rtgh
Headlines

ಕರ್ನಾಟಕದ ಎಲ್ಲಾ ಶಿಕ್ಷಕರಿಗೆ ಸರ್ಕಾರದಿಂದ ಹೊಸ ಆದೇಶ : ಸಾರ್ವಜನಿಕರು ಗಮನಿಸಿ ತಪ್ಪದೆ !

New order from govt for all teachers of Karnataka

ನಮಸ್ಕಾರ ಸ್ನೇಹಿತರೇ, ಸರ್ಕಾರವು ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ನಿರಂತರ ಪ್ರಯತ್ನ ಮಾಡುತ್ತಲೇ ಇದೆ ಈಗಾಗಲೇ ಅನೇಕ ಅಭಿವೃದ್ಧಿ ಕಾರ್ಯಾ ಚಟುವಟಿಕೆಗಳನ್ನು ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಾಡುತ್ತಲಿದ್ದು ಸರ್ಕಾರಿ ಶಾಲೆಗಳ ಫಲಿತಾಂಶವನ್ನು ವೃದ್ಧಿಸುವ ಉದ್ದೇಶದಿಂದ ಹಾಗೂ ಮಕ್ಕಳ ಕಲಿಕಾ ಗುಣಮಟ್ಟ ಅಭಿವೃದ್ಧಿ ಮಾಡಬೇಕು ಎನ್ನುವ ಕಾರಣದಿಂದಾಗಿ ಶಾಲೆಯ ಶಿಕ್ಷಕರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸ ಆದೇಶವೊಂದನ್ನು ಹೊರಡಿಸಿದೆ. ಹಾಗಾದರೆ ರಾಜ್ಯ ಸರ್ಕಾರ ಯಾವ ಹೊಸ ಆದೇಶ ಹೊರಡಿಸಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.

New order from govt for all teachers of Karnataka
New order from govt for all teachers of Karnataka

Contents

ರಾಜ್ಯ ಸರ್ಕಾರದಿಂದ ಶಾಲಾ ಶಿಕ್ಷಕರಿಗೆ ಹೊಸ ಆದೇಶ :

ಶಿಕ್ಷಕರ ಕೊರತೆ ಸರ್ಕಾರಿ ಶಾಲೆಗಳಲ್ಲಿ ಒಂದು ಕಡೆಯಾದರೆ ಮತ್ತೊಂದು ಕಡೆ ಶಿಕ್ಷಕರ ನೇಮಕ ಆದರೂ ಸರಿಯಾದ ಸಮಯಕ್ಕೆ ಮಕ್ಕಳ ಶೈಕ್ಷಣಿಕ ಕಾರ್ಯ ಚಟುವಟಿಕೆಗೆ ಬಾರದೆ ಸಹ ತೊಂದರೆಯಾಗುತ್ತಿರುವುದನ್ನು ಕಂಡುಬಂದಿದ್ದು ಹಾಗಾಗಿ ಸರ್ಕಾರವು ಮಕ್ಕಳ ಹಿತಾಸಕ್ತಿಯನ್ನು ಕಾಪಾಡಬೇಕೆಂದು ದೇಶದಿಂದ ಶಿಕ್ಷಕರಿಗೆ ಹೊಸ ಆದೇಶವೊಂದನ್ನು ಹೊರಡಿಸಿದೆ.

ಶಿಕ್ಷಕರು ನಿಗದಿತ ಅವಧಿಗಿಂತ ಅರ್ಧ ಗಂಟೆ ಮೊದಲೇ ಶಾಲೆಗೆ ಆಗಮಿಸಬೇಕೆಂದು ಉಲ್ಲೇಖ ಒಂದರ ಅಡಿಯಲ್ಲಿ ತಿಳಿಸಿದ್ದು ನಿಗದಿತ ಅವಧಿಯ ಒಳಗಾಗಿ ಕೆಲಸಕ್ಕೆ ಶಾಲಾ ಶಿಕ್ಷಕರು ಹಾಜರಾಗಬೇಕೆಂದು ಸರ್ಕಾರದಿಂದಲೇ ತಿಳಿಸಲಾಗಿದೆ.

ಇದನ್ನು ಓದಿ : 1ಲಕ್ಷ ಹಣ ಮಹಿಳೆಯರಿಗೆ ಗ್ಯಾರಂಟಿ : ಚುನಾವಣೆಗೆ 5 ಗ್ಯಾರಂಟಿ ಘೋಷಣೆ ! ಯಾರಿಗೆ ಸಿಗುತ್ತೆ ನೋಡಿ

ಸರ್ಕಾರದಿಂದ ಶಿಕ್ಷಕರಿಗೆ ಮಾರ್ಗದರ್ಶನ :

ಶಿಕ್ಷಕರ ಕರ್ತವ್ಯ ವಿಚಾರವನ್ನು ಸರ್ಕಾರದಿಂದ ಮತ್ತೆ ಪುನಹ ತಿಳಿಸಲಾಗಿದ್ದು ಕ್ರಿಯಾಶೀಲವಾಗಿ ಬೋಧನಾ ಕಲಿಕಾ ಚಟುವಟಿಕೆಯನ್ನು ನಿರ್ವಹಿಸುವ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕೆನ್ನುವ ಬಗ್ಗೆ ಅಧಿಕೃತ ಆದೇಶ ಸರ್ಕಾರದಿಂದ ನೀಡಲಾಗಿದೆ.

ಇನ್ನೇನು ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದಿನ ದಿನಗಳಲ್ಲಿ ಹತ್ತಿರ ಇರುವ ಕಾರಣದಿಂದಾಗಿ ಶಿಕ್ಷಕರು ಮಕ್ಕಳನ್ನು ಸಿದ್ಧಪಡಿಸಬೇಕಾದದ್ದು ಕರ್ತವ್ಯವಾಗಿದೆ ಈ ಮೂಲಕ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಕಾಪಾಡುವ ಮೂಲ ಉದ್ದೇಶವನ್ನು ಸರ್ಕಾರ ಹೊಂದಿದೆ.

ಸರ್ಕಾರದ ಆದೇಶದಲ್ಲಿ ಯಾವೆಲ್ಲ ವಿಚಾರಗಳು ಇವೆ :

ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ಹೊಸ ಆದೇಶ ಹೊರಡಿಸಿದ್ದು ಆ ಹೊಸ ದೇಶದಲ್ಲಿ ಶಿಕ್ಷಕರಿಗೆ ಸಂಬಂಧಿಸಿದಂತೆ ಏನೆಲ್ಲ ವಿಚಾರಗಳು ಇವೆ ಎಂಬುದನ್ನು ನೋಡುವುದಾದರೆ,

