rtgh

ಅಣ್ಣಾಮಲೈ ಅವರ ಆಸ್ತಿ ಎಷ್ಟು ? ನಾಮ ಪತ್ರಿಕೆ ಸಲ್ಲಿಕೆ ಸಂದರ್ಭದಲ್ಲಿ ಬಹಿರಂಗ !

See what is the total assets of Annamalai

ನಮಸ್ಕಾರ ಸ್ನೇಹಿತರೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಮಲೈ ಯವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದು ಇದೀಗ ಅವರು ಅಫೀಡವಿಟ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಅವರು ಚುನಾವಣಾ ಆಯೋಗಕ್ಕೆ ಒದಗಿಸಿರುವ ಮಾಹಿತಿಯ ಪ್ರಕಾರ ಅಣ್ಣಮಲೈಯವರ ಆಸ್ತಿ 1.48 ಕೋಟಿ ಸ್ವಂತ ಕಂಪನಿಯನ್ನು ಬೆಂಗಳೂರಿನಲ್ಲಿ ಹೊಂದಿರುವ ಅವರ ಪತ್ನಿಯಾದ ಅಖಿಲ ಸ್ವಾಮಿನಾಥನ್ ಅವರಿಗಿಂತಲೂ ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

See what is the total assets of Annamalai
See what is the total assets of Annamalai

Contents

ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರಿಕೆ ಸಲ್ಲಿಕೆ ಮಾಡಿದ ಅಣ್ಣಾ ಮಲೈ :

ಕೆ ಅಣ್ಣಮಲೈ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಅವರ ಬಳಿ 36 ಹಾಗೂ 1.12 ಕೋಟಿಯ ಸ್ಥಿರಾಸ್ತಿ ಇರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದು, 2.17 ಕೋಟಿ ರೂಪಾಯಿ ಮೊತ್ತದ ಆಸ್ತಿ ಘೋಷಣೆ ಮಾಡಿದ ಮಾಜಿ ರಾಜ್ಯಪಾಲೆ ತಮಿಳ್ ಸಾಯಿ ಸೌಂದರ ರಾಜನ್ ಆಗಿದ್ದಾರೆ.

ಬುಧವಾರ ಕೊಯಮತ್ತೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಮಲೈ ಯವರು ನಾಮಪತ್ರ ಸಲ್ಲಿಸಿದ್ದಾರೆ. ಅರವಿ ಕುರಿಚಿ ಕ್ಷೇತ್ರದಿಂದ 2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಡಿಎಂಕೆಯ ಆರ್ ಲಂಗೋ ವಿರುದ್ಧ ಅಣ್ಣಮಲೈಯವರು 24,000 ಮತಗಳ ಅಂತರದೊಂದಿಗೆ ಸೋಲು ಅನುಭವಿಸಿದ್ದರು.

ಇದೀಗ ರಾಷ್ಟ್ರ ರಾಜಕಾರಣಕ್ಕೆ ಅಣ್ಣಮಲೈ ಕಾಲಿಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಹೇಳಬಹುದು. ಅಣ್ಣಾಮಲೈ ಟೌನ್ ಹಾಲಿನಲ್ಲಿರುವ ಕೊನೆಯಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಬೆಂಬಲಿಗರ ಜೊತೆಗೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ನಾಮಪತ್ರವನ್ನು ಸಲ್ಲಿಸಿದರು. ಅಣ್ಣಮಲೈ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷ ವನಾತಿ ಶ್ರೀನಿವಾಸ್ ರವರು ಜೊತೆಗಿದ್ದರು.

ಇದನ್ನು ಓದಿ : ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ : ಹೇಗೆ ಪಡೆಯುವುದು ನೋಡಿ !

ಅಣ್ಣಾಮಲೈ ಆಸ್ತಿಯ ವಿವರ :

ತಮ್ಮ ಬಳಿ 1.48 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಇರುವುದಾಗಿ ಅಣ್ಣಮಲೈ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಫ್ಫಿಟವಿಟ್ ನಲ್ಲಿ ಮಾಹಿತಿ ನೀಡಿದ್ದಾರೆ ಅದರಂತೆ ಸ್ಥಿರಹಸ್ತಿ 1.12 ಕೋಟಿ ಹಾಗೂ ತಮ್ಮ ಬಳಿ 52 ಎಕರೆ ಜಮೀನು ಇರುವುದಾಗಿ ತಿಳಿಸಿದ್ದು ಅದರಲ್ಲೂ ಬಹುಪಾಲು ಕರೂರು ಜಿಲ್ಲೆಯಲ್ಲಿನ ತಮ್ಮ ಮೂಲ ಹಳ್ಳಿಯಲ್ಲಿ ಭೂಮಿ ಇದೆ ಎಂದು ತಿಳಿಸಿದ್ದಾರೆ.

