ನಮಸ್ಕಾರ ಸ್ನೇಹಿತರೆ ಯುಗಾದಿ ಹಬ್ಬವೆಂದರೆ ಅದು ಕೇವಲ ನಿನ್ನೆ ಮೊನ್ನೆಯಿಂದ ಆಚರಿಸಿಕೊಂಡು ಬಂದಂತಹ ಹಬ್ಬವನ್ನು ಇದೊಂದು ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬಂದಂತಹ ಹಬ್ಬವಾಗಿದೆ ಎಂದು ಹೇಳಬಹುದು.
ಇದು ಚಂದ್ರಮಾನ ಕ್ಯಾಲೆಂಡರ್ ನ ಪ್ರಕಾರ ಹೊಸ ವರ್ಷದ ಪ್ರಾರಂಭವಾಗಿದೆ ಹಾಗಾದರೆ ಯುಗಾದಿ ಹಬ್ಬದ ಹಿನ್ನೆಲೆ ಏನು ಅಥವಾ ಇದರ ಇತಿಹಾಸವೇನು ಈ ಯುಗಾದಿ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.
Contents
ಯುಗಾದಿ ಹಬ್ಬದ ವಿಶೇಷತೆ :
ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಲ್ಲಿ ಯುಗಾದಿ ಎಂದು ಆಚರಿಸಲಾಗುತ್ತದೆ. ಗುಡಿಪಡುವ ಎಂದು ಯುಗಾದಿ ಹಬ್ಬವನ್ನು ಮಹಾರಾಷ್ಟ್ರದಲ್ಲಿ ಆಚರಿಸುವ ಸಾಂಪ್ರದಾಯಿಕ ಹಬ್ಬವಾಗಿದೆ ಆಂಧ್ರಪ್ರದೇಶ ತೆಲಂಗಾಣ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಜನರು ಆಚರಿಸುವಂತಹ ಮಹತ್ವದ ಹಬ್ಬ ಯುಗಾದಿ ಹಬ್ಬವಾಗಿದೆ. ಚಂದ್ರಮಾನ ಕ್ಯಾಲೆಂಡರ್ ಪ್ರಕಾರ ಈ ಪ್ರದೇಶಗಳಲ್ಲಿ ಆಚರಿಸುವಾಗ ಇದನ್ನು ಹೊಸ ವರ್ಷದ ಪ್ರಾರಂಭವೆಂದು ಸೂಚಿಸಲಾಗುತ್ತದೆ.
ಯುಗಾದಿ ಹಬ್ಬವು ಸಂತೋಷ ಭರವಸೆ ಹಾಗೂ ಹೊಸ ಆರಂಭದ ಹಬ್ಬವಾಗಿದ್ದು ವಿವಿಧ ಸಂಪ್ರದಾಯಗಳು ಮತ್ತು ಆಚರಣೆಗಳೊಂದಿಗೆ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಯುಗಾದಿ ಹಬ್ಬವನ್ನು ಆಚರಿಸುವ ಮೊದಲು ಅದರ ಇತಿಹಾಸವನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.
ಇದನ್ನು ಓದಿ : ರೇಷನ್ ಕಾರ್ಡ್ ಡೌನ್‌ಲೋಡ್ ಮಾಡುವ ಸುಲಭ ವಿಧಾನ!
ಯುಗಾದಿ ಹಬ್ಬದ ಇತಿಹಾಸ :
ನಿನ್ನೆ ಮೊನ್ನೆಯಿಂದ ಯುಗಾದಿ ಹಬ್ಬವನ್ನು ಆಚರಿಸಿಕೊಂಡು ಬಂದಿರುವುದಿಲ್ಲ ಬದಲಾಗಿ ಈ ಹಬ್ಬವನ್ನು ಶತಶತಮಾನಗಳಿಂದಲೂ ಆಚರಿಸಿಕೊಂಡು ಬಂದಂತಹ ಹಬ್ಬವಾಗಿದೆ. ಯುಗಾದಿ ಹಬ್ಬದ ಮೂಲವು ಶಾತವಾಹನ ರಾಜವಂಶಕ್ಕೂ ಹಿಂದಿನದು ಎಂದು ನಂಬಿಕೆ ಎಲ್ಲರದು.
ಇಂದಿನ ಆಂಧ್ರಪ್ರದೇಶ ತೆಲಂಗಾಣ ಮತ್ತು ಮಹಾರಾಷ್ಟ್ರ ಭಾಗಗಳನ್ನು ಈ ರಾಜವಂಶವು ಕ್ರಿಸ್ತಪೂರ್ವ ಸುಮಾರು 230 ರಿಂದ ಕ್ರಿಸ್ತ ಶಕ 220 ರವರೆಗೆ ಆಳಿದ ಸಾಮ್ರಾಜ್ಯವಾಗಿದೆ ಪ್ರಾಚೀನ ಗ್ರಂಥಗಳು ಮತ್ತು ಶಾಸನಗಳಲ್ಲಿ ಅದರಲ್ಲಿ ಹಬ್ಬದ ಉಲ್ಲೇಖಗಳನ್ನು ಕಾಣಬಹುದಾಗಿದೆ.
ಸಾಂಸ್ಕೃತಿಕ ಮಹತ್ವ :
ಕೇವಲ ಯುಗಾದಿಯು ಹಬ್ಬದ ದಿನವಾಗಿರದೆ ಬದಲಾಗಿ ಇದೊಂದು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವಂತಹ ದಿನವಾಗಿದೆ ಎಂದು ಹೇಳಬಹುದು ಈ ಯುಗಾದಿ ಹಬ್ಬವನ್ನು ಆಚರಿಸುವ ಮುನ್ನವೇ ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಹೊಸ ಬಟ್ಟೆಗಳನ್ನು ಧರಿಸಲು ಮತ್ತು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಅಲಂಕರಿಸಲು ಜನರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಹೊಸ ದೃಷ್ಟಿಕೋನ ಮತ್ತು ನವೀಕೃತ ಉತ್ಸಾಹದಿಂದ ಈ ಹೊಸ ವರ್ಷವನ್ನು ಪ್ರಾರಂಭಿಸುವ ಆಲೋಚನೆಯನ್ನು ಹೊಂದಿರುತ್ತಾರೆ.
ಹೊಸ ಪ್ರಾರಂಭದ ಸಂಕೇತವಾಗಿದೆ :
ಯುಗಾದಿಯನ್ನು ಹಿಂದೂ ಕ್ಯಾಲೆಂಡರ್ ನ ಪ್ರಕಾರ ಹೊಸ ವರ್ಷದ ದಿನವಾಗಿ ಆಚರಣೆ ಮಾಡಲಾಗುತ್ತದೆ ಹೊಸ ಯುಗದ ಆರಂಭವನ್ನು ಈ ಹಬ್ಬವು ಸಂಕೇತಿಸುತ್ತದೆ ಏಕೆಂದರೆ ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನು ಈ ಮಂಗಳಕರವಾದ ದಿನದಂದು ಅಂದರೆ ಯುಗಾದಿ ಹಬ್ಬದ ದಿನದಂದು ಸೃಷ್ಟಿ ಪ್ರಕ್ರಿಯೆಯನ್ನು ಪ್ರಾರಂಭಿಸಿದನು ಎಂಬುದು ಯುಗಾದಿ ಹಬ್ಬಕ್ಕೆ ಸಂಬಂಧಿಸಿದಂತಹ ಪೌರಾಣಿಕ ನಂಬಿಕೆಯಾಗಿದೆ.
ಆಧ್ಯಾತ್ಮಿಕ ಹಿನ್ನೆಲೆ ಮತ್ತು ಜ್ಯೋತಿಷ್ಯದ ಮಹತ್ವ :
ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಯುಗಾದಿಯನ್ನು ಮಂಗಳಕರ ಸಮಯವೆಂದು ಪರಿಗಣನೆ ಮಾಡಲಾಗುತ್ತದೆ. ಹೊಸ ವರ್ಷದ ಪ್ರಾರಂಭಕ್ಕೆ ಇದು ಮಹತ್ತರದ ದಿನವಾಗಿದೆ ಮುಂಬರುವ ವರ್ಷದಲ್ಲಿ ಸಮೃದ್ಧಿ ಆರೋಗ್ಯ ಮತ್ತು ಸಂತೋಷಕ್ಕಾಗಿ ಜನರು ಈ ದಿನದಂದು ಪ್ರಾರ್ಥನೆ ಮಾಡುತ್ತಾರೆ. ಅಲ್ಲದೆ ಮುಂಬರುವ ವರ್ಷದ ಭವಿಷ್ಯವಾಣಿಗಳ ಬಗ್ಗೆಯೂ ಕೂಡ ಜನರು ಜ್ಯೋತಿಷಿಗಳನ್ನು ಸಂಪರ್ಕಿಸುವ ಅಥವಾ ಪಂಚಾಂಗವನ್ನು ಓದುವ ಸಮಯವೂ ಈ ಯುಗಾದಿಯ ಹಬ್ಬವಾಗಿದೆ.
ಗ್ರಹಗಳ ಸ್ಥಾನವು ಮುಂಬರುವ ವರ್ಷದಲ್ಲಿ ಯುಗಾದಿಯ ಸಮಯದಲ್ಲಿ ಒಬ್ಬ ವ್ಯಕ್ತಿಯ ಜೀವನದ ಮೇಲೆ ಹೇಗೆ ಪರಿಣಾಮ ಬೀರಬಹುದು ಎನ್ನುವುದನ್ನು ತಿಳಿದುಕೊಳ್ಳಲು ಈ ಹಬ್ಬದಂದು ಹೆಚ್ಚು ಮುಂದಾಗುತ್ತಾರೆ.
ಹೀಗೆ ಯುಗಾದಿ ಹಬ್ಬವನ್ನು ಕೇವಲ ಆಚರಣೆ ಮಾಡುವುದಲ್ಲದೆ ಅದರ ಹಿಂದಿರುವ ಇತಿಹಾಸವನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಇದರಿಂದ ಯುಗಾದಿ ಹಬ್ಬದ ಮಹತ್ವವನ್ನು ಇನ್ನಷ್ಟು ಹೆಚ್ಚು ಮಾಡಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರಿಗೆ ಯುಗಾದಿ ಹಬ್ಬವನ್ನು ಯಾವ ಕಾರಣಕ್ಕಾಗಿ ಆಚರಣೆ ಮಾಡಲಾಗುತ್ತದೆ ಎಂಬುದನ್ನು ತಿಳಿಸಿ ಧನ್ಯವಾದಗಳು.