ಹಲೋ ಸ್ನೇಹಿತರೇ, ನೀವು ಭಾರತದಲ್ಲಿ ಎಷ್ಟು ರೀತಿ ನೋಟುಗಳಿದ್ದವು ಅಂತ ನೋಡಿರುತ್ತೀರಿ. ನೋಟು ಅಮಾನ್ಯೀಕರಣಕ್ಕೂ ಮುನ್ನ ಇದ್ದ 500 ರೂಪಾಯಿ ಹಾಗೂ 1,000 ರೂಪಾಯಿ ನೋಟುಗಳು ಇಂದಿಗೂ ಜನಮನದಲ್ಲಿ ಉಳಿದಿವೆ. ಇದಾದ ಬಳಿಕ 2,000 ರೂಪಾಯಿ ನೋಟು ಹೊರಬಂದರು ಬಳಿಕ ಮರೆಯಾಗಿದೆ. ಇದಾದ ಬಳಿಕ ಹೊಸ ಬಗೆಯ ನೋಟುಗಳು ಚಲಾವಣೆಗೆ ಬಂದಿದೆ ಮತ್ತು ಬರುತ್ತಲೇ ಇವೆ.
ಎಲ್ಲಾ ನೋಟುಗಳು ಹೊಸ ವಿನ್ಯಾಸದಲ್ಲಿ ಹೊಸ ಹೊಸ ಕಲರ್‌ನಲ್ಲಿ ಹೊರಬಂದಿವೆ. ಇನ್ನೂ ಹೊಸ ನೋಟುಗಳು ಬರುವ ಸಾಧ್ಯತೆಯೂ ಇದೆ ಎಂಬ ಮಾತುಗಳಿವೆ. ಆದ್ರೆ ನೀವೆಂದಾದ್ರು ಸೊನ್ನೆ ಮುಖಬೆಲೆಯ ನೋಟು ನೋಡಿದ್ದೀರಾ? ಹೌದು ನಿಮಗೆ ಇದು ಅಚ್ಚರಿ ಎನಿಸಬಹುದು.
ಭಾರತದಲ್ಲಿ ಸೊನ್ನೆ ರೂಪಾಯಿ ನೋಟು ಜನರು ಲಂಚ ನೀಡುವುದನ್ನು ತಡೆಯಲು ಹಾಗೂ ಸರ್ಕಾರದ ಭ್ರಷ್ಟಾಚಾರದ ವಿರುದ್ಧವಾಗಿ ಹೋರಾಡಲು ರಚಿಸಲಾದ ನಕಲಿ ನೋಟಿನಂತಿದೆ. ಈ ನೋಟುಗಳು ಭಾರತದಲ್ಲಿನ ಸಾಮಾನ್ಯ ರೂ 50 ನೋಟುಗಳಂತೆ ಕಾಣುತ್ತವೆ, ಆದರೆ ಅವುಗಳನ್ನು 5 ನೇ ಪಿಲ್ಲರ್ ಎಂಬ ಗುಂಪಿನಿಂದ ಮಾಡಲ್ಪಟ್ಟಿದೆ, ಆದ್ರೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಅಧಿಕೃತವಾಗಿ ಹೊರಬಂದಿದ್ದಲ್ಲ.
ಈ ನೋಟು ಹೊರಬಂದಿದ್ದು ಏಕೆ.?
ಭಾರತದಲ್ಲಿ ಅಂದಿನಿಂದಲೇ ಇಂದಿನವರೆಗೂ ಕಾಡುತ್ತಿರುವ ಸಮಸ್ಯೆಯಾದ ಭ್ರಷ್ಟಾಚಾರ ನಿರ್ಮೂಲನೆಯ ಅಂಗವಾಗಿ ಸೊನ್ನೆ ರೂಪಾಯಿ ನೋಟು ಜಾರಿಗೆ ಬಂದಿತ್ತು. ಆದ್ರೆ ಆರ್‌ಬಿಐನಿಂದ ಈ ನೋಟು ಹೊರಬಂದಿದ್ದಲ್ಲ ಬದಲಿಗೆ ಸರ್ಕಾರೇತರ ಸಂಸ್ಥೆಯೊಂದು ಈ ನೋಟನ್ನು ಮುದ್ರಿಸಲು ಮುಂದಾಗಿತ್ತು.
ಈ ನೋಟಿನ ಮೇಲೆ ಇದು ಅಸಲಿ ನೋಟಲ್ಲ ನಕಲಿ ಎಂದು ಬರೆಯಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಇರುವ ಜಾಗದಲ್ಲಿ ‘ಎಲ್ಲಾ ಹಂತಗಳಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆಯನ್ನು ಮಾಡಿ’ ಎಂದು ಬರೆಯಲಾಗಿತ್ತು. ಅಂದರೆ ಈ ನೋಟನ್ನು ಭ್ರಷ್ಟಾಚಾರದ ವಿರುದ್ಧ ಗಾಜರತಿ ಮೂಡಿಸಲೆಂದು ಹೊರತರಲಾಗಿತ್ತು. ಅಚ್ಚರಿ ಎಂದರೆ ಈ ನೋಟಿಗೆ ಇನ್ನಿಲ್ಲದ ಬೇಡಿಕೆ ಬಂದಿತ್ತು. ಅದನ್ನು ಮುದ್ರಿಸಲಾಗದೆ, ಎನ್‌ಜಿಓ ಈ ಸೊನ್ನೆ ಸೋಟನ್ನು ಇನ್ನು ಮುಂದೆ ಮುದ್ರಿಸುವುದಿಲ್ಲ ಎಂದು ಘೋಷಿಸಿತು.
ರೇಷನ್ ಕಾರ್ಡ್‌ದಾರರಿಗೆ ಶಾಕಿಂಗ್ ಅಪ್ಡೇಟ್.!! ಇನ್ಮುಂದೆ ನಿಮಗಿಲ್ಲ ಗ್ಯಾರಂಟಿ ಹಣ
ಮೊದಲು ಆರಂಭಗೊಂಡಿದ್ದು ಎಲ್ಲಿ?
2007 ರಲ್ಲಿ, ಚೆನ್ನೈನ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಶೂನ್ಯ ರೂಪಾಯಿಯ ನೋಟನ್ನು ಮುದ್ರಿಸಿತ್ತು. ಈ ನೋಟಿನ ಮೇಲೆ ಸರ್ಕಾರ ಅಥವಾ ರಿಸರ್ವ್ ಬ್ಯಾಂಕ್‌ನ ಯಾವುದೇ ಮುದ್ರ ಇರಲಿಲ್ಲ.ಅಂದರೆ ಅದನ್ನು ವಹಿವಾಟಿನಿಂದ ಹೊರಗಿಡಲಾಗಿದೆ. ಈ ಟಿಪ್ಪಣಿಯ ಮೂಲಕ ವಿಶೇಷ ಸಂದೇಶವನ್ನು ನೀಡಲಾಗಿದೆ. ಇದು ಹಿಂದಿ ಮತ್ತು ತಮಿಳು, ಕನ್ನಡ, ಮಲಯಾಳಂ ಹಾಗೂ ತೆಲುಗು ಭಾಷೆಗಳಲ್ಲಿ ಪ್ರಕಟವಾಯಿತು.
ದೇಶದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಎಲ್ಲೆಲ್ಲಿ ಯಾವುದೇ ಕೆಲಸವಿದ್ದರೂ ಲಂಚ ನೈವೇದ್ಯವಿಲ್ಲದೆ ನಡೆಯುತ್ತಿರಲಿಲ್ಲ. ಇದರಿಂದ ಸಾರ್ವಜನಿಕರ ಸ್ಥಿತಿ ಶೋಚನೀಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರವನ್ನು ಕಿತ್ತೊಗೆಯುವ ಉದ್ದೇಶದಿಂದ ಸೊನ್ನೆ ರೂಪಾಯಿ ನೋಟುಗಳನ್ನು ಮುದ್ರಿಸಲಾಗಿದೆ. ಬಳಿಕ ಎಲ್ಲಿ ಲಂಚ ಕೇಳಿದರು ಸೊನ್ನೆ ರೂಪಾಯಿ ನೋಟುಗಳ ಬಂಡಲ್‌ಗಳನ್ನೇ ಕೈಗಿಡುತ್ತಿದ್ದರು. ಹೀಗಾಗಿ ಈ ಸೊನ್ನೆ ರೂಪಾಯಿ ನೋಟುಗಳು ಸದ್ದು ಮಾಡಿದ್ದವು.
ನಾವು ಲಂಚವನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಕೊಡುವುದಿಲ್ಲ
ಶೂನ್ಯ ರೂಪಾಯಿಯ ನೋಟು ಮುದ್ರಿಸಿ, ನಾವು ಲಂಚ ಕೊಡುವುದಿಲ್ಲ, ತೆಗೆದುಕೊಳ್ಳುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕರಿಸಿದರು. ಅಭಿಯಾನದ ಮೂಲಕವೇ ಈ ನೋಟುಗಳನ್ನು ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಮಾರುಕಟ್ಟೆಗಳಲ್ಲಿ ವಿತರಿಸಲಾಯಿತು. NGO ಮೂಲಕ ಭ್ರಷ್ಟಾಚಾರದ ವಿರುದ್ಧವೇ ಜನರಿಗೆ ಅರಿವು ಮೂಡಿಸಲಾಯಿತು.
ಈ ಅಭಿಯಾನವು 5 ವರ್ಷಗಳ ಕಾಲ ಮುಂದುವರೆಯಿತು. ಈ ಸಂದರ್ಭದಲ್ಲಿ, ಶೂನ್ಯ ಭ್ರಷ್ಟಾಚಾರದ ವಿರುದ್ಧ ನಿಲ್ಲಲು 5 ಲಕ್ಷಕ್ಕೂ ಹೆಚ್ಚು ನಾಗರಿಕರಿಂದ ಸಹಿಗಳನ್ನು ಸಂಗ್ರಹಿಸಲಾಯಿತು. ಈ ಅಭಿಯಾನವನ್ನು 2014 ರವರೆಗೆ ನಡೆಸಲಾಯಿತು. ಸುಮಾರು 25 ಲಕ್ಷ ಶೂನ್ಯ ರೂಪಾಯಿ ನೋಟುಗಳನ್ನು ಮುದ್ರಿಸಲಾಗಿದೆ. ಶೂನ್ಯ ರೂಪಾಯಿ ನೋಟು ನಿಖರವಾಗಿ 50 ರೂಪಾಯಿಯಂತೆಯೇ ಇತ್ತು. ಇದರ ಮೇಲೆ, ನಾನು ಲಂಚವನ್ನು ತೆಗೆದುಕೊಳ್ಳುವುದಿಲ್ಲ ಅಥವಾ ನೀಡುವುದಿಲ್ಲ ಎಂದು ಕೆಳಭಾಗದಲ್ಲಿ ಪ್ರತಿಜ್ಞೆ ಬರೆಯಲಾಗಿತ್ತು.
ಇತರೆ ವಿಷಯಗಳು:
ಹೊಸ ರೇಷನ್ ಕಾರ್ಡ್ ಗೆ ಬಿಗ್ ಅಪ್ಡೇಟ್.! ಇಂತಹವರಿಗೆ ಮಾತ್ರ ಸಿಗಲಿದೆ ಪಡಿತರ ಚೀಟಿ