rtgh

ಹೊಸ ಸರ್ಕಾರಿ ನೌಕರರಿಗೆ 7 ವೇತನ ಆಯೋಗದ ಪ್ರಕಾರ ಸಂಬಳ ಕೇಳಿದರೆ ಶಾಕ್ ಆಗ್ತೀರಾ ..!

7-how-much-salary-increase-for-new-employees-as-per-pay-commission

ನಮಸ್ಕಾರ ಸ್ನೇಹಿತರೇ, ಸದ್ಯ ಇದೀಗ ರಾಜ್ಯದಲ್ಲಿ 7ನೇ ವೇತನ ಆಯೋಗದ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿದ್ದು ಸರ್ಕಾರದ ಬೊಕ್ಕಸಕ್ಕೆ ಏಳನೇ ವೇತನ ಆಯೋಗ ಜಾರಿ ಆದರೆ ಭಾರಿ ಹೊರೆಯಾಗಲಿದೆ. ರಾಜ್ಯ ಸರ್ಕಾರಕ್ಕೆ ಕೇವಲ ಗ್ಯಾರಂಟಿ ಖರ್ಚುಗಳ ಜೊತೆಗೆ ವರ್ಷಕ್ಕೆ 20000 ಕೋಟಿ ಹೆಚ್ಚುವರಿ ಖರ್ಚು ಏಳನೇ ವೇತನ ಆಯೋಗ ಜಾರಿಯಾಗುವುದರ ಮೂಲಕ ಬೀಳಲಿದೆ.

7-how-much-salary-increase-for-new-employees-as-per-pay-commission
7-how-much-salary-increase-for-new-employees-as-per-pay-commission

ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಈ ಕಟ್ಟಿನಲ್ಲಿ ಸಿಲುಕುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏಳನೇ ವೇತನ ಆಯೋಗವು ತನ್ನ ವರದಿಯನ್ನು ಸಲ್ಲಿಸಿದ್ದು ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಗಣಿಸುವುದಾಗಿ ಭರವಸೆಯನ್ನು ನೀಡಿದ್ದರು.

ಆದರೆ ಶೇಕಡ 27.5 ರಷ್ಟು ಸರ್ಕಾರಿ ನೌಕರರ ಮೂಲ ವೇತನವನ್ನು ಹೆಚ್ಚಿಸಲು 7ನೇ ವೇತನ ಆಯೋಗವು ಶಿಫಾರಸು ಮಾಡಿರುವುದು ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

ಆಯೋಗದ ಶಿಫಾರಸು ಜಾರಿಯಾದರೆ ಸುಮಾರು 20 ಕೋಟಿ ಹೊರೆ :

ಸರ್ಕಾರಿ ನೌಕರರ ವೇತನ 7ನೇ ವೇತನ ಆಯೋಗದ ಶಿಫಾರಸು ಜಾರಿಯಾದರೆ ಹೆಚ್ಚಳವಾದರೆ ಬರೋಬ್ಬರಿ 20,000 ಕೋಟಿ ರಾಜ್ಯದ ಬೊಕ್ಕಸಕ್ಕೆ ಹೊರಬೀಳಲಿದೆ. ರಾಜ್ಯದಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳು ನೆನೆಗುರಿಗೆ ಬಿದ್ದಿದ್ದು ಇದು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಮುಳುಗಿದೆ ಎಂಬ ಆರೋಪಗಳು ಸಹ ಕೇಳಿಬರುತ್ತಿದೆ ಇದರ ನಡುವೆ ಒಂದು ವೇಳೆ ರಾಜ್ಯದಲ್ಲಿ ಏಳನೇ ವೇತನ ಆಯೋಗದ ಜಾರಿಯಾದರೆ ರಾಜ್ಯದ ಬೊಕ್ಕಸದ ಮೇಲೆ ಮತ್ತಷ್ಟು ಒತ್ತಡ ತರುತ್ತದೆ ಎಂದು ಹೇಳಬಹುದು.

ಆದರೆ ನೀತಿ ಸಂಹಿತೆ ಲೋಕಸಭಾ ಚುನಾವಣೆ ಇರುವ ಕಾರಣದಿಂದಾಗಿ ಜಾರಿಯಾಗಿರುವುದರಿಂದ ಸರ್ಕಾರಕ್ಕೆ ಉಸಿರಾಡಲು ಅವಕಾಶ ಸಿಕ್ಕಿದಂತಾಗಿದೆ. ಮಾದರಿ ನೀತಿ ಸಂಹಿತೆ ಜೂನ್ 4 ರ ವರೆಗೂ ಜಾರಿಯಲ್ಲಿ ಇರುವುದರಿಂದ ಅದರ ಒಳಗೆ ಬಜೆಟ್ ಅಗತ್ಯಗಳನ್ನು ನಿರ್ಣಯಿಸಲು ಮತ್ತು ಉದ್ದೇಶಿತ ವೇತನ ಹೆಚ್ಚಳಕ್ಕೆ ಆದಾಯವನ್ನು ಕ್ರೋಢಿಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರಕ್ಕೆ ಸಮನೆ ಸಿಕ್ಕಿದೆ ಎಂದು ಹೇಳಬಹುದು. ಶೇಕಡ ಹದಿನೇಳರಷ್ಟು ಮಧ್ಯಂತರ ಪರಿಹಾರವನ್ನು ಈ ಹಿಂದೆ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ನೀಡಿತ್ತು.

ಇದನ್ನು ಓದಿ ; KSRTC ಕಡೆಯಿಂದ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ : ಪುರುಷರೇ ಅರ್ಜಿ ಸಲ್ಲಿಸಲು ಬೇಗ ಸಿದ್ದರಾಗಿ .!

ಶೇಕಡ 15 ರಿಂದ 20 ರಷ್ಟು ವೇತನ ಹೆಚ್ಚಳ :

ಏಳನೇ ವೇತನ ಆಯೋಗ ಶೇಕಡ 15 ರಿಂದ ಶೇಕಡ 20ರಷ್ಟು ವೇತನ ಹೆಚ್ಚಳ ಮಾಡಲು ಶಿಫಾರಸ್ಸು ಮಾಡುವ ನಿರೀಕ್ಷೆ ಮಾಡಲಾಗಿತ್ತು. ಇದರಿಂದ ರಾಜ್ಯ ಸರ್ಕಾರಕ್ಕೆ 10 ಸಾವಿರ ಕೋಟಿ ಆರ್ಥಿಕ ಹೊರೆ ಬೀಳುತ್ತದೆ ಎನ್ನಲಾಗುತ್ತದೆ ಆದರೆ ಏಳನೇ ವೇತನ ಆಯೋಗ ಶೇಕಡ 27.5% ರಷ್ಟು ಮೂಲವೇತನ ಮಾಡಲಾಗಿದ್ದು ಇದರಿಂದ ದುಡ್ಡನ್ನು ಸಿದ್ಧರಾಮಯ್ಯನವರು ಹೊಂದಿಸುವ ಅನಿವಾರ್ಯತೆಯಲ್ಲಿ ಸಿಲುಕುತ್ತಾರೆ ಎಂದು ಹೇಳಬಹುದು.

ಈಗಾಗಲೇ ರಾಜ್ಯ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳಿಗೆ ಸುಮಾರು 52,000 ಕೋಟಿ ರೂಪಾಯಿಗಳನ್ನು ವಾರ್ಷಿಕವಾಗಿ ವೆಚ್ಚ ಮಾಡಲಾಗುತ್ತಿದ್ದು ಇದೀಗ ಹೆಚ್ಚಿನ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ವಿಪಿಯೋಗಿಸಲು ಆಗುತ್ತಿಲ್ಲ ಆದರೆ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತಾವಿದ ವೇತನ ಹೆಚ್ಚಳದಿಂದ ಉಂಟಾಗುವಂತಹ ಕರ್ಚನ್ನು ಸರಿದೂಗಿಸಲು 5500 ಕೋಟಿ ರೂಪಾಯಿಗಳನ್ನು 2024-25ರ ಬಜೆಟ್ ನಲ್ಲಿ ಮೀಸಲು ಇಡಲಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ರಾಯ ರೆಡ್ಡಿ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರ ಆರೋಪವನ್ನು ತಳ್ಳಿ ಹಾಕಿದ್ದು ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ನಿಜವಾಗಿಯೂ ಸಿದ್ಧರಾಮಯ್ಯನವರು ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ಏಳನೇ ವೇತನ ಆಯೋಗ ಜಾರಿಯಾದರೆ ಸುಮಾರು 20 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಲಿದೆ ಎಂಬ ಮಾಹಿತಿಯು ಕೇಳಿ ಬರುತ್ತಿದ್ದು.

ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಹೇಗೆ ಈ ಹಣವನ್ನು ಹೊಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಹಾಗಾಗಿ ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿಯಾದರೆ ಹೆಚ್ಚು ಸಂತೋಷವಾಗುತ್ತದೆ ಆದರೆ ಸರ್ಕಾರಕ್ಕೆ ಇದು ಹೊರೆಯಾಗುತ್ತದೆ ಎಂದು ಹೇಳಬಹುದು ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *