ನಮಸ್ಕಾರ ಸ್ನೇಹಿತರೆ ತೋಟಗಾರಿಕೆ ಇಲಾಖೆ ವತಿಯಿಂದ ವಿನೂತನ ತಂತ್ರಜ್ಞಾನ ಯಂತ್ರೋಪಕರಣಗಳ ಸಹಾಯಧನ ಯೋಜನೆಯ ಅಡಿಯಲ್ಲಿ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಸೋಲಾರ್ ಪಂಪ್ ಸೆಟ್ ಅಳವಡಿಸಲು ಸಹಾಯಧನವನ್ನು ರೈತರಿಗೆ ನೀಡಲಾಗುತ್ತಿದೆ. ರೈತರಿಗೆ ಇದೊಂದು ಭರ್ಜರಿ ಅವಕಾಶ ಎಂದು ಹೇಳಬಹುದು ಹಾಗಾದರೆ ರೈತರು ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
Contents
ಸೋಲಾರ್ ಪಂಪ್ಸೆಟ್ ಅಳವಡಿಸಲು ಸಬ್ಸಿಡಿ :
ರೈತರೇ ಹೇಳಿಕೆಗಾಗಿ ಅನೇಕ ಯೋಜನೆಗಳನ್ನು ಸರ್ಕಾರವು ಜಾರಿಗೆ ತರುತ್ತಿದೆ ಈಗಿನ ಕಾಲದಲ್ಲಿಯೂ ಕೃಷಿ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು ನಮ್ಮ ದೇಶದ ಬಹುಮುಖ್ಯ ವೃತ್ತಿಯಾಗಿ ಕೃಷಿ ನೋಡಬಹುದು. ಹಾಗಾಗಿ ಸಾಮಾನ್ಯ ವರ್ಗದ ರೈತರು ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಫಲಾನುಭವಿ ರೈತರಿಗೆ ಶೇಕಡ 50ರಷ್ಟು ಸಹಾಯಧನವನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದೆ.
ಸರ್ಕಾರ ರೈತರಿಗೆ ಜಾರಿಗೆ ತರುವ ಇಂತಹ ಯೋಜನೆಗಳ ಲಾಭವನ್ನು ರೈತರು ಪಡೆದುಕೊಂಡು ತಮ್ಮ ಕೃಷಿಯಲ್ಲಿ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ. ರೈತರ ನೀರಾವರಿ ಸೌಲಭ್ಯವನ್ನು ಹೆಚ್ಚಿಸಲು ದೇಶದಲ್ಲಿ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಕೃಷಿಯ ಮಹತ್ವವನ್ನು ದೇಶದಲ್ಲಿ ಹೆಚ್ಚಿಸಲು ಮತ್ತು ರೈತರ ಆದಾಯವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಲಾಗಿದೆ.
ಇದನ್ನು ಓದಿ : ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ :ಯಾವ ವಿಷಯಗಳನ್ನು ಓದಬೇಕು ನೋಡಿ !
ಸೋಲಾರ್ ಪಂಪ್ ಸೆಟ್ ಅಳವಡಿಸಲು ಸಹಾಯಧನ :
ಕೇಂದ್ರ ಸರ್ಕಾರವು ಈ ಯೋಜನೆಯ ಅಡಿಯಲ್ಲಿ ರೈತರ ನೀರಾವರಿಗಾಗಿ ಸೌರಚಾಲಿತ ಪಂಪ್ಸೆಟ್ಟುಗಳನ್ನು ಒದಗಿಸುತ್ತಿದೆ ಹಾಗಾಗಿ ಈ ಯೋಜನೆಯ ಅಡಿಯಲ್ಲಿ ರೈತರಿಗೆ ಎಷ್ಟು ಸಹಾಯಧನ ಸಿಗಲಿದೆ ಎಂದು ನೋಡುವುದಾದರೆ, 1 ಲಕ್ಷಗಳು 3 ಎಚ್ಪಿ ಸೋಲಾರ್ ಪಂಪ್ಸೆಟ್ ಗೆ ಒಂದು ಪಾಯಿಂಟ್ 50 ಲಕ್ಷ ರೂಪಾಯಿ 5 ಹೆಚ್ ಪಿ ಹಾಗೂ ಹೆಚ್ಚಿನ ಸಾಮರ್ಥ್ಯದ ಪಂಪ್ಸೆಟ್ಗಳಿಗೆ ಸಹಾಯಧನ ಸಿಗಲಿದೆ.
1.9 ಲಕ್ಷ ರೂಪಾಯಿಗಳವರಿಗೆ ಶೇಕಡ 50ರಂತೆ 3 hp ಸೋಲಾರ್ ಪಂಪ್ಸೆಟ್ಗಳಿಗೆ ಘಟಕ ವೆಚ್ಚವಾಗಿ 0.99 ಲಕ್ಷಕ್ಕೆ ಮಿತಿಗೊಳಿಸಿ ಸಹಾಯಧನವನ್ನು ನೀಡಲಾಗುತ್ತದೆ. ಹೀಗೆ ಸೋಲಾರ್ ಪಂಪ್ಸೆಟ್ ಗಳಿಗೆ ಅನುಗುಣವಾಗಿ ಸಹಾಯಧನವನ್ನು ಪಡೆಯಬಹುದು ಇದರ ಜೊತೆಗೆ ವಿಮೆ ಮಾಡಿಸುವುದು ಕಂಪನಿಯ ಜವಾಬ್ದಾರಿಯಾಗಿದ್ದು ಸೂಕ್ತ ದಾಖಲೆಯನ್ನು ಪಡೆದು ಸೋಲಾರ್ ಪಂಪ್ಸೆಟ್ಟುಗಳಿಗೆ ವಿಮೆ ಮಾಡಿಸಬೇಕಾಗುತ್ತದೆ.
ಸೋಲಾರ್ ಪಂಪ್ಸೆಟ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
ಸೋಲಾರ್ ಪಂಪ್ಸೆಟ್ ಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಬೆಳೆ ದೃಢೀಕರಣ ಪತ್ರ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ 20 ಬಾಂಡ್ ಪೇಪರ್ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋ ಹೀಗೆ ಕೆಲವು ದಾಖಲೆಗಳನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ :
ಸೋಲಾರ್ ಪಂಪ್ಸೆಟ್ ಗೆ ಸಹಾಯಧನವನ್ನು ಪಡೆಯಲು ರೈತರು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿಯನ್ನು ಆಫ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಒಟ್ಟಾರೆ ರೈತರಿಗೆ ಕೃಷಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಸೋಲಾರ್ ಪಂಪ್ಸೆಟ್ ಗಳನ್ನು ನೀಡಲಾಗುತ್ತಿದ್ದು ಈ ಯೋಜನೆಯ ಪ್ರಯೋಜನವನ್ನು ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲಾ ರೈತರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರಿಗೆ ಸಿಗಲಿದೆ 25000 ಸಹಾಯಧನ : ಸರ್ಕಾರದಿಂದ ಹೊಸ ಯೋಜನೆ
- ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ 20,000 ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಿ !
ಸೋಲಾರ್ ಪಂಪ್ಸೆಟ್ ಗೆ ಎಷ್ಟು ಸಬ್ಸಿಡಿ ಸಿಗುತ್ತದೆ..?
1.5 ಲಕ್ಷ
ಯೋಜನೆ ಎಲ್ಲಿ ಪ್ರಾರಂಭ ಆಗಿದೆ ..?
ಕರ್ನಾಟಕ.