rtgh

ರೈತರ ಸಾಲ ಮನ್ನಾ : ಈ ಬ್ಯಾಂಕುಗಳಲ್ಲಿ ಸಾಲ ಮಾಡಿದವರು ನೋಡಿ ಪಟ್ಟಿ ಬಿಡುಗಡೆ

Farmers loan waiver is only loan in these banks

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರ ಇದೀಗ ರೈತರ ಸಾಲದ ಬಡ್ಡಿಯನ್ನು ಮನ್ನಾ ಮಾಡುತ್ತಿದ್ದು ಒಂದು ವೇಳೆ ರೈತರು ಈ ಬ್ಯಾಂಕುಗಳಲ್ಲೇನಾದರೂ ಸಾಲವನ್ನು ಪಡೆದಿದ್ದಾರೆ ಆ ಸಾಲದ ಮೇಲಿರುವಂತಹ ಬಡ್ಡಿಯನ್ನು ಮನ್ನ ಮಾಡುತ್ತಿದೆ.

Farmers loan waiver is only loan in these banks
Farmers loan waiver is only loan in these banks

ಒಂದು ವೇಳೆ ನಿಮ್ಮ ಹೆಸರಿನಾದರೂ ಈ ಪಟ್ಟಿಯಲ್ಲಿದ್ದರೆ ನಿಮ್ಮ ಸಾಲ ಮನ್ನಾ ಆಗುತ್ತದೆ ಎಂದರ್ಥ. ಹಾಗಾದರೆ ಯಾವ ಪಟ್ಟಿಯಲ್ಲಿ ರೈತರ ಸಾಲವನ್ನು ಮನ್ನಾ ಮಾಡಲಾಗಿದೆ ಹಾಗೂ ಯಾವ ಬ್ಯಾಂಕುಗಳಲ್ಲಿ ಇರುವಂತಹ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡಲು ನಿರ್ಧರಿಸಿದೆ ಎಂಬುದರ ಮಾಹಿತಿ ಹಾಗೂ ಎಷ್ಟು ರೈತರ ಸಾಲ ಮನ್ನಾ ಮಾಡಲಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಯಬಹುದು.

57 ಸಾವಿರಕ್ಕೂ ಹೆಚ್ಚು ರೈತರ ಸಾಲ ಮನ್ನಾ :

ರೈತರು ಡಿಸಿಸಿ ಬ್ಯಾಂಕ್ ಮತ್ತು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗಳ ಬ್ಯಾಂಕುಗಳಲ್ಲಿ ಸಾಲವನ್ನು ಪಡೆದಿದ್ದರೆ ಆ ಸಾಲದ ಮೇಲಿನ ಬಡ್ಡಿಯನ್ನು ಮನ್ನ ಮಾಡಲಾಗುತ್ತದೆ. ಈ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಸರ್ಕಾರ 450 ಕೋಟಿ ರೂಪಾಯಿಗಳನ್ನು ಈ ವರ್ಷದ ಬಜೆಟ್ ನಲ್ಲಿ ಆರ್ಥಿಕ ನೆರವಾಗಿ ನೀಡಿದೆ.

ಕೃಷಿ ನೀತಿಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರದ ಕೃಷಿ ಅಭಿವೃದ್ಧಿ ಪ್ರಾಧಿಕಾರ ಇದನ್ನು ರಚಿಸುತ್ತಿದೆ. ಇದೀಗ ಜಿಲ್ಲಾ ಸಹಕಾರ ಕೇಂದ್ರ ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳಲ್ಲಿ ಇರುವಂತಹ ಮಧ್ಯಮ ಮತ್ತು ದೀರ್ಘಾವಧಿಯ ಮಿತಿಮೀರಿದ ಸಾಲದ ಮೇಲಿನ ಬಡ್ಡಿಯನ್ನು ಕರ್ನಾಟಕ ಸರ್ಕಾರ ಮನ್ನಾ ಮಾಡಲು ನಿರ್ಧರಿಸಿದೆ.

ಇದನ್ನು ಓದಿ : KSRTC ಯಿಂದ ಬಸ್ ಪ್ರಯಾಣಿಕರಿಗೆ ಶುಭ ಸುದ್ದಿ : ಅಧಿಕೃತ ಘೋಷಣೆ ! ಪುರುಷರಿಗೆ ರಿಲೀಫ್ !

ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಘೋಷಣೆ :

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ರೈತರ ಬಡ್ಡಿಮನ್ನ ಮಾಡಲಾಗುತ್ತದೆ ಎಂಬುದರ ಬಗ್ಗೆ ಘೋಷಣೆ ಮಾಡಿದ್ದು ಇದರ ಪ್ರಯೋಜನವನ್ನು 57000ಕ್ಕೂ ಹೆಚ್ಚಿನ ರೈತರು ಪಡೆಯುತ್ತಾರೆ. ಈ ಸಾಲದ ಮೇಲಿನ ಬಡ್ಡಿಯನ್ನು 2024 25 ನೇ ಸಾಲಿನ ವಿಧಾನಸಭೆಯ ಬಜೆಟ್ ನಲ್ಲಿ ಮಂಡಿಸಿದರು. ಇದನ್ನು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನೀತಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಕೃಷಿ ಅಭಿರುದ್ದಿ ಪ್ರಾಧಿಕಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು 496 ಕೋಟಿ ರೂಪಾಯಿಗಳ ಸಾಲವನ್ನು ಡಿಸಿಸಿ ಬ್ಯಾಂಕ್ ಹಾಗೂ ಕೃಷಿ ಪತ್ತಿನ ಸಹಕಾರಿ ಬ್ಯಾಂಕುಗಳು ವಸೂಲಿ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸರ್ಕಾರವು ಪರಿಹಾರದ ಮೂಲಕ ಯೋಜನೆಯ ಅಡಿಯಲ್ಲಿ ಬ್ಯಾಂಕುಗಳಿಗೆ 450 ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಯವರು ಈ ಬ್ಯಾಂಕುಗಳ ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಸುಧಾರಣೆಯನ್ನು ಈ ನಿರ್ಧಾರದಿಂದ ತರಲಾಗುತ್ತದೆ ಎಂದು ಹೇಳಿದರು.

10 ಲಕ್ಷದಿಂದ 15 ಲಕ್ಷಕ್ಕೆ ಏರಿಕೆ :

3 ಲಕ್ಷದಿಂದ 5 ಲಕ್ಷಕ್ಕೆ 202324ರಲ್ಲಿ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಹಾಗೂ ಮಧ್ಯಮ ಮತ್ತು ದೀರ್ಘಾವಧಿ ಸಾಲಗಳ ಮೇಲಿನ ಮಿತಿಯನ್ನು 10 ಲಕ್ಷದಿಂದ 15 ಲಕ್ಷಕ್ಕೆ ಶೇಕಡ ಮೂರರಷ್ಟು ಸಬ್ಸಿಡಿಯ ದರವನ್ನು ಏರಿಸಲಾಗುತ್ತದೆ. ಸಹಕಾರಿ ಕ್ಷೇತ್ರದ ಮೂಲಕ ಪ್ರಸತ್ತು ವರ್ಷದಲ್ಲಿ 27,000 ಕೋಟಿ ಸಾಲ ನೀಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.

ರಾಜ್ಯದ 36ಲಕ್ಷಕ್ಕೂ ಹೆಚ್ಚಿನ ರೈತರಿಗೆ ಇದರ ಮೂಲಕ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.

ಒಟ್ಟಾರೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಸಾಲವನ್ನು ಈ ಕೃಷಿ ಸಹಕಾರಿ ಬ್ಯಾಂಕುಗಳಲ್ಲಿ ಅವರೇನಾದರೂ ಪಡೆದಿದ್ದರೆ ಸಮಗ್ರ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ವಿವಿಧ ಯೋಜನೆಗಳನ್ನು ಕೃಷಿಗೆ ಸಂಬಂಧಿಸಿದಂತೆ ಕ್ರೂಡೀಕರಿಸಿ ಈ ವರ್ಷದಿಂದ ರೈತರಿಗೆ ಕರ್ನಾಟಕ ರೈತ ಸಮೃದ್ಧಿ ಯೋಜನೆ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿ ಅದರ ಮೂಲಕ ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನ ಮಾಡಲು ನಿರ್ಧರಿಸಿದೆ.

ಹಾಗಾಗಿ ರಾಜ್ಯ ಸರ್ಕಾರವು ಡಿಸಿಸಿ ಬ್ಯಾಂಕ್ ಹಾಗೂ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳಲ್ಲಿ ಮಧ್ಯಮ ದೀರ್ಘಾವಧಿ ಹಾಗೂ ಅಲ್ಪಾವಧಿ ಸಾಲವನ್ನು ಪಡೆದಿದ್ದರೆ ಅಂತಹ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಹಾಗಾಗಿ ಈ ಮಾಹಿತಿಯ ಬಗ್ಗೆ ಎಲ್ಲ ರೈತರಿಗೂ ಶೇರ್ ಮಾಡುವ ಮೂಲಕ ಕೃಷಿ ಚಟುವಟಿಕೆ ಏನಾದರೂ ರೈತರು ಸಾಲ ಮಾಡಿದ್ದರೆ ಅದರ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *