rtgh

Big News : ಕರ್ನಾಟಕದ ಹಲವು ಕಡೆ ಇಂದು ಗುಡುಗು ಸಹಿತ ಮಳೆ ಬರಲಿದೆ

thunderstorms-today-in-many-parts-of-karnataka

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ದೇಶದ ಹಲವು ಕಡೆ ಮಳೆಯಾಗುವುದರ ಮುನ್ಸೂಚನೆಯನ್ನು ತಿಳಿಸಲಾಗುತ್ತಿದೆ. ಉತ್ತರ ಭಾರತದ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಬಹುತೇಕ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತದೆ ಎಂದು ಹೇಳಬಹುದು ಮತ್ತೊಂದೆಡೆ ಹಲವು ರಾಜ್ಯಗಳ ಕೆಲವು ಸ್ಥಳಗಳಲ್ಲಿ ಏಪ್ರಿಲ್ ಹತ್ತರವರೆಗೂ ಭಾರಿ ಮಳೆ ಸುರಿಯಲಿದೆ ಎಂದು ಭಾರತೀಯ ಅವಮಾನ ಇಲಾಖೆಯು ಮಾಹಿತಿ ನೀಡಿದೆ .

thunderstorms-today-in-many-parts-of-karnataka
thunderstorms-today-in-many-parts-of-karnataka

ಇನ್ನೂ ಕೆಲವು ಕಡೆ ಬಿಸಿಲಿನ ವಾತಾವರಣ ಮುಂದುವರಿಯಲಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿದೆ ಹಾಗಾದರೆ ಎಲ್ಲೆಲ್ಲಿ ವಾತಾವರಣ ಹೇಗಿರಲಿದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.

ಹವಾಮಾನ ಇಲಾಖೆಯಿಂದ ಮುನ್ಸೂಚನೆ :

ಅರುಣಾಚಲ ಪ್ರದೇಶ ಮಹಾರಾಷ್ಟ್ರ ಅಸ್ಸಾಂ ಮತ್ತು ಮೇಘಾಲಯದಲ್ಲಿ ಶುಕ್ರವಾರ ಅಂದರೆ ಏಪ್ರಿಲ್ 5ರಂದು ಭಾರಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರ ಜೊತೆಗೆ ಉತ್ತರ ಕರ್ನಾಟಕ ರಾಯಲಾ ಸೀಮಾ ಕರಾವಳಿ ಆಂಧ್ರಪ್ರದೇಶ ಜಾರ್ಖಂಡ್ ಮತ್ತು ಯನಾಂ ನಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೂಡ.

40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ತಮಿಳುನಾಡು ಗಂಗಾನದಿ ಪಾತ್ರದಲ್ಲಿ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಹೆಚ್ಚಿರಲಿದೆ ಎಂದು ಹೇಳಲಾಗಿದೆ. ಮೇಘಾಲಯದಲ್ಲಿ ಬೆಳಗಿನ ಸಮಯದಲ್ಲಿ ಶನಿವಾರ ಅರುಣಾಚಲ ಮತ್ತು ಈಶಾನ್ಯ ಅಸ್ಸಾಂನಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಮಧ್ಯಾಹ್ನದಿಂದ ತಿಳಿಸಲಾಗಿದೆ.

ಇದನ್ನು ಓದಿ : ರೇಷನ್‌ ಕಾರ್ಡ್‌ ಡೌನ್‌ಲೋಡ್ ಮಾಡುವ ಸುಲಭ ವಿಧಾನ!

ಏಳು ದಿನಗಳ ಕಾಲ ಸಾಧಾರಣ ಮಳೆ :

ಮುಂದಿನ ಏಳು ದಿನಗಳ ಕಾಲ ಲಡಾಕ್ ಜಮ್ಮು ಮತ್ತು ಕಾಶ್ಮೀರ ಮುಜಫರ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಮಳೆಯಾಗಲಿದ್ದು ತ್ರಿಪುರ ಮಿಜೋರಾಂ ಮೇಘಾಲಯ ನಾಗಾಲ್ಯಾಂಡ್ ಅಸ್ಸಾಂ ಮತ್ತು ಉತ್ತರಖಂಡದಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ.

ಮಧ್ಯ ಪ್ರದೇಶ ಗೋವಾ ಮಹಾರಾಷ್ಟ್ರ ಮರಾಠವಾಡ ಛತ್ತೀಸ್ಗಡ ಹಾಗೂ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಪ್ರತ್ಯೇಕವಾಗಿ ಅಲ್ಲಲ್ಲಿ ಲಘು ಮಳೆಯಾಗುವ ನಿರೀಕ್ಷೆ ಮಾಡಲಾಗಿದೆ. ಈ ಪ್ರದೇಶಗಳಲ್ಲಿದೆ ಛತ್ತೀಸ್ಗಡ ಪಶ್ಚಿಮ ಬಂಗಾಳ ಒಡಿಸ್ಸಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿಯೂ ಕೂಡ ಲಘು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಜೊತೆಗೆ ಅರುಣಚಲ ಪ್ರದೇಶದ ಈಶಾನ್ಯ ಭಾಗದಲ್ಲಿ ಭಾರಿ ಮಳೆಯಾಗುವುದರ ಬಗ್ಗೆ ನಿರೀಕ್ಷೆ ಮಾಡಲಾಗಿದೆ.

ಹಿಮಾಲಯ ಪ್ರದೇಶದಲ್ಲಿ ಪ್ರತ್ಯೇಕವಾದ ಸಾಧಾರಣ ಮಳೆ ಮುಂದಿನ ಎರಡು ದಿನಗಳಲ್ಲಿ ಆಗಲಿದೆ. ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ ಐದರಿಂದ ಏಳರವರೆಗೆ ಭಾರಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಪಶ್ಚಿಮ ಬಂಗಾಳ ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಏಪ್ರಿಲ್ ಆರರಿಂದ ಹತ್ತರವರೆಗೆ ಮಳೆಯಾಗುತ್ತದೆ ಹಾಗೂ ಬಿಹಾರದಲ್ಲಿ ಏಪ್ರಿಲ್ ಏಳರಿಂದ 8ರವರೆಗೆ ಗುಡುಗು ಸಹಿತ ಸಾಧಾರಣ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ನೀಡಿದೆ.

ಒಟ್ಟಾರೆ ದೇಶದ ಹಲವು ಕಡೆಗಳಲ್ಲಿ ಮಳೆಯಾಗುವುದರ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವುದರ ಮೂಲಕ ಮುಂದಿನ ಏಳು ದಿನಗಳವರೆಗೆ ಮಳೆಯಾಗಲಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *