ಹಲೋ ಸ್ನೇಹಿತರೇ, ಪ್ರತಿಯೊಂದು ದ್ವಿಚಕ್ರ ವಾಹನಗಳಿಗೆ ಮತ್ತು ಯಾವುದೇ ವಾಹನಗಳು ಕೊಂಡುಕೊಂಡಾಗ ಅದಕ್ಕೆ HSRP ನಂಬರ್ ಪ್ಲೇಟ್ ಇರುವುದು ಕಡ್ಡಾಯ ಎಂದು ಸರ್ಕಾರ ಘೋಷಣೆ ಮಾಡಿದೆ. ಇನ್ನು ಇದರ ಜೊತೆಗೆ ಇತ್ತೀಚಿಗೆ ತಾನೇ HSRP Number Plate ಬದಲಾವಣೆಗಳಿಗೆ ಸಂಬಂಧಪಟ್ಟಂತೆ ಸರ್ಕಾರವು ಹೊಸ ಅಧಿಸೂಚನೆಯನ್ನು ಕೂಡ ಹೊರಡಿಸಿತು. ಅದಕ್ಕೆ ಕಾಲಾವಧಿಯನ್ನು ಸಹ ಸರ್ಕಾರವು ನಿಗದಿಪಡಿಸಿತು.
ನಂಬರ್ ಪ್ಲೇಟ್ ಗೆ ಸಂಬಂಧಿಸಿದಂತೆ ಹೊಸ ಬದಲಾವಣೆ:
ಇನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಹೊಸ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ಜವಾಬ್ದಾರಿಯನ್ನು ಇದೀಗ ವಾಹನಗಳನ್ನು ಖರೀದಿಸುವ ಶೋರೂಂ ಗಳಿಗೆ ವಹಿಸಲಾಗಿದೆ. ಇದರ ಕುರಿತಾಗಿ ಮಾತನಾಡಿರುವ ಡೆಪ್ಯುಟಿ ಕಮೀಷನರ್ ಹೊಸ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ ನಂಬರ್ ಪ್ಲೇಟ್‌ಗಳನ್ನು ಜಾರಿಗೊಳಿಸುವ ಕುರಿತು ಉಪಸಾರಿಗೆ ಆಯುಕ್ತರ ಕಚೇರಿ ಗುರುವಾರ ನಿರ್ದೇಶನ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಕೆಲವು ದಿನಗಳಿಂದ ಹಲವರಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅದರ ಕುರಿತಾದಂತಹ ಬದಲಾವಣೆಗಳು ಮತ್ತು ಅದು ಸರಿಯಾದ ಸಮಯಕ್ಕೆ ಸಿಗದೇ ಇರುವಂತದ್ದು ಬಹಳ ಗೊಂದಲ ಮತ್ತು ಸಮಸ್ಯೆಗೆ ಕಾರಣವಾಗಿತ್ತು. ಈ ರೀತಿಯಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಹೊಸ ಸೂಚನೆಯೊಂದನ್ನು ಹೊರಡಿಸಲಾಗಿದೆ. ಇದರ ಕುರಿತಾಗಿ ಮಾತನಾಡಿರುವಂತಹ ಆಯುಕ್ತರು ಇತ್ತೀಚೆಗೆ ಹೊಸ ವಾಹನಗಳನ್ನು ಖರೀದಿಸಿದ ವಾಹನ ಮಾಲೀಕರು ತಮ್ಮ HSLRP ನಂಬರ್ ಪ್ಲೇಟ್‌ಗಳನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಆಯಾ ಶೋರೂಂಗಳಿಂದ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಮತ್ತು ಇದನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಜಾರಿಗೆ ತರಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
10 ಗ್ರಾಂ ಚಿನ್ನದ ದರ ಇದೀಗ 2 ಲಕ್ಷ : ಕೆಲವೇ ವರ್ಷಗಳಲ್ಲಿ ಚಿನ್ನದ ದರ ಏರಿಕೆ ಎಷ್ಟು ಆಗಲಿದೆ .?
ಇನ್ನು ನಿಗದಿಪಡಿಸಿದಂತಹ ನಿಯಮಗಳಂತೆ ಇನ್ನು ಮುಂದೆ ಈ ವಿಚಾರದ ಕುರಿತಾಗಿ ಕಟ್ಟುನಿಟ್ಟಾದ ತಪಾಸಣೆಯನ್ನು ನಡೆಸಲಾಗುವುದು ಹಾಗೂ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ. ಇದರ ಜೊತೆಗೆ HSRP Number Plate ಇಲ್ಲದ ವಾಹನಗಳಿಗೆ ಇತರ ಕಾನೂನು ರೀತಿಯಾದ ಪರಿಣಾಮಗಳ ಜೊತೆಗೆ ದಂಡವನ್ನು ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದರು.
ಇನ್ನು ಇತ್ತೀಚಿಗೆ ನಡೆದ ಒಂದು ತಪಾಸಣೆಯಲ್ಲಿ ಆರ್‌ಟಿಒ ಮುರಳಿ ಮತ್ತು ಮೋಟಾರು ವಾಹನ ತಪಾಸಣಾ ಅಧಿಕಾರಿಗಳಾದ ವಿಜಯಭಾಸ್ಕರ್, ಪ್ರಸಾದ್, ಲಕ್ಷ್ಮೀ ಪ್ರಸನ್ನ, ವೇಣು ಮತ್ತು ನಾರಾಯಣ ನಾಯ್ಕ್ ಅವರನ್ನೊಳಗೊಂಡ ತಂಡವು, ಕಡಪ ಮತ್ತು ಪ್ರದ್ದತ್ತೂರಿನ ವಿವಿಧ ವೇದಿಕೆಗಳಲ್ಲಿ HSRP Number Plate ಗೆ ಸಂಬಂಧಿಸಿದಂತೆ ವೇದಿಕೆಗಳ ಅನುಷ್ಠಾನವನ್ನು ಪರಿಶೀಲಿಸಿತು.
ಅಲ್ಲಿ ಸರಿಯಾದ ರೀತಿಯಲ್ಲಿ ನಿಯಮಗಳನ್ನು ಪಾಲಿಸದೆ ಮತ್ತು HSRP ನಂಬರ್ ಪ್ಲೇಟ್ ನ ಅಳವಡಿಕೆ ಇಲ್ಲದೆ ಇರುವುದು ಕಂಡುಬಂದಿದ್ದು, ಇದರ ಕುರಿತಾಗಿ ಕ್ರಮವನ್ನು ಕೈಗೊಳ್ಳುವ ಸಲುವಾಗಿ ಬಾಕಿ ಉಳಿದಿರುವ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗಳನ್ನು ಪೂರ್ಣಗೊಳಿಸುವಂತೆ ಶೋರೂಮ್‌ಗಳ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಯಿತು. ಹಾಗೂ ಇದನ್ನು ಅನುಸರಿಸಲು ವಿಫಲವಾದರೆ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಸೂಕ್ತ ಕ್ರಮಕ್ಕೆ ಜರುಗಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದರು. ಹಾಗೂ ಇದ್ರ ಕುರಿತಾಗಿ ಸರ್ಕಾರವು ಹೊರಡಿಸಿರುವ ಅಧಿಸೂಚನೆಯನ್ನು ಮತ್ತು ಈ ನಿಯಮಗಳನ್ನು ತಿಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.