rtgh

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಈ ದಾಖಲೆ ಇರಬೇಕು ತಪ್ಪದೆ ನೋಡಿ

Application for new ration card allowed

ನಮಸ್ಕಾರ ಸ್ನೇಹಿತರೆ ಆಧಾರ್ ಕಾರ್ಡ್ ಅಗತ್ಯ ದಾಖಲೆಯಾಗಿದ್ದು ಎಷ್ಟು ಮುಖ್ಯವೋ ಅದೇ ರೀತಿ ರೇಷನ್ ಚೀಟಿಯು ಕೂಡ ಇತ್ತೀಚಿನ ದಿನಗಳಲ್ಲಿ ಬಹಳ ಮುಖ್ಯವಾದ ದಾಖಲೆಗಳಾಗಿದೆ. ಭಾರತೀಯ ನಾಗರೀಕರಿಗೆ ಇತ್ತೀಚಿನ ದಿನಗಳಲ್ಲಿ ಬೇಕಾಗಿರುವ ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್ ಎಷ್ಟು ಮುಖ್ಯವಾಗಿರುತ್ತದೆಯೋ ಅದೇ ರೀತಿ ಎಲ್ಲ ನಾಗರಿಕರಿಗೂ ಪಡಿತರ ಚೀಟಿಯು ಬಹಳ ಮುಖ್ಯವಾದ ದಾಖಲೆಯಾಗಿದೆ.

Application for new ration card allowed
Application for new ration card allowed

ಅದರಲ್ಲಿಯೂ ಹೆಚ್ಚಾಗಿ ಆದ್ಯದ ಪಡಿತರ ಚೀಟಿಯ ಆದ್ಯತೆಯು ಹೆಚ್ಚಾಗಿದ್ದು ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಾಗಬೇಕಾದರೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು. ಹೀಗಾಗಿ ಸಾಕಷ್ಟು ಜನರು ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಗೆ ಯಾವಾಗ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂಬುದನ್ನು ಕಾದು ಕುಳಿತಿದ್ದಾರೆ.

ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಆಹ್ವಾನ :

ರಾಜ್ಯ ಸರ್ಕಾರ ಲೋಕ ಸಭಾ ಎಲೆಕ್ಷನ್ ಹತ್ತಿರ ಬರುತ್ತಿರುವ ಕಾರಣದಿಂದಾಗಿ ಜನರಿಗೆ ಅನುಕೂಲ ವಾಗುವಂತಹ ಸಾಕಷ್ಟು ಪ್ರಮುಖ ಕೆಲಸಗಳನ್ನು ಬಹಳ ಮುತುವರ್ಜಿಯಿಂದ ಮಾಡುತ್ತಿದೆ ಎಂದು ಹೇಳಬಹುದು. ಈಗಾಗಲೇ ಇದಕ್ಕೆ ಪೂರಕವಾಗಿ ಆಹಾರ ಇಲಾಖೆಯ ಸಚಿವರಾದ ಕೆಎಚ್ ಮುನಿಯಪ್ಪ ರವರು ತಿಳಿಸಿರುವಂತೆ ಸಲ್ಲಿಕೆ ಆಗಿರುವಂತಹ ಪಡಿತರ ಸೀತೆ ಅರ್ಜಿಗಳ ಪರಿಶೀಲನೆಯನ್ನು ಮಾರ್ಚ್ 31ರ ಒಳಗಾಗಿ ಮಾಡಿ ಹೊಸ ಪಡಿತರ ಚೀಟಿಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಎರಡು ಲಕ್ಷದ 96,000 ಅರ್ಜಿಗಳು ರಾಜ್ಯ ಸರ್ಕಾರದ ಬಳಿ ಇದ್ದು ಇವುಗಳನ್ನು ಪರಿಶೀಲಿಸಿದ ನಂತರ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಗಳೆಂದು ವರ್ಗೀಕರಿಸಿ ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ಏಪ್ರಿಲ್ ಒಂದರಿಂದ ವಿತರಣೆ ಮಾಡಲಾಗುತ್ತದೆ ಇದೇ ರೀತಿ ನೀವು ಕೂಡ ಹೊಸ ಪಡಿತರ ಚೀಟಿ ಗಳಿಗೆ ಅರ್ಜಿ ಸಲ್ಲಿಸಬಹುದಾಗಿತ್ತು ಇದಕ್ಕೆ ಬೇಕಾಗಿರುವಂತಹ ಅರ್ಹತೆಗಳು ಏನು ಎಂಬುದನ್ನು ನೋಡಬಹುದಾದರೆ.

