ನಮಸ್ಕಾರ ಸ್ನೇಹಿತರೆ ಎಲ್ಲರೂ ಸಾಮಾನ್ಯವಾಗಿ ವಿವಿಧ ಬ್ಯಾಂಕುಗಳಲ್ಲಿ ತಮ್ಮ ಖಾತೆಗಳನ್ನು ತೆರೆದಿರುತ್ತಾರೆ ಖಾತೆಗಳನ್ನು ತೆರೆಯುವುದರ ಜೊತೆಗೆ ಅದರ ನಿರ್ವಹಣೆ ಮಾಡುವುದು ಕೂಡ ಮುಖ್ಯವಾಗಿರುತ್ತದೆ ಮಿನಿಮಂ ಬ್ಯಾಲೆನ್ಸ್ ಅನ್ನು ಅಕೌಂಟ್ ನಲ್ಲಿ ಇರಿಸುವುದು ಅತಿ ಅಗತ್ಯವಾಗಿದ್ದು.
![What is the minimum balance in the bank account](https://i0.wp.com/kannadadigital.com/wp-content/uploads/2024/03/What-is-the-minimum-balance-in-the-bank-account.jpg?resize=300%2C169&ssl=1)
ಒಂದು ವೇಳೆ ಮಿನಿಮಂ ಬ್ಯಾಲೆನ್ಸ್ ಇಲ್ಲದೆ ಇರುವಂತಹ ಖಾತೆಗಳಿಗೆ ಎಲ್ಲ ಬ್ಯಾಂಕುಗಳು ಸಾಮಾನ್ಯವಾಗಿ ದಂಡ ವಿಧಿಸುತ್ತವೆ ಖಾತೆ ಹೊಂದಿರುವವರಿಗೆ ಬ್ಯಾಂಕಿನಲ್ಲಿ ಆರ್ಬಿಐನಿಂದ ಬಿಗ್ ಅಪ್ಡೇಟ್ ಹೊರಬಿದ್ದಿದ್ದು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಗೆ ಆರ್ಬಿಐ ಖಾತೆಯಲ್ಲಿ ಹೊಸ ನಿಯಮವನ್ನು ಜಾರಿ ಮಾಡಿದೆ. ಹಾಗಾದರೆ ಎಷ್ಟು ಕನಿಷ್ಠ ಬ್ಯಾಲೆನ್ಸ್ ಅನ್ನು ಉಳಿತಾಯ ಖಾತೆಯಲ್ಲಿ ಹೊಂದಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
Contents
RBI ನಿಂದ ಬ್ಯಾಂಕ್ ಖಾತೆ ಇದ್ದವರಿಗೆ ಗುಡ್ ನ್ಯೂಸ್ :
ಭಾರತೀಯ ರಿಸರ್ವ್ ಬ್ಯಾಂಕ್ ಖಾತೆಗಳಲ್ಲಿನ ಕನಿಷ್ಠ ಬ್ಯಾಲೆನ್ಸ್ ಗೆ ಸಂಬಂಧಿಸಿದಂತೆ ಆರ್ಬಿಐ ದೀಗ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು ನೀವು ಒಂದು ವೇಳೆ ಬ್ಯಾಂಕ್ ಖಾತೆಯನ್ನು ಬಳಸದೆ ಇದ್ದರೆ ಕನಿಷ್ಠ ಬ್ಯಾಲೆನ್ಸ್ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.
ಕನಿಷ್ಠ ಬ್ಯಾಲೆನ್ಸ್ ಅನ್ನು ನಿಷ್ಕ್ರಿಯವಾಗಿರುವ ಗಾದೆಗಳ ಮೇಲೆ ನಿರ್ವಹಿಸದಿದ್ದಕ್ಕಾಗಿ ಬ್ಯಾಂಕುಗಳು ದಂಡ ವಿಧಿಸುವಂತಿಲ್ಲ ಎಂದು RBI ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಎರಡು ವರ್ಷಗಳಿಂದ ಹೆಚ್ಚು ಕಾಲ ಯಾವುದೇ ವಹಿವಾಟು ಮಾಡದ ಖಾತೆಗಳನ್ನು ಇದು ಒಳಗೊಂಡಿರುತ್ತದೆ ಏಪ್ರಿಲ್ ಒಂದರಿಂದ ಈ ಹೊಸ ನಿಯಮ ಜಾರಿಯಾಗಲಿದೆ.
ಇದನ್ನು ಓದಿ : ಈ ಯೋಜನೆಯಡಿ ಯಾವುದೇ ಬಡ್ಡಿ ಇಲ್ಲದೆ ನಿಮ್ಮದಾಗಲಿದೆ 2 ಲಕ್ಷ ರೂ. .!! ಇಲ್ಲಿಂದಲೇ ಅರ್ಜಿ ಸಲ್ಲಿಸಿ
ಮಿನಿಮಮ್ ಬ್ಯಾಲೆನ್ಸ್ ನಲ್ಲಿ RBI ಯಿಂದ ಮತ್ತೆ ಬದಲಾವಣೆ :
ನಿಷ್ಕ್ರಿಯ ಎಂದು ಸ್ಕಾಲರ್ಶಿಪ್ ಅಥವಾ ನೇರ ಲಾಭ ವರ್ಗಾವಣೆಯನ್ನು ಪಡೆಯಲು ತೆರೆದಿರುವ ಖಾತೆಗಳನ್ನು ಬ್ಯಾಂಕುಗಳು ವರ್ಗಾಯಿಸಲು ಸಾಧ್ಯವಿಲ್ಲ ಎಂದು ಆರ್ ಬಿ ಐ ಸೂಚನೆ ನೀಡಿದ್ದು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಈ ಖಾತೆಗಳನ್ನು ಬಳಸದಿದ್ದರೂ ಕೂಡ ನಿಷ್ಕ್ರಿಯ ಖಾತೆಗಳ ಪಟ್ಟಿಗೆ ಈ ಖಾತೆಗಳನ್ನು ಸೇರಿಸುವಂತಿಲ್ಲ ಎಂದು RBI ಸುತ್ತೋಲೆ ಹೊರಡಿಸಿದೆ.
ನಿಷ್ಕ್ರಿಯಗೊಳಿಸಿದ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದಕ್ಕಾಗಿ ದಂಡ ವಿಧಿಸಲು ಬ್ಯಾಂಕುಗಳಿಗೆ ಅವಕಾಶವಿರುವುದಿಲ್ಲ ಎಂದು ಆರ್ ಬಿ ಐ ನ ಹೊಸ ಸುತ್ತೋಲೆಯ ಪ್ರಕಾರ ತಿಳಿಸಲಾಗಿದೆ. ನಿಷ್ಕ್ರಿಯ ಖಾತೆಗಳನ್ನು ಸಕ್ರಿಯಗೊಳಿಸಲು ಯಾವುದೇ ಶುಲ್ಕವನ್ನು ಕೂಡ ತೆಗೆದುಕೊಳ್ಳುವಂತಿಲ್ಲ ಎಂದು RBI ನ ಹೊಸ ನಿಯಮದ ಪ್ರಕಾರ ತಿಳಿಸಲಾಗಿದೆ.
ಒಟ್ಟಾರೆ ಬ್ಯಾಂಕ್ ಖಾತೆಯನ್ನು ಹೊಂದಿರುವವರು ತಮ್ಮ ಬ್ಯಾಂಕನಲ್ಲಿ ಯಾವುದೇ ರೀತಿಯ ಮಿನಿಮಮ್ ಬ್ಯಾಲೆನ್ಸ್ ಅನ್ನು ಹೊಂದಿಲ್ಲದೆ ಇದ್ದರೂ ಕೂಡ ಅಂತಹ ಬ್ಯಾಂಕ್ ಖಾತೆಗಳು ಅದರಲ್ಲಿ ಮುಖ್ಯವಾಗಿ ಎರಡು ವರ್ಷ ಹಳೆಯ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಬಾರದೆಂದು RBI ಹೊಸ ಸೂಚನೆಯನ್ನು ನೀಡಿದೆ.
ಒಟ್ಟಾರೆ RBI ದೇಶದಲ್ಲಿರುವ ನಾಗರಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಮಿನಿಮಮ್ ಬ್ಯಾಲೆನ್ಸ್ ಅಲ್ಲಿ ಮತ್ತೆ ಬದಲಾವಣೆ ಮಾಡಲಾಗಿದ್ದು ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಹೊಂದಿಲ್ಲದೆ ಇದ್ದರೂ ಕೂಡ ಬ್ಯಾಂಕುಗಳು ಇನ್ನು ಮುಂದೆ ಅಂತಹ ಖಾತೆಗಳಿಗೆ ದಂಡ ವಿಧಿಸುವಂತಿಲ್ಲ.
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಯಾವುದೇ ರೀತಿಯ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೂ ಕೂಡ ನಿಮಗೆ ಶುಲ್ಕ ವಿಧಿಸಿದರೆ ಇದರ ವಿರುದ್ಧ ಆರ್ಬಿಐಗೆ ದೂರು ಸಲ್ಲಿಸಬಹುದಾಗಿದೆ ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಬ್ಯಾಂಕಿಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳಲು ಹೇಳಿ ಧನ್ಯವಾದಗಳು.