rtgh

ರೇಷನ್‌ ಕಾರ್ಡ್‌ದಾರರಿಗೆ ಶಾಕಿಂಗ್‌ ಅಪ್ಡೇಟ್.!!‌ ಇನ್ಮುಂದೆ ನಿಮಗಿಲ್ಲ ಗ್ಯಾರಂಟಿ ಹಣ

ration card news today kannada

ಹಲೋ ಸ್ನೇಹಿತರೇ, ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಷನ್‌ ಕಾರ್ಡ್‌ ಮತ್ತು ಕಡು ಬಡವರಿಗೆ ಅಂತ್ಯೋದಯ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಇದರಿಂದಾಗಿ ಉಚಿತವಾಗಿ ಪಡಿತರ ವಸ್ತುಗಳನ್ನು ಸರ್ಕಾರದ ಕಡೆಯಿಂದ ಪಡೆದುಕೊಂಡು ಜೀವನವನ್ನು ನಡೆಸಲು ಅನೇಕ ಕುಟುಂಬಗಳಿಗೆ ಅನುಕೂಲವಾಗಿದೆ ಎನ್ನಬಹುದು.

ration card news today kannada

ಆದರೆ ನಿಜವಾಗಿ ಯಾರು ಅರ್ಹರು ಅವರಿಗಿಂತ ಅರ್ಹತೆ ಇಲ್ಲದೆ ಇರುವವರು ಅಂದರೆ ಉಳ್ಳವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಸರಕಾರದ ಗಮನಕ್ಕೆ ಬಂದಿದೆ.

ಹೌದು, ಸರ್ಕಾರದ ಮಾನದಂಡದ ಒಳಗೆ ಬಾರದೆ ಇರುವವರು ಸಹ ಬಿಪಿಎಲ್ ರೇಷನ್‌ ಕಾರ್ಡ್‌ ಅನ್ನು ಪಡೆದುಕೊಂಡು ಇಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

ಇದನ್ನು ಗುರುತಿಸಿರುವ ಆಹಾರ ಇಲಾಖೆಯು ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಂಡಿದ್ದು ಯಾರು ಸರ್ಕಾರದ ಮಾನದಂಡದೊಳಗೆ ಬರುವುದಿಲ್ಲವೋ ಅಂತವರ ರೇಷನ್ ಕಾರ್ಡ್ ರದ್ದು ಪಡಿ ಮಾಡುತ್ತಿದೆ.

ಯಾರ ರೇಷನ್‌ ಕಾರ್ಡ್‌ ರದ್ದು ಮಾಡಲಾಗುತ್ತಿದೆ?

  • ಸರ್ಕಾರದ ಮಾನದಂಡದ ಹೇಳಿಕೆಗಿಂತ ಹೆಚ್ಚಿನ ಜಮೀನು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ.
  • ಸರ್ಕಾರಿ ನೌಕರಿಯಲ್ಲಿದ್ದು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂತಹ ಕಾರ್ಡ್ ರದ್ದಾಗುತ್ತದೆ.
  • ಒಂದು ಕುಟುಂಬಕ್ಕೆ ಒಂದು ರೇಷನ್ ಕಾರ್ಡ್ ಮಾತ್ರ ವಿತರಣೆ ಮಾಡಲಾಗುತ್ತಿದೆ ಆದರೆ ಕೆಲವರು ಅಕ್ರಮವಾಗಿ ಒಂದೇ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಬಳಸಲು ಆರಂಭಿಸಿದ್ದಾರೆ.

ಮಧ್ಯಪ್ರಿಯರಿಗೆ ಬಿಗ್ ಶಾಕಿಂಗ್ ಸುದ್ದಿ : ಸತತ 2 ದಿನ ಮಧ್ಯದಂಗಡಿ ಬಂದ್

  • ಈ ರೀತಿ ಮಾಡಿದರು ಅವರ ರೇಷನ್ ಕಾರ್ಡ್ ರದ್ದಾಗುತ್ತದೆ.
  • ಕಳೆದ ಆರು ತಿಂಗಳಿಂದ ಪಡಿತರ ಪಡೆದುಕೊಳ್ಳದೆ ಇರುವವರ ರೇಷನ್ ಕಾರ್ಡ್ ಕೂಡ ರದ್ದಾಗುತ್ತದೆ.
  • ಸರ್ಕಾರ ತಿಳಿಸಿದ ಮಿತಿಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗುತ್ತದೆ.

