ಗೃಹಲಕ್ಷ್ಮಿ ಯೋಜನೆ ಹಣವನ್ನು ರಾಜ್ಯದ ಮಹಿಳೆಯರ ಖಾತೆಗೆ ಸರ್ಕಾರ ಜಮಾ ಮಾಡುತ್ತಿದ್ದು, ಹಲವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ. ಆದರೆ ಇನ್ನೂ ಕೆಲವರ ಖಾತೆಗೆ ಇದುವರೆಗೂ ಕೂಡ ಹಣ ಜಮಾ ಆಗಿಲ್ಲ.
ಹಣ ಜಮಾ ಆಗದಿದ್ದರೆ ಏನು ಮಾಡಬೇಕು..?
ಗೃಹಲಕ್ಷ್ಮಿ ಗೆ ನೋಂದಣಿಯನ್ನು ಮಾಡಿಕೊಂಡು ಹಣವು ಖಾತೆಗೆ ಬಾರದೆ ಇರುವಂತಹ ಫಲಾನುಭವಿ ಮಹಿಳೆಯರು ತಕ್ಷಣ ಅರ್ಜಿಯೊಂದಿಗೆ E-KYC ಸಂಬಂಧಿತ ಎಲ್ಲಾ ಸಮಸ್ಯೆಗಳನ್ನು ಬ್ಯಾಂಕ್ಗೆ ಹೋಗಿ ಪರಿಹರಿಸಿಕೊಳ್ಳಬೇಕು. ನೀವು ಕೊಟ್ಟಿರುವಂತ ಬ್ಯಾಂಕ್ ಖಾತೆಗೆ ಮತ್ತೊಮ್ಮೆ E-KYC ಮಾಡಿಸಬೇಕು. ಅಂದರೆ, ಬ್ಯಾಂಕ್ ಖಾತೆಗೆ ಮತ್ತೊಮ್ಮೆ ಆಧಾರ್ ಸೀಡಿಂಗ್ ಮಾಡಿಸಿಕೊಳ್ಳಿ ನಂತರ ಹಣವನ್ನು ಜಮೆ ಮಾಡಲಾಗುತ್ತದೆ.
ಗೃಹ ಲಕ್ಷ್ಮಿ ಫಲಾನುಭವಿಗಳಿಗೆ NPCI ಕಡ್ಡಾಯ ಮಾಡಿದೆ. ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ E -KYC, ಆಧಾರ್ ಸೀಡಿಂಗ್ ಅನ್ನು ಮಾಡಿಸಬೇಕಾಗಿದೆ. ಕೆಲವೊಮ್ಮೆ ಖಾತೆಗೆ ಹಣವು ಜಮೆಯಾಗಿದ್ದರ ಬಗ್ಗೆ ಮೊಬೈಲ್ಗೆ SMS ಬರುತ್ತದೆ. ಕೆಲವು ಬಾರಿ SMS ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಬ್ಯಾಂಕ್ಗೆ ಹೋಗಿ ಪಾಸ್ ಬುಕ್ ಅನ್ನು ಚೆಕ್ ಮಾಡಿಸಬೇಕು.
ಇದನ್ನೂ ಸಹ ಓದಿ: LPG ಬಳಕೆದಾರರಿಗೆ ಗುಡ್ ನ್ಯೂಸ್.!! ಈ ತಿಂಗಳಿನಿಂದ ಗ್ಯಾಸ್ ಸಿಲಿಂಡರ್ ದರ ರೂ.300 ಇಳಿಕೆ
ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು NPCI ಕಡ್ಡಾಯಗೊಳಿಸಿದೆ. NPCI ಆಗದಿದ್ದರೆ 6ನೇ ಕಂತಿನ ಹಣವು ಜಮಾ ಆಗಲ್ಲ. ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿಯನ್ನು ನೀಡುವ ಮೂಲಕ NPCI ಅನ್ನು ಮಾಡಬಹುದು.ಪಡಿತರ ಚೀಟಿ, ಆಧಾರ್ ಕಾರ್ಡ್ ಜೊತೆಗೆ ಬ್ಯಾಂಕಿನ ವಿವರಗಳನ್ನು ನೀಡಿದರೆ NPCI ಯನ್ನು ಮಾಡಿಕೊಡಲಾಗುತ್ತದೆ.
ಗೃಹಲಕ್ಷ್ಮಿ ನೋಂದಣಿಯನ್ನು ಮಾಡಿಕೊಂಡು ಹಣ ಬಾರದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ E-KYC ಸಂಬಂಧಿತ ಯಾವುದೇ ಸಮಸ್ಯೆಗಳನ್ನು ಬ್ಯಾಂಕ್ಗಳಲ್ಲಿ ಪರಿಹರಿಸಿಕೊಳ್ಳಬೇಕು. ನಂತರ ನ್ಯಾಯಬೆಲೆಯ ಅಂಗಡಿಗಳಿಗೆ ಹೋಗಿ, E-KYC ಅಪ್ಡೇಟ್ ಅನ್ನು ಮಾಡಿಸಿ, ದೃಢೀಕರಣವನ್ನು ಪಡೆದು ಅವುಗಳನ್ನು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯ ಕೇಂದ್ರಗಳ ಕಾರ್ಯಕರ್ತೆಯರಿಗೆ ಒದಗಿಸಿದರೆ, ಸಹಾಯಧನವನ್ನು ಪಾವತಿಸಲು ಕ್ರಮವಹಿಸಲಾಗುತ್ತದೆ.
ಇತರೆ ವಿಷಯಗಳು:
ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ : ಹೇಗೆ ಪಡೆಯುವುದು ನೋಡಿ !
ಯಾರಿಗೆ ಗೃಹಲಕ್ಷ್ಮಿ ಹಣ ಬಂತು, ಯಾರಿಗೆ ಬಂದಿಲ್ಲ : ನಿಮ್ಮ ಮೊಬೈಲ್ ನಲ್ಲಿ ತಕ್ಷಣ ಪರಿಶೀಲನೆ ಮಾಡಿ