ಅದರ ಜೊತೆಗೆ 5 ಲಕ್ಷ ರೂಪಾಯಿ ಮೌಲ್ಯದ ಹೋಂಡಾ ಸಿಟಿ ಕಾರು ಸೇರಿದಂತೆ ಚರ ಆಸ್ತಿ 36.04 ಲಕ್ಷ ರೂಪಾಯಿ ಅವರ ಬಳಿ ಇದೆ. ಅಣ್ಣಾಮಲೈ ಯವರ ಪತ್ನಿ ಅಖಿಲ ಸ್ವಾಮಿನಾಥನ್ ರವರು 2.3 ಕೋಟಿ ರೂಪಾಯಿ ಮೌಲ್ಯದ ಚರಹಸ್ತಿ ಹಾಗೂ 53 ಲಕ್ಷ ದ ಸ್ಥಿರಾಸ್ತಿಯನ್ನು ಅಫಿಡವಿಟ್ ನ ಪ್ರಕಾರ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಅಣ್ಣಾಮಲೈ ಅವರು 2021 ರ ವಿಧಾನಸಭಾ ಚುನಾವಣೆಯ ಬೇಳೆ ತಮ್ಮ ಒಟ್ಟು ಆಸ್ತಿ ಮೌಲ್ಯ 2.9 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದ್ದಾರೆ.

ಇದರಲ್ಲಿ 94 ಲಕ್ಷ ರೂಪಾಯಿ ಚರ ಹಾಗೂ 50 ಲಕ್ಷ ರೂಪಾಯಿ ಆಸ್ತಿ ಅವರ ಪತ್ನಿ ಅಖಿಲ ಅವರಿಗೆ ಸೇರಿತ್ತು. ತಮ್ಮ ವಿರುದ್ಧ 26 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ಅಣ್ಣಮಲೈಯವರು ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.

ಎಲ್ ಮುರುಗನ್ ಆಸ್ತಿ :

ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರದ ಮೀನುಗಾರಿಕೆ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಅವರು ನೀಲಗಿರಿಸ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. 69.50 ಲಕ್ಷ ರೂಪಾಯಿ ಸ್ಥಿರ ಆಸ್ತಿ ಸೇರಿದಂತೆ ಅವರ ಬಳಿ 1.72 ಕೋಟಿ ಮೌಲ್ಯದ ಸಂಪತ್ತು ಇದೆ ಎಂದು ಘೋಷಣೆ ಮಾಡಿದ್ದಾರೆ.

ಅದರ ಜೊತೆಗೆ ಅವುಗಳ ಬಳಿ 50,000 ನಗದು ಇದ್ದು 20 ಲಕ್ಷ ರೂಪಾಯಿಗಳವರೆಗೆ ಸಾಲ ಹೊಂದಿದ್ದಾರೆ. 23 ಕ್ರಿಮಿನಲ್ ಪ್ರಕರಣಗಳು ಇವರ ವಿರುದ್ಧ ಹಾಗೂ ಒಂದು ಮಾನಹಾನಿ ಪ್ರಕರಣ ವಿಚಾಣೆಗೆ ಬಾಕಿ ಇರುವುದಾಗಿ ತಿಳಿಸಿದ್ದಾರೆ.

ತಮಿಳ್ ಸಾಯಿ ಸೌಂದರ ರಾಜನ್ :

ತೆಲಂಗಾಣದ ಮಾಜಿ ರಾಜ್ಯಪಾಲಯ್ ತಮಿಳ್ ತಾಯಿ ಸೌಂದರ್ಯ ರಾಜೇಂದ್ರ ಅವರು ಚೆನ್ನೈ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದು ಅವರ ಬಳಿ 2.17 ಕೋಟಿ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದಾರೆ. ಅದರ ಜೊತೆಗೆ ಅವರ ಬಳಿ 50,000 ನಗದು ಸೇರಿದಂತೆ ಚರಹಸ್ತಿ 1.57 ಕೋಟಿ ರೂಪಾಯಿ ಹಾಗೂ 58.54 ಲಕ್ಷ ರೂಪಾಯಿ ಸಾಲ ಇರುವುದಾಗಿ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ದೇಶದಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣದಿಂದಾಗಿ ಅಭ್ಯರ್ಥಿಗಳು ತಮ್ಮ ಆಸ್ತಿಯ ಮೊತ್ತವನ್ನು ತಿಳಿಸುತ್ತಿದ್ದ ಇದರ ಬಗ್ಗೆ ಅಧಿಕೃತ ಘೋಷಣೆಯನ್ನು ಹೊರಡಿಸಿದ್ದಾರೆ. ಅಲ್ಲದೆ ಅಣ್ಣಮಲೈಯವರ ಆಸ್ತಿ ಅವರ ಪತ್ನಿಗಿಂತಲೂ ಕಡಿಮೆ ಇದೆ ಅಂದರೆ ಅವರ ಪತ್ನಿಯ ಆಸ್ತಿ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಅಣ್ಣಮಲೈ ಅವರ ಅಭಿಮಾನಿಯಾಗಿದ್ದರೆ ಅವರಿಗೆ ಅವರ ಆಸ್ತಿಯ ಬಗ್ಗೆ ತಿಳಿದುಕೊಳ್ಳಲು ಹೇಳಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *