rtgh

ಉಚಿತ ವಸತಿ ಯೋಜನೆಯಲ್ಲಿ 36,000 ಬಡ ಜನರಿಗೆ ಮನೆ ಹಂಚಿಕೆ !

Free Housing Scheme

ನಮಸ್ಕಾರ ಸ್ನೇಹಿತರೆ, ತನ್ನದೇ ಆದಂತಹ ಸ್ವಂತ ಮನೆಯನ್ನು ಪ್ರತಿಯೊಬ್ಬ ವ್ಯಕ್ತಿಯು ಕಟ್ಟಿಕೊಳ್ಳಬೇಕೆ ಎನ್ನುವ ಕನಸನ್ನು ಹೊಂದಿರುತ್ತಾರೆ ಆದರೆ ಈ ಕನಸು ನನಸು ಮಾಡಿಕೊಳ್ಳುವುದು ಬಡವರಿಗೆ ಕಷ್ಟ ಸಾಧ್ಯದ ವಿಚಾರವಾಗಿದೆ.

Free Housing Scheme
Free Housing Scheme

ಸಾಮಾನ್ಯ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಸರ್ಕಾರದ ಕರ್ತವ್ಯವಾಗಿದ್ದು ಮೂಲಭೂತ ಸೌಕರ್ಯಗಳಲ್ಲಿ ವಸತಿ ಕೊಡು ಒಂದಾಗಿರುವುದರಿಂದ ಬಡವರಿಗೆ ವಸತಿ ರಹಿತರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಎಲ್ಲಾ ಸರ್ಕಾರಗಳು ಸಹಾಯ ಮಾಡುತ್ತದೆ. ಇಲ್ಲವೇ ಮನೆ ನಿರ್ಮಿಸಿ ಕೊಡುತ್ತವೆ ಇದೇ ಹಾದಿಯಲ್ಲಿ ಇದೀಗ ಕಾಂಗ್ರೆಸ್ ಸರ್ಕಾರವು ಸಾಗಿದ್ದು ಆ ಬಗ್ಗೆ ನೋಡುವುದಾದರೆ ,

ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆ ನಿರ್ಮಾಣ :

ಬಡವರಿಗಾಗಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ ಉತ್ತಮ ಗುಣಮಟ್ಟದಿಂದ ಈ ಮನೆಗಳು ಕೂಡಿರಬೇಕು ಸಂತೋಷದಿಂದ ಇದರಲ್ಲಿ ಬಡವರು ಜೀವನ ನಡೆಸುವಂತಾಗಬೇಕು ಎಂದು ಅಧಿಕಾರಿಗಳಿಗೆ ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರು ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಬಡವರಿಗಾಗಿ ಈ ತಿಂಗಳಾಂತ್ಯಕ್ಕೆ ನಿರ್ಮಿಸಲಾದ ಬರೋಬ್ಬರಿ 36,000 ಮನೆಗಳನ್ನು ಬಡವರಿಗೆ ಹಸ್ತಾಂತರ ಮಾಡಲಿದ್ದಾರೆ

ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಚಿವರು ಮುಖ್ಯಮಂತ್ರಿಗಳು ಏಕಕಾಲದಲ್ಲಿ ರಾಜ್ಯದ ಎಲ್ಲಾ ಕಡೆ ನಿರ್ಮಿಸಲಾದ ಮನೆಗಳ ಹಂಚಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಹಾಗೂ ಕುಡಿಯುವ ನೀರು ವಿದ್ಯುತ್ ಒಳಚರಂಡಿ ಸಂಪರ್ಕ ಪ್ರತಿಮನೆಗೂ ಶೌಚಾಲಯ ನಿರ್ಮಾಣ ಮನೆಗಳಿಗೆ ಮಾಡಬೇಕೆಂದು ಹೇಳಿದ್ದಾರೆ. ಫೆಬ್ರವರಿ 20ರ ಒಳಗಾಗಿ ಈ ಎಲ್ಲಾ ಕೆಲಸಗಳು ಮುಗಿಯಬೇಕು ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಯನ್ನಾಗಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಸಚಿವರು ನೀಡಿದ್ದಾರೆ.

ಇದನ್ನು ಓದಿ : ಈ ತಪ್ಪನ್ನು ಕ್ರೋಮ್ ಬಳಸುವಾಗ ಮಾಡಿದರೆ ಅಪಾಯ : ಕೇಂದ್ರದಿಂದ ಬಳಕೆದಾರರಿಗೆ ಎಚ್ಚರಿಕೆ !

ಮನೆ ಹಂಚಿಕೆ :

ಮನೆಗಳ ನಿರ್ಮಾಣದ ಗುರಿ ಪ್ರತಿ ಯೋಜನೆಯಲ್ಲಿ ನೀಡಲಾಗಿದೆ ಎನ್ನುವುದರ ವಿವರವನ್ನು ನೀಡಬೇಕು ಹಾಗೂ ಮನೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಥವಾ ಬಿಲ್ಪಾವತಿ ವೇಳೆ ಗುತ್ತಿಗೆದಾರರು ತೊಂದರೆಯನ್ನು ನೀಡಿದ್ದಾರೆ ಅಧಿಕಾರಿಗಳು ಅದನ್ನು ನನ್ನ ಗಮನಕ್ಕೆ ತರಬೇಕು ಎಂದು ಹೇಳಿದ್ದು ಕಪ್ಪು ಪಟ್ಟಿಗೆ ಅಂತಹ ಗುತ್ತಿಗೆದಾರರನ್ನು ಸೇರಿಸಲಾಗುತ್ತದೆ ಎಂದು ಹೇಳಿದರು.

ಯಾವುದೇ ನಿರ್ಲಕ್ಷವನ್ನು ಈ ಯೋಜನೆ ಜಾರಿಯಲ್ಲಿ ಮಾಡಬಾರದು ಯಾವುದೇ ನಿರ್ಲಕ್ಷವನ್ನು ಅಧಿಕಾರಿ ಮಾಡಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕೆಲಸದಿಂದ ಅಮಾನತು ಮಾಡಲಾಗುತ್ತದೆ ಎಂದು ತಾಕಿತು ಮಾಡಿದ್ದಾರೆ.

ಒಟ್ಟಾರೆ ಮನೆ ಇಲ್ಲದವರಿಗೆ ಮನೆ ಒದಗಿಸಲು ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನಿಸುತ್ತಿದ್ದು ಈ ಬಗ್ಗೆ ಎಲ್ಲ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಮನೆ ನಿರ್ಮಾಣ ಮಾಡಿಕೊಳ್ಳಲು ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಯೋಜನೆ ಹೆಸರು ಏನು ..?

ಉಚಿತ ವಸತಿ ಯೋಜನೆ

ಯೋಜನೆ ರೂಪಿಸಿದ ಸರ್ಕಾರ ..?

ಕರ್ನಾಟಕ.

Spread the love

Leave a Reply

Your email address will not be published. Required fields are marked *