ಈ ರೀತಿಯಾಗಿ ಮೇಲಿನ ಎಲ್ಲಾ ವಿಷಯಗಳು ಅನ್ವಯವಾಗುವ ಕುಟುಂಬಗಳು ಇನ್ನು ಮುಂದೆ ರೇಷನ್ ಕಾರ್ಡ್ ನ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲಾ. ಹಿಂದಿನ ತಿಂಗಳಿನಿಂದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವು ನಿಮ್ಮ ಖಾತೆಗೆ ಬರುತ್ತಿಲ್ಲವೇ? ಹಾಗಾದ್ರೆ ನಿಮ್ಮ ರೇಷನ್ ಕಾರ್ಡ್ ಅನ್ನು ಸಹರದ್ದಾಗಿರಬಹುದು ಇದನ್ನ ಚೆಕ್ ಮಾಡಿಕೊಳ್ಳುವುದು ಹೇಗೆ ನೋಡಿ?

ರೇಷನ್‌ ಕಾರ್ಡ್‌ ರದ್ದು ಬಗ್ಗೆ ಮಾಹಿತಿ ಪಡೆಯುವುದು ಹೇಗೆ?

https://ahara.kar.nic.in ಆಹಾರ ಇಲಾಖೆಯ ಈ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ಪಡಿತರ ಚೀಟಿ ಸ್ಥಿತಿ ಎನ್ನುವ ಮಾಹಿತಿಯ ಮೇಲೆ ಕ್ಲಿಕ್ ಮಾಡಿ ನಂತರ ಮೂರು ಲಿಂಕ್ ಕಾಣಿಸುತ್ತದೆ.

ಅದರಲ್ಲಿ ನಿಮ್ಮ ಜಿಲ್ಲೆಯು ಯಾವುದು ಎಂಬುದನ್ನು ನೋಡಿ ಅದರ ಮೇಲ್ಭಾಗದಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈ ರೀತಿ ಮಾಡೋದ್ರಿಂದ ಒಂದು ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ನಿಮ್ಮ ಜಿಲ್ಲೆ ಗ್ರಾಮ ಹೋಬಳಿಯ ಮೊದಲಾದ ಮಾಹಿತಿಯನ್ನು ನೀಡಿದರು ನಿಮ್ಮ ರೇಷನ್‌ ಕಾರ್ಡ್‌ ಸ್ಟೇಟಸ್ ಕಾಣಿಸುತ್ತದೆ.

ಒಂದು ವೇಳೆ ನಿಮ್ಮ ರೇಷನ್‌ ಕಾರ್ಡ್‌ ರದ್ದುಪಡಿ ಆಗಿದ್ದರೆ ಅದಕ್ಕೆ ಕಾರಣವನ್ನು ಕೂಡ ತಿಳಿಸಿರುತ್ತಾರೆ. ಅದು ಸರಿಯಾದ ಕಾರಣ ಎಂದು ನಿಮಗೆ ಅನಿಸದೆ ಇದ್ದಲ್ಲಿ ಮತ್ತೆ ನಿಮ್ಮ ರೇಷನ್ ಕಾರ್ಡ್ ಪಡೆದುಕೊಳ್ಳಲು ಆಹಾರ ಇಲಾಖೆಗೆ ಅರ್ಜಿ ಸಲ್ಲಿಸಬಹುದು.

ಇತರೆ ವಿಷಯಗಳು:

ಹೊಸ ರೇಷನ್ ಕಾರ್ಡ್ ಗೆ ಬಿಗ್ ಅಪ್ಡೇಟ್.! ಇಂತಹವರಿಗೆ ಮಾತ್ರ ಸಿಗಲಿದೆ ಪಡಿತರ ಚೀಟಿ

SSLC ಫಲಿತಾಂಶ ಕೆಲವೇ ಗಂಟೆಗಳಲ್ಲಿ ಪ್ರಕಟ : ಇಲ್ಲಿದೆ ಅಧಿಕೃತ ಜಾಲತಾಣ

Spread the love

Leave a Reply

Your email address will not be published. Required fields are marked *