ಇದನ್ನು ಓದಿ : ಹಿಂಗಾರು ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ : ಎಷ್ಟು ಹಣ ಅಕೌಂಟ್ ಗೆ ಬರುತ್ತೆ ನೋಡಿ .!

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು :

ರಾಜ್ಯ ಸರ್ಕಾರ ಇನ್ನೇನು ಸದ್ಯದಲ್ಲಿಯೇ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಅದರಂತೆ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು ಅವುಗಳೆಂದರೆ,

  1. ಕರ್ನಾಟಕ ರಾಜ್ಯದ ಕಾಯ ನಿವಾಸಿಗಳು ಮಾತ್ರ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಹೊಂದಿರುತ್ತಾರೆ.
  2. ಒಂದು ವೇಳೆ ಈಗಾಗಲೇ ಪಡಿತರ ಚೀಟಿಯನ್ನು ಹೊಂದಿದ್ದರೆ ಮತ್ತೆ ಅವರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
  3. ಮದುವೆಯಾದ ನಂತರ ನವದಂಪತಿಗಳು ಪ್ರತ್ಯೇಕವಾಗಿ ಕುಟುಂಬದಿಂದ ವಾಸಿಸುತ್ತಿದ್ದಾರೆ ಅವರು ಕೂಡ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
  4. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಎಂದು ಆದಾಯದ ಆಧಾರದ ಮೇಲೆ ವಿತರಣೆ ಮಾಡಲಾಗುತ್ತದೆ.
  5. ಆದಾಯ ತೆರಿಗೆ ಪಾವತಿ ಮಾಡುವವರು ಹಾಗೂ ಸರ್ಕಾರಿ ನೌಕರಿಯಲ್ಲಿ ಇರುವಂತಹವರು ಆದ್ಯತ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಹೀಗೆ ಈ ಎಲ್ಲಾ ಅರ್ಹತೆಗಳನ್ನು ಹೊಂದುವುದರ ಮೂಲಕ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

ಬಿಪಿಎಲ್ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿದ್ದಾಗ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

  1. ಕುಟುಂಬದ ಎಲ್ಲ ಸದಸ್ಯರ ವಿವರ
  2. ಎಲ್ಲ ಸದಸ್ಯರ ಆಧಾರ್ ಕಾರ್ಡ್
  3. ಬ್ಯಾಂಕ್ ಖಾತೆಗೆ ಕೆವೈಸಿ ಆಗಿರಬೇಕು
  4. ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
  5. ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ಐಡಿ
  6. ಆದಾಯ ಪ್ರಮಾಣ ಪತ್ರ
  7. ಜಾತಿ ಪ್ರಮಾಣ ಪತ್ರ
  8. ಕುಟುಂಬದ ಎಲ್ಲಾ ಸದಸ್ಯರ ಫೋಟೋ

ಹೀಗೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದುವುದರ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :

ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕೆಲವೊಂದು ದಾಖಲೆಗಳನ್ನು ಸಿದ್ಧಪಡಿಸಿಕೊಂಡ ನಂತರ ಏಪ್ರಿಲ್ ಒಂದರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಅದಾದ ನಂತರ ಕೆಲವೇ ದಿನಗಳಲ್ಲಿ ಅವಕಾಶ ನೀಡಲಾಗಿದ್ದು.

ಆ ದಿನದ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಅಂದರೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. https://ahara.kar.nic.in/ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಆದರೆ ದಿನದ 24 ಗಂಟೆಯವರೆಗೂ ಕೂಡ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಹಾಗಾಗಿ ಕೆಲವೇ ಅವಧಿಗೆ ಮಾತ್ರ ಹೋಟೆಲ್ ಓಪನ್ ಆಗಿರುವ ಕಾರಣ ಹತ್ತಿರದ ಸೇವ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿರುತ್ತದೆ.

ಒಟ್ಟಾರೆ ರಾಜ್ಯ ಸರ್ಕಾರವು ಹೊಸ ಪಡಿತರ ಚೀಟಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ತಿಳಿಸಲಾಗಿದ್ದು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಹೊಂದಿರುವವರು ತಕ್ಷಣವೇ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಇದರಿಂದ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಕೂಡ ಬಿಪಿಎಲ್ ಪಡಿತರ ಚೀಟಿ ಹೊಂದುವುದರ ಮೂಲಕ ಪಡೆಯಬಹುದಾಗಿದೆ.

ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರೇನಾದರೂ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಕಾದು ಕುಳಿತಿದ್ದರೆ ಈ ಮಾಹಿತಿ ಹೆಚ್ಚು ಉಪಯುಕ್ತವಾಗುತ್ತದೆ ಎಂದು ಹೇಳಬಹುದು. ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *