ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು, ಇಂದು ಕೋಟ್ಯಾಂತರ ಮಹಿಳೆಯರು ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 2000 ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.
ಗೃಹಲಕ್ಷ್ಮಿ ಯೋಜನೆ ಬಹುತೇಕ ಯಶಸ್ವಿಯಾಗಿದ್ದು ರಾಜ್ಯ ಸರ್ಕಾರ ಈ ಯೋಜನೆಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಟ್ಟಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ದಿನದಿಂದ ದಿನಕ್ಕೆ ಹೊಸ ಹೊಸ ರೀತಿಯ ಅಪ್ಡೇಟ್ ಗಳು ಸಿಗುತ್ತಿದ್ದು ಈಗ ಯಾವ ವಿಷಯದ ಬಗ್ಗೆ ಮಾಹಿತಿ ಸಿಕ್ಕಿದೆ ಎಂಬುದನ್ನು ನೋಡೋಣ.
Contents
ಪೆಂಡಿಂಗ್ ಇರುವ ಹಣ ನಿಜಕ್ಕೂ ಬರುತ್ತಾ?
ಗೃಹಲಕ್ಷ್ಮಿ ಯ 9ನೇ ಕಂತಿನ ಹಣವು ಬಿಡುಗಡೆ ಆಗಿದೆ, ಆದ್ರೆ ಸಾಕಷ್ಟು ಜನರಿಗೆ ಮೊದಲ 2 ಕಂತಿನ ಹಣವು ಬಿಡುಗಡೆಯಾಗಿ ಮತ್ತೆ ಗ್ರಹಲಕ್ಷ್ಮಿ ಯೋಜನೆಯ ಹಣವು ಸಿಕ್ಕಿಲ್ಲ ಅಂತವರಿಗೆ ಪೆಂಡಿಂಗ್ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಸರ್ಕಾರ ತಿಳಿಸಿತ್ತು.
ಇದುವರೆಗೆ ಹಲವರಿಗೆ ಪೆಂಡಿಂಗ್ ಇರುವ ಹಣವು ಲಭ್ಯವಾಗಿದೆ ಆದರೆ ಎಲ್ಲರಿಗೂ ಈ ಹಣ ಸಿಕ್ಕಿಲ್ಲ ಇದಕ್ಕೆ ಮುಖ್ಯ ಕಾರಣ ಮಹಿಳೆಯರ ಖಾತೆಯಲ್ಲಿ ಬೇಕಾಗಿರುವ ಬದಲಾವಣೆಯನ್ನು ಮಾಡಿಸಿಕೊಳ್ಳದೆ ಇರುವುದು.
KCC ರೈತ ಸಾಲ ಮನ್ನಾ.!! ಇಲ್ಲಿದೆ ಹೊಸ ಪಟ್ಟಿ; ಇಂದೇ ಚೆಕ್ ಮಾಡಿ
ಈ ಬದಲಾವಣೆಗಳು ಆಗಬೇಕಿತ್ತು
ರಾಜ್ಯ ಸರ್ಕಾರ ಈಗಾಗಲೇ ತಿಳಿಸಿರುವಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಬ್ಯಾಂಕ ಖಾತೆಯಲ್ಲಿ ಮಾಡಿಕೊಳ್ಳಬೇಕಿತ್ತು. ಉದಾ: ಆಧಾರ್ ಸೀಡಿಂಗ್ ಮಾಡಿಸುವುದು ಮತ್ತು ಈಕೆ ವೈ ಸಿ ಮಾಡಿಸುವುದು, ಅಗತ್ಯವಿದ್ದಲ್ಲಿ ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸುವುದು, ಹಾಗೆಯೇ ಮಹಿಳೆಯರ ಬ್ಯಾಂಕ್ ಖಾತೆಯನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳುವುದು. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅಂಥವರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.
8 ಮತ್ತು 9ನೇ ಕಂತಿನ ಹಣ ಒಟ್ಟಿಗೆ ಖಾತೆಗೆ ಡಿಬಿಟಿ ಮಾಡಿದ ಸರ್ಕಾರ
ಪ್ರತಿ ತಿಂಗಳು 20 ನೇ ತಾರೀಖಿನ ನಂತರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಲೋಕಸಭಾ ಚುನಾವಣೆಯ ಇರುವುದರಿಂದ ಈ ಬಾರಿಯು ಬಹಳ ಬೇಗ ಹಣ ಮಂಜೂರು ಮಾಡಲಾಗಿದ್ದು 9ನೇ ಕಂತಿನ ಹಣ ಮೇ ತಿಂಗಳ ಬದಲು ಏಪ್ರಿಲ್ ತಿಂಗಳಿನಲ್ಲಿಯೇ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಕೆಲವು ಜಿಲ್ಲೆಯ ಮಹಿಳೆಯರಿಗೆ ಏಪ್ರಿಲ್ ತಿಂಗಳಿನಲ್ಲಿ ಎಂಟು ಮತ್ತು ಒಂಬತ್ತನೇ ಕಂತಿನ ಹಣ ಕೊಟ್ಟಿಗೆ ನಾಲ್ಕು ಸಾವಿರ ರೂಪಾಯಿ ಜಮಾ ಆಗಿದೆ.
ಸಿ ಡಿ ಪಿ ಓ ಕಚೇರಿಗೆ ಹೋಗಿ ಅಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಅಥವಾ ಆಶಾ ಕಾರ್ಯಕರ್ತೆಯರು ಅಂಗನವಾಡಿ ಸಹಾಯಕಿಯರನ್ನು ಭೇಟಿ ಮಾಡಿ ಮಹಿಳೆಯರು ತಮ್ಮ ಖಾತೆಗೆ ಸಂಬಂಧಪಟ್ಟ ಸಮಸ್ಯೆ ಇದ್ರೆ ಅವರಿಂದಲೇ ಪರಿಹಾರ ಪಡೆದುಕೊಳ್ಳಬಹುದು.
ಇತರೆ ವಿಷಯಗಳು:
ಹೆಣ್ಣು ಮಕ್ಕಳಿಗೆ ಭರ್ಜರಿ ಸುದ್ದಿ.!! ಈ ದಾಖಲೆ ಹೊಂದಿದವರಿಗೆ ಉಚಿತ ಹೊಲಿಗೆ ಯಂತ್ರ
ನಿರುದ್ಯೋಗಿಗಳಿಗೆ ಭರ್ಜರಿ ಕೊಡುಗೆ.! ಇಂದು ಅಪ್ಲೇ ಮಾಡಿದವರ ಲೈಫ್ ಫುಲ್ ಚೆಂಜ್