್ಷದ ಸೌಲಭ್ಯ ಸಿಗುತ್ತೆ
ಸಹಾಯವಾಣಿಯನ್ನು ಬಳಸಿಕೊಳ್ಳಿ :
ಆನ್ಲೈನ್ ಮುಖಾಂತರ ಯುಪಿಐ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ತಪ್ಪು ಹಣ ಪಾವತಿ ಮಾಡಿದ್ದರೆ. ಹಣವನ್ನು ಪಡೆಯಲು ಈ ನಂಬರ್ಗೆ ಕರೆ ಮಾಡಿ ದೂರ ನೀಡಿ 18001201740 ಈ ನಂಬರಿಗೆ ನಿಮ್ಮ ಪಾವತಿ ವಿವರ ಹಾಗೂ ಯಾವ ದಿನಾಂಕದಂದು ಪಾವತಿ ಮಾಡಲಾಗಿದೆ ಹಾಗೂ ಯುಪಿಐ ಐಡಿಯನ್ನು ಇನ್ನಿತರ ಮಾಹಿತಿಯನ್ನು ಒದಗಿಸಿದ ಬೇಕಾಗುತ್ತದೆ.
ಈ ವಿಷಯಗಳು ಗಮನದಲ್ಲಿರಲಿ :
ನೀವು ಯುಪಿಐ ಮೂಲಕ ತಪ್ಪು ಹಣ ಸಂದಾಯ ಮಾಡಿದ್ದರೆ ಆ ಯುಪಿಐ ವಿಳಾಸವನ್ನು ಹಾಗೂ ನಿಮ್ಮ ಫೋನಿನಲ್ಲಿ ನಡೆದ ವಹಿವಾಟಿನ ಸಂದೇಶವನ್ನು ಯಾರು ಸಹ ಡಿಲೀಟ್ ಮಾಡಬೇಡಿ. ಏಕೆಂದರೆ ನಿಮಗೆ ಅನೇಕ ಅಗತ್ಯ ಮಾಹಿತಿ ಆ ಸಂದೇಶದಿಂದ ಸಿಗಲಿದೆ ಹಾಗಾಗಿ ಯಾರು ಸಹ ಸಂದೇಶಗಳನ್ನು ಕಳಿಸಬಾರದು ಎಂದು ತಿಳಿಸಲಾಗಿದೆ.
ಪ್ರತಿಯೊಬ್ಬರು ಆನ್ಲೈನ್ ನ ಮೂಲಕ ಪಾವತಿ ಮಾಡುವ ಸಂದರ್ಭದಲ್ಲಿ ಜಾಗರೂಕತೆಯಿಂದ ನೀವು ಪಾವತಿ ಮಾಡಬೇಕಾಗುತ್ತದೆ. ನೀವು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ ನಂತರದಲ್ಲಿ ಹಣ ಕಳಿಸಲು ಮುಂದಾಗಿರಿ.
ಈ ಲೇಖನವೂ ಇತ್ತೀಚಿನ ದಿನಗಳಲ್ಲಿ ಯುಪಿಐ ಮೂಲಕ ಹಣ ಪಾವತಿ ಮಾಡುವವರಿಗೆ ಹೆಚ್ಚಿನ ಉಪಯೋಗವಾಗಲಿದ್ದು. ಈ ಮಾಹಿತಿಯನ್ನು ಅವರಿಗೆ ತಲುಪಿಸಿ ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
- ವಾಟ್ಸಪ್ ಬಳಸುವ ಎಲ್ಲರಿಗೂ ಹೊಸ ಸೇವೆಗಳು ಉಚಿತ ಸಿಗಲಿದೆ ನೋಡಿ
- ಬರ ಪರಿಹಾರ ಹಣ ಬಿಡುಗಡೆ : ನಿಮ್ಮ ಹೆಸರು ಇದೆಯಾ ಪರಿಶೀಲಿಸಿ
ತಪ್ಪಾಗಿ ಹಣ ಸಂದಾಯವಾದರೆ ದೂರು ಸಲ್ಲಿಸುವ ಸಹಾಯವಾಣಿ ಸಂಖ್ಯೆ.?
18001201740
ತಪ್ಪಾಗಿ ಹಣ ಸಂದಾಯವಾದರೆ ಎಷ್ಟು ಗಂಟೆ ಒಳಗಾಗಿ ಮರು ಪಡೆಯುವ ಸಾಧ್ಯತೆ ಹೆಚ್ಚಾಗಿದೆ..?
48 ಗಂಟೆ ಒಳಗಾಗಿ ಹಣವನ್ನು ಮರುಪಡೆಯುವ ಸಾಧ್ಯತೆ ಇರುತ್ತದೆ.