ಹಲೋ ಗೆಳೆಯರೇ, ಪಿಂಚಣಿ ನಿರ್ದೇಶನಾಲಯದಿಂದ ಅರ್ಹ ಪಿಂಚಣಿ ಫಲಾನುಭವಿಗಳಿಗೆ ಎಪ್ರಿಲ್-2024 ತಿಂಗಳ ಎಲ್ಲಾ ವಿವಿಧ ಮಾಸಿಕ ಪಿಂಚಣಿಯನ್ನು ಜಮಾ ಮಾಡಲಾಗಿದೆ. ಅದನ್ನು ಚೆಕ್ ಮಾಡುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ ಪಿಂಚಣಿ ನಿರ್ದೇಶನಾಲಯದಿಂದ ಪ್ರತಿ ತಿಂಗಳು 15ನೇ ತಾರೀಖಿನೊಳಗಾಗಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುವುದು. ನಿಮ್ಮ ಖಾತೆಗೆ ಪಿಂಚಣಿ ಹಣ ವರ್ಗಾವಣೆ ಆಗಿದಿಯೋ? ಇಲ್ವೋ? ಎಂದು ಪ್ರತಿ ತಿಂಗಳು ಬ್ಯಾಂಕ್ ಶಾಖೆ ಭೇಟಿ ನೀಡದೆ ನಿಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು?
DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಪಿಂಚಣಿದಾರರು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಪ್ರತಿ ತಿಂಗಳು ಪಿಂಚಣಿ ಹಣ ಜಮೆಯಾಗಿರುವುದನ್ನು ಮನೆಯಲ್ಲೇಕುಳಿತು ತಿಳಿಯಿರಿ.
Contents
ನಿಮ್ಮ ಖಾತೆಗೆ ಪಿಂಚಣಿ ಹಣ ಜಮಾ ಆಗಿದ್ದನ್ನು ಚೆಕ್ ಮಾಡುವ ವಿಧಾನ:
ಸರ್ಕಾರದ ಅಧಿಕೃತ DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನಿಮ್ಮ ಖಾತೆಗೆ ಪಿಂಚಣಿ ಹಣ ಜಮೆಯಾಗಿರುವುದನ್ನು ಚೆಕ್ ಮಾಡಬಹುದು.
Step-1: ಮೊದಲು ಈ ಲಿಂಕ್ DBT karanataka app ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಭೇಟಿ ನೀಡಿ “DBT ಕರ್ನಾಟಕ” ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ.
Step-2: ಪಿಂಚಣಿ ಪಡೆಯುತ್ತಿರುವ ಫಲಾನುಭವಿಯ ಆಧಾರ್ ಕಾರ್ಡ್ ನಂಬರ್ ಅನ್ನು ಹಾಕಿ ಆಧಾರ್ ಕಾರ್ಡ್ ನಲ್ಲಿ ನಮೂದಿಸಿರುವ ಮೊಬೈಲ್ ನಂಬರ್ ಗೆ ಬರುವ 6 ಅಂಕಿಯ OTP/ಒಟಿಪಿ ಅನ್ನು ನಮೂದಿಸಿ.(ಗಮನಿಸಿ: ಮೊದಲ ಸಲ ಪ್ರಯತ್ನಿಸಿದಾದ OTP ನಿಮ್ಮ ಬಂದಿಲ್ಲವಾದಲ್ಲಿ resend otp ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತೊಮ್ಮೆ ಚೆಕ್ ಮಾಡಿ)
OTP ಪಡೆದು ನಮೂದಿಸಿದ ನಂತರ ನಿಮಗೆ ನೆನಪಿನಲ್ಲಿ ಉಳಿಯುವ 4 ನಂಬರಿನ Password ರಚನೆ ಮಾಡಿಕೊಳ್ಳಿ. ನಂತರ ಅರ್ಜಿದಾರ ಫಲಾನುಭವಿಯ ಹೆಸರು, ವಿಳಾಸ, ಪೋಟೋ ವೈಯಕ್ತಿಕ ವಿವರ ತೋರಿಸುತ್ತದೆ ಕೊನೆಯಲ್ಲಿ ಮೊಬೈಲ್ ಸಂಖ್ಯೆ ಹಾಕಿ “ಸರಿ” ಎಂದು ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
Step-3: ನೀವು ಈಗಾಗಲೇ ರಚನೆ ಮಾಡಿಕೊಂಡಿರುವ 4 ಅಂಕಿಯ Password ನಮೂದಿಸಿ ಮೊಬೈಲ್ ಅಪ್ಲಿಕೇಶನ್ ಲಾಗಿನ್ ಆಗಬೇಕು ಇಲ್ಲಿ “ಪಾವತಿ ಸ್ಥಿತಿ/Payment Status” ಬಟನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಪಿಂಚಣಿ ಹಣ ಜಮೆಯಾಗಿರುವ ವಿವರವನ್ನು ಇಲ್ಲಿ ಪಡಿಬೇಕು.
ಪ್ರಸ್ತುತ ಯಾವೆಲ್ಲ ಪಿಂಚಣಿ ಯೋಜನೆಗಳು ನಮ್ಮ ರಾಜ್ಯದಲ್ಲಿವೆ? ಎಷ್ಟು ಪಿಂಚಣಿ ನೀಡಲಾಗುತ್ತದೆ?
- ಸಂಧ್ಯಾ ಸುರಕ್ಷಾ/ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ – Rs. 1,200
- ವಿಧವಾ ಪಿಂಚಣಿ – Rs. 800
- ಅಂಗವಿಕಲ ಪಿಂಚಣಿ- Rs. 1400 ರಿಂದ Rs. 2000.
- ಸಂಧ್ಯಾ ಸುರಕ್ಷಾ ಯೋಜನ- Rs. 1200
- ಮೈತ್ರಿ ಯೋಜನೆ- Rs. 800
- ಮನಸ್ವಿನಿ ಯೋಜನೆ- Rs. 800
- ಸಾಲದ ಭಾದೆಯಿಂದ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ – Rs. 800
- ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ – Rs. 10,000
- ಎಂಡೋಸಲ್ಫಾನ್ ಸಂತ್ರಸ್ಥರಿಗೆ ಮಾಸಿಕ ಪಿಂಚಣಿ- Rs. 2000 ರಿಂದ Rs. 4000 ರವರೆಗೆ.
ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಮಾತ್ರ ಪಿಂಚಣಿ ಹಣ:
ಈ ಲಿಂಕ್ Pension beneficiary list ಮೇಲೆ ಕ್ಲಿಕ್ ಮಾಡಿ ಅಧಿಕೃತ ಪಿಂಚಣಿ ನಿರ್ದೇಶನಾಲಯದ ವೆಬ್ಸೈಟ್ ಭೇಟಿ ನೀಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮೀಣ/ನಗರ ಆಯ್ಕೆ ಮಾಡಿಕೊಂಡು ನಂತರ ನಿಮ್ಮ ಹೋಬಳಿ, ಗ್ರಾಮ ಆಯ್ಕೆ ಮಾಡಿ ಕೆಳಗೆ ಕಾಣುವ Captcha ಕೋಡ್ ಅನ್ನು ಹಾಕಿ Serach ಬಟನ್ ಕ್ಲಿಕ್ ಮಾಡಿ ನಿಮ್ಮ ಹಳ್ಳಿಯಲ್ಲಿ ಪಿಂಚಣಿ ಪಡೆಯಲು ಅರ್ಹರಿರುವ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ ಈ ಹೆಸರಿರುವವರಿಗೆ ಮಾತ್ರ ಪ್ರತಿ ತಿಂಗಳು ಪಿಂಚಣಿ ಜಮೆಯಾಗುತ್ತದೆ.
ಇತರೆ ವಿಷಯಗಳು
ಚುನಾವಣಾ ವೇಳೆಯೇ ಜನಸಾಮಾನ್ಯರಿಗೆ ಬಿಗ್ ರಿಲೀಫ್.! ಗ್ಯಾಸ್ ಬೆಲೆಯಲ್ಲಿ ಭರ್ಜರಿ ಇಳಿಕೆ
ಉಜ್ವಲ ಸ್ಕೀಮ್ ಫಲಾನುಭವಿಗಳಿಗೆ ಉಚಿತ ಸೌರಒಲೆ.! ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