rtgh

ಜಮೀನು ಪಹಣಿಗೆ ಆಧಾರ್ ಲಿಂಕ್ ಮಾಡಿ : ರೈತರಿಗೆ ಸಿಗಲಿದೆ ಹಲವು ಪ್ರಯೋಜನಗಳು !

Link Aadhaar for Land Transfer

ನಮಸ್ಕಾರ ಸ್ನೇಹಿತರೆ ಜಮೀನಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಹಲವಾರು ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಮತ್ತು ಜಮೀನಿನ ಸುರಕ್ಷತೆಗಾಗಿ ರೈತರು ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ಕಂದಾಯ ಇಲಾಖೆ ತಿಳಿಸಿದೆ.

Link Aadhaar for Land Transfer
Link Aadhaar for Land Transfer

ಆಧಾರ್ ಲಿಂಕ್ ರೈತರ ಜಮೀನಿನ ಪಹಣಿ ಅಥವಾ ಉತಾರಗಳಿಗೆ ಏಕೆ ಮಾಡಿಸಬೇಕು ಆದ್ದರಿಂದ ಆಗುವ ಪ್ರಯೋಜನಗಳೇನು? ಹಾಗೂ ಹೇಗೆ ಆಧಾರ್ ಲಿಂಕ್ ಮೊಬೈಲ್ನಲ್ಲಿ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದು.

ಪಹಣಿಗೆ ಆಧಾರ್ ಲಿಂಕ್ ಮಾಡುವ ಪ್ರಯೋಜನಗಳು :

ತಮ್ಮ ಜಮೀನಿನ ಪಹಣಿಗೆ ರೈತರು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದರೆ ಭೂ ವಂಚನೆಗಳಿಂದ ರೈತರು ಪಾರಾಗಬಹುದು ಅಲ್ಲದೆ ಎಲ್ಲ ರೀತಿಯ ಅಕ್ರಮಗಳಿಗೂ ಜಮೀನು ಸಂಬಂಧಿಸಿದಂತೆ ಕಡಿವಾಣ ಇದರಿಂದ ಬೀಳುತ್ತದೆ ಜಮೀನು ಮಾಲಿಕತ್ವ ಖಾತರಿಪಡಿಸಲು ಇದು ಸಹಕಾರಿಯಾಗುತ್ತದೆ.

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೇರವಾಗಿ ಪಹಣಿ ಆಧಾರ್ ಲಿಂಕ್ ಮಾಡುವುದರಿಂದ ಅನುಕೂಲವಾಗುತ್ತದೆ. ಆಧಾರ್ ಆಧಾರಿತ ದತ್ತಾಂಶ ಗಳಿಂದ ಸರ್ಕಾರವು ಬರ ಪರಿಹಾರ ಸೇವಿದಂತೆ ಎಲ್ಲಾ ರೀತಿಯ ಬೆಳೆ ಪರಿಹಾರವನ್ನು ನೇರವಾಗಿ ರೈತರು ಪಡೆಯಬಹುದು.

ಆಧಾರ್ ಲಿಂಕ್ ಪಹಣಿಗಳಿಗೆ ಮಾಡಿಸುವ ವಿಧಾನ :

ರೆಕಾರ್ಡ್ ಆಫ್ ರೈಟ್ಸ್, ಪೆನನ್ಸಿ ಅಂಡ್ ಕ್ರಾಫ್ಟ್ ಇದನ್ನೇ ಪಹಣಿ ಅಥವಾ ಉದ್ಧಾರ ಎಂದು ಕರೆಯಲಾಗುತ್ತದೆ ಜಮೀನು ಮಾಲೀಕರ ವಿವರ ಪ್ರದೇಶ ಮಣ್ಣಿನ ಪ್ರಕಾರ ಭೂಮಿಯ ಸ್ವಾಧೀನದ ಸ್ವರೂಪ ಬೆಳೆದ ಬೆಳೆಗಳು ಋಣ ಮತ್ತು ಮುಂತಾದ ಮಾಹಿತಿಗಳು ಪಹಣಿಯಲ್ಲಿ ಇರುತ್ತದೆ.