 1. ಮಕ್ಕಳ ಕಲಿಕಾ ಸಾಮರ್ಥ್ಯ ಅರ್ಥೈಸಿಕೊಂಡು ಪೂರ್ವ ಸಿದ್ಧತೆ ಕಲಿಕಾ ಪರೀಕ್ಷೆ ಮಾಡಿ ಅದಾದ ನಂತರ ಕಡಿಮೆ ಶೈಕ್ಷಣಿಕ ಮೌಲ್ಯ ಪಡೆದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಅಂತಹ ಮಕ್ಕಳಿಗೆ ವಿಶೇಷ ತರಬೇತಿಯನ್ನು ಮಾಡಬೇಕು.
 2. ಬೋಧನಾ ಕಲಿಕಾ ಸಾಮಗ್ರಿಯನ್ನು ಸರಿಯಾಗಿ ಬಳಸಿಕೊಂಡು ಕಲಿಕೆಯನ್ನು ಪರಿಪೂರ್ಣಗೊಳಿಸಬೇಕು.
 3. ವಿಶೇಷ ರೀತಿಯಾ ತರಬೇತಿಯನ್ನು ಗಣಿತ ಇಂಗ್ಲಿಷ್ ಹಾಗು ವಿಜ್ಞಾನಗಳ ವಿಚಾರಗಳಿಗ ನೀಡುವುದು.
 4. ಶಾಲೆಯ ಮುಖ್ಯ ಶಿಕ್ಷಕರು ಶಾಲಾ ಹಂತದ ಮೇಲ್ವಿಚಾರಣೆಯನ್ನು ನೋಡಿಕೊಂಡು ಮಕ್ಕಳನ್ನು ದೈಹಿಕ ಹಾಗೂ ಮಾನಸಿಕ ಸದೃಢರನ್ನಾಗಿ ಮಾಡಬೇಕು.
 5. ಅರ್ಧ ಗಂಟೆ ಮೊದಲೇ ಉಳಿದ ಶಿಕ್ಷಕರು ಮುಖ್ಯ ಶಿಕ್ಷಕರು ಬರುವಂತೆ ನೋಡಿಕೊಳ್ಳಬೇಕು.
 6. ಶಾಲಾ ಮುಖ್ಯ ಶಿಕ್ಷಕರು ನಲಿಕಲಿ ಪ್ರಾಯೋಗಿಕ ಪ್ರಯೋಗ ತರಗತಿ ಬೋಧನೆ ಇತ್ಯಾದಿಗಳನ್ನು ನೋಡಿಕೊಳ್ಳಬೇಕು.
 7. ನಿಗದಿಪಡಿಸಿದ ಪಾಠ ಬೋಧನೆಯನ್ನು ನಿಗದಿತ ಸಮಯದೊಳಗಾಗಿ ಶಿಕ್ಷಕರು ಮೂಡಿಸಬೇಕು.
 8. ಕಲಿಕೆಯಲ್ಲಿ ಹಿಂದುಳಿದಂತಹ ಮಕ್ಕಳಿಗೆ ವಿಶೇಷ ಕಾಳಜಿಯನ್ನು ವಹಿಸಬೇಕು.
 9. ಶಾನಾವಧಿ ಮುಗಿದ ನಂತರ ಮಕ್ಕಳನ್ನು ಸರಿಯಾಗಿ ಸುರಕ್ಷಿತವಾಗಿ ಮನೆಗೆ ತಲುಪುವಂತೆ ಮಾರ್ಗದರ್ಶನ ನೀಡಬೇಕು.
 10. ಶಾಲಾ ಅವಧಿಯಲ್ಲಿ ಶಿಕ್ಷಕರು ಶಾಲಾ ತೊರೆದು ಖಾಸಗಿ ಕಾರ್ಯಕ್ರಮ ಖಾಸಗಿ ವ್ಯವಹಾರ ಇತರೆ ಕಾರ್ಯಗಳಲ್ಲಿ ತೊಡಗಿದ್ದರೆ ಸಾರ್ವಜನಿಕರು ಈ ಬಗ್ಗೆ ಮುಖ್ಯ ಶಿಕ್ಷಕರಿಗೆ ದೂರು ಸಲ್ಲಿಸಬಹುದು.
 11. ಶಾಲಾ ದಾಸ್ತಾನು ಹಾಗೂ ಸಾಮಗ್ರಿ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುವುದು.

ಹೀಗೆ ರಾಜ್ಯ ಸರ್ಕಾರವು ಹೊರಡಿಸಿರುವ ಹೊಸ ಆದೇಶದಲ್ಲಿ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದು ಮುಖ್ಯ ಶಿಕ್ಷಕರೇ ಈ ತಪ್ಪನ್ನೆನಾದರೂ ಮಾಡಿದರೆ ಆಗ ಶಿಕ್ಷಣ ಇಲಾಖೆಗೆ ಸಾರ್ವಜನಿಕರು ದೂರು ನೀಡಬಹುದಾಗಿದೆ. ಶಿಕ್ಷಕರ ವಿರುದ್ಧ ಶಿಸ್ತಿನ ಕ್ರಮವನ್ನು ಕೂಡ ತೆಗೆದುಕೊಳ್ಳಲಾಗುತ್ತದೆ.

ಒಟ್ಟಾರೆ ಶಾಲಾ ಶಿಕ್ಷಕರಿಗೆಂದು ಹೊರಡಿಸಲಾದ ಹೊಸ ಆದೇಶದಲ್ಲಿ ಅನೇಕ ರೀತಿಯ ವಿಚಾರಗಳನ್ನು ನೋಡಬಹುದಾಗಿದ್ದು ಹೆಚ್ಚಿನದಾಗಿ ಮಕ್ಕಳು ಸುರಕ್ಷತೆ ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಒತ್ತನ್ನು ನೀಡಲಾಗಿದೆ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಶಾಲಾ ಶಿಕ್ಷಕರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *