rtgh

ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ : 17,500 ಶಿಷ್ಯ ವೇತನ ನೀಡುತ್ತಾರೆ.! ಅರ್ಜಿ ಸಲ್ಲಿಸಿ

Application Invitation for Free Horticulture Training

ನಮಸ್ಕಾರ ಸ್ನೇಹಿತರೆ ರೈತರು ಮತ್ತು ರೈತರ ಮಕ್ಕಳಿಗೆ 17500 ಶಿಷ್ಯ ವೇತನದ ಜೊತೆಗೆ 10 ತಿಂಗಳ ಉಚಿತ ತೋಟಗಾರಿಕೆ ತರಬೇತಿಯನ್ನು ನೀಡಲು ತೋಟಗಾರಿಕೆ ಇಲಾಖೆಯಿಂದ ಇದೀಗ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅದರಂತೆ ಈ ತರಬೇತಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

Application Invitation for Free Horticulture Training
Application Invitation for Free Horticulture Training

ತೋಟಗಾರಿಕಾ ಇಲಾಖೆಯಿಂದ ತೋಟಗಾರಿಕಾ ತರಬೇತಿ :

ರಾಜ್ಯದ ವಿವಿಧ 11 ಜಿಲ್ಲೆಗಳಲ್ಲಿ ಇರುವ ತೋಟಗಾರಿಕೆ ಇಲಾಖೆಗಳಲ್ಲಿ ತೋಟಗಾರಿಕೆ ಕ್ಷೇತ್ರದ ಸಮಗ್ರ ಜ್ಞಾನವನ್ನು 2024 25 ನೇ ಸಾಲಿಗೆ ಮತ್ತು ವೈಜ್ಞಾನಿಕ ಕ್ರಮವನ್ನು ಅನುಸರಿಸಲು ತೋಟಗಾರಿಕೆ ಇಲಾಖೆಯೂ 10 ತಿಂಗಳ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿಯನ್ನು ಆಹ್ವಾನಿಸಿದೆ.

2024 ಮೇ 2 ರಿಂದ 2024 ಮೇ 28ನೇ ತಾರೀಖಿನ ಒಳಗಾಗಿ ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ. ಸಮಗ್ರ ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಯುವಜನರು ತೋಟಗಾರಿಕೆಯಲ್ಲಿ ಅಳವಡಿಸಿಕೊಳ್ಳಲು ಹಾಗೂ ತಮ್ಮ ಸ್ವಂತ ತೋಟಗಳನ್ನು ಅಭಿವೃದ್ಧಿಪಡಿಸಿ ಇಳುವರಿಯನ್ನು ಹೆಚ್ಚಿನದಾಗಿ ಪಡೆಯುವಲ್ಲಿ ಸಫಲರಾಗಬೇಕೆಂಬುದು ಈ ತರಬೇತಿಯ ಮುಖ್ಯ ಉದ್ದೇಶ.

ಯೋಜನೆ ಮಾಹಿತಿ :

ಯೋಜನೆ ಹೆಸರು ತೋಟಗಾರಿಕೆ ತರಬೇತಿ
ತರಬೇತಿ ನೀಡುವ ರಾಜ್ಯ ಕರ್ನಾಟಕ
ಎಷ್ಟು ತಿಂಗಳು ತರಬೇತಿ 10 ತಿಂಗಳ ತರಬೇತಿ
ಅರ್ಜಿ ಸಲ್ಲಿಸುವ ಲಿಂಕ್ https://horticulturedir.karnataka.gov.in/
ಶಿಷ್ಯವೇತನ ಎಷ್ಟು 17,500

ಯಾರೆಲ್ಲ ಈ ತರಬೇತಿಗೆ ಅರ್ಹರು :

ತೋಟಗಾರಿಕೆ ಇಲಾಖೆಯೂ ನೀಡುತ್ತಿರುವ ಈ ಉಚಿತ ತರಬೇತಿಯನ್ನು ಪಡೆಯಲು ಕೆಲವೊಂದು ಅರ್ಹತೆಗಳನ್ನು ರೈತರು ಹೊಂದಿರಬೇಕು ಅವುಗಳಿಂದಲೇ,

  1. ಈ ಒಂದು ಉಚಿತ ತರಬೇತಿಯನ್ನು ತೋಟಗಾರಿಕೆ ಇಲಾಖೆಯಿಂದ ಪಡೆಯಲು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  2. ರೈತರ ಮಕ್ಕಳಿಗಾಗಿ ಈ ತರಬೇತಿಯನ್ನು ಮುಖ್ಯವಾಗಿ ನಡೆಸುತ್ತಿರುವುದರಿಂದ ಸ್ವಂತ ಜಮೀನನ್ನು ಅಭ್ಯರ್ಥಿಯ ಪೋಷಕರು ಕಡ್ಡಾಯವಾಗಿ ಹೊಂದಿರಬೇಕು.
  3. ತಮ್ಮ ಸ್ವಂತ ತೋಟಗಳನ್ನು ಅಭಿವೃದ್ಧಿಪಡಿಸಬೇಕೆಂಬ ಉದ್ದೇಶ ಹೊಂದಿರುವ ಅಭ್ಯರ್ಥಿಗಳಿಗೆ ಈ ಉಚಿತ ತರಬೇತಿಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.

ವಯಸ್ಸಿನ ಮಿತಿ :

ತೋಟಗಾರಿಕೆ ಇಲಾಖೆಯು ನೀಡುತ್ತಿರುವ ಈ ಉಚಿತ ತರಬೇತಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯೋಮಿತಿಯನ್ನು ವರ್ಗಗಳಿಗೆ ಅನುಸಾರವಾಗಿ ನಿಗದಿಪಡಿಸಲಾಗಿದೆ.

  1. 30 ವರ್ಷಗಳು ಗರಿಷ್ಠ ವಯಸ್ಸು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ
  2. 33 ವರ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ
  3. 65 ವರ್ಷ ಮಾಜಿ ಸೈನಿಕರಿಗೆ ನಿಗದಿಪಡಿಸಲಾಗಿದೆ.

ತರಬೇತಿಯ ಜೊತೆಗೆ ಶಿಷ್ಯವೇತನ :

ತೋಟಗಾರಿಕೆ ಇಲಾಖೆಯು ಕೇವಲ ಉಚಿತ ತರಬೇತಿಯನ್ನು ನೀಡುವುದಲ್ಲದೆ ತೋಟಗಾರಿಕೆ ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 1550 ರೂಪಾಯಿಗಳ ಶಿಷ್ಯವೇತನವನ್ನು ಅಂದರೆ ಒಟ್ಟು 10 ತಿಂಗಳ ತರಬೇತಿಗೆ 17,500 ಗಳನ್ನು ನೀಡಲಾಗುತ್ತದೆ.

ಇದನ್ನು ಓದಿ : ಹೊಸ ರೇಷನ್ ಕಾರ್ಡ್ ವಿತರಣೆ : ಒಂದು ಮನೆಗೆ ಎಷ್ಟು ಕಾರ್ಡ್ ಸಿಗುತ್ತೆ .?

ಅರ್ಜಿ ಸಲ್ಲಿಸುವ ವಿಧಾನ :

ತರಬೇತಿಯನ್ನು 10 ತಿಂಗಳವರೆಗೆ ಪಡೆಯಬೇಕಾದರೆ ಅಭ್ಯರ್ಥಿಗಳು ಆಯಾ ಜಿಲ್ಲೆಗಳ ಹಿರಿಯ ಸಹಾಯಕ ತೋಟದಲ್ಲಿರುವ ತೋಟಗಾರಿಕೆ ಉಪ ನಿರ್ದೇಶಕರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅವರ ಕಚೇರಿಗೆ ಭೇಟಿ ನೀಡಿ ಅಥವಾ ಇಲಾಖೆ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಒಟ್ಟಾರೆ ರಾಜ್ಯ ಸರ್ಕಾರವು ತೋಟಗಾರಿಕೆ ಇಲಾಖೆ, ವತಿಯಿಂದ ರೈತರಿಗೆ ಉಚಿತ ತರಬೇತಿಯನ್ನು ನೀಡುತ್ತಿದ್ದು ನೀವು ಉಚಿತ ತರಬೇತಿಯನ್ನು ಪಡೆಯುವುದರ ಮೂಲಕ ಅಭ್ಯರ್ಥಿಗಳು ತಮ್ಮ ಜಮೀನಿನಲ್ಲಿ ಹೇಗೆ ಕೃಷಿಯನ್ನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಹಾಗೂ ವೈಜ್ಞಾನಿಕ ಕ್ರಮವನ್ನು ಹೇಗೆ ಅನುಸರಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.

ಸರ್ಕಾರದ ಜಾಲತಾಣ : https://horticulturedir.karnataka.gov.in/

ಅಧಿಸೂಚನೆ PDF : ಡೌನ್ಲೋಡ್ ಮಾಡಿ

ಇತರೆ ವಿಷಯಗಳು ;

ತೋಟಗಾರಿಕಾ ಇಲಾಖೆಯಿಂದ ತೋಟಗಾರಿಕಾ ತರಬೇತಿ ಎಷ್ಟು ಜಿಲ್ಲೆಯಲ್ಲಿ ನಡೆಯುತ್ತದೆ ..?

11 ಜಿಲ್ಲೆಗಳಲ್ಲಿ ನಡೆಯುತ್ತದೆ.

ಪ್ರತಿ ತಿಂಗಳು ಶಿಷ್ಯ ವೇತನ ಎಷ್ಟು …?

ಪ್ರತಿ ತಿಂಗಳು 1550 ರೂ.

Spread the love

Leave a Reply

Your email address will not be published. Required fields are marked *