ಹಲೋ ಗೆಳೆಯರೇ, SSLC ಪಾಸಾಗಿ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಮಂಡ್ಯ ಜಿಲ್ಲೆಯಲ್ಲಿದೆ ಸರ್ಕಾರಿ ಉದ್ಯೋಗದ ಉತ್ತಮ ಅವಕಾಶ. ನೀವು ಸಹ ಸರ್ಕಾರಿ ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಈಗಲೇ ಅರ್ಜಿ ಸಲ್ಲಿಸಿ.
ಮಂಡ್ಯ ಜಿಲ್ಲಾ & ಸತ್ರ ನ್ಯಾಯಾಲಯವು, ಮಂಡ್ಯ ಘಟಕದ ವಿವಿಧ ನ್ಯಾಯಾಲಯದಲ್ಲಿ ಖಾಲಿ ಇರುವ 41 ಜವಾನರು ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಅರ್ಹ & ಆಸಕ್ತರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ನೇಮಕಾತಿ ಪ್ರಾಧಿಕಾರ : ಮಂಡ್ಯ ಜಿಲ್ಲಾ ಸತ್ರ ನ್ಯಾಯಾಲಯ.
ಹುದ್ದೆ ಹೆಸರು : ಜವಾನರು (ಪೀವನ್)
ಹುದ್ದೆಗಳ ಒಟ್ಟು ಸಂಖ್ಯೆ : 41
ವೇತನ ಶ್ರೇಣಿ : ರೂ.17000-28950.
Contents
ಅರ್ಜಿ ಹಾಕಲು ಅರ್ಹತೆಗಳು
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ SSLC ಪರೀಕ್ಷೆಯಲ್ಲಿ ಉತ್ತೀರ್ಣತೆ / ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕಾಗುತ್ತದೆ.
- ಕನ್ನಡ ಭಾಷೆಯನ್ನು ಓದಲು & ಬರೆಯಲು ತಿಳಿದಿರಬೇಕು.
- ಅರ್ಜಿ ಹಾಕಲು ಕನಿಷ್ಠ 18 ವರ್ಷ ಪೂರ್ಣಗೊಳಿಸಿರಬೇಕು.
- ಸಾಮಾನ್ಯ ವರ್ಗದವರಿಗೆ 35, OBC ವರ್ಗದವರಿಗೆ 38, SE / ST, ಪವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯಸ್ಸು ಮೀರಿರಬಾರದು.
ಆಯ್ಕೆ ವಿಧಾನ : 10ನೇ ತರಗತಿಯ ಗರಿಷ್ಠ ಅಂಕಗಳ ಆಧಾರದಲ್ಲಿ1 ಹುದ್ದೆಗೆ 10 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನಕ್ಕೆ ಕರೆದು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
– ಮಂಡ್ಯ ಜಿಲ್ಲಾ ಕೋರ್ಟ್ ವೆಬ್ ವಿಳಾಸ https://mandya.dcourts.gov.in/online-recruitment/ ಕ್ಕೆ ಭೇಟಿ ನೀಡಿ.
– ತೆರೆದ ವೆಬ್ಪೇಜ್ನಲ್ಲಿ ‘Post Of Peon’ ಮೆನು ಕೆಳಗಡೆ ‘Click Here To Apply Online’ .
– ಮತ್ತೊಂದು ವೆಬ್ಪೇಜ್ ತೆರೆದುಕೊಳ್ಳುತ್ತದೆ ಇದರಲ್ಲಿ ‘Online Application’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಸೂಚನೆಗಳ ಪಟ್ಟಿ ಪ್ರದರ್ಶಿತವಾಗುತ್ತದೆ. ಓದಿಕೊಳ್ಳಿ.
– ‘Apply’ ಎಂದಿರುವಲ್ಲಿ ಕ್ಲಿಕ್ ಮಾಡಿ, ಅಪ್ಲೇ ಮಾಡಿ
ಅಪ್ಲಿಕೇಶನ್ ಶುಲ್ಕ ವಿವರ
ಸಾಮಾನ್ಯ ವರ್ಗ:300.
ಇತರೆ ಹಿಂದುಳಿದ ವರ್ಗ ರೂ.150.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 , ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.
ಅರ್ಜಿ ಪ್ರಕ್ರಿಯೆಯ ದಿನಾಂಕಗಳು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 03-05-2024
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 03-06-2024 ರ ರಾತ್ರಿ 11-59 ಗಂಟೆವರೆಗೆ.
ಆನ್ಲೈನ್ ಸೇವೆಗಳ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ: 04-06-2024 ರ ರಾತ್ರಿ 11-59 ಗಂಟೆವರೆಗೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ವಿದ್ಯಾರ್ಹತೆಯ marks cards.
- ಜಾತಿ & ಅದಾಯ ಪ್ರಮಾಣ ಪತ್ರ
- ಮೀಸಲಾತಿ ಕೋರುವವರು ಸಂಬಂಧಿತ ಪ್ರಮಾಣ ಪತ್ರ.
- ಭಾವಚಿತ್ರ & ಸಹಿ ಸ್ಕ್ಯಾನ್ ಕಾಪಿ ಮತ್ತು ಇತರೆ..
ಇತರೆ ವಿಷಯಗಳು
ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ.! ಈ ದಾಖಲೆಗಳು ಬೇಕೇ ಬೇಕು
URAM Scholarship: ಪ್ರತಿ ವಿದ್ಯಾರ್ಥಿಗೆ ₹ 80,000 ಮೌಲ್ಯದ ವಿದ್ಯಾರ್ಥಿವೇತನ.! ಕೂಡಲೇ ಅಪ್ಲೇ ಮಾಡಿ