ರೈತರಿಗೆ ಒದಗಿಸುವ ಹಲವಾರು ಸೌಲಭ್ಯಗಳ ಲಾಭವನ್ನು ರಾಜ್ಯ ಸರ್ಕಾರವು ನಿಗದಿತ ಸಮಯದಲ್ಲಿ ಪಡೆಯಲು ಪಹಣಿಗಳಿಗೆ ಆಧಾರ್ ಕಾಯ್ದೆ ಕಲಂ 4 (4) ಬಿ (2) ಅಡಿಯಲ್ಲಿ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯ ಮಾಡಿದೆ. ಆಧಾರ್ ಲಿಂಕ್ ಮಾಡಿಸುವುದು ಹಲವಾರು ವಿಧಾನದಲ್ಲಿ ಮಾಡಬಹುದಾಗಿತ್ತು ತಮ್ಮ ಹತ್ತಿರದ ಗ್ರಾಮವನ್ ಕೇಂದ್ರಗಳಿಗೆ ಭೇಟಿ ನೀಡಿ ಆಧಾರ್ ಲಿಂಕ್ ಮಾಡಿರಬಹುದು ಅಥವಾ ಕ್ರಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿ ಯನ್ನು ಭೇಟಿ ನೀಡಿ ಆಧಾರ್ ಲಿಂಕ್ ಅನ್ನು ಪಹಣಿಗೆ ಮಾಡಿಸಬಹುದಾಗಿದೆ.

ಇದನ್ನು ಓದಿ : ಮಹಿಳೆಯರಿಗೆ ಸಿಗುವುದಿಲ್ಲ ಗೃಹಲಕ್ಷ್ಮಿ ಯೋಜನೆಯ ಹಣ : ನಿಮ್ಮ ಹೆಸರು ಈ ಪಟ್ಟಿಯಲ್ಲಿದೆ ತಿಳಿದುಕೊಳ್ಳಿ !

ಮೊಬೈಲ್ ನಲ್ಲಿ ಆಧಾರ್ ಲಿಂಕ್ ಮಾಡುವ ವಿಧಾನ :

ರೈತರು ತಮ್ಮ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡಿಸಲು ಮೊಬೈಲ್ ನಲ್ಲಿ ಕಂದಾಯ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

ಭೂಮಿ ನಾಗರಿಕ ಸೇವೆಗಳು ಎಂಬ ವೆಬ್ಸೈಟ್ ಅನ್ನು ನೋಡಬಹುದು.

ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಗೂ ಕ್ಯಾಪ್ಚಾ ಕೊಡನ್ನು ನಮೂದಿಸಿ ಓಟಿಪಿಯನ್ನು ನಮೂದಿಸಿದ ನಂತರ ಲಾಗಿನ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಇದಾದ ನಂತರ ಸುಲಭವಾಗಿ ಆಧಾರ್ ಕಾರ್ಡ್ ಗೆ ಪಹಣಿಯನ್ನು ಲಿಂಕ್ ಮಾಡಬಹುದಾಗಿದೆ.

ಹೀಗೆ ರೈತರು ಮೊಬೈಲ್ ಮೂಲಕವೇ ತಮ್ಮ ಜಮೀನಿಗೆ ಪಹಣಿಯನ್ನು ಆಧಾರ್ ಲಿಂಕ್ ಮಾಡಲು ತಿಳಿಸಿದ್ದು ಈ ಬಗ್ಗೆ ಪ್ರತಿಯೊಬ್ಬ ರೈತರಿಗೂ ಶೇರ್ ಮಾಡುವ ಮೂಲಕ ಮೊಬೈಲ್ ನಲ್ಲಿ ಜಮೀನು ಪಹಣಿಗೆ ಆಧಾರ್ ಲಿಂಕ್ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು ಎಂದು ತಿಳಿಸಿ ಧನ್ಯವಾದಗಳು.

ಕಂದಾಯ ಇಲಾಖೆ ಜಾಲತಾಣ : ಇಲ್ಲಿದೆ ಕ್ಲಿಕ್ ಮಾಡಿ